ರಾಮಚಂದ್ರಾಯ ಜನಕರಾಜಜಾಮನೋಹರಾಯ
ಮಾಮಕಾಭೀಷ್ಟದಾಯ ಮಹಿತಮಂಗಲಂ
ಕೋಸಲೇಶಾಯ ಮಂದಹಾಸದಾಸಪೋಷಣಾಯ
ವಾಸವಾದಿವಿನುತಸದ್ವರಾಯ ಮಂಗಲಂ
ಚಾರುಕುಂಕುಮೋಪೇತಚಂದನಾದಿಚರ್ಚಿತಾಯ
ಹಾರಕಟಕಶೋಭಿತಾಯ ಭೂರಿಮಂಗಲಂ
ಲಲಿತರತ್ನಕುಂಡಲಾಯ ತುಲಸೀವನಮಾಲಿಕಾಯ
ಜಲಜಸದೃಶದೇಹಾಯ ಚಾರುಮಂಗಲಂ
ದೇವಕೀಸುಪುತ್ರಾಯ ದೇವದೇವೋತ್ತಮಾಯ
ಭಾವಜಗುರುವರಾಯ ಭವ್ಯಮಂಗಲಂ
ಪುಂಡರೀಕಾಕ್ಷಾಯ ಪೂರ್ಣಚಂದ್ರಾನನಾಯ
ಅಂಡಜಾತವಾಹನಾಯ ಅತುಲಮಂಗಲಂ
ವಿಮಲರೂಪಾಯ ವಿವಿಧವೇದಾಂತವೇದ್ಯಾಯ
ಸುಮುಖಚಿತ್ತಕಾಮಿತಾಯ ಶುಭ್ರದಮಂಗಲಂ
ರಾಮದಾಸಾಯ ಮೃದುಲಹೃದಯಕಮಲವಾಸಾಯ
ಸ್ವಾಮಿಭದ್ರಗಿರಿವರಾಯ ಸರ್ವಮಂಗಲಂ