ಮೇಷ ರಾಶಿಯಲ್ಲಿ ಹದಿಮೂರು ಡಿಗ್ರಿ ಇಪ್ಪತ್ತು ನಿಮಿಷದಿಂದ ಇಪ್ಪತ್ತಾರು ಡಿಗ್ರಿ ನಲವತ್ತು ನಿಮಿಷಗಳ ತನಕ ಹರಡಿರುವ ನಕ್ಷತ್ರವೇ ಭರಣಿ. ಇದು ವೈದಿಕ ಖಗೋಳಶಾಸ್ತ್ರದಲ್ಲಿ ಎರಡನೆಯ ನಕ್ಷತ್ರ. ಆಧುನಿಕ ಖಗೋಳಶಾಸ್ತ್ರದಲ್ಲಿ, ಭರಣಿಯು 35, 39 ಮತ್ತು 41 ಅರಿಯೇಟಿಸ್ ಗಳನ್ನು ಹೊಂದಿದೆ. ಸಂಸ್ಕೃತದಲ್ಲಿ ಭರಣಿಯನ್ನು ಅಪಭರಣಿ ಎಂದು ಕರೆಯಲಾಗುತ್ತದೆ. ಭರಣಿಯು ಉಗ್ರ-ನಕ್ಷತ್ರದ ವರ್ಗಕ್ಕೆ ಸೇರಿದೆ. (ಕ್ರೂರ ನಕ್ಷತ್ರಗಳು)
ಭರಣಿ ನಕ್ಷತ್ರದ ಅಧಿಪತಿಯು ಯಮ.
ಶುಕ್ರ
ಭರಣಿ ನಕ್ಷತ್ರದಲ್ಲಿ ಹುಟ್ಟಿದವರು ಪ್ರಮುಖ ಕಾರ್ಯಗಳನ್ನು ಈ ನಕ್ಷತ್ರಗಳ ದಿನಗಳಂದು ಮಾಡಬಾರದು ಮತ್ತು ಈ ಜನ್ಮ ನಕ್ಷತ್ರಗಳಲ್ಲಿ ಹುಟ್ಟಿದವರೊಂದಿಗೆ ಪಾಲುದಾರಿಕೆಯನ್ನು ಹೊಂದಬಾರದು.
ಭರಣಿ ನಕ್ಷತ್ರದಲ್ಲಿ ಹುಟ್ಟಿದವರು ಈ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ -
ಸಾಮಾನ್ಯವಾಗಿ ಚಂದ್ರ, ರಾಹು ಮತ್ತು ಶನಿ ದೆಸೆಗಳು ಭರಣಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಪ್ರತಿಕೂಲ ಸಮಯಗಳಾಗಿರುತ್ತದೆ. ಅವರು ಕೆಳಕಂಡ ಪರಿಹಾರಗಳನ್ನು ಮಾಡಿಕೊಳ್ಳಬಹುದು -
ಭರಣಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಸೂಕ್ತವಾದ ಕೆಲವು ವೃತ್ತಿಗಳು
ಓಂ ಯಮಾಯ ನಮಃ
ಹೌದು. ಭರಣಿ ನಕ್ಷತ್ರವನ್ನು ಆಳುವುದು ಶುಕ್ರಗ್ರಹ. ವಜ್ರವು ಧರಿಸಲು ಸೂಕ್ತವಾಗಿದೆ.
ವಜ್ರ
ಭರಣಿ ನಕ್ಷತ್ರದ ಪ್ರಾಣಿ – ಆನೆ
ಭರಣಿ ನಕ್ಷತ್ರದ ಮರ - ನೆಲ್ಲಿಕಾಯಿ ಮರ
ಭರಣಿ ನಕ್ಷತ್ರದ ಪಕ್ಷಿ - ಶಿಕ್ರಾ
ಭರಣಿ ನಕ್ಷತ್ರದ ಮೂಲಧಾತು - ಪೃಥ್ವಿ (ಭೂಮಿ)
ಭರಣಿ ನಕ್ಷತ್ರದ ಗಣ – ಮನುಷ್ಯ
ಭರಣಿ ನಕ್ಷತ್ರದ ಯೋನಿ - ಗಂಡಾನೆ
ಭರಣಿ ನಕ್ಷತ್ರದ ನಾಡಿ – ಮಧ್ಯ
ಭರಣಿ ನಕ್ಷತ್ರದ ಗುರುತು - ತ್ರಿಕೋಣ
ಅವಕಹಡಾದಿ ಪದ್ಧತಿಯಲ್ಲಿ ಹೆಸರಿನ ಪ್ರಾರಂಭದ ಅಕ್ಷರವು -
ಈ ಅಕ್ಷರಗಳನ್ನು ನಾಮಕರಣದ ಸಮಯದಲ್ಲಿ ಸಾಂಪ್ರದಾಯಕ ನಕ್ಷತ್ರದ ಹೆಸರಾಗಿ ಉಪಯೋಗಿಸಬಹುದು.
ಕೆಲವು ಸಮುದಾಯಗಳಲ್ಲಿ, ನಾಮಕರಣದ ಸಮಾರಂಭದಲ್ಲಿ ಅಜ್ಜ-ಅಜ್ಜಿಯರ ಹೆಸರನ್ನು ಇಡಲಾಗುತ್ತದೆ. ಆ ಪದ್ಧತಿಯನ್ನು ಅನುಸರಿಸುವುದರಿಂದ ಯಾವ ತೊಂದರೆಯೂ ಇಲ್ಲ.
ದಾಖಲೆಗಳಿಗಾಗಿ ಮತ್ತು ಎಲ್ಲಾ ಪ್ರಾಯೋಗಿಕ ಉದ್ಧೇಶಗಳಿಗಾಗಿ ಇಡುವ ಅಧಿಕೃತ ಹೆಸರು ಕೇವಲ ನಿಕಟ ಕುಟುಂಬ ಸದಸ್ಯರಿಗೆ ಮಾತ್ರ ಗೊತ್ತಿರಬೇಕೆಂದು ಶಾಸ್ತ್ರವು ಸೂಚಿಸುತ್ತದೆ.
ಭರಣಿ ನಕ್ಷತ್ರದಲ್ಲಿ ಹುಟ್ಟಿದವರ ಅಧಿಕೃತ ಹೆಸರಿನಲ್ಲಿ ಇಡಬಾರದ ಅಕ್ಷರಗಳೆಂದರೆ – ಅಂ, ಕ್ಷ, ಚ, ಛ, ಜ, ಝ, ಜ್ಞ, ಯ, ರ, ಲ, ವ
ಸ್ವಾರ್ಥವು ಸುಗಮ ದಾಂಪತ್ಯ ಜೀವನಕ್ಕೆ ಹಾನಿಕಾರಕವಾಗಬಹುದು. ಭರಣಿ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಜೀವನ ಸಂಗಾತಿಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವರಿಗೆ ಸಮಯ ಕೊಡಲು ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮಾಡಬೇಕು. ಅಹಂ ಅನ್ನು ಅವರು ನಿಯಂತ್ರಣದಲ್ಲಿಡಲು ಪ್ರಯತ್ನಿಸಬೇಕಾದ ಇನ್ನೊಂದು ಅಂಶವಾಗಿದೆ. ಭೋಗದ ಬಗೆಗಿನ ಅವರ ಒಲವು ವೈವಾಹಿಕ ಜೀವನವನ್ನು ಉತ್ಸಾಹಭರಿತವನ್ನಾಗಿಸಬಹುದು ಆದರೆ ಅವರು ಇಂದ್ರಿಯಭೋಗಗಳಲ್ಲಿ ಹೆಚ್ಚು ಪಾಲ್ಗೊಳ್ಳದಂತೆ ಎಚ್ಚರಿಕೆ ವಹಿಸಬೇಕು.
ಅನುವಾದ: ಡಿ.ಎಸ್.ನರೇಂದ್ರ