ಅಶ್ವಿನಿ ನಕ್ಷತ್ರ

Ashwini Nakshatra Symbol

 

ಮೇಷ ರಾಶಿಯ ಸೊನ್ನೆ ಡಿಗ್ರಿಯಿಂದ ಹದಿಮೂರು ಡಿಗ್ರಿ ಇಪ್ಪತ್ತು ಮಿನಿಟ್ಸ್ ಹರಡಿರುವ ನಕ್ಷತ್ರವನ್ನು ಅಶ್ವಿನಿ ಎಂದು ಕರೆಯುತ್ತಾರೆ. ಇದು ವೈದಿಕ ಖಗೋಳಶಾಸ್ತ್ರದಲ್ಲಿ ಮೊದಲ ನಕ್ಷತ್ರ. ಆಧುನಿಕ ಖಗೋಳಶಾಸ್ತ್ರದಲ್ಲಿ, ಅಶ್ವಿನಿಯು ಮೇಷ ರಾಶಿಯ ಶಿರಸ್ಸನ್ನು ಬೀಟಾ ಮತ್ತು ಗಾಮಾ ಅರಿಯೇಟಿಸ್ ನಕ್ಷತ್ರಗಳನ್ನು ಜೊತೆ ಹೋಲುತ್ತದೆ. ಅಶ್ವಿನಿಯನ್ನು ವೇದಗಳಲ್ಲಿ ಅಶ್ವಯುಜ ಎಂದೂ ಕರೆಯುತ್ತಾರೆ.

Click below to listen to Ashwini Nakshatra Mantra 

 

Ashwini Nakshatra Mantra 108 Times | Ashwini Nakshatra Devta Mantra | Nakshatra Vedic Mantra Jaap

 

ಅಶ್ವಿನಿ ನಕ್ಷತ್ರದ ಅಧಿಪತಿ

ಅಶ್ವಿನಿ ನಕ್ಷತ್ರವನ್ನು ಅಶ್ವಿನಿಯರು/ಅಶ್ವಿನಿಕುಮಾರರು ಆಳುತ್ತಾರೆ. ಅವರು ಸ್ವರ್ಗದ ವೈದ್ಯರು. ಸೂರ್ಯನ ಹೆಂಡತಿಯಾದ ಸಮ್ಜ್ಞಾ ಅವನ ಶಾಖವನ್ನು ತಡೆಯುವುದಿಲ್ಲ. ಆಕೆಯು ಒಂದು ಕುದುರೆಯಾಗಿ(ಸಂಸ್ಕೃತದಲ್ಲಿ ಅಶ್ವ) ತನ್ನನ್ನು ತಾನು ಬದಲಾಯಿಸಿಕೊಂಡು ತಪಸ್ಸಿಗೆ ಹೊರಟು ಹೋಗುತ್ತಾಳೆ. ಆ ಸಮಯದಲ್ಲಿ ಅವಳೊಂದಿಗೆ ಸೂರ್ಯನ ಮಿಲನವಾಗಿ ಅಶ್ವಿನಿಗಳು ಜನ್ಮತಳೆದರು.

 

ಅಶ್ವಿನಿ ನಕ್ಷತ್ರವನ್ನು ಆಳುವ ಗ್ರಹ

ಕೇತು

 

ಅಶ್ವಿನಿ ನಕ್ಷತ್ರದ ಗುಣಲಕ್ಷಣಗಳು

ಅಶ್ವಿನಿ ನಕ್ಷತ್ರದಲ್ಲಿ ಹುಟ್ಟಿದವರ ಗುಣಲಕ್ಷಣಗಳೆಂದರೆ:

  • ಬುದ್ಧಿವಂತಿಕೆ
  • ಧೈರ್ಯ
  • ಚತುರತೆ
  • ಒಳ್ಳೆಯ ಜ್ಞಾಪಕಶಕ್ತಿ
  • ಹೆಚ್ಚು ಹೆಚ್ಚು ಕಲಿಯುವ ಆಸಕ್ತಿ
  • ವಿಶಾಲವಾದ ಹಣೆ
  • ದೊಡ್ಡ ಕಣ್ಣುಗಳು
  • ಪ್ರಶಾಂತತೆ
  • ವಿನಮ್ರತೆ
  • ಒತ್ತಡಕ್ಕೆ ಮಣಿಯುವುದಿಲ್ಲ
  • ಕೆಲವೊಮ್ಮೆ ಹಟಮಾರಿತನ
  • ದೃಢ ನಿರ್ಧಾರಗಳು
  • ಸಹಾಯ ಮಾಡುವ ಪ್ರವೃತ್ತಿ
  • ಪರಿಶ್ರಮಿ
  • ಕೆಲವರಲ್ಲಿ ಕುಡಿತದ ಚಟ
  • ಗುಣಪಡಿಸುವ ಶಕ್ತಿ
  • ಜನಪ್ರಿಯರು
  • ಅದೃಷ್ಟಶಾಲಿಗಳು
  • ನೀತಿವಂತರು
  • ಗೌರವವನ್ನು ಸಂಪಾದಿಸುವವರು
  • ಉತ್ತಮ ಸಲಹೆಗಾರರು
  • ಆಧ್ಯಾತ್ಮದಲ್ಲಿ ಆಸಕ್ತಿ
  • ದುಂದುವೆಚ್ಚಗಾರ
  • ಮುಂಗೋಪಿ
  • ಸದಾ ಅವಸರ ಪ್ರವೃತ್ತಿ
  • ಮಾತುಗಾರ
  • ಹೋರಾಟ ಪ್ರವೃತ್ತಿ
  • ಪ್ರಯಾಣದಲ್ಲಿ ಒಲವು
  • ಒಡಹುಟ್ಟಿದವರೊಂದಿಗೆ ಹದಗೆಟ್ಟ ಸಂಬಂಧ
  • ಆಸ್ತಿಯ ಬಗ್ಗೆ ಕಳವಳ
  • ಹೆಚ್ಚು ಶ್ರೀಮಂತಿಕೆ ಇಲ್ಲ

 

ಅಶ್ವಿನಿಗೆ ಹೊಂದಾಣಿಕೆಯಾಗದ ನಕ್ಷತ್ರಗಳು

  • ಕೃತ್ತಿಕಾ
  • ಮೃಗಶಿರ
  • ಪುನರ್ವಸು
  • ವಿಶಾಖ 4ನೇ ಪಾದ
  • ಅನುರಾಧ
  • ಜ್ಯೇಷ್ಟ

ಅಶ್ವಿನಿ ನಕ್ಷತ್ರದಲ್ಲಿ ಹುಟ್ಟಿದವರು ಈ ನಕ್ಷತ್ರಗಳ ದಿನಗಳಲ್ಲಿ ಮುಖ್ಯವಾದ ಕೆಲಸಗಳನ್ನು ಮಾಡಬಾರದು ಮತ್ತು ಈ ನಕ್ಷತ್ರಗಳ ಜನರೊಂದಿಗೆ ಪಾಲುದಾರಿಕೆಯನ್ನು ಮಾಡಬಾರದು.

 

ಅಶ್ವಿನಿ ನಕ್ಷತ್ರದಲ್ಲಿ ಹುಟ್ಟಿದವರ ಆರೋಗ್ಯ ಸಮಸ್ಯೆಗಳು

  • ತಲೆಗೆ ಗಾಯಗಳು
  • ಹುಣ್ಣುಗಳು
  • ಸಂಧಿವಾತ ನೋವು
  • ಬ್ಲಾಕ್ ಔಟ್
  • ಮೆದುಳಿನ ಹೆಪ್ಪುಗಟ್ಟುವಿಕೆ
  • ಮೆದುಳು ಜ್ವರ
  • ಮೆದುಳಿನಲ್ಲಿ ರಕ್ತಸ್ರಾವ
  • ಸ್ಟ್ರೋಕ್
  • ಮೂರ್ಛೆರೋಗ
  • ನಿದ್ರಾಹೀನತೆ
  • ಮಲೇರಿಯಾ
  • ಸಿಡುಬು

 

ಅಶ್ವಿನಿ ನಕ್ಷತ್ರ ದೋಷ

ಅಶ್ವಿನಿ ನಕ್ಷತ್ರದ ಮೊದಲನೆಯ ಪಾದ/ಚರಣದವರು ಗಂಡಾಂತ ದೋಷದಿಂದ ನರಳುವರು. ಗಂಡಾಂತ ಶಾಂತಿಯನ್ನು ಮಾಡಬಹುದು. ಗಂಡಾಂತ ದೋಷದಲ್ಲಿ ಹುಟ್ಟಿದವರು ಕುಟುಂಬಕ್ಕೆ ಅಗೌರವ ಮತ್ತು ಮುಜುಗರವನ್ನು ತರಬಹುದು.

 

ಅಶ್ವಿನಿ ನಕ್ಷತ್ರದ ಪರಿಹಾರಗಳು

ಅಶ್ವಿನಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ರವಿ, ಕುಜ ಮತ್ತು ಗುರು ದೆಸೆಗಳು ಶುಭಕರವಲ್ಲ. ಅವರು ಈ ಕೆಳಕಂಡ ಪರಿಹಾರಗಳನ್ನು ಮಾಡಬಹುದು.

  • ಗಣಪತಿಗೆ ಪ್ರಾರ್ಥನೆ
  • ಕಾರ್ತಿಕೇಯನಿಗೆ ಪ್ರಾರ್ಥನೆ
  • ಭದ್ರಕಾಳಿಗೆ ಪ್ರಾರ್ಥನೆ
  • ಪ್ರತಿ ತಿಂಗಳೂ ಜನ್ಮನಕ್ಷತ್ರದ ದಿನ ಗಣಪತಿ ಹೋಮ ಮಾಡಿಸುವುದು
  • ಚತುರ್ಥಿವ್ರತವನ್ನು ಮಾಡುವುದು
  • ಕೇತು ಮಂತ್ರ ಮತ್ತು ಸ್ತೋತ್ರಗಳನ್ನು ಪಠಿಸುವುದು
  • ಕುಜನ ಮಂತ್ರ ಮತ್ತು ಸ್ತೋತ್ರಗಳನ್ನು ಪಠಿಸುವುದು
  • ಮಂಗಳವಾರದಂದು ಕೆಂಪು ಬಟ್ಟೆಗಳನ್ನು ಧರಿಸುವುದು

 

ಅಶ್ವಿನಿ ನಕ್ಷತ್ರದವರ ವೃತ್ತಿ

ಬುದ್ಧಿವಂತ, ಚುರುಕು ಮತ್ತು ಪರಿಶ್ರಮಿಗಳಾಗಿರುವುದರಿಂದ ಅಶ್ವಿನಿ ನಕ್ಷತ್ರದಲ್ಲಿ ಹುಟ್ಟಿದವರು ಅವರ ವೃತ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸುವರು. ಅವರು ತಮ್ಮ ಉದ್ವೇಗ ಮತ್ತು ಹಠಾಟ್ ಪ್ರವೃತ್ತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಅಶ್ವನಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಕೆಲವು ಸೂಕ್ತ ವೃತ್ತಿಗಳು:

  • ಆರಕ್ಷಕ
  • ರಕ್ಷಣಾ ಪಡೆಗಳು
  • ರೈಲ್ವೆ
  • ವಾಣಿಜ್ಯೋದ್ಯಮಿ
  • ಕಾನೂನು
  • ಉಕ್ಕು ಮತ್ತು ತಾಮ್ರದ ಕಾರ್ಖಾನೆ
  • ಬೋಧನೆ
  • ಪತ್ರಿಕೋಧ್ಯಮ
  • ಲೇಖನ/ಬರವಣಿಗೆ
  • ವೈದ್ಯ
  • ಕುದುರೆ ಸವಾರಿ ಅಥವಾ ಕುದುರೆಗೆ ಸಂಬಂಧಪಟ್ಟ ವೃತ್ತಿ
  • ಯೋಗ ತರಬೇತುದಾರ

 

ಅಶ್ವಿನಿ ನಕ್ಷತ್ರ ಮಂತ್ರ

ಓಂ ಅಶ್ವಿನಾ ತೇಜಸಾ ಚಕ್ಷುಃ ಪ್ರಾಣೇನ ಸರಸ್ವತೀ ವೀರ್ಯಂ ವಾಚೇಂದ್ರೋ ಬಲೇಂದ್ರಾಯ ದಧುರಿಂದ್ರಿಯಂ

ಓಂ ಅಶ್ವಿನೀಕುಮಾರಾಭ್ಯಾಂ ನಮಃ

 

ಅಶ್ವಿನಿ ನಕ್ಷತ್ರದವರು ವಜ್ರವನ್ನು ಧರಿಸಬಹುದೇ?

ಇಲ್ಲ. ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ವಜ್ರವನ್ನು ಧರಿಸಬಾರದು. ಅದು ಹಾನಿಕಾರಕ

 

ಅಶ್ವಿನಿ ನಕ್ಷತ್ರದವರ ಅದೃಷ್ಟದ ಕಲ್ಲು

వైడూర్యం

 

ಅಶ್ವಿನಿ ನಕ್ಷತ್ರದ ಪ್ರಾಣಿ - ಕುದುರೆ
ಅಶ್ವಿನಿ ನಕ್ಷತ್ರದ ಮರ - ಸ್ಟ್ರಿಕ್ನೀನ್ ಅಥವಾ ಕುಚಲ ಮರ
ಅಶ್ವಿನಿ ನಕ್ಷತ್ರದ ಪಕ್ಷಿ - ಶಿಕ್ರಾ(ಬೇಟೆಯ ಹಕ್ಕಿ)
ಅಶ್ವಿನಿ ನಕ್ಷತ್ರದ ಮೂಲಧಾತು - ಪೃಥ್ವಿ (ಭೂಮಿ)
ಅಶ್ವಿನಿ ನಕ್ಷತ್ರದ ಗಣ – ದೇವ
ಅಶ್ವಿನಿ ನಕ್ಷತ್ರದ ಯೋನಿ - ಅಶ್ವ
ಅಶ್ವಿನಿ ನಕ್ಷತ್ರದ ನಾಡಿ - ಅದ್ಯಾ
ಅಶ್ವಿನಿ ನಕ್ಷತ್ರದ ಗುರುತು – ಕುದುರೆಯ ತಲೆ

ಅಶ್ವಿನಿ ನಕ್ಷತ್ರದ ಹೆಸರುಗಳು

ಅಶ್ವಿನಿ ನಕ್ಷತ್ರಕ್ಕೆ ಅವಕಹಡಾದಿ ಪದ್ದತಿಯಲ್ಲಿ ಹೆಸರಿನ ಪ್ರಾರಂಭದ ಅಕ್ಷರವು:

  • ಮೊದಲ ಪಾದ/ಚರಣ – ಚೂ
  • ಎರಡನೆಯ ಪಾದ/ಚರಣ – ಚೇ
  • ಮೂರನೆಯ ಪಾದ/ಚರಣ – ಚೋ
  • ನಾಲ್ಕನೆಯ ಪಾದ/ಚರಣ - ಲಾ

ಈ ಅಕ್ಷರಗಳನ್ನು ನಾಮಕರಣದ ಸಮಯದಲ್ಲಿ ಸಾಂಪ್ರದಾಯಕ ನಕ್ಷತ್ರದ ಹೆಸರಾಗಿ ಉಪಯೋಗಿಸಬಹುದು. ಕೆಲವು ಸಮುದಾಯಗಳಲ್ಲಿ, ನಾಮಕರಣದ ಸಮಾರಂಭದಲ್ಲಿ ಅಜ್ಜ-ಅಜ್ಜಿಯರ ಹೆಸರನ್ನು ಇಡಲಾಗುತ್ತದೆ. ಆ ಪದ್ಧತಿಯನ್ನು ಅನುಸರಿಸುವುದರಿಂದ ಯಾವ ತೊಂದರೆಯೂ ಇಲ್ಲ.
ದಾಖಲೆಗಳಿಗಾಗಿ ಮತ್ತು ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಇಡುವ ಅಧಿಕೃತ ಹೆಸರು ಕೇವಲ ನಿಕಟ ಕುಟುಂಬ ಸದಸ್ಯರಿಗೆ ಮಾತ್ರ ಗೊತ್ತಿರಬೇಕೆಂದು ಶಾಸ್ತ್ರವು ಸೂಚಿಸುತ್ತದೆ.

ಅಶ್ವಿನಿ ನಕ್ಷತ್ರದಲ್ಲಿ ಹುಟ್ಟಿದವರ ಅಧಿಕೃತ ಹೆಸರಿನಲ್ಲಿ ಇಡಬಾರದ ಅಕ್ಷರಗಳೆಂದರೆ – ಅಂ, ಕ್ಷ, ಚ, ಛ, ಜ, ಝ, ಜ್ಞ, ಯ, ರ, ಲ, ವ

 

ಅಶ್ವಿನಿ ನಕ್ಷತ್ರದವರ ವೈವಾಹಿಕ ಜೀವನ

ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಯಾರೊಬ್ಬರ ನಿಯಂತ್ರಣದಲ್ಲಿರಲು ಇಷ್ಟಪಡುವುದಿಲ್ಲ. ಅವರು ತಮ್ಮ ವ್ಯಕ್ತಿತ್ವವನ್ನು ಗೌರವಿಸುವ ಜೀವನ ಸಂಗಾತಿಯನ್ನು ಹುಡುಕಬೇಕು. ಅವರು ಸಂಗಾತಿಗೆ ನಿಷ್ಠರಾಗಿರುತ್ತಾರೆ. ಅವರು ರಕ್ಷಣಾತ್ಮಕ ಮತ್ತು ಕಾಳಜಿಯುಳ್ಳವರು. ಅವರು ಸಂತೋಷದಿಂದ ಕುಟುಂಬದ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಸರಳ ಸ್ವಭಾವವನ್ನು ಹೊಂದಿರುತ್ತಾರೆ ಮತ್ತು ಸಂಗಾತಿಯ ಅಗತ್ಯಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಮದುವೆಯ ನಂತರವೂ ಅವರು ತಮ್ಮ ತಂದೆ-ತಾಯಿಯರ ಮತ್ತು ಒಡಹುಟ್ಟಿದವರ ಜೊತೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ.

 

ಅನುವಾದ: ಡಿ.ಎಸ್.ನರೇಂದ್ರ

Copyright © 2024 | Vedadhara | All Rights Reserved. | Designed & Developed by Claps and Whistles
| | | | |