ಪುನರ್ವಸು ನಕ್ಷತ್ರ

Punarvasu Nakshatra symbol bow and quiver

 

ಮಿಥುನ ರಾಶಿಯಲ್ಲಿ ಇಪ್ಪತ್ತು ಡಿಗ್ರಿ ಯಿಂದ ಕರ್ಕಾಟಕ ರಾಶಿಯಲ್ಲಿ ಮೂರು ಡಿಗ್ರಿ ಇಪ್ಪತ್ತು ನಿಮಿಷಗಳವರೆಗೆ ಹರಡಿರುವ ನಕ್ಷತ್ರವನ್ನು ಪುನರ್ವಸು ನಕ್ಷತ್ರವೆಂದು ಕರೆಯುತ್ತಾರೆ. ಇದು ವೈದಿಕ ಖಗೋಳ ಶಾಸ್ತ್ರದಲ್ಲಿ ಏಳನೇ ನಕ್ಷತ್ರ. ಆಧುನಿಕ ಖಗೋಳ ಶಾಸ್ತ್ರದಲ್ಲಿ ಪುನರ್ವಸು ನಕ್ಷತ್ರವು Castor ಮತ್ತು Pollux  ಗೆ ಸಂಬಂಧಿಸಿದೆ.

 

ಗುಣಲಕ್ಷಣಗಳು

 

ಪುನರ್ವಸು ನಕ್ಷತ್ರದಲ್ಲಿ ಹುಟ್ಟಿದವರ ಗುಣಲಕ್ಷಣಗಳು:

 

ಎರಡೂ ರಾಶಿಗಳಿಗೆ ಸಂಬಂಧಿಸಿದ್ದು

 

 • ಪ್ರಾಮಾಣಿಕರು
 • ನಿರ್ಧಾರ ತೆಗೆದುಕೊಳ್ಳುವ ಶಕ್ತಿ
 • ಚಿಂತನಶೀಲ ನಿರ್ಧಾರ ತೆಗೆದುಕೊಳ್ಳುವುದು
 • ಶ್ರೀಮಂತ 
 • ಸೌಮ್ಯ
 • ಬೇಡದ ವ್ಯವಹಾರಗಳಿಗೆ ಸಿಕ್ಕಿಕೊಳ್ಳುವುದಿಲ್ಲ 
 • ಧಾರ್ಮಿಕರು
 • ಸ್ವಯಂ ನಿಯಂತ್ರಣ ಹೊಂದಿರುವವರು
 • ನೀತಿವಂತರು
 • ಜ್ಞಾನವನ್ನು ಪಡೆಯಲು ಉತ್ಸುಕರು
 • ಗುರುತಿಸಿಕೊಳ್ಳುವಿಕೆಯ ಬಯಕೆ

 

 

ಕೇವಲ ಪುನರ್ವಸು ನಕ್ಷತ್ರ ಮಿಥುನ ರಾಶಿಯವರಿಗೆ

 

 • ಬುದ್ದಿವಂತರು
 • ಜ್ಞಾಪಕಶಕ್ತಿ
 • ಉತ್ತಮ ನಡವಳಿಕೆ
 • ದಾನ ಧರ್ಮ ಮಾಡುವವರು
 • ಆಕರ್ಷಕ
 • ಸಂತೋಷ
 • ಜನಪ್ರಿಯರು
 • ಬಹಳಷ್ಟು ಜನ ಸ್ನೇಹಿತರನ್ನು ಹೊಂದಿರುವವರು
 • ಅಂತರ್ಬೋಧೆಯುಳ್ಳವರು
 • ಸೋಮಾರಿಗಳು

 

ಕೇವಲ ಪುನರ್ವಸು ನಕ್ಷತ್ರ ಕರ್ಕಾಟಕ ರಾಶಿಯವರಿಗೆ

 

 • ಸೃಜನಶೀಲರು
 • ನಿಷ್ಠಾವಂತ
 • ವಿಶ್ವಾಸಾರ್ಹರು
 • ರೋಗಿಗಳು
 • ಚರ್ಚೆ ಮಾಡುವ ಕೌಶಲ್ಯಗಳು
 • ಸಹಾನುಭೂತಿಯುಳ್ಳವರು
 • ರಾಜಕೀಯ ಶಕ್ತಿಯುಳ್ಳವರು

 

ಪ್ರತಿಕೂಲ ನಕ್ಷತ್ರಗಳು

 

 • ಆಶ್ಲೇಷ
 • ಪುಬ್ಬ
 • ಹಸ್ತ
 • ಪುನರ್ವಸು ಮಿಥುನ ರಾಶಿಯವರಿಗೆ: ಉತ್ತರಾಷಾಡ ಮಕರ ರಾಶಿ, ಶ್ರವಣ, ಧನಿಷ್ಠ ಮಕರ ರಾಶಿ
 • ಪುನರ್ವಸು ಕರ್ಕಾಟಕ ರಾಶಿಯವರಿಗೆ: ಧನಿಷ್ಠ ಕುಂಭರಾಶಿ, ಶತಭಿಷ, ಪೂರ್ವಾಭಾದ್ರ

 

ಆರೋಗ್ಯ ಸಮಸ್ಯೆಗಳು

 

ಪುನರ್ವಸು ನಕ್ಷತ್ರದಲ್ಲಿ ಜನಿಸಿದವರು ಈ ಕೆಳಕಂಡ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

 

ಪುನರ್ವಸು ನಕ್ಷತ್ರ ಮಿಥುನ ರಾಶಿಯವರು

 

 • ನ್ಯುಮೋನಿಯಾ
 • ಪ್ಲುರಿಟಿಸ್
 • ಕಿವಿನೋವು
 • ಶ್ವಾಸಕೋಶದ ತೊಂದರೆಗಳು
 • ಕ್ಷಯರೋಗ
 • ಥೈರಾಯ್ಡ್ ಸಮಸ್ಯೆಗಳು
 • ರಕ್ತ ಅಸ್ವಸ್ಥತೆಗಳು
 • ಬೆನ್ನು ನೋವು
 • ತಲೆನೋವು
 • ಜ್ವರ
 • ಬ್ರಾಂಕೈಟಿಸ್
 • ಹೃದಯ ಹಿಗ್ಗುವಿಕೆ

 

ಪುನರ್ವಸು ನಕ್ಷತ್ರ ಕರ್ಕಾಟಕ ರಾಶಿಯವರು

 

 • ಕ್ಷಯರೋಗ
 • ನ್ಯುಮೋನಿಯಾ
 • ಶೀತ, ಕೆಮ್ಮು
 • ರಕ್ತ ಅಸ್ವಸ್ಥತೆಗಳು
 • ಬೆರಿಬೆರಿ
 • ಎಡಿಮಾ
 • ಹೊಟ್ಟೆ ಹಿಗ್ಗುವಿಕೆ
 • ಅತಿಯಾದ ಹಸಿವು
 • ಶ್ವಾಸನಾಳದ ಉರಿಯೂತ
 • ಕಾಮಾಲೆ

 

ಸೂಕ್ತ ವೃತ್ತಿ

 

ಪುನರ್ವಸು ನಕ್ಷತ್ರದಲ್ಲಿ ಜನಿಸಿದವರಿಗೆ ಕೆಲವು ಸೂಕ್ತವಾದ ವೃತ್ತಿಗಳು:

 

ಪುನರ್ವಸು ನಕ್ಷತ್ರ ಮಿಥುನ ರಾಶಿಯವರಿಗೆ

 

 • ಪತ್ರಕರ್ತ 
 • ಪ್ರಕಾಶನ
 • ಆಡಿಟರ್
 • ಬರಹಗಾರ
 • ವಿಮೆ
 • ಜಾಹೀರಾತು
 • ಬ್ರೋಕರ್
 • ಜ್ಯೋತಿಷಿ
 • ಗಣಿತಜ್ಞ
 • ನ್ಯಾಯಾದೀಶ
 • ಇಂಜಿನಿಯರ್
 • ವಕ್ತಾರ
 • ಸಲಹೆಗಾರ
 • ಶಿಕ್ಷಕ
 • ಅಂಚೆ ಸೇವೆಗಳು
 • ದಂತವೈದ್ಯ
 • ರಾಜತಾಂತ್ರಿಕ
 • ಉಣ್ಣೆ ಉದ್ಯಮ
 • ಅನುವಾದಕ
 • ರಾಜಕಾರಣಿ 

 

ಪುನರ್ವಸು ನಕ್ಷತ್ರ ಕರ್ಕಾಟಕ ರಾಶಿಯವರಿಗೆ

 

 • ವೈದ್ಯರು
 • ಅರ್ಚಕರು
 • ಅರ್ಥಶಾಸ್ತ್ರಜ್ಞ
 • ವಕೀಲ
 • ನ್ಯಾಯಾಧೀಶ
 • ವಿವರಣಕಾರ
 • ಪ್ರಾಧ್ಯಾಪಕ
 • ವ್ಯಾಪಾರ
 • ಬ್ಯಾಂಕ್
 • ನೌಕಾಪಡೆ
 • ಪ್ರವಾಸ ಮತ್ತು ಪ್ರವಾಸೋದ್ಯಮ
 • ನರ್ಸ್
 • ದ್ರವಗಳು
 • ನೀರಾವರಿ

 

ಪುನರ್ವಸು ನಕ್ಷತ್ರದವರು ವಜ್ರವನ್ನು ಧರಿಸಬಹುದೇ?

 

 • ಪುನರ್ವಸು ನಕ್ಷತ್ರ ಮಿಥುನ ರಾಶಿಯವರು – ಧರಿಸಬಹುದು
 • ಪುನರ್ವಸು ನಕ್ಷತ್ರ ಕರ್ಕಾಟಕ ರಾಶಿಯವರು – ಧರಿಸಬಾರದು

 

ಅದೃಷ್ಟ ರತ್ನ

 

ಹಳದಿ ನೀಲಮಣಿ

 

ಸೂಕ್ತವಾದ ಬಣ್ಣ

 

ಹಳದಿ, ಕೆನೆ ಬಣ್ಣ

 

ಪುನರ್ವಸು ನಕ್ಷತ್ರದವರಿಗೆ ಹೆಸರುಗಳು

 

ಅವಕಹಾಡಾದಿ ಪದ್ಧತಿಯಲ್ಲಿ ಪುನರ್ವಸು ನಕ್ಷತ್ರದವರ ಹೆಸರಿನ ಪ್ರಾರಂಭಿಕ ಅಕ್ಷರವು:

 

 • ಮೊದಲ ಪಾದ/ಚರಣ – ಕೇ
 • ಎರಡನೆಯ ಪಾದ/ಚರಣ –ಕೋ
 • ಮೂರನೆಯ ಪಾದ/ಚರಣ - ಹಾ
 • ನಾಲ್ಕನೆಯ ಪಾದ/ಚರಣ – ಹೀ

 

ಈ ಅಕ್ಷರಗಳನ್ನು ನಾಮಕರಣದ ಸಮಯದಲ್ಲಿ ಸಾಂಪ್ರದಾಯಿಕ ನಕ್ಷತ್ರದ ನಾಮವಾಗಿ ಉಪಯೋಗಿಸಬಹುದು. 

ಕೆಲವು ಸಮುದಾಯಗಳಲ್ಲಿ, ನಾಮಕರಣದ ಸಮಾರಂಭದಲ್ಲಿ ಅಜ್ಜ-ಅಜ್ಜಿಯರ ಹೆಸರನ್ನು ಇಡಲಾಗುತ್ತದೆ. ಆ ಪದ್ಧತಿಯನ್ನು ಅನುಸರಿಸುವುದರಿಂದ ಯಾವ ತೊಂದರೆಯೂ ಇಲ್ಲ.

 

ದಾಖಲೆಗಳಿಗಾಗಿ ಮತ್ತು ಎಲ್ಲಾ ಪ್ರಾಯೋಗಿಕ ಉದ್ಧೇಶಗಳಿಗಾಗಿ ಇಡುವ ಅಧಿಕೃತ ಹೆಸರು ಇದರಿಂದ ಬೇರೆಯಾಗಿರಬೇಕು. 

ಅದನ್ನು ವ್ಯಾವಹಾರಿಕ ಹೆಸರೆಂದು ಹೇಳುತ್ತಾರೆ. ಮೇಲಿನ ಪದ್ಧತಿಯಲ್ಲಿ ಇಟ್ಟ ನಕ್ಷತ್ರ ನಾಮವು ಕೇವಲ ನಿಕಟ ಕುಟುಂಬ ಸದಸ್ಯರಿಗೆ ಮಾತ್ರ ಗೊತ್ತಿರಬೇಕೆಂದು ಶಾಸ್ತ್ರವು ಸೂಚಿಸುತ್ತದೆ.

 

ಪುನರ್ವಸು ನಕ್ಷತ್ರದಲ್ಲಿ ಹುಟ್ಟಿದವರ ಅಧಿಕೃತ ಹೆಸರಿನಲ್ಲಿ ಈ ಕೆಳಕಂಡ ಪ್ರಾರಂಭಿಕ ಅಕ್ಷರಗಳನ್ನು ಇಡಬಾರದು-

 

 • ಪುನರ್ವಸು ನಕ್ಷತ್ರ ಮಿಥುನ ರಾಶಿ - ಚ, ಛ, ಜ, ಝ, ತ, ಥ, ದ, ಧ, ನ, ಉ, ಊ, ಋ, ಷ
 • ಪುನರ್ವಸು ನಕ್ಷತ್ರ ಕರ್ಕಾಟಕ ರಾಶಿ - ಟ ಠ, ಡ, ಢ, ಪ, ಫ, ಬ, ಭ, ಮ, ಸ

 

ವಿವಾಹ

 

ಪುನರ್ವಸು ನಕ್ಷತ್ರದಲ್ಲಿ ಜನಿಸಿದವರ ವೈವಾಹಿಕ ಜೀವನವು ಸಾಮಾನ್ಯವಾಗಿ ತ್ರಾಸದಾಯಕವಾಗಿರುತ್ತದೆ. 

ಈ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ತಮ್ಮ ಪತಿಯವರೊಂದಿಗೆ ಪ್ರೀತಿಯನ್ನು ಹೊಂದಿರುತ್ತಾರೆ ಆದರೆ ಅದೇ ಸಮಯದಲ್ಲಿ ತುಂಬಾ ಜಗಳವಾಡುತ್ತಾರೆ.

 

ಪರಿಹಾರಗಳು

 

ಪುನರ್ವಸು ನಕ್ಷತ್ರದಲ್ಲಿ ಹುಟ್ಟಿದವರಿಗೆ ಚಂದ್ರ, ಬುಧ ಮತ್ತು ಶುಕ್ರ ದೆಸೆಗಳು ಸಾಮಾನ್ಯವಾಗಿ ಸೂಕ್ತವಲ್ಲ. 

ಅವರುಗಳು ಈ ಕೆಳಕಂಡ ಪರಿಹಾರಗಳನ್ನು ಮಾಡಬಹುದು:

 

 

ಮಂತ್ರ

 

ಓಂ ಅದಿತಯೆ ನಮಃ

 

ಪುನರ್ವಸು ನಕ್ಷತ್ರ

 

 • ನಕ್ಷತ್ರಾಧಿಪತಿ – ಅದಿತಿ (ದೇವತೆಗಳ ತಾಯಿ)
 • ಗ್ರಹಾಧಿಪತಿ – ಗುರು/ಬೃಹಸ್ಪತಿ
 • ಪುನರ್ವಸು ನಕ್ಷತ್ರ ಪ್ರಾಣಿ - ಬೆಕ್ಕು
 • ವೃಕ್ಷ - ಬೊಂಬು (Bambusa arundinacea)
 • ಪಕ್ಷಿ – ಕಾಗೆ (Centropus sinensis)
 • ಮೂಲಧಾತು – ಜಲ
 • ಗಣ – ದೇವ
 • ಯೋನಿ - ಬೆಕ್ಕು (ಹೆಣ್ಣು)
 • ನಾಡಿ – ಅದ್ಯ
 • ಗುರುತು - ಬಿಲ್ಲು ಮತ್ತು ಬತ್ತಳಿಕೆ

 

29.2K
1.0K

Comments

fnGup
ವೇದಗಳು ಮತ್ತು ಪುರಾಣಗಳಲ್ಲಿ ಆಸಕ್ತರು ಇದಕ್ಕಾಗಿ ತುಂಬಾ ಒಳ್ಳೆಯ ವೆಬ್‌ಸೈಟ್ -ಜಯಕುಮಾರ್ ನಾಯಕ್

ತುಂಬಾ ಉಪಯುಕ್ತವಾದ ವೆಬ್‌ಸೈಟ್ 🙌 -ಪ್ರಹ್ಲಾದ ಮೂರ್ತಿ

ಜ್ಞಾನಕ್ಕಾಗಿ ಸೊನ್ನಿನ ಮುಟ್ಟು -ಮಹೇಂದ್ರ ಶೆಟ್ಟಿ

ಮಹಾನ್ ಜ್ಞಾನಮೂಲ -ಸುಬ್ರಹ್ಮಣ್ಯ ಶರ್ಮಾ

ಇಂತಹ ಅದ್ಭುತ ವೆಬ್‌ಸೈಟ್ ಮೊದಲನೇ ಬಾರಿಗೆ ನೋಡಿದ್ದೇನೆ 😲 -ಭಾರದ್ವಾಜ್ ಶರ್ಮಾ

Read more comments

ಅನ್ನದಾನ ಮಾಡುವುದರಿಂದ ಯಾವೆಲ್ಲಾ ಲಾಭಗಳಿವೆ?

ಬ್ರಹ್ಮಾಂಡ ಪುರಾಣದ ಪ್ರಕಾರ, ಅನ್ನದಾನ ಮಾಡುವವರ ಆಯುಷ್ಯ, ಧನ-ಸಂಪತ್ತು, ಕಾಂತಿ ಮತ್ತು ಆಕರ್ಷಕತೆ ಹೆಚ್ಚುತ್ತದೆ. ಅವರನ್ನು ಕರೆದುಕೊಂಡು ಹೋಗಲು ಸ್ವರ್ಗಲೋಕದಿಂದ ಬಂಗಾರದಿಂದ ಮಾಡಿದ ವಿಮಾನ ಬರುತ್ತದೆ. ಪದ್ಮ ಪುರಾಣದ ಪ್ರಕಾರ, ಅನ್ನದಾನಕ್ಕೆ ಸಮಾನವಾದ ಇನ್ನೊಂದು ದಾನವಿಲ್ಲ. ಹಸಿವಾದವರನ್ನು ಆಹರಿಸುವುದರಿಂದ ಇಹಲೋಕ ಮತ್ತು ಪರಲೋಕದಲ್ಲಿ ಸುಖವನ್ನು ಪಡೆಯುತ್ತಾರೆ. ಪರಲೋಕದಲ್ಲಿ ಬೆಟ್ಟಗಳಷ್ಟು ರುಚಿಕರವಾದ ಆಹಾರ ಅಂಥ ದಾತನಿಗಾಗಿ ಯಾವಾಗಲೂ ಸಿದ್ಧವಾಗಿರುತ್ತದೆ. ಅನ್ನದಾತನಿಗೆ ದೇವತೆಗಳು ಮತ್ತು ಪಿತೃಗಳು ಆಶೀರ್ವಾದವನ್ನು ನೀಡುತ್ತಾರೆ. ಅವನು ಎಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ

ಶುಕ್ರಾಚಾರ್ಯ

ಶುಕ್ರಾಚಾರ್ಯ ಅಸುರರ (ದಾನವ) ಪುರೋಹಿತರು ಮತ್ತು ಗುರು. ಅವರು ಅಸುರರಿಗಾಗಿ ಯಜ್ಞ ಮತ್ತು ವಿಧಿಗಳನ್ನು ನಡೆಸುತ್ತಾರೆ. ಶುಕ್ರಾಚಾರ್ಯ ಮುಖ್ಯವಾಗಿ ಮೃತಸಂಜೀವನಿ ವಿದ್ಯೆಗೆ ಪ್ರಸಿದ್ಧರಾಗಿದ್ದಾರೆ, ಇದು ಮೃತರನ್ನು ಪುನರ್ಜೀವಿಸಲು ಸಾಧ್ಯವಾಗುತ್ತದೆ. ಶುಕ್ರಾಚಾರ್ಯ ಗ್ರಹಗಳಲ್ಲಿ ಶುಕ್ರನ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಶುಕ್ರಾಚಾರ್ಯ ಅಸುರರ ಗುರುಗಳಾಗಿ ಉಲ್ಲೇಖಿತರಾಗಿದ್ದು, ಅವರು ಧಾರ್ಮಿಕ ಮತ್ತು ಯುದ್ಧ ಸಂಬಂಧಿ ಕಾರ್ಯಗಳಲ್ಲಿ ಮಾರ್ಗದರ್ಶನ ನೀಡುತ್ತಾರೆ.

Quiz

ವಿಶ್ವಾಮಿತ್ರನು ಯಾವ ದೇಶದ ರಾಜ?

ಅನುವಾದ: ಡಿ.ಎಸ್.ನರೇಂದ್ರ

Copyright © 2024 | Vedadhara | All Rights Reserved. | Designed & Developed by Claps and Whistles
| | | | |