ಆರ್ದ್ರಾ ನಕ್ಷತ್ರ

Ardra Nakshatra symbol diamond

ಮಿಥುನ ರಾಶಿಯಲ್ಲಿ ಆರು ಡಿಗ್ರಿ ನಲವತ್ತು ನಿಮಿಷದಿಂದ ಇಪ್ಪತ್ತು ಡಿಗ್ರಿಯವರೆಗೆ ಹರಡಿರುವ ನಕ್ಷತ್ರವನ್ನು ಆರ್ದ್ರಾ ನಕ್ಷತ್ರವೆಂದು ಕರೆಯುತ್ತಾರೆ.

ಇದು ವೈದಿಕ ಖಗೋಳ ಶಾಸ್ತ್ರದಲ್ಲಿ ಆರನೇ ನಕ್ಷತ್ರ. 

ಆಧುನಿಕ ಖಗೋಳ ಶಾಸ್ತ್ರದಲ್ಲಿ ಆರ್ದ್ರಾ ನಕ್ಷತ್ರವು Betelgeuse ಗೆ ಸಂಬಂಧಿಸಿದೆ.

ಗುಣಲಕ್ಷಣಗಳು

ಆರ್ದ್ರಾ ನಕ್ಷತ್ರದಲ್ಲಿ ಹುಟ್ಟಿದವರ ಗುಣಲಕ್ಷಣಗಳು:

 • ತಿಳುವಳಿಕೆಯುಳ್ಳವರು
 • ಹಣ ಮಾಡುವ ಹಂಬಲದವರು
 • ಜೀವನದಲ್ಲಿ ಏರಿಳಿತಗಳು
 • ಆಸಕ್ತಿದಾಯಕ ಮಾತನಾಡುವ ವಿಧಾನ
 • ಅಸ್ಥಿರ ನಿರ್ಧಾರಗಳು
 • ಹಠಮಾರಿತನ
 • ಅಹಂಕಾರಿಗಳು
 • ಅವರಿಗೆ ಸಲ್ಲಬೇಕಾದ ಖ್ಯಾತಿಯನ್ನು ಪಡೆಯದವರು
 • ಕೃತಘ್ನರು
 • ಹೊಲಸು ಮಾತಿನ ಹೆಂಗಸರು
 • ಪ್ರಕ್ಷುಬ್ಧ ಮದುವೆ
 • ಸಾಹಿತ್ಯದಲ್ಲಿ ಆಸಕ್ತಿ
 • ಅಪ್ರಾಮಾಣಿಕರು
 • ಸಂಶಯಾಸ್ಪದ ಚಟುವಟಿಕೆಗಳು
 • ಕುಡಿತದ ಪ್ರವೃತ್ತಿ

 

ಮಂತ್ರ

ಓಂ ರುದ್ರಾಯ ನಮಃ

 

Ardra Nakshatra Mantra 108 Times | Ardra Nakshatra Devta Mantra | Ardra Nakshatra Vedic Mantra Jaap

 

ಹೊಂದಿಕೆಯಾಗದ ನಕ್ಷತ್ರಗಳು

 • ಪುಷ್ಯ
 • ಮಖ
 • ಉತ್ತರಾ
 • ಉತ್ತರಾಷಾಢ, ಮಕರ ರಾಶಿ
 • ಶ್ರವಣ
 • ಧನಿಷ್ಠ, ಮಕರ ರಾಶಿ 

ಆರ್ದ್ರಾ ನಕ್ಷತ್ರದಲ್ಲಿ ಹುಟ್ಟಿದವರು ಈ ಮೇಲ್ಕಂಡ ನಕ್ಷತ್ರಗಳ ದಿನದಂದು ಯಾವುದೇ ಮುಖ್ಯವಾದ ಕೆಲಸಗಳನ್ನು ಮಾಡಬಾರದು ಮತ್ತು ಈ ನಕ್ಷತ್ರಗಳ ಜನರೊಂದಿಗೆ ಪಾಲುದಾರಿಕೆಯನ್ನು ಮಾಡಬಾರದು.

ಆರೋಗ್ಯ ಸಮಸ್ಯೆಗಳು

 • ಗಂಟಲಿನ ಸಮಸ್ಯೆಗಳು
 • ಕುತ್ತಿಗೆಯಲ್ಲಿ ಊತ
 • ಅಸ್ತಮಾ
 • ಒಣಕೆಮ್ಮು
 • ಉಸಿರಾಟದ ಕಾಯಿಲೆಗಳು
 • ಕಿವಿಯ ಕಾಯಿಲೆಗಳು
 • ಥೈರಾಯ್ಡ್ ಸಮಸ್ಯೆಗಳುಸೂಕ್ತ ವೃತ್ತಿ

ಕೆಲಸದ ಸ್ಥಳದಲ್ಲಿ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಳ್ಳುತ್ತಾರೆ.

ಸಂಶಯಾಸ್ಪದ ಚಟುವಟಿಕೆಗಳು ಅವರನ್ನು ತೊಂದರೆಗೆ ದೂಡಬಹುದು.

ಆರ್ದ್ರಾ ನಕ್ಷತ್ರದಲ್ಲಿ ಹುಟ್ಟಿದವರಿಗೆ ಸೂಕ್ತವಾದ ಕೆಲವು ವೃತ್ತಿಗಳು - 

 • ವ್ಯಾಪಾರ
 • ಪುಸ್ತಕಗಳು
 • ಕೊರಿಯರ್
 • ಅಂಚೆ ಸೇವೆ
 • ಬರವಣಿಗೆ
 • ಪ್ರಕಟಣೆ
 • ಮುದ್ರಣ
 • ಪ್ರವಾಸ ಆಯೋಜಕರು
 • ಸಾರಿಗೆ
 • ಸಂಶೋಧನೆ
 • ವಿನ್ಯಾಸ ಮತ್ತು ಅಭಿವೃದ್ಧಿ
 • ಔಷಧಿ
 • ಭೌತಶಾಸ್ತ್ರಜ್ಞ
 • ಗಣಿತಜ್ಞ
 • ಜ್ಯೋತಿಷಿ
 • ಹಸ್ತಾಕ್ಷರ ಕಲೆ
 • ಕೈಗಾರಿಕಾ ಕಾರ್ಮಿಕ
 • ಕುಶಲಕರ್ಮಿ
 • ಆರಕ್ಷಕ
 • ರಕ್ಷಣಾ ಸೇವೆ
 • ಮ್ಯಾಜಿಕ್
 • ತಂತ್ರವಿದ್ಯೆ

 

ಆರ್ದ್ರಾ ನಕ್ಷತ್ರದವರು ವಜ್ರವನ್ನು ಧರಿಸಬಹುದೇ?

ಹೌದು. ವಜ್ರವು ಸೂಕ್ತವಾದುದು.

ಅದೃಷ್ಟ ರತ್ನ

ಗೋಮೇದ  

ಸೂಕ್ತವಾದ ಬಣ್ಣಗಳು

ಕಪ್ಪು, ಗಾಢ ನೀಲಿ

 

ಆರ್ದ್ರಾ ನಕ್ಷತ್ರದವರಿಗೆ ಹೆಸರುಗಳು

ಅವಕಹಾಡಾದಿ ಪದ್ಧತಿಯಲ್ಲಿ ಆರ್ದ್ರಾ ನಕ್ಷತ್ರದವರ ಹೆಸರಿನ ಪ್ರಾರಂಭಿಕ ಅಕ್ಷರವು -

 • ಮೊದಲ ಪಾದ/ಚರಣ – ಕೂ
 • ಎರಡನೆಯ ಪಾದ/ಚರಣ – ಘ
 • ಮೂರನೆಯ ಪಾದ/ಚರಣ – ಙ
 • ನಾಲ್ಕನೆಯ ಪಾದ/ಚರಣ – ಛ

ಈ ಅಕ್ಷರಗಳನ್ನು ನಾಮಕರಣದ ಸಮಯದಲ್ಲಿ ಸಾಂಪ್ರದಾಯಿಕ ನಕ್ಷತ್ರದ ನಾಮವಾಗಿ ಉಪಯೋಗಿಸಬಹುದು. 

ಕೆಲವು ಸಮುದಾಯಗಳಲ್ಲಿ, ನಾಮಕರಣದ ಸಮಾರಂಭದಲ್ಲಿ ಅಜ್ಜ-ಅಜ್ಜಿಯರ ಹೆಸರನ್ನು ಇಡಲಾಗುತ್ತದೆ. 

ಆ ಪದ್ಧತಿಯನ್ನು ಅನುಸರಿಸುವುದರಿಂದ ಯಾವ ತೊಂದರೆಯೂ ಇಲ್ಲ. 

ದಾಖಲೆಗಳಿಗಾಗಿ ಮತ್ತು ಎಲ್ಲಾ ಪ್ರಾಯೋಗಿಕ ಉದ್ಧೇಶಗಳಿಗಾಗಿ ಇಡುವ ಅಧಿಕೃತ ಹೆಸರು ಇದರಿಂದ ಬೇರೆಯಾಗಿರಬೇಕು. 

ಅದನ್ನು ವ್ಯಾವಹಾರಿಕ ಹೆಸರೆಂದು ಹೇಳುತ್ತಾರೆ. 

ಮೇಲಿನ ಪದ್ಧತಿಯಲ್ಲಿ ಇಟ್ಟ ನಕ್ಷತ್ರ ನಾಮವು ಕೇವಲ ನಿಕಟ ಕುಟುಂಬ ಸದಸ್ಯರಿಗೆ ಮಾತ್ರ ಗೊತ್ತಿರಬೇಕೆಂದು ಶಾಸ್ತ್ರವು ಸೂಚಿಸುತ್ತದೆ.

ಆರ್ದ್ರಾ ನಕ್ಷತ್ರದಲ್ಲಿ ಹುಟ್ಟಿದವರ ಅಧಿಕೃತ ಹೆಸರಿನಲ್ಲಿ ಈ ಕೆಳಕಂಡ ಪ್ರಾರಂಭಿಕ ಅಕ್ಷರಗಳನ್ನು ಇಡಬಾರದು- ಚ, ಛ, ಜ, ಝ, ತ, ಥ, ದ, ಧ, ನ, ಉ, ಊ, ಋ, ಷವಿವಾಹ

ಆರ್ದ್ರಾ ನಕ್ಷತ್ರದಲ್ಲಿ ಹುಟ್ಟಿದವರು ತಮ್ಮ ಸಂಗಾತಿಗೆ ಅಪ್ರಾಮಾಣಿಕರಾಗದಂತೆ ಎಚ್ಚರಿಕೆ ವಹಿಸಬೇಕು.ಪರಿಹಾರಗಳುಆರ್ದ್ರಾ ನಕ್ಷತ್ರ 

 

 • ನಕ್ಷತ್ರಾಧಿಪತಿ – ರುದ್ರ
 • ಗ್ರಹಾಧಿಪತಿ – ರಾಹು
 • ಪ್ರಾಣಿ - ಹೆಣ್ಣು ನಾಯಿ
 • ವೃಕ್ಷ – Diospyros candolleana
 • ಪಕ್ಷಿ – ಕೆಂಬೂತ
 • ಮೂಲಧಾತು – ಜಲ
 • ಗಣ – ಮನುಷ್ಯ
 • ಯೋನಿ - ಹೆಣ್ಣು ನಾಯಿ
 • ನಾಡಿ – ಮಧ್ಯ
 • ಗುರುತು – ವಜ್ರ

 

ಅನುವಾದ: ಡಿ.ಎಸ್.ನರೇಂದ್ರ

Copyright © 2024 | Vedadhara | All Rights Reserved. | Designed & Developed by Claps and Whistles
| | | | |