ಸುಬ್ರಹ್ಮಣ್ಯ ಗದ್ಯಂ

ಪುರಹರನಂದನ ರಿಪುಕುಲಭಂಜನ ದಿನಕರಕೋಟಿರೂಪ
ಪರಿಹೃತಲೋಕತಾಪ ಶಿಖೀಂದ್ರವಾಹನ ಮಹೇಂದ್ರಪಾಲನ
ವಿಧೃತಸಕಲಭುವನಮೂಲ ವಿಧುತನಿಖಿಲದನುಜತೂಲ
ತಾಪಸಸಮಾರಾಧಿತ ಪಾಪಜವಿಕಾರಾಜಿತ
ಕಾರುಣ್ಯಸಲಿಲಪೂರಾಧಾರ ಮಯೂರವರವಾಹನ ಮಹೇಂದ್ರಗಿರಿಕೇತನ
ಭಕ್ತಿಪರಗಮ್ಯ ಶಕ್ತಿಕರರಮ್ಯ ಪರಿಪಾಲಿತನಾಕ
ಪುರಶಾಸನಪಾಕ ನಿಖಿಲಲೋಕನಾಯಕ
ಗಿರಿವಿದಾರಿಸಾಯಕ ಮಹಾದೇವಭಾಗಧೇಯ
ವಿನತಶೋಕನಿವಾರಣ ವಿವಿಧಲೋಕಕಾರಣ ಸುರವೈರಿಕಾಲ ಪುರವೈರಿಬಾಲ ಭವಬಂಧನವಿಮೋಚನ ದಲದಂಬುಜವಿಲೋಚನ ಕರುಣಾಮೃತರಸಸಾಗರ
ತರುಣಾಮೃತಕರಶೇಖರ ವಲ್ಲೀಮಾನಹಾರವೇಷ
ಮಲ್ಲೀಮಾಲಭಾರಿಕೇಶ ಪರಿಪಾಲಿತವಿಬುಧಲೋಕ
ಪರಿಕಾಲಿತವಿನತಶೋಕ ಮುಖವಿಜಿತಚಂದಿರ
ನಿಖಿಲಗುಣಮಂದಿರ ಭಾನುಕೋಟಿಸದೃಶರೂಪ
ವಿತೃನ್ಮನೋಹಾರಿಮಂದಹಾಸ ರಿಪುಶಿರೋದಾರಿಚಂದ್ರಹಾಸ
ಶ್ರುತಿಕಲಿತಮಣಿಕುಂಡಲ ರುಚಿವಿಜಿತರವಿಮಂಡಲ
ಭುಜವರವಿಜಿತಸಾಲ ಭಜನಪರಮನುಜಪಾಲ
ನವವೀರಸಂಸೇವಿತ ರಣಧೀರ ಸಂಭಾವಿತಮನೋಹರಶೀಲ
ಮಹೇಂದ್ರಾರಿಕೀಲ ಕುಸುಮವಿಶದಹಾಸ ಕಲಶಿಖರನಿವಾಸ
ವಿಜಿತಕರಣಮುನಿಸೇವಿತ ವಿಗತಮರಣಜನಿಭಾಷಿತ
ಸ್ಕಂದಪುರನಿವಾಸ ನಂದನಕೃತವಿಲಾಸ ಕಮಲಾಸನವಿನತ
ಚತುರಾಗಮವಿನುತ ಕಲಿಮಲವಿಹೀನ ಕೃತಸೇವನಸರಸಿಜನಿಕಾಶಶುಭಲೋಚನ ಅಹಾರ್ಯಾನರಧೀರ ಅನಾರ್ಯಾನರದೂರ ವಿದಲಿತರೋಗಜಾಲ ವಿರಚಿತಭೋಗಮೂಲ
ಭೋಗೀಂದ್ರಭಾಸಿತ ಯೋಗೀಂದ್ರಭಾವಿತ ಪಾಕಶಾಸನಪರಿಪೂಜಿತ
ನಾಕವಾಸಿನಿಕರಸೇವಿತ ವಿದ್ರುತವಿದ್ಯಾಧರ
ವಿದ್ರುಮಹೃದ್ಯಾಧರ ದಲಿತದನುಜವೇತಂಡ
ವಿಬುಧವರದಕೋದಂಡ ಪರಿಪಾಲಿತಭೂಸುರ
ಮಣಿಭೂಷಣಭಾಸುರ ಅತಿರಮ್ಯಸ್ವಭಾವ
ಶ್ರುತಿಗಮ್ಯಪ್ರಭಾವ ಲೀಲಾವಿಶೇಷತೋಷಿತಶಂಕರ
ಸುಮಸಮರದನ ಶಶಧರವದನ ವಿಜಯೀಭವ ವಿಜಯೀಭವ

 

Ramaswamy Sastry and Vighnesh Ghanapaathi

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |