ಶ್ರೀಗುರು ಚರನ ಸರೋಜ ರಜ ನಿಜ ಮನ ಮುಕುರ ಸುಧಾರಿ .
ಬರನಉಂ ರಘುಬರ ಬಿಮಲ ಜಸ ಜೋ ದಾಯಕ ಫಲ ಚಾರಿ .
ನನ್ನನ್ನು ನಾನು ನನ್ನ ಗುರುವಿನ ಪಾದದೂಳಿನಿಂದ ಪವಿತ್ರಗೊಳಿಸಿಕೊಂಡ ಮೇಲೆ, ನಾನು ಸದ್ಗುಣಗಳು, ಐಶ್ವರ್ಯ, ಬಯಕೆಗಳ ಸಾಧಿಸಿವಿಕೆ ಮತ್ತು ಮೋಕ್ಷಗಳನ್ನು ದಯಪಾಲಿಸುವ ಶ್ರೀರಾಮನ ಹಿರಿಮೆಯನ್ನು ವರ್ಣಿಸುತ್ತೇನೆ.
ಬುದ್ಧಿ ಹೀನ ತನು ಜಾನಿಕೈ ಸುಮಿರೌಂ ಪವನಕುಮಾರ .
ಬಲ ಬುಧಿ ಬಿದ್ಯಾ ದೇಹು ಮೋಹಿಂ ಹರಹು ಕಲೇಶ ಬಿಕಾರ .
ನಾನಷ್ಟು ಬುದ್ಧಿವಂತನಲ್ಲ. ಹನುಮ, ಆದರೆ ನನಗೆ ನಿನ್ನ ನೆನಪಿದೆ. ನನಗೆ ಶಕ್ತಿಕೊಡು. ನನಗೆ ಜ್ಞಾನ ಕೊಡು. ನನ್ನ ಎಲ್ಲಾ ಸಮಸ್ಯೆಗಳನ್ನು ತೆಗೆದು ಹಾಕು.
ಜಯ ಹನುಮಾನ ಜ್ಞಾನ ಗುಣ ಸಾಗರ .
ಜಯ ಕಪೀಶ ತಿಹುಂ ಲೋಕ ಉಜಾಗರ ..1..
ನಿನಗೆ ಅಪರಿಮಿತ ಜ್ಞಾನವಿದೆ. ನಿನ್ನಲ್ಲಿ ಅಪ್ರತಿಮವಾದ ಉತ್ತಮ ಗುಣಗಳಿವೆ. ನೀನು ವಾನರರಲ್ಲಿಯೇ ಉತ್ತಮನಾದವನು. ನೀನು ಮೂರು ಲೋಕಗಳಲ್ಲಿಯೂ ಹೆಸರುವಾಸಿಯಾದವನು. ನಿನಗೆ ಜಯವಾಗಲಿ.
ರಾಮ ದೂತ ಅತುಲಿತ ಬಲ ಧಾಮಾ .
ಅಂಜನಿಪುತ್ರ ಪವನಸುತ ನಾಮಾ ..2..
ನೀನು ಶ್ರೀರಾಮನ ದೂತ. ನಿನ್ನ ಬಲಕ್ಕೆ ಯಾರೂ ಸಮಾನರಲ್ಲ. ಅಂಜನಿಪುತ್ರ ಮತ್ತು ಪವನಸುತ ಎಂಬ ನಿನ್ನ ಎರಡು ಹೆಸರುಗಳು ತುಂಬಾ ಪ್ರಸಿದ್ಧಿಯಾಗಿವೆ.
ಮಹಾಬೀರ ಬಿಕ್ರಮ ಬಜರಂಗೀ .
ಕುಮತಿ ನಿವಾರ ಸುಮತಿ ಕೇ ಸಂಗೀ ..3..
ನೀನು ಬಹಳ ಪರಾಕ್ರಮಿ. ನಿನ್ನ ದೇಹವು ವಜ್ರದಂತೆ ಕಠಿಣವಾಗಿದೆ. ನೀನು ಕೆಟ್ಟ ಆಲೋಚನೆಗಳನ್ನು ನಾಶ ಮಾಡುವೆ. ನಿನ್ನ ಭಕ್ತರಿಗೆ ನೀನು ಸದಾ ಸಹಾಯಮಾಡುವೆ.
ಕಂಚನ ಬರನ ಬಿರಾಜ ಸುಬೇಸಾ .
ಕಾನನ ಕುಂಡಲ ಕುಂಚಿತ ಕೇಸಾ ..4..
ನಿನ್ನ ದೇಹವು ಸುವರ್ಣವರ್ಣದಲ್ಲಿದೆ. ನಿನ್ನ ಉಡುಗೆಗಳು ಸುಂದರವಾಗಿವೆ. ನೀನು ಅದ್ಭುತವಾದ ಕಿವಿಯ ಆಭರಣಗಳನ್ನು ಧರಿಸಿರುವೆ. ನಿನ್ನ ಕೇಶವು ಗುಂಗುರಾಗಿದೆ.
ಹಾಥ ಬಜ್ರ ಅರು ಧ್ವಜಾ ಬಿರಾಜೈ .
ಕಾಂಧೇ ಮೂಂಜ ಜನೇಊ ಛಾಜೈ ..5..
ನೀನು ಶ್ರೀರಾಮನ ಧ್ವಜವನ್ನು ನಿನ್ನ ಕೈಗಳಲ್ಲಿ ಹಿಡಿದಿರುವೆ. ನೀನು ಯಜ್ಞೋಪವೀತವನ್ನು ಧರಿಸಿರುವೆ. ನೀನು ಸ್ವಯಂ
ಶಂಕರ ಸುವನ ಕೇಸರೀನಂದನ .
ತೇಜ ಪ್ರತಾಪ ಮಹಾ ಜಗ ಬಂದನ ..6..
ನೀನು ಸ್ವತಃ ಭಗವಾನ್ ಶಂಕರ. ನೀನು ಕೇಸರಿಯ ಪುತ್ರ. ನಿನ್ನ ತೇಜಸ್ಸು ಅದ್ಭುತವಾಗಿದೆ. ಇಡೀ ವಿಶ್ವವು ನಿನಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡುತ್ತದೆ.
ಬಿದ್ಯಾವಾನ ಗುಣೀ ಅತಿ ಚಾತುರ .
ರಾಮ ಕಾಜ ಕರಿಬೇ ಕೋ ಆತುರ ..7..
ನೀನು ಎಲ್ಲವನ್ನೂ ತಿಳಿದವನು. ನಿನ್ನಲ್ಲಿ ಎಲ್ಲಾ ಗುಣಗಳೂ ಇವೆ. ನೀನು ಶ್ರೀರಾಮನ ಕೆಲಸಗಳನ್ನು ಮಾಡಲು ಉತ್ಸುಕನಾಗಿರುವೆ.
ಪ್ರಭು ಚರಿತ್ರ ಸುನಿಬೇ ಕೋ ರಸಿಯಾ .
ರಾಮ ಲಖನ ಸೀತಾ ಮನ ಬಸಿಯಾ ..8..
ನೀನು ಶ್ರೀರಾಮನ ಶೌರ್ಯದ ಕಾರ್ಯಗಳ ಬಗ್ಗೆ ತಿಳಿಯಲು ಇಚ್ಚಿಸುವೆ. ಶ್ರೀರಾಮ, ಲಕ್ಷ್ಮಣ ಮತ್ತು ಸೀತಾಮಾತೆ ಎಲ್ಲರೂ ನಿನ್ನ ಬಗ್ಗೆಯೇ ಯಾವಾಗಲೂ ಯೋಚಿಸುತ್ತಾರೆ.
ಸೂಕ್ಷ್ಮ ರೂಪ ಧರಿ ಸಿಯಹಿಂ ದಿಖಾವಾ .
ಬಿಕಟ ರೂಪ ಧರಿ ಲಂಕ ಜರಾವಾ ..9..
ನೀನೊಂದು ಚಿಕ್ಕರೂಪವನ್ನು ಧರಿಸಿ, ಸೀತಾಮಾತೆಯು ಎಲ್ಲಿರುವರೆಂದು ಕಂಡು ಹಿಡಿದೆ. ನೀನು ಉಗ್ರರೂಪವನ್ನು ತಾಳಿ ಲಂಕೆಯನ್ನು ಸುಟ್ಟುಬಿಟ್ಟೆ.
ಭೀಮ ರೂಪ ಧರಿ ಅಸುರ ಸಂಹಾರೇ .
ರಾಮಚಂದ್ರ ಕೇ ಕಾಜ ಸಂವಾರೇ ..10..
ಬೃಹತ್ ಆಕಾರವನ್ನು ಧಾರಣೆಮಾಡಿ, ನೀನು ಅಸುರರನ್ನು ಕೊಂದೆ ಮತ್ತು ಶ್ರೀರಾಮನ ಆಜ್ಞೆ ಯನ್ನು ನೆರವೇರಿಸಿದೆ.
ಲಾಯ ಸಂಜೀವನಿ ಲಖನ ಜಿಯಾಯೇ .
ಶ್ರೀರಘುಬೀರ ಹರಷಿ ಉರ ಲಾಯೇ ..11..
ನೀನು ಸಂಜೀವಿನಿಯನ್ನು ತಂದೆ ಮತ್ತು ಲಕ್ಷ್ಮಣನನ್ನು ಬದುಕಿಸಿದೆ. ಶ್ರೀರಾಮನು ಸಂತೋಷಗೊಂಡಾಗ ನೀನೂ ಸಂತೋಷಪಡುವೆ.
ರಘುಪತಿ ಕೀನ್ಹೀ ಬಹುತ ಬಡಾಈ .
ತುಮ ಮಮ ಪ್ರಿಯ ಭರತಹಿಂ ಸಮ ಭಾಈ ..12.
ಶ್ರೀರಾಮನು ನಿನ್ನನ್ನು ಹೊಗಳುತ್ತಲೇ ಇರುವನು. ನೀನು ಅವನ ಸಹೋದರ ಭರತನಂತೆ ಎಂದು ಅವನು ಹೇಳುತ್ತಾನೆ.
ಸಹಸ ಬದನ ತುಮ್ಹರೋ ಜಸ ಗಾವೈಂ .
ಅಸ ಕಹಿ ಶ್ರೀಪತಿ ಕಂಠ ಲಗಾವೈಂ ..13..
ಶ್ರೀರಾಮನು, ನಿನ್ನನ್ನು ಆದಿಶೇಷನು ಕೂಡ ತನ್ನ ಸಾವಿರ ಶಿರಗಳಿಂದ ನಿನ್ನ ಹೊಗಳಿಕೆಯನ್ನು ಹಾಡುತ್ತಾನೆ ಎಂದು ನಿನ್ನನ್ನು ಮತ್ತೆಮತ್ತೆ ಆಲಂಗಿಸಿಕೊಳ್ಳುತ್ತಾನೆ.
ಸನಕಾದಿಕ ಬ್ರಹ್ಮಾದಿ ಮುನೀಶಾ .
ನಾರದ ಸಾರದ ಸಹಿತ ಅಹೀಶಾ ..14..
ನಿನ್ನನ್ನು ಸನಕ, ಬ್ರಹ್ಮ, ನಾರದ ಮತ್ತು ಸರಸ್ವತಿಯಂತವರೂ ಕೂಡ ಹೊಗಳುತ್ತಾರೆ.
ಜಮ ಕುಬೇರ ದಿಗಪಾಲ ಜಹಾಂ ತೇ .
ಕಬಿ ಕೋಬಿದ ಕಹಿ ಸಕೈಂ ಕಹಾಂ ತೇ ..15..
ಯಮ, ಕುಬೇರ ಮತ್ತು ದಿಕ್ಪಾಲಕರೇ ನಿನ್ನ ಅಂತ್ಯವಿಲ್ಲದ ಕೀರ್ತಿಯನ್ನು ಹಾಡುವಾಗ, ಇನ್ನು ಕವಿಗಳು ಮತ್ತು ವಿದ್ವಾಂಸರುಗಳು ಏನನ್ನು ತಾನೇ ಕೊಡಬಲ್ಲರು?
ತುಮ ಉಪಕಾರ ಸುಗ್ರೀವಹಿಂ ಕೀನ್ಹಾ .
ರಾಮ ಮಿಲಾಯ ರಾಜ-ಪದ ದೀನ್ಹಾ ..16..
ನೀನು ಸುಗ್ರೀವನನ್ನು ಶ್ರೀರಾಮನೊಂದಿಗೆ ಭೇಟಿ ಮಾಡಿಸಿದೆ. ಇದರಿಂದಾಗಿ ಸುಗ್ರೀವನು ಕಿಷ್ಕಿಂದೆಯ ರಾಜಪಟ್ಟವನ್ನು ಗಳಿಸಿದ.
ತುಮ್ಹರೋ ಮಂತ್ರ ಬಿಭೀಷನ ಮಾನಾ .
ಲಂಕೇಶ್ವರ ಭಏ ಸಬ ಜಗ ಜಾನಾ ..17..
ವಿಭೀಷಣನು ಶ್ರೀರಾಮನ ಬಗ್ಗೆ ನಿನ್ನ ಭಕ್ತಿಯನ್ನು ಅನುಸರಿಸಿದ. ಇದರಿಂದಾಗಿ ಅವನು ಲಂಕೆಯ ರಾಜನಾದ.
ಜುಗ ಸಹಸ್ರ ಜೋಜನ ಪರ ಭಾನೂ .
ಲೀಲ್ಯೋ ತಾಹಿ ಮಧುರ ಫಲ ಜಾನೂ ..18..
ನೀನು ಒಮ್ಮೆ ಸೂರ್ಯನನ್ನು ಹಣ್ಣೆಂದು ಭಾವಿಸಿ ಅದನ್ನು ನುಂಗಲು ಪ್ರಯತ್ನಿಸಿದೆ.
ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀಂ .
ಜಲಧಿ ಲಾಂಘಿ ಗಯೇ ಅಚರಜ ನಾಹೀಂ ..19..
ಶ್ರೀ ರಾಮನ ಹೆಸರಿದ್ದ ಉಂಗುರವನ್ನು ತೆಗೆದುಕೊಂಡು ನೀನು ಸಾಗರವನ್ನು ದಾಟಿದೆ.
ದುರ್ಗಮ ಕಾಜ ಜಗತ ಕೇ ಜೇ ತೇ .
ಸುಗಮ ಅನುಗ್ರಹ ತುಮ್ಹರೇ ತೇ ತೇ ..20..
ಎಲ್ಲಾ ಕಠಿಣ ಕಾರ್ಯಗಳನ್ನು ನಿನ್ನ ಆಶೀರ್ವಾದದಿಂದ ಸುಲಭವಾಗಿ ಸಾಧಿಸಬಹುದು.
ರಾಮ ದುಆರೇ ತುಮ ರಖವಾರೇ .
ಹೋತ ನ ಆಜ್ಞಾ ಬಿನು ಪೈಸಾರೇ ..21..
ನೀನು ಶ್ರೀರಾಮನ ಅರಮನೆಯ ಮಹಾದ್ವಾರವನ್ನು ಕಾಯುವೆ. ನಿನ್ನ ಅನುಮತಿಯಿಲ್ಲದೇ ಯಾರೂ ಒಳಗೆ ಹೋಗಲಾರರು.
ಸಬ ಮುಖ ಲಹಹಿಂ ತುಮ್ಹಾರೀ ಶರನಾ .
ತುಮ ರಕ್ಷಕ ಕಾಹೂ ಕೋ ಡರ ನಾ ..22..
ಯಾರು ನಿನ್ನನ್ನು ಆಶ್ರಯಿಸುತ್ತಾರೆ, ಅವರು ಎಲ್ಲಾ ಸುಖವನ್ನೂ ಹೊಂದುತ್ತಾರೆ. ಅವರು ಯಾವುದಕ್ಕೂ ಹೆದರುವುದಿಲ್ಲ.
ಆಪನ ತೇಜ ಸಮ್ಹಾರೋ ಆಪೇ .
ತೀನೌಂ ಲೋಕ ಹಾಂಕ ತೇ ಕಾಂಪೇ ..23..
ನಿನ್ನ ಕಾಂತಿಯನ್ನು ನೋಡಿ ಮೂರು ಲೋಕದವರೂ ನಡುಗುತ್ತಾರೆ.
ಭೂತ ಪಿಶಾಚ ನಿಕಟ ನಹೀಂ ಆವೈ .
ಮಹಾಬೀರ ಜಬ ನಾಮ ಸುನಾವೈ ..24..
ನಿನ್ನ ಹೆಸರನ್ನು ಕೇಳಿದರೆ, ದುಷ್ಟ ಶಕ್ತಿಗಳು ನಿನ್ನ ಬಳಿ ಸುಳಿಯಲು ಧೈರ್ಯ ಮಾಡುವುದಿಲ್ಲ.
ನಾಸೈ ರೋಗ ಹರೈ ಸಬ ಪೀರಾ .
ಜಪತ ನಿರಂತರ ಹನುಮತ ಬೀರಾ ..25..
ನಿನ್ನ ಭಕ್ತರು ನಿನ್ನ ನಾಮಸ್ಮರಣೆ ಮಾಡಿದಾಗ, ನೀನು ಅವರ ಕಾಯಿಲೆಯನ್ನು ಗುಣಪಡಿಸುವೆ.
ಸಂಕಟ ತೇಂ ಹನುಮಾನ ಛುಡಾವೈ .
ಮನ ಕ್ರಮ ಬಚನ ಧ್ಯಾನ ಜೋ ಲಾವೈಂ ..26..
ಹನುಮನನ್ನು ಮನಸ್ಸಿನಿಂದ, ಮಾತುಗಳಿಂದ ಅಥವಾ ಕೆಲಸಗಳಿಂದ ನೆನಸಿಕೊಂಡರೆ, ಅವನು ಎಲ್ಲಾ ತೊಂದರೆಗಳನ್ನು ಪರಿಹರಿಸುತ್ತಾನೆ.
ಸಬ ಪರ ರಾಮ ರಾಯ ಸಿರತಾಜಾ .
ತಿನ ಕೇ ಕಾಜ ಸಕಲ ತುಮ ಸಾಜಾ ..27..
ಶ್ರೀರಾಮನು ರಾಜರುಗಳಲ್ಲಿಯೇ ಅಪ್ರತಿಮನು. ನೀನು ಅವನ ಎಲ್ಲಾ ಕೆಲಸಗಳನ್ನು ಸಾಧಿಸಿರುವೆ.
ಔರ ಮನೋರಥ ಜೋ ಕೋಇ ಲಾವೈ .
ತಾಸು ಅಮಿತ ಜೀವನ ಫಲ ಪಾವೈ ..28..
ಭಕ್ತರು ತಮ್ಮ ಕೋರಿಕೆಗಳೊಂದಿಗೆ ನಿನ್ನ ಬಳಿ ಬರುತ್ತಾರೆ. ನೀನು ಅವುಗಳೆಲ್ಲವನ್ನೂ ಪೂರೈಸುವೆ.
ಚಾರಿಉ ಜುಗ ಪರತಾಪ ತುಮ್ಹಾರಾ .
ಹೈ ಪರಸಿದ್ಧ ಜಗತ ಉಜಿಯಾರಾ ..29..
ನಿನ್ನ ಕಾಂತಿಯು ನಾಲ್ಕು ಯುಗಗಳಲ್ಲಿಯೂ ಪ್ರಸಿದ್ಧಿಯಾಗಿದೆ. ಅದು ಪ್ರಪಂಚದ ಎಲ್ಲಾ ಕಡೆಯು ಹರಡಿದೆ.
ಸಾಧು ಸಂತ ಕೇ ತುಮ ರಖವಾರೇ .
ಅಸುರ ನಿಕಂದನ ರಾಮ ದುಲಾರೇ ..30..
ನೀನು ರಾಕ್ಷಸರನ್ನು ನಾಶಮಾಡಿರುವೆ. ನೀನು ಋಷಿಗಳ ರಕ್ಷಕ.
ಅಷ್ಟ ಸಿದ್ಧಿ ನವ ನಿಧಿ ಕೇ ದಾತಾ .
ಅಸ ಬರ ದೀನ್ಹ ಜಾನಕೀ ಮಾತಾ ..31..
ನೀನು ಎಂಟು ಸಿದ್ಧಿಗಳನ್ನು ಅನುಗ್ರಹಿಸುವೆ. ಒಂಬತ್ತು ಐಶ್ವರ್ಯಗಳಿಂದ ಆಶೀರ್ವದಿಸುವೆ. ಸೀತಾಮಾತೆಯು ನಿನಗೆ ಈ ವರವನ್ನು ನೀಡಿದ್ದಾರೆ.
ರಾಮ ರಸಾಯನ ತುಮ್ಹರೇ ಪಾಸಾ .
ಸಾದರ ಹೌ ರಘುಪತಿ ಕೇ ದಾಸಾ ..32..
ನೀನು ಶ್ರೀರಾಮನನ್ನು ತುಂಬಾ ಪ್ರೀತಿಸುವೆ. ನೀನು ಅವನ ಸೇವಕನೆಂದು ಭಾವಿಸಿರುವೆ.
ತುಮ್ಹರೇ ಭಜನ ರಾಮ ಕೋ ಪಾವೈ .
ಜನಮ ಜನಮ ಕೇ ದುಖ ಬಿಸರಾವೈ ..33..
ನಿನ್ನನ್ನು ಪ್ರಾರ್ಥಿಸುವುದರಿಂದ, ಶ್ರೀರಾಮನನ್ನು ಒಲಿಸಿಕೊಳ್ಳಬಹುದು. ಒಮ್ಮೆ ಶ್ರೀರಾಮನನ್ನು ಒಲಿಸಿಕೊಂಡರೆ, ಎಷ್ಟೋ ಜನ್ಮಗಳ ದುಃಖವನ್ನು ಮರೆಯಬಹುದು.
ಅಂತ ಕಾಲ ರಘುಬರ ಪುರ ಜಾಈ .
ಜಹಾಂ ಜನ್ಮ ಹರಿ ಭಗತ ಕಹಾಈ ..34..
ನಿನ್ನನ್ನು ಕುರಿತು ಯಾರೆಲ್ಲಾ ಪ್ರಾರ್ಥಿಸುವರೋ, ಅವರನ್ನು ಶ್ರೀರಾಮನ ಭಕ್ತರೆಂದು ಕರೆಯಲ್ಪಡುತ್ತಾರೆ. ಅವರು ಶ್ರೀರಾಮನ ಸಾನಿಧ್ಯವನ್ನು ಹೊಂದುತ್ತಾರೆ.
ಔರ ದೇವತಾ ಚಿತ್ತ ನ ಧರಈ .
ಹನುಮತ ಸೇಇ ಸರ್ಬ ಸುಖ ಕರಈ ..35..
ಒಂದು ವೇಳೆ ನೀವು ಬೇರೆ ದೇವರುಗಳನ್ನು ನೆನೆಯದಿದ್ದರೂ, ಹನುಮನನ್ನು ಪ್ರಾರ್ಥಿಸಿದರೆ ನಿಮಗೆ ಸಂತೋಷ ಮತ್ತು ಸುಖವು ದೊರೆಯುತ್ತದೆ.
ಸಂಕಟ ಕಟೈ ಮಿಟೈ ಸಬ ಪೀರಾ .
ಜೋ ಸುಮಿರೈ ಹನುಮತ ಬಲಬೀರಾ ..36..
ಹನುಮನನ್ನು ನೆನಸಿದರೆ, ಎಲ್ಲಾ ತೊಂದರೆಗಳು ಹೊರಟು ಹೋಗುತ್ತವೆ. ಅವರ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತವೆ.
ಜಯ ಜಯ ಜಯ ಹನುಮಾನ ಗೋಸಾಈಂ .
ಕೃಪಾ ಕರಹು ಗುರುದೇವ ಕೀ ನಾಈಂ ..37..
ಹನುಮನಿಗೆ ಜಯವಾಗಲಿ. ನನ್ನ ಗುರುವಿನಂತೆ ನನ್ನ ಮೇಲೆ ಕರುಣೆಯನ್ನು ತೋರಿಸಿ.
ಜೋ ಶತ ಬಾರ ಪಾಠ ಕರ ಕೋಈ .
ಛೂಟಹಿಂ ಬಂದಿ ಮಹಾ ಸುಖ ಹೋಈ ..38..
ಹನುಮಾನ್ ಚಾಲೀಸಾವನ್ನು ಯಾರು ನೂರು ಬಾರಿ ಓದುವರೋ ಅವರನ್ನು ಎಲ್ಲಾ ಬಂಧನಗಳಿಂದ ವಿಮುಕ್ತಗೊಳಿಸಲಾಗುವುದು. ಅವರು ಅತ್ಯಧಿಕ ಆನಂದವನ್ನು ಹೊಂದುವರು.
ಜೋ ಯಹ ಪಢೈಂ ಹನುಮಾನ ಚಾಲೀಸಾ .
ಹೋಯ ಸಿದ್ಧಿ ಸಾಖೀ ಗೌರೀಸಾ ..39..
ನೀವು ಹನುಮಾನ್ ಚಾಲೀಸವನ್ನು ಪ್ರತಿದಿನ ಓದಿದರೆ, ಯಶಸ್ಸನ್ನು ಹೊಂದುವಿರಿ. ಭಗವಾನ್ ಶಿವ ಇದನ್ನು ಸಮರ್ಥಿಸುತ್ತಾನೆ.
ತುಳಸೀದಾಸ ಸದಾ ಹರಿ ಚೇರಾ .
ಕೀಜೈ ನಾಥ ಹೃದಯ ಮಹಂ ಡೇರಾ ..40..
ಓಹ್! ಹನುಮ, ನೀನು ಶಾಶ್ವತವಾಗಿ ಶ್ರೀರಾಮನ ಸೇವೆ ಮಾಡುವೆ. ದಯಮಾಡಿ ನನ್ನ (ತುಳಸಿದಾಸ) ಹೃದಯದಲ್ಲಿ ನೆಲಸು.
ಪವನ ತನಯ ಸಂಕಟ ಹರನ ಮಂಗಲ ಮೂರತಿ ರೂಪ .
ರಾಮ ಲಖನ ಸೀತಾ ಸಹಿತ ಹೃದಯ ಬಸಹು ಸುರ ಭೂಪ ..
ಎಲ್ಲಾ ತೊಂದರೆಗಳನ್ನು ಪರಿಹರಿಸುವವನು ನೀನು. ನೀನು ಅಷ್ಟು ಮಂಗಳಕರವಾದವನು. ದಯವಿಟ್ಟು ಶ್ರೀರಾಮ, ಲಕ್ಷ್ಮಣ ಮತ್ತು ಸೀತಾಮಾತೆಯರೊಂದಿಗೆ ನನ್ನ ಹೃದಯದಲ್ಲಿ ನೆಲಸು.