ಶ್ರೀ ಗಣೇಶ ಪಂಚರತ್ನಂ

ಮುದಾಕರಾತ್ತಮೋದಕಂ ಸದಾ ವಿಮುಕ್ತಿಸಾಧಕಂ

ಕಲಾಧರಾವತಂಸಕಂ ವಿಲಾಸಿಲೋಕರಕ್ಷಕಂ।

ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ

ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಂ।

ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ

ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಂ।

ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ

ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಂ।

ಸಮಸ್ತಲೋಕಶಂಕರಂ ನಿರಸ್ತದೈತ್ಯಕುಂಜರಂ

ದರೇತರೋದರಂ ವರಂ ವರೇಭವಕ್ತ್ರಮಕ್ಷರಂ।

ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ

ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಂ।

ಅಕಿಂಚನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂ

ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣಂ।

ಪ್ರಪಂಚನಾಶಭೀಷಣಂ ಧನಂಜಯಾದಿಭೂಷಣಂ

ಕಪೋಲದಾನವಾರಣಂ ಭಜೇ ಪುರಾಣವಾರಣಂ।

ನಿತಾಂತಕಾಂತದಂತಕಾಂತಿಮಂತ - ಕಾಂತಕಾತ್ಮಜಂ

ಅಚಿಂತ್ಯರೂಪಮಂತಹೀನ - ಮಂತರಾಯಕೃಂತನಂ।

ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ

ತಮೇಕದಂತಮೇವ ತಂ ವಿಚಿಂತಯಾಮಿ ಸಂತತಂ।

ಮಹಾಗಣೇಶಪಂಚರತ್ನಮಾದರೇಣ ಯೋಽನ್ವಹಂ

ಪ್ರಜಲ್ಪತಿ ಪ್ರಭಾತಕೇ ಹೃದಿ ಸ್ಮರನ್ ಗಣೇಶ್ವರಂ।

ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ

ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋಽಚಿರಾತ್।

 

ಮುದಾಕರಾತ್ತಮೋದಕಂ ಸದಾ ವಿಮುಕ್ತಿಸಾಧಕಂ

ಕಲಾಧರಾವತಂಸಕಂ ವಿಲಾಸಿಲೋಕರಕ್ಷಕಂ।

ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ

ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಂ।

ಕರದಲ್ಲಿ  ಮೋದಕವನ್ನು ಹಿಡಿದು ಮುದದಿಂದ ಇರುವವನನ್ನು, ಸದಾ ಮೋಕ್ಷವನ್ನು ನೀಡುವವನನ್ನು, ಚಂದ್ರನನ್ನು ಅಲಂಕಾರವಾಗಿ ಧರಿಸಿದವನನ್ನು, ಲೋಕ ರಕ್ಷಣೆಯನ್ನು ಮಾಡುವವನನ್ನು, ನಾಯಕರಲ್ಲಿ ಅಗ್ರಗಣ್ಯನಾದವನನ್ನು, ಗಜಾಸುರನೆಂಬ  ಆನೆಗೆ ಶತ್ರುವಾದವನನ್ನು, ಅಮಂಗಳವನ್ನು ದೂರ ಮಾಡುವವನನ್ನು ಆ ಗಣೇಶನನ್ನು‌ ನಾನು  ಭಜಿಸುತ್ತೇನೆ।

 

ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ

ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಂ।

ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ

ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಂ।

ನಾಸ್ತಿಕರೆಲ್ಲರಿಗೆ ಭಯ ಸ್ವರೂಪನಾದವನನ್ನು, ಉದಯಿಸುವ ಸೂರ್ಯನಂತೆ ಪ್ರಭಾವಿತನಾದವನನ್ನು, ದೇವತೆಗಳ ಶತ್ರುಗಳನ್ನು ನಾಶಮಾಡುವವನನ್ನು, ಕಷ್ಟಗಳನ್ನು ಪರಿಹರಿಸುವವನನ್ನು, ದೇವತೆಗಳಿಗೇ ಒಡೆಯನಾದವನನ್ನು, ಸಂಪತ್ತಿನ ಪಾಲನೆಯನ್ನು ಮಾಡುವವನನ್ನು, ಗಜೇಶ್ವರನನ್ನು, ಗಣಗಳಿಗೆಲ್ಲ  ಅಧಿಪತಿ ಯಾದವನನ್ನು ಪರಮ ಶ್ರೇಷ್ಠನಾದವನನ್ನು ನಾನು ನಿರಂತರವಾಗಿ ಆಶ್ರಯಿಸುತ್ತೇನೆ।



ಸಮಸ್ತಲೋಕಶಂಕರಂ ನಿರಸ್ತದೈತ್ಯಕುಂಜರಂ

ದರೇತರೋದರಂ ವರಂ ವರೇಭವಕ್ತ್ರಮಕ್ಷರಂ।

ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ

ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಂ।

ಸಕಲ ಲೋಕಗಳಿಗೆ ಶುಭವನ್ನು ನೀಡುವವನನ್ನು, ದೈತ್ಯನಾದ ಗಜಾಸುರನನ್ನು ಕೊಂದವನನ್ನು ದೊಡ್ಡ ಹೊಟ್ಟೆಯ ಮತ್ತು ಆನೆ ಮುಖದವನನ್ನು ಅಕ್ಷರಾತ್ಮಕನನ್ನು, ಕೃಪಾನಿಧಿಯಾದವನನ್ನು, ಕ್ಷಮಾನಿಧಿಯನ್ನು, ಮುದವನ್ನು ನೀಡುವವನನ್ನು, ಕೀರ್ತಿಯನ್ನು ನೀಡುವವನನ್ನು,ಭಕ್ತರ ಮನಸ್ಸಿನಲ್ಲಿ ನೆಲೆಸಿರುವವನನ್ನು , ಆ ಪ್ರಭಾವಶಾಲಿಗೆ  ನಮಸ್ಕಾರ ಮಾಡುತ್ತೇನೆ।



ಅಕಿಂಚನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂ

ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣಂ।

ಪ್ರಪಂಚನಾಶಭೀಷಣಂ ಧನಂಜಯಾದಿಭೂಷಣಂ

ಕಪೋಲದಾನವಾರಣಂ ಭಜೇ ಪುರಾಣವಾರಣಂ।

ದರಿದ್ರರ ಕಷ್ಟಗಳನ್ನು ದೂರ ಮಾಡುವವನನ್ನು, ಸನಾತನ ಶಾಸ್ತ್ರಗಳಲ್ಲಿ ಕೀರ್ತಿಸಲ್ಪಟ್ಟವನನ್ನು, ಶಿವನ ಮಗನಾದವನನ್ನು, ದೇವತೆಗಳ ಶತ್ರುಗಳ ಅಹಂಕಾರವನ್ನು ದೂರ ಮಾಡುವವನನ್ನು, ಭಯಾನಕನಾದ ಪ್ರಪಂಚ ನಾಶಕನಾದವನನ್ನು, ಅರ್ಜುನನಂತಹ ಮಹನೀಯರಿಂದ ಸೇವೆಯನ್ನು ಕೈಗೊಳ್ಳುವವನನ್ನು,ದಾನವರನ್ನು ನಿವಾರಿಸಿದವನನ್ನು ಆ ಆನೆಮುಖದ ಗಣೇಶನನ್ನು ಭಜಿಸುತ್ತೇನೆ।



ನಿತಾಂತಕಾಂತದಂತಕಾಂತಿಮಂತ - ಕಾಂತಕಾತ್ಮಜಂ

ಅಚಿಂತ್ಯರೂಪಮಂತಹೀನ - ಮಂತರಾಯಕೃಂತನಂ।

ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ

ತಮೇಕದಂತಮೇವ ತಂ ವಿಚಿಂತಯಾಮಿ ಸಂತತಂ।

ಅಮೋಘ ದಂತದ ಕಿರಣವನ್ನು ಹೊಂದಿದವನನ್ನು, ಶಿವನ ಮಗನಾದವನನ್ನು, ಅಲೌಕಿಕ ರೂಪದ, ಅಂತ್ಯವಿಲ್ಲದ, ಅಡಚಣೆಗಳನ್ನು ನಿವಾರಿದಸುವ ಶಕ್ತಿಯನ್ನು ಹೊಂದಿದವನನ್ನು, ಯೋಗಿಗಳ ಹೃದಯಗಳಲ್ಲಿ ಸದಾ ನೆಲೆಸಿರುವವನನ್ನು, ಅನನ್ಯನಾದ ಏಕದಂತನನ್ನು ನಾನು ಸದಾ ಕಾಲವೂ ನೆನೆಯುತ್ತೇನೆ।



ಮಹಾಗಣೇಶಪಂಚರತ್ನಮಾದರೇಣ ಯೋಽನ್ವಹಂ

ಪ್ರಜಲ್ಪತಿ ಪ್ರಭಾತಕೇ ಹೃದಿ ಸ್ಮರನ್ ಗಣೇಶ್ವರಂ।

ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ

ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋಽಚಿರಾತ್।

ಈ ಮಹಾಗಣೇಶ ಪಂಚರತ್ನವನ್ನು ಪ್ರತಿ ಬೆಳಿಗ್ಗೆಯೂ ಭಕ್ತಿಯಿಂದ ಪಠಿಸುತ್ತಾ, ಗಣೇಶನನ್ನು ಹೃದಯದಲ್ಲಿ ಧ್ಯಾನಿಸುತ್ತಿರುವವನಿಗೆ, ಆಯಸ್ಸು, ಆರೋಗ್ಯ, ಉತ್ತಮ ಸ್ನೇಹಿತರು, ಒಳ್ಳೆಯ ಸಂತತಿ, ಸಮೃದ್ಧ ಜೀವನ ಮತ್ತು ಅಷ್ಟೈಶ್ವರ್ಯಗಳೊಂದಿಗೆ ತ್ವರಿತವಾದ ಲಾಭವು ದೊರೆಯುತ್ತದೆ।

Ramaswamy Sastry and Vighnesh Ghanapaathi

Other stotras

Copyright © 2025 | Vedadhara test | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...

We use cookies