ಆದೌ ರಾಮತಪೋವನಾದಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹೀಹರಣಂ ಜಟಾಯುಮರಣಂ ಸುಗ್ರೀವಸಂಭಾಷಣಂ ।
ಬಾಲೀನಿಗ್ರಹಣಂ ಸಮುದ್ರತರಣಂ ಲಂಕಾಪುರೀದಾಹನಂ
ಪಶ್ಚಾದ್ರಾವಣಕುಂಭಕರ್ಣಹನನಂ ಚೈತದ್ಧಿ ರಾಮಾಯಣಂ ॥
ಒಂದು ಶ್ಲೋಕಿ ರಾಮಾಯಣದ ಸಾರಾಂಶ –
ರಾಮಾಯಣದ ಸಂಕ್ಷಿಪ್ತ ರೂಪ:
ಶ್ರೀರಾಮನು ತಪೋವನಕ್ಕೆ ಹೋಗುತ್ತಾನೆ.
ಶ್ರೀರಾಮನು ಸ್ವರ್ಣಮೃಗವನ್ನು ಸಂಹರಿಸುತ್ತಾನೆ.
ರಾವಣನು ಸೀತೆಯನ್ನು ಅಪಹರಿಸುತ್ತಾನೆ.
ರಾವಣನು ಜಟಾಯುವನ್ನು ಕೊಲ್ಲುತ್ತಾನೆ.
ಶ್ರೀರಾಮನು ಸುಗ್ರೀವನೊಂದಿಗೆ ಮಾತುಕತೆ ನಡೆಸುತ್ತಾನೆ.
ಶ್ರೀರಾಮನು ವಾಲಿಯನ್ನು ಸಂಹರಿಸುತ್ತಾನೆ.
ಹನುಮಂತನು ಸಮುದ್ರವನ್ನು ದಾಟುತ್ತಾನೆ.
ಹನುಮಂತನು ಲಂಕೆಯನ್ನು ದಹನ ಮಾಡುತ್ತಾನೆ.
ಶ್ರೀರಾಮನು ರಾವಣನನ್ನೂ ಕುಂಭಕರ್ಣನನ್ನೂ ಸಂಹರಿಸುತ್ತಾನೆ.