ರೋಹಿಣಿ ನಕ್ಷತ್ರ

Rohini Nakshatra Symbol

 

ವೃಷಭರಾಶಿಯಲ್ಲಿ ಹತ್ತು ಡಿಗ್ರಿಯಿಂದ ಇಪ್ಪತ್ತಮೂರು ಡಿಗ್ರಿ ಇಪ್ಪತ್ತು ನಿಮಿಷಗಳವರಗೆ ಹರಡಿರುವ ನಕ್ಷತ್ರವನ್ನು ರೋಹಿಣಿ ಎಂದು ಕರೆಯುತ್ತಾರೆ. ಇದು ವೈದಿಕ ಖಗೋಳಶಾಸ್ತ್ರದಲ್ಲಿ ನಾಲ್ಕನೆಯ ನಕ್ಷತ್ರ. ಆಧುನಿಕ ಖಗೋಳಶಾಸ್ತ್ರದಲ್ಲಿ, ರೋಹಿಣಿಯು ಅಲ್ಡೆಬರನ್ ಗೆ ಸೇರಿದೆ.

 

Click below to listen to Rohini Nakshatra Mantra 

 

Rohini Nakshatra Mantra 108 Times | Rohini Nakshatra Devta Mantra | Rohini Nakshatra Vedic Mantra

 

ಗುಣಲಕ್ಷಣಗಳು

ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದವರ ಗುಣಲಕ್ಷಣಗಳೆಂದರೆ:

 

 • ಸ್ಥಿರ ಮನಸ್ಸು
 • ಸುಂದರ
 • ಘನತೆಯ ನಡವಳಿಕೆ
 • ಸಿಹಿ ಮಾತು
 • ಮುಂಗೋಪಿ
 • ನ್ಯಾಯಸಮ್ಮತ ಮತ್ತು ನ್ಯಾಯಯುತ
 • ಕೆಲಸದಲ್ಲಿ ನಿಪುಣ
 • ತಾಯಿಯೊಂದಿಗೆ ಉತ್ತಮ ಸಂಬಂಧ
 • ಕರುಣಾಳು
 • ಸೇವಾ ಮನೋಭಾವ
 • ಮೃದು ಸ್ವಭಾವ
 • ಪ್ರಕೃತಿ ಪ್ರೇಮಿ
 • ಸಹಾನುಭೂತಿ ಉಳ್ಳವರು
 • ಕಲೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ
 • ಕಾವ್ಯಾತ್ಮಕ
 • ಕೃತಜ್ಞತೆಯುಳ್ಳವರು
 • ಮಹಿಳೆಯರು ತಾಯಿಯ ಮತ್ತು ಹೆಂಗರುಳಿನ ಗುಣಗಳುಳ್ಳವರು

 

ಹೊಂದಿಕೆಯಾಗದ ನಕ್ಷತ್ರಗಳು

 • ಆರ್ದ್ರೆ
 • ಪುಷ್ಯ
 • ಮಖ
 • ಮೂಲ
 • ಪೂರ್ವಾಷಾಡ
 • ಉತ್ತರಾಷಾಡ 1ನೇ ಪಾದ

 

ಆರೋಗ್ಯ ಸಮಸ್ಯೆಗಳು

ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದವರು ಈ ಕೆಳಕಂಡ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗಬಹುದು:

 • ಜ್ವರ
 • ಶೀತ
 • ಕೆಮ್ಮು
 • ಫ್ಲೂ
 • ಗಂಟಲಲ್ಲಿ ಊದುಕೊಳ್ಳುವಿಕೆ
 • ಥೈರಾಯ್ಡ್ ಸಮಸ್ಯೆಗಳು
 • ತಲೆನೋವು
 • ಕಾಲುಗಳಲ್ಲಿ ನೋವು
 • ಎದೆನೋವು
 • ಅನಿಯಮಿತ ಋತುಚಕ್ರ
 • ಉರಿಯೂತ ಮತ್ತು ಬಾವು
 • ಹೊಟ್ಟೆನೋವು

 

ಸೂಕ್ತ ವೃತ್ತಿ

ಕೆಲಸದ ಜಾಗದಲ್ಲಿ ಅವರು ಉತ್ತಮ ಬಾಂಧವ್ಯಗಳನ್ನು ಕಾಪಾಡಿಕೊಳ್ಳುತ್ತಾರೆ. ಅವರು ತಮ್ಮ ಕೆಲಸದಲ್ಲಿ ಉತ್ತಮ ಅಭ್ಯಾಸಗಳಿಗಾಗಿ ಗುರುತಿಸಿಕೊಂಡಿರುತ್ತಾರೆ. ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಕೆಲವು ಸೂಕ್ತ ವೃತ್ತಿಗಳು:

 • ಹೋಟೆಲ್
 • ವಸತಿ ಮತ್ತು ನಿರ್ಮಾಣ
 • ಹಣ್ಣುಗಳು
 • ಹಾಲು
 • ತೈಲಗಳು
 • ಇಂಧನಗಳು
 • ಗಾಜು
 • ಪ್ಲಾಸ್ಟಿಕ್ಸ್
 • ಸಾಬೂನು
 • ಸುಗಂಧ ದ್ರವ್ಯಗಳು
 • ಸೌಂದರ್ಯವರ್ಧಕಗಳು
 • ನೀರು ಸರಬರಾಜು
 • ನೌಕಾಪಡೆ
 • ಔಷಧಿ
 • ನೀರಾವರಿಗೆ ಸಂಬಂಧಿಸಿದ ಬೇಸಾಯ
 • ಪ್ರಾಣಿ ಸಾಕಣೆ
 • ರಿಯಲ್ ಎಸ್ಟೇಟ್
 • ಜ್ಯೋತಿಷ್ಯ
 • ಅರ್ಚಕ
 • ಕಾನೂನು
 • ಕಲಾ ಪ್ರದರ್ಶನ

 

 ರೋಹಿಣಿ ನಕ್ಷತ್ರದವರು ವಜ್ರವನ್ನು ಧರಿಸಬಹುದೇ?

ಧರಿಸಬಹುದು.

 

ಅದೃಷ್ಟ ರತ್ನ

ಮುತ್ತು

 

ಸೂಕ್ತವಾದ ಬಣ್ಣಗಳು

ಬಿಳಿ ಮತ್ತು ಶ್ರೀಗಂಧದ ಬಣ್ಣ

 

ರೋಹಿಣಿ ನಕ್ಷತ್ರದವರಿಗೆ ಹೆಸರುಗಳು

ಅವಕಹಾಡಾದಿ ಪದ್ಧತಿಯಲ್ಲಿ ರೋಹಿಣಿ ನಕ್ಷತ್ರದವರ ಹೆಸರಿನ ಪ್ರಾರಂಭಿಕ ಅಕ್ಷರವು:

ಮೊದಲನೆಯ ಪಾದ/ಚರಣ – ಓ
ಎರಡನೆಯ ಪಾದ/ಚರಣ – ವಾ
ಮೂರನೆಯ ಪಾದ/ಚರಣ – ವೀ
ನಾಲ್ಕನೆಯ ಪಾದ/ಚರಣ – ವೂ

ಈ ಅಕ್ಷರಗಳನ್ನು ನಾಮಕರಣದ ಸಮಯದಲ್ಲಿ ಸಾಂಪ್ರದಾಯಿಕ ನಕ್ಷತ್ರದ ನಾಮವಾಗಿ ಉಪಯೋಗಿಸಬಹುದು.

ಕೆಲವು ಸಮುದಾಯಗಳಲ್ಲಿ, ನಾಮಕರಣದ ಸಮಾರಂಭದಲ್ಲಿ ಅಜ್ಜ-ಅಜ್ಜಿಯರ ಹೆಸರನ್ನು ಇಡಲಾಗುತ್ತದೆ. ಆ ಪದ್ಧತಿಯನ್ನು ಅನುಸರಿಸುವುದರಿಂದ ಯಾವ ತೊಂದರೆಯೂ ಇಲ್ಲ.

ದಾಖಲೆಗಳಿಗಾಗಿ ಮತ್ತು ಎಲ್ಲಾ ಪ್ರಾಯೋಗಿಕ ಉದ್ಧೇಶಗಳಿಗಾಗಿ ಇಡುವ ಅಧಿಕೃತ ಹೆಸರು ಇದರಿಂದ ಬೇರೆಯಾಗಿರಬೇಕು. ಅದನ್ನು ವ್ಯಾವಹಾರಿಕ ಹೆಸರೆಂದು ಹೇಳುತ್ತಾರೆ. ಮೇಲಿನ ಪದ್ಧತಿಯಲ್ಲಿ ಇಟ್ಟ ನಕ್ಷತ್ರ ನಾಮವು ಕೇವಲ ನಿಕಟ ಕುಟುಂಬ ಸದಸ್ಯರಿಗೆ ಮಾತ್ರ ಗೊತ್ತಿರಬೇಕೆಂದು ಶಾಸ್ತ್ರವು ಸೂಚಿಸುತ್ತದೆ.

ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದವರ ಅಧಿಕೃತ ಹೆಸರಿನಲ್ಲಿ ಇಡಬಾರದ ಅಕ್ಷರಗಳೆಂದರೆ – ಕ, ಖ, ಗ, ಘ, ಟ, ಠ, ಡ, ಢ, ಅ, ಆ, ಇ, ಈ, ಶ

 

ವಿವಾಹ

ರೋಹಿಣಿ ನಕ್ಷತ್ರದಲ್ಲಿ ಜನಿಸಿದವರು ಸೌಮ್ಯ ಸ್ವಭಾವದವರು, ಕಾಳಜಿಯುಳ್ಳವರು ಮತ್ತು ಮೃದುಭಾಷಿಗಳು. ಸಹಾನುಭೂತಿಯಿಂದ ಕೂಡಿದವರಾಗಿ ಮತ್ತು ಸಂಗಾತಿಯ ಅಗತ್ಯಗಳನ್ನು ಅರಿತವರಾಗಿದ್ದು ಅವರು ಅತ್ಯುತ್ತಮ ಜೀವನಸಂಗಾತಿಗಳಾಗುತ್ತಾರೆ.

 

ಪರಿಹಾರಗಳು

ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ರಾಹು, ಶನಿ ಮತ್ತು ಕೇತು ದೆಸೆಗಳು ಸಾಮಾನ್ಯವಾಗಿ ಸೂಕ್ತವಲ್ಲ. ಅವರು ಕೆಳಗಿನ ಪರಿಹಾರಗಳನ್ನು ಮಾಡಬಹುದು:

 

ಮಂತ್ರ

ಓಂ ಪ್ರಜಾಪತೆಯೇ ನಮಃ

 

ರೋಹಿಣಿ ನಕ್ಷತ್ರ

 • ಅಧಿಪತಿ - ಪ್ರಜಾಪತಿ
 • ಗ್ರಹಾಧಿಪತಿ – ಚಂದ್ರ
 • ಪ್ರಾಣಿ - ಸರ್ಪ
 • ವೃಕ್ಷ - ನೇರಳೆ ಮರ
 • ಪಕ್ಷಿ - ಶಿಕ್ರಾ
 • ಲಧಾತು - ಪೃಥ್ವಿ
 • ಗಣ – ಮನುಷ್ಯ
 • ಯೋನಿ - ಹೆಣ್ಣು ಸರ್ಪ
 • ನಾಡಿ – ಅಂತ್ಯ
 • ಗುರುತು – ಗಾಡಿ

 

ಅನುವಾದ: ಡಿ.ಎಸ್.ನರೇಂದ್ರ

Copyright © 2024 | Vedadhara | All Rights Reserved. | Designed & Developed by Claps and Whistles
| | | | |