ಮೃಗಶಿರ ನಕ್ಷತ್ರ

Mrigasira Nakshatra Symbol

 

ವೃಷಭ ರಾಶಿಯಲ್ಲಿ ಇಪ್ಪತ್ತಮೂರು ಡಿಗ್ರಿ ಇಪತ್ತು ನಿಮಿಷಗಳಿಂದ ಮಿಥುನ ರಾಶಿಯಲ್ಲಿ ಆರು ಡಿಗ್ರಿ ನಲವತ್ತು ನಿಮಿಷಗಳವರೆಗೆ ಹರಡಿರುವ ನಕ್ಷತ್ರವೇ ಮೃಗಶಿರ್ಷ ನಕ್ಷತ್ರ. ಇದು ವೈದಿಕ ಖಗೋಳಶಾಸ್ತ್ರದಲ್ಲಿ ಐದನೇ ನಕ್ಷತ್ರ. ಇದನ್ನು ಮೃಗಶಿರಾ ಎಂದೂ ಕರೆಯುತ್ತಾರೆ. ಆಧುನಿಕ ಖಗೋಳಶಾಸ್ತ್ರದಲ್ಲಿ, ಮೃಗಶಿರ್ಷವು ಲಂಬ್ಡ, ಫಿ-ಓರಿಯನಿಸ್ ಗೆ ಸಂಬಂಧಪಟ್ಟಿದೆ.

Click below to listen to Mrigashira Nakshatra Mantra 

 

Mrigshira Nakshatra Mantra 108 Times | Mrigshira Nakshatra Devta Mantra | Mrigshira Nakshatra Mantra

 

ಗುಣವಿಶೇಷಣಗಳು

ಮೃಗಶಿರ್ಷ ನಕ್ಷತ್ರದಲ್ಲಿ ಜನಿಸಿದವರ ಗುಣವಿಶೇಷಣಗಳೆಂದರೆ:

 

ಎರಡೂ ರಾಶಿಗಳಿಗೆ ಸಂಬಂಧಿಸಿದ್ದು 

  • ಸಿದ್ಧ ಮತ್ತು ತ್ವರಿತ ಪ್ರತಿಕ್ರಿಯೆ
  • ಪರಿಣಾಮಕಾರಿ ಸಂವಹನ
  • ಕೌಶಲ್ಯಪೂರ್ಣ
  • ಸ್ವಾರ್ಥಿ
  • ಪ್ರಾಮಾಣಿಕ
  • ಸುಂದರ
  • ಉತ್ತಮ ಕೈಬರಹ
  • ಜೀವನದ ಮೊದಲಾರ್ಧದಲ್ಲಿ ಹೋರಾಟ
  • ಕಠಿಣ ಪರಿಶ್ರಮದಿಂದ ಸಾಧನೆಗಳು
  • ಮುಂಗೋಪಿ
  • ಕೆಟ್ಟ ಸಹವಾಸದಿಂದ ದುರ್ಮಾಗ ಹಿಡಿಯುವುದು
  • ದುಂದುಗಾರ
  • ಪ್ರದರ್ಶಿಸಿಕೊಳ್ಳುವ ಕಡೆ ಒಲವು

 

 ಮೃಗಶಿರ್ಷ ನಕ್ಷತ್ರ ವೃಷಭ ರಾಶಿಯವರಿಗೆ ಮಾತ್ರ 

  • ಎಚ್ಚರಿಕೆಯಿಂದಿರುವವರು
  • ಬಲಶಾಲಿ
  • ಉತ್ಸಾಹಿ
  • ಆಕರ್ಷಕ
  • ಕೆಲವೊಮ್ಮೆ ಒರಟಾಗಿ ಮಾತನಾಡುತ್ತಾರೆ
  • ಜಗಳಗಂತರು

 

ಮೃಗಶಿರ್ಷ ನಕ್ಷತ್ರ ಮಿಥುನ ರಾಶಿಯವರಿಗೆ ಮಾತ್ರ 

  • ಶಕ್ತಿವಂತರು
  • ಜೀವನವನ್ನು ಆನಂದಿಸುತ್ತಾರೆ
  • ವ್ಯಾಪಾರ ಕೌಶಲ್ಯಗಳು
  • ತೀಕ್ಷ್ಣವಾದ ಸ್ಮರಣೆ
  • ನಾಯಕತ್ವದ ಗುಣಗಳು
  • ಶ್ರೀಮಂತರು
  • ಬಹಳಷ್ಟು ಆಸೆಗಳನ್ನು ಹೊಂದಿರುವವರು  

 

ಹೊಂದಿಕೆಯಾಗದ ನಕ್ಷತ್ರಗಳು 

  • ಪುನರ್ವಸು
  • ಆಶ್ಲೇಷಾ
  • ಪುಬ್ಬ
  • ವೃಷಭ ರಾಶಿ ಮೃಗಶಿರ್ಷ ನಕ್ಷತ್ರದವರಿಗೆ – ಮೂಲ, ಪೂರ್ವಾಷಾಡ, ಉತ್ತರಾಷಾಡ 1ನೇ ಪಾದ
  • ಮಿಥುನ ರಾಶಿ ಮೃಗಶಿರ್ಷ ನಕ್ಷತ್ರದವರಿಗೆ – ಉತ್ತರಾಷಾಡ ಕಡೆಯ ಮೂರು ಪಾದಗಳು, ಶ್ರವಣ, ಧನಿಷ್ಠ 1 ಮತ್ತು 2 ನೇ ಪಾದಗಳು.

 ಮೃಗಶಿರ್ಷ ನಕ್ಷತ್ರದಲ್ಲಿ ಹುಟ್ಟಿದವರು ಮೇಲ್ಕಂಡ ನಕ್ಷತ್ರಗಳ ದಿನಗಳಂದು ಮುಖ್ಯವಾದ ಕೆಲಸಗಳನ್ನು ಮಾಡಬಾರದು ಮತ್ತು ಈ ನಕ್ಷತ್ರಗಳ ಜನರೊಂದಿಗೆ ಪಾಲುದಾರಿಕೆಯನ್ನು ಮಾಡಬಾರದು. 

 

ಆರೋಗ್ಯ ಸಮಸ್ಯೆಗಳು

 

ಮೃಗಶಿರ್ಷ ನಕ್ಷತ್ರದಲ್ಲಿ ಹುಟ್ಟಿದವರು ಈ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು: 

 

ಮೃಗಶಿರ್ಷ ನಕ್ಷತ್ರ ವೃಷಭರಾಶಿ 

  • ಮೊಡವೆಗಳು
  • ಮುಖದ ಗಾಯಗಳು
  • ಗಂಟಲು ಊದುವಿಕೆ
  • ಗಂಟಲು ಮತ್ತು ಕತ್ತಿನ ನೋವು
  • ಕಿವಿಗಳ ಹಿಂದೆ ಊದುಕೊಳ್ಳುವಿಕೆ
  • ನೇಸಲ್ ಪಾಲಿಪ್ಸ್
  • ಲೈಂಗಿಕ ಕಾಯಿಲೆಗಳು
  • ಶೀತ ಮತ್ತು ಕೆಮ್ಮು
  • ಮಲಬದ್ಧತೆ
  • ಮೂತ್ರ ಬಂಧ

 

 ಮೃಗಶಿರ್ಷ ನಕ್ಷತ್ರ ಮಿಥುನ ರಾಶಿ 

  • ರಕ್ತದ ಅಸ್ವಸ್ಥತೆ
  • ತುರಿಕೆ
  • ಸಯಾಟಿಕ
  • ಕೈಗಳಿಗೆ ಗಾಯ ಅಥವಾ ಮೂಳೆ ಮುರಿತ
  • ಭುಜದ ನೋವು
  • ಜನನಾಂಗದ ಸೋಂಕು
  • ಹೃದಯ ಹಿಗ್ಗುವಿಕೆ 

 

ಮೃಗಶಿರ್ಷ ನಕ್ಷತ್ರದಲ್ಲಿ ಹುಟ್ಟಿದವರಿಗೆ ಕೆಲವು ಸೂಕ್ತ ವೃತ್ತಿಗಳು 

 

ಮೃಗಶಿರ್ಷ ನಕ್ಷತ್ರ ಮಿಥುನ ರಾಶಿ 

  • ವಸತಿ
  • ರಿಯಲ್ ಎಸ್ಟೇಟ್
  • ಸಂಗೀತ
  • ಸಂಗೀತ ವಾದ್ಯಗಳು
  • ಪ್ರದರ್ಶನಗಳು
  • ರೇಟಿಂಗ್
  • ಗೊಬ್ಬರ
  • ಬೆಳ್ಳಿ
  • ಪ್ಲಾಟಿನಂ
  • ಆಟೋಮೊಬೈಲ್ಸ್
  • ಚರ್ಮ ಮತ್ತು ಮೂಳೆಗಳು
  • ತಂಬಾಕು
  • ಸಿಹಿತಿಂಡಿಗಳು
  • ಪಶುವೈದ್ಯರು
  • ಪಶುಸಂಗೋಪನೆ
  • ಚಾಲಕ
  • ಸಾರಿಗೆ
  • ಹಣ್ಣುಗಳು
  • ಉಡುಪುಗಳು
  • ರತ್ನಗಳು
  • ಸೌಂದರ್ಯವರ್ಧಕಗಳು
  • ದಂತ ಉತ್ಪನ್ನಗಳು
  • ತೈಲಗಳು
  • ಚಲನಚಿತ್ರಗಳು
  • ತಯಾರಿಕೆ
  • ಛಾಯಾಗ್ರಹಣ
  • ಶಬ್ಧ ತಂತ್ರಜ್ಞ
  • ಕಾರ್ಯಕ್ರಮ ನಿರ್ವಹಣೆ
  • ತೆರಿಗೆ ಅಧಿಕಾರಿ

 

ಮೃಗಶಿರ್ಷ ನಕ್ಷತ್ರ ಮಿಥುನ ರಾಶಿ 

  • ಯಂತ್ರೋಪಕರಣಗಳು
  • ಎಲೆಕ್ಟ್ರಿಕಲ್ಸ್
  • ಶಸ್ತ್ರಚಿಕಿತ್ಸಾ ಉಪಕರಣಗಳು
  • ದೂರವಾಣಿ
  • ಪೆÇೀಸ್ಟ್ ಮತ್ತು ಕೊರಿಯರ್
  • ಶಸ್ತ್ರಚಿಕಿತ್ಸಕ
  • ರಕ್ಷಣಾ ಸೇವೆಗಳು
  • ಗಣಿತಜ್ಞ
  • ಖಗೋಳಶಾಸ್ತ್ರಜ್ಞ
  • ನಿರ್ಮಾಣ
  • ಕಂಪ್ಯೂಟರ್ ಯಂತ್ರಾಂಶ
  • ಎಲೆಕ್ಟ್ರಾನಿಕ್ ಉಪಕರಣಗಳು
  • ಸಂಪರ್ಕ
  • ಬ್ರೋಕರ್
  • ಪತ್ರಕರ್ತ
  • ಪ್ರಕಟಣೆ
  • ಉಡುಪುಗಳು
  • ಹಣ್ಣುಗಳು ಮತ್ತು ತರಕಾರಿಗಳು
  • ಸಂಶೋಧನೆ
  • ಬೇಹುಗಾರಿಕೆ
  • ತನಿಖೆ
  • ಬರಹಗಾರ
  • ಶಿಕ್ಷಕ
  • ಆಡಿಟರ್

 

ಮೃಗಶಿರ್ಷ ನಕ್ಷತ್ರದವರು ವಜ್ರವನ್ನು ಧರಿಸಬಹುದೇ?

 

ಹೌದು. ಧರಿಸಬಹುದು.

 

ಅದೃಷ್ಟ ರತ್ನ

 

ಹವಳ

 

ಸೂಕ್ತವಾದ ಬಣ್ಣ

 

ಕೆಂಪು

 

ಮೃಗಶಿರ್ಷ ನಕ್ಷತ್ರಕ್ಕೆ ಹೆಸರುಗಳು

 

ಅವಕಹಾಡಾದಿ ಪದ್ಧತಿಯಲ್ಲಿ ಮೃಗಶಿರ್ಷ ನಕ್ಷತ್ರದವರ ಹೆಸರಿನ ಪ್ರಾರಂಭಿಕ ಅಕ್ಷರವು: 

  • ಮೊದಲನೆಯ ಪಾದ/ಚರಣ – ವೇ
  • ಎರಡನೆಯ ಪಾದ/ಚರಣ – ವೋ
  • ಮೂರನೆಯ ಪಾದ/ಚರಣ – ಕಾ
  • ನಾಲ್ಕನೆಯ ಪಾದ/ಚರಣ – ಕೀ

 

ಈ ಅಕ್ಷರಗಳನ್ನು ನಾಮಕರಣದ ಸಮಯದಲ್ಲಿ ಸಾಂಪ್ರದಾಯಿಕ ನಕ್ಷತ್ರದ ನಾಮವಾಗಿ ಉಪಯೋಗಿಸಬಹುದು. 

ಕೆಲವು ಸಮುದಾಯಗಳಲ್ಲಿ, ನಾಮಕರಣದ ಸಮಾರಂಭದಲ್ಲಿ ಅಜ್ಜ-ಅಜ್ಜಿಯರ ಹೆಸರನ್ನು ಇಡಲಾಗುತ್ತದೆ. ಆ ಪದ್ಧತಿಯನ್ನು ಅನುಸರಿಸುವುದರಿಂದ ಯಾವ ತೊಂದರೆಯೂ ಇಲ್ಲ.

ದಾಖಲೆಗಳಿಗಾಗಿ ಮತ್ತು ಎಲ್ಲಾ ಪ್ರಾಯೋಗಿಕ ಉದ್ಧೇಶಗಳಿಗಾಗಿ ಇಡುವ ಅಧಿಕೃತ ಹೆಸರು ಇದರಿಂದ ಬೇರೆಯಾಗಿರಬೇಕು. ಅದನ್ನು ವ್ಯಾವಹಾರಿಕ ಹೆಸರೆಂದು ಹೇಳುತ್ತಾರೆ. ಮೇಲಿನ ಪದ್ಧತಿಯಲ್ಲಿ ಇಟ್ಟ ನಕ್ಷತ್ರ ನಾಮವು ಕೇವಲ ನಿಕಟ ಕುಟುಂಬ ಸದಸ್ಯರಿಗೆ ಮಾತ್ರ ಗೊತ್ತಿರಬೇಕೆಂದು ಶಾಸ್ತ್ರವು ಸೂಚಿಸುತ್ತದೆ.

 

ಮೃಗಶಿರ್ಷ ನಕ್ಷತ್ರದಲ್ಲಿ ಹುಟ್ಟಿದವರ ಅಧಿಕೃತ ಹೆಸರಿನಲ್ಲಿ ಇಡಬಾರದ ಅಕ್ಷರಗಳೆಂದರೆ – 

  • ಮೃಗಶಿರ್ಷ ನಕ್ಷತ್ರ ವೃಷಭ ರಾಶಿ - ಕ, ಖ, ಗ, ಘ, ಟ, ಠ, ಡ, ಢ, ಅ, ಆ, ಇ, ಈ, ಶ
  • ಮೃಗಶಿರ್ಷ ನಕ್ಷತ್ರ ಮಿಥುನ ರಾಶಿ - ಚ, ಛ, ಜ, ಝ, ತ, ಥ, ದ, ಧ, ನ, ಉ, ಊ, ಋ, ಷ

 

 

ವಿವಾಹ

ಅವರು ತಮ್ಮ ಸ್ವಾರ್ಥತೆಯನ್ನು ಮತ್ತು ಐಹಿಕ ಸ್ವಭಾವವನ್ನು ನಿಯಂತ್ರಣದಲ್ಲಿ ಇಡಲು ಪ್ರಯತ್ನಿಸಬೇಕು. ದುರ್ಗುಣಗಳಿಂದ ದೂರವಿರಲು ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಮಾಡಬೇಕು. ಶ್ರಮಜೀವಿಗಳು ಮತ್ತು ಮಹತ್ವಾಕಾಂಕ್ಷಿಗಳಾದ ಇವರಿಗೆ ಕೌಟುಂಬಿಕ ಜೀವನವು ಪ್ರಗತಿಶೀಲವಾಗಿರುತ್ತದೆ. 

 

ಪರಿಹಾರಗಳು 

ಮೃಗಶಿರ್ಷ ನಕ್ಷತ್ರದಲ್ಲಿ ಹುಟ್ಟಿದವರಿಗೆ ಬುಧ ದೆಸೆ, ಗುರುದೆಸೆ ಮತ್ತು ಶುಕ್ರದೆಸೆಗಳು ಸಾಮಾನ್ಯವಾಗಿ ಸೂಕ್ತವಲ್ಲ. ಅವರು ಕೆಳಕಂಡ ಪರಿಹಾರಗಳನ್ನು ಮಾಡಬಹುದು: 

 

ಮಂತ್ರ 

ಓಂ ಸೋಮಾಯ ನಮಃ 

 

ಮೃಗಶಿರ್ಷ ನಕ್ಷತ್ರ 

  • ನಕ್ಷತ್ರಾಧಿಪತಿ - ಸೋಮ
  • ಗ್ರಹಾಧಿಪತಿ – ಮಂಗಳ/ಕುಜ
  • ಪ್ರಾಣಿ - ಸರ್ಪ
  • ವೃಕ್ಷ –ಕೈರ್
  • ಪಕ್ಷಿ - ಶಿಕ್ರಾ
  • ಮೂಲಧಾತು - ಪೃಥ್ವಿ
  • ಗಣ – ದೇವ
  • ಯೋನಿ - ಸರ್ಪ (ಹೆಣ್ಣು)
  • ನಾಡಿ – ಮಧ್ಯ
  • ಗುರುತು – ಜಿಂಕೆಯ ಶಿರಸ್ಸು

 

ಅನುವಾದ: ಡಿ.ಎಸ್.ನರೇಂದ್ರ

Kannada Topics

Kannada Topics

ಜ್ಯೋತಿಷ್ಯ


Fatal error: Uncaught Error: Call to undefined method MysqliDb::prepare() in /home/phasfu0bo9oa/public_html/vedadhara.com/audio-play.php:628 Stack trace: #0 {main} thrown in /home/phasfu0bo9oa/public_html/vedadhara.com/audio-play.php on line 628