ಭೀಷ್ಮನು ಅಷ್ಟ-ವಸುಗಳಲ್ಲಿ ಒಬ್ಬನ ಅವತಾರ.
ಎಲ್ಲಾ ಜೀವಿಗಳ ಬಗ್ಗೆ ಸಹಾನುಭೂತಿಯು ಧರ್ಮದ ಅಡಿಪಾಯವಾಗಿದೆ.
ಬಾಲಕಾಂಡ
ಒಂದನೆಯ ಸರ್ಗ
ಯಃ ಪೃಥ್ವಿಭರವಾರಣಾಯ ದಿವಿಜೈಃ ಸಂಪ್ರಾರ್ಥಿತಶ್ಚಿನ್ನಯಃ ಸಂಜಾತಃ ಪೃಥಿವೀತಲೇ ರವಿಕುಲೇ ಮಾಯಾಮನುಷೋತವ್ಯಯಃ | ನಿಶ್ಚಕ್ರಂ ಹತರಾಕ್ಷಸಃ ಪುನರಗಾದ್ ಬ್ರಹ್ಮತ್ವಮಾದ್ಯಂ ಸ್ಥಿರಾಂ ಕೀರ್ತಿ೦ ಪಾಪಹರಾಂ ವಿಧಾಯ ಜಗತಾಂ ತಂ ಜಾನಕೀಶಂ ಭಜೇ
|| ೧ ೧, ಭೂಮಿಯ ಭಾರವನ್ನು ಪರಿಹರಿಸಬೇಕೆಂದು ದೇವತೆಗಳು ಪ್ರಾರ್ಥಿಸಲಾಗಿ ಯಾವ ಚಿತ್ರ ರೂಪನಾದ ಪರಮಾತ್ಮನು ತಾನು ಅವ್ಯಯನಾಗಿದ್ದರೂ ಮಾಯೆಯಿಂದ ಮನುಷ್ಯನಾಗಿ (ತೋರಿಕೊಂಡು), ಈ ಭೂಮಂಡಲದಲ್ಲಿ ಸೂರ್ಯ ವಂಶದಲ್ಲಿ ಅವತರಿಸಿ ಚಕ್ರಾಯುಧವಿಲ್ಲದೆಯೇ ರಾಕ್ಷಸರನ್ನು ಕೊಂದು ಲೋಕದ ಜನರ ಪಾಪಗಳನ್ನೆಲ್ಲ ಪರಿಹರಿಸುವಂಥ ಶಾಶ್ವತವಾದ ಕೀರ್ತಿಯನ್ನು ಇಲ್ಲಿಟ್ಟು ಮತ್ತೆ ಮೊದಲಿನ ತನ್ನ ಸ್ವರೂಪವನ್ನು ಹೊಂದಿದನೋ ಆ ಜಾನಕೀಶನನ್ನು ಭಜಿಸುತ್ತೇನೆ. ವಿಶ್ಚದ್ಯವಸ್ಥಿತಿಲಯಾದಿಷು ಹೇತುಮೇಕಂ
ಮಾಯಾಶ್ರಯಂ ವಿಗತಮಾಯಮಚಿಂತ್ಯಮೂರ್ತಿಮ್ | ಆನಂದಸಾಂದ್ರಮಮಲಂ ನಿಜಬೋಧರೂಪಂ ಸೀತಾಪತಿಂ ವಿದಿತತಮಹಂ ನಮಾಮಿ |
೨. ಪ್ರಪಂಚದ ಹುಟ್ಟು, ಇರುವಿಕೆ, ವಿನಾಶ - ಮುಂತಾದ ಎಲ್ಲಾ ಆಗುಹೋಗುಗಳಿಗೂ ತಾನೊಬ್ಬನೇ ಕಾರಣನಾಗಿಯೂ ಮಾಯೆಗೆ ಆಶ್ರಯನಾಗಿದ್ದರೂ (ತನ್ನಲ್ಲಿ) ಯಾವ ಮಾಯೆಯೂ ಇಲ್ಲದವನಾಗಿಯೂ ಇರುವ, (ಮನಸ್ಸಿನಿಂದ) ಚಿಂತಿಸಲು ಸಿಗದಿರುವ ಸ್ವರೂಪವುಳ್ಳ ಆನಂದದ ಘಟ್ಟಿಯೂ ಪರಿಶುದ್ಧನೂ ನಿತ್ಯಜ್ಞಾನ ಅಧ್ಯಾತ್ಮರಾಮಾಯಣ
ಸ್ವರೂಪನೂ ಆಗಿರುವ, ತನ್ನ ತತ್ತ್ವವನ್ನು ನೇರಾಗಿ ಬಲ್ಲ, ಸೀತಾಪತಿಯಾದ (ಆತನನ್ನು)
ನಾನು ನಮಸ್ಕರಿಸುವೆನು.
ಪಠಂತಿ ಯೇ ನಿತ್ಯಮನನ್ಯಚೇತಸಃ ಶೃಣ್ವನ್ತಿ ಚಾಧ್ಯಾತ್ಮಿಕಸಂಜ್ಞೆತಂ ಶುಭಮ್ | ರಾಮಾಯಣಂ ಸರ್ವಪುರಾಣಸಂಮತಂ ನಿರ್ಧೂತಪಾಪಾ ಹರಿಮೇವ ಯಾನಿ ತೇ
|| 2 ||
೩. ಎಲ್ಲಾ ಪುರಾಣಗಳಿಗೂ ಒಪ್ಪಾಗಿರುವ 'ಅಧ್ಯಾತ್ಮಿಕ' ವೆಂಬ (ಹೆಸರಿನ) ಈ ಮಂಗಲಕರವಾದ ರಾಮಾಯಣವನ್ನು ಯಾರು ಇದರಲ್ಲಿಯೇ ಮನಸ್ಸನ್ನಿಟ್ಟು ಓದು ವರೋ ಮತ್ತು ಕೇಳುವರೋ ಅವರು ಪಾಪಗಳನ್ನೆಲ್ಲ ತೊಳೆದುಕೊಂಡು ಶ್ರೀಹರಿಯನ್ನೇ
ಸೇರುವರು.
ಅಧ್ಯಾತ್ಮರಾಮಾಯಣಮೇವ ನಿತ್ಯಂ ಪಠೇದ್ಯದೀಚ್ಛೇದ್ ಭವಬಂಧಮುಕ್ತಿಮ್ | ಗವಾಂ ಸಹಸ್ರಾಯುತಕೋಟಿದಾನಾದ್ ಫಲಂ ಲಭೇದ್ಯಃ ಶೃಣುಯಾತ್ ಸ ನಿತ್ಯಮ್
೪ [
೪. ಸಂಸಾರಬಂಧದಿಂದ ಬಿಡುಗಡೆಯಾಗಬೇಕೆಂದು ಇಚ್ಛೆಯಿದ್ದರೆ ಅಧ್ಯಾತ್ಮ ರಾಮಾಯಣವನ್ನೇ ನಿತ್ಯವೂ ಓದಬೇಕು. ನಿತ್ಯವೂ ಇದನ್ನು ಯಾವನು ಕೇಳುವನೋ ಅವನು ಒಂದು ಲಕ್ಷ ಕೋಟಿ ಸಂಖ್ಯೆಯ ಗೋವುಗಳನ್ನು ದಾನಮಾಡಿದ್ದಕ್ಕಿಂತಲೂ ಮಾರಿದ ಫಲವನ್ನು ಪಡೆದುಕೊಳ್ಳುವನು.
ಪುರಾರಿಗಿರಿಸಂಭೂತಾ ಶ್ರೀರಾಮಾರ್ಣವಸಂಗತಾ | ಅಧ್ಯಾತ್ಮರಾಮಗಂಗೇಯಂ ಪುನಾತಿ ಭುವನತ್ರಯಮ್
H. ತ್ರಿಪುರಸಂಹಾರಿಯಾದ ಮಹಾದೇವನೆಂಬ ಬೆಟ್ಟದಲ್ಲಿ ಹುಟ್ಟಿ ಶ್ರೀರಾಮ ನೆಂಬ ಸಮುದ್ರವನ್ನು ಸೇರಿರುವ ಈ ಅಧ್ಯಾತ್ಮರಾಮಾಯಣವೆಂಬ ಗಂಗೆಯು ಮೂರು ಲೋಕಗಳನ್ನೂ ಪವಿತ್ರಗೊಳಿಸುವದು.
ಕೈಲಾಸಾಗ್ರೇ ಕದಾಚಿದ್ರವಿಶತವಿಮಲೇ ಮಂದಿರೇ ರತ್ನಪೀಠ
ಸಂವಿಷ್ಟಂ ಧ್ಯಾನನಿಷ್ಠಂ ತ್ರಿಣಯನಮಭಯಂ ಸೇವಿತಂ ಸಿದ್ಧಸಂಖ್ಯೆ : | ದೇವೀ ವಾಮಾಂಕಸಂಸ್ಥಾ ಗಿರಿವರತನಯಾ ಪಾರ್ವತೀ ಭಕ್ತಿನಾ ಪ್ರಾಹೇದಂ ದೇವಮಾಶಂ ಸಕಲಮಲಹರಂ ವಾಕ್ಯಮಾನಂದಕಂದಮ್ || ೬ ||
೬. ಒಂದಾನೊಂದು ಕಾಲದಲ್ಲಿ ಕೈಲಾಸಪರ್ವತದ ಕೋಡುಗಲ್ಲಿನ ಮೇಲಿದ್ದ ನೂರು ಸೂರ್ಯರ ಪ್ರಕಾಶವುಳ್ಳ ಒಂದು ಮಂದಿರದಲ್ಲಿ ರತ್ನಮಯಪೀಠದಲ್ಲಿ ಕುಳಿತು ತಪಸ್ಸಿದ್ದರಾದ ದೇವರ್ಷಿ ಬ್ರಹ್ಮರ್ಷಿಗಳ ತಂಡಗಳಿಂದ ಸೇವಿತನಾಗಿ ನಿರ್ಭಿತನಾಗಿ ಧ್ಯಾನಾಸಕ್ತನಾಗಿದ್ದ ಮುಕ್ಕಣ್ಣನಾದ ( ಪರಮೇಶ್ವರನನ್ನು ಕಂಡು ಎಡದ ತೊಡೆಯಮೇಲೆ ಕುಳಿತಿದ್ದ ಗಿರಿರಾಜನಾದ ಹಿಮವಂತನ ಮಗಳಾದ ಪಾರ್ವತೀದೇವಿಯು ಭಕ್ತಿಯಿಂದ ಬಾಗಿ ಸಮಸ್ತಪಾಪಗಳನ್ನೂ ಹೋಗಲಾಡಿಸುವವನಾಗಿಯೂ ಆನಂದಕ್ಕೆ ಕಾರಣ ನಾಗಿಯೂ ಇರುವ ದೇವನಾದ ಆ ಪರಮೇಶ್ವರನನ್ನು ಕುರಿತು ಈ ಮಾತನ್ನು ಕೇಳಿದಳು.
ಪಾರ್ವತ್ಯುವಾಚ - ನಮೋsಸ್ತು ತೇ ದೇವ ಜಗನ್ನಿವಾಸ
ಸರ್ವಾತೃದೃಕ್ ತ್ವಂ ಪರಮೇಶ್ವರೋಜಿಸಿ | ಪೃಚ್ಛಾಮಿ ತಂ ಪುರುಷೋತ್ತಮಸ್ಯ ಸನಾತನಂ ತ್ವಂ ಚ ಸನಾತನೋSಸಿ || ೭ ||
೭. ಪಾರ್ವತಿಯಿಂತೆಂದಳು : ಎಲೆ ಜಗತ್ತಿಗೆ ಆಶ್ರಯಭೂತನಾದ ದೇವನೆ, ನಿನಗೆ ನಮಸ್ಕಾರವಿರಲಿ ! ನೀನು ಸರ್ವರ ಅಂತಃಕರಣವನ್ನೂ ನೋಡುತಿರುವ ಪರಮೇಶ್ವರನಾಗಿದ್ದೀಯಲ್ಲವೆ ? ಪುರುಷೋತ್ತಮನಾದ ಮಹಾವಿಷ್ಣುವಿನ ಸನಾತನ ವಾದ ತತ್ತ್ವವನ್ನು ಕುರಿತು ನಿನ್ನನ್ನು ಒಂದು ಮಾತು ಕೇಳುತ್ತೇನೆ. ಏಕೆಂದರೆ ನೀನೂ ಸನಾತನ ಸ್ವರೂಪನಾಗಿದ್ದೀಯೆ. ಗೋಪ್ಯಂ ಯದತ್ಯನಮನನ್ಯವಾಚ್ಯಂ
ವದನಿ ಭಕ್ತಷು ಮಹಾನುಭಾವಾಃ | ತದಪ್ಯಹೋಹಂ ತವ ದೇವ ಭಕ್ತಾ ಪ್ರಿಯೋSಸಿ ಮೇ ತ್ವಂ ವದ ಯತ್ತು ಪೃಷ್ಟಮ್ || ೮ ||
೮. ಯಾವದು ಮತ್ತೊಬ್ಬರಿಗೆ ಹೇಳತಕ್ಕದ್ದಲ್ಲವೋ ಅಂಥ ರಹಸ್ಯವನ್ನು ಕೂಡ ಮಹಾನುಭಾವರಾದವರು ತಮ್ಮಲ್ಲಿ ಭಕ್ತಿಯುಳ್ಳವರಿಗೆ ಹೇಳಿಬಿಡುತ್ತಾರಲ್ಲವೆ ? ಎಲೈ ದೇವನೆ, ನಾನು ನಿನ್ನ ಭಕಳು ; ನೀನು ನನ್ನ ಪ್ರಿಯನು. ಆದ್ದರಿಂದ ನಾನು ಕೇಳಿದ್ದನ್ನು ನೀನು ಹೇಳಬೇಕು. ಜ್ಞಾನಂ ಸವಿಜ್ಞಾನಮಥಾನುಭಕ್ತಿವೈರಾಗ್ಯಯುಕ್ತಂ ಚ ಮಿತಂ ವಿಭಾಸ್ವತ್ |
Astrology
Atharva Sheersha
Bhagavad Gita
Bhagavatam
Bharat Matha
Devi
Devi Mahatmyam
Festivals
Ganapathy
Glory of Venkatesha
Hanuman
Kathopanishad
Mahabharatam
Mantra Shastra
Mystique
Practical Wisdom
Purana Stories
Radhe Radhe
Ramayana
Rare Topics
Rituals
Rudram Explained
Sages and Saints
Shani Mahatmya
Shiva
Spiritual books
Sri Suktam
Story of Sri Yantra
Temples
Vedas
Vishnu Sahasranama
Yoga Vasishta
आध्यात्मिक ग्रन्थ
कठोपनिषद
गणेश अथर्व शीर्ष
गौ माता की महिमा
जय श्रीराम
जय हिंद
ज्योतिष
देवी भागवत
पुराण कथा
बच्चों के लिए
भगवद्गीता
भजन एवं आरती
भागवत
मंदिर
महाभारत
योग
राधे राधे
विभिन्न विषय
व्रत एवं त्योहार
शनि माहात्म्य
शिव पुराण
श्राद्ध और परलोक
श्रीयंत्र की कहानी
संत वाणी
सदाचार
सुभाषित
हनुमान