ಹದಿನಾರು ಸೋಮವಾರ ವ್ರತ ವ್ರತದ ಬಗ್ಗೆ :
ಈ ವ್ರತವು ಇಷ್ಟಾರ್ಥಪ್ರದವಾದುದು. ಇದು ಪಾರ್ವತೀ ಪರಮೇಶ್ವರರಿಗೆ ಅತ್ಯಂತ ಇಷ್ಟವಾದದ್ದು. ಈ ವ್ರತವನ್ನು ಎಲ್ಲ ಜನಾಂಗದವರೂ ಆಚರಿಸಬಹುದು. ಈ ವ್ರತವನ್ನು ಸೂತಪುರಾಣಿಕರು-ನೈಮಿಷಾರಣ್ಯ ಪುಣ್ಯಸ್ಥಳದಲ್ಲಿ ಲೋಕಹಿತಕ್ಕಾಗಿ ಶೌನಕಾದಿ ಮಹರ್ಷಿಗಳಿಗೆ ತಿಳಿಸಿದರೆಂದು ಉಲ್ಲೇಖಿತವಾಗಿದೆ.
ಆಷಾಢ ಶುಕ್ಲಪಕ್ಷದಿಂದ - ಕಾರ್ತಿಕ ಶುಕ್ಲ ಪಕ್ಷದ ವರೆಗಿನ ಹದಿನಾರು ಸೋಮವಾರಗಳು (ನಾಲ್ಕು ತಿಂಗಳು) ಈ ವ್ರತವನ್ನು ಆಚರಿಸಬೇಕು.
ಸಲಹೆ - ಸೂಚನೆಗಳು :
ವ್ರತವನ್ನು ಆಚರಿಸುವವರು (ಸ್ತ್ರೀ-ಪುರುಷರು- ಯಾರೇ ಆಗಲಿ) ಕೆಲವು ನಿಯಮಗಳನ್ನು ಶ್ರದ್ದೆಯಿಂದ ಪಾಲಿಸಬೇಕು. 1, ವ್ರತವನ್ನು ಆಚರಿಸುವ ಸೋಮವಾರದಂದು ಅಭ್ಯಂಜನ
ಸ್ನಾನಮಾಡಿ ಸಾಯಂಕಾಲ - ಅಂದರೆ ಪ್ರತಪೂಜೆ ಮುಗಿಯುವವರೆಗೆ ಉಪವಾಸ ಇರಬೇಕು. ಸಾಧ್ಯ ಆಗದಿದ್ದಲ್ಲಿ . ಲಘು ಹಣ್ಣು ಅಥವಾ ಹಾಲನ್ನು ಸ್ವೀಕರಿಸಬಹುದು.
2. ವ್ರತದ ಆಚರಣೆಯ ದಿನ ಬೆಳಿಗ್ಗೆ ಸ್ನಾನಮಾಡಿ ಉಪವಾಸ ಇದ್ದು
ಸಂಜೆ ಸೂರ ಮುಳುಗುವ ಸಮಯದಲ್ಲಿ ಮತ್ತೆ ಸ್ನಾನ ಮಾಡಿ ಶುಚಿ ಆಗಬೇಕು. ಹುತ್ತದ ಮಣ್ಣಿನಿಂದ ಪರಮೇಶ್ವರನ ಲಿಂಗವನ್ನು ತಯಾರಿಸಬೇಕು. ಮುಂದೆ ತಿಳಿಸುವ ವಿಧಾನದಿಂದ ಪೂಜಾ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡು ನೋಡಶ ಉಪಚಾರಗಳಿಂದ ವ್ರತವನ್ನು ಸಾಂಗವಾಗಿ ಆಚರಿಸಿ ಕೊನೆಯಲ್ಲಿ ಬ್ರಹ್ಮಾರ್ಪಣೆಯೊಂದಿಗೆ ಶಿವಲಿಂಗವನ್ನು ನೀರಿನಲ್ಲಿ ವಿಸರ್ಜಿಸಬೇಕು. ವ್ರತಪೂರ್ಣ ಆಚರಿಸಿ ಅಂದರೆ ವಿಸರ್ಜನೆ ನಂತರ ಬ್ರಾಹ್ಮಣನಿಗೆ ಬಾಗಿನವನ್ನು ದಕ್ಷಿಣೆಯೊಂದಿಗೆ ಕೊಟ್ಟು ಆತನಿಂದ ಆಶೀರ್ವಾದ ಪಡೆಯಬೇಕು. ನಂತರ ಕಥಾಶ್ರವಣ ಮಾಡಬೇಕು. ನೈವೇದ್ಯಕ್ಕಾಗಿ ಹುರಿದ ಗೋದಿ, ತುಪ್ಪ, ಬೆಲ್ಲ ಏಲಕ್ಕಿ ಇವುಗಳಿಂದ ಗುಲಪಾವಟೆ ಉಂಡೆಗಳನ್ನು ಮಡಿಯಲ್ಲಿ ಮಾಡಿಟ್ಟುಕೊಳ್ಳಬೇಕು. ಈ ಖಾದ್ಯವನ್ನು ಮೂರು ಭಾಗಮಾಡಿ ನೈವೇದ್ಯ ಮಾಡಬೇಕು. ಕಥಾ ಶ್ರವಣದ ನಂತರ - ಗೋವಿಗೆ ನೀಡಬೇಕು. ಒಂದು ಭಾಗ ಪ್ರಸಾದವನ್ನು ಮನೆಯವರೆಲ್ಲ ಭುಜಿಸಬೇಕು. ವ್ರತ ಮಾಡುವವರು ಆ ದಿನ ಪ್ರಸಾದದ ಹೊರತು ಬೇರೆ ಏನನ್ನೂ ಸೇವಿಬಾರದು. ಶಿವಲಿಂಗವನ್ನು ನದಿ, ಕೆರೆ
ಅಥವಾ ಬಾವಿಯಲ್ಲಿ ವಿಸರ್ಜಿಸಬೇಕು. _5, 16 ಸೋಮವಾರಗಳು ಶ್ರದ್ಧಾ ಭಕ್ತಿಗಳಿಂದ ವ್ರತವನ್ನು
ಶಾಸ್ರೋಕ್ತವಾಗಿ ಯಾವ ನ್ಯೂನತೆ ಮಾಡದೆ ಆಚರಿಸಿದ ನಂತರ ಹದಿನೇಳನೆಯ ಸೋಮವಾರ ಮತ್ತೆ ಈ ವ್ರತವನ್ನು ಎಂದಿನಂತೆ ಆಚರಿಸಿದರೆ ವ್ರತ ಸಂಪೂರ್ಣ ಆಗುತ್ತದೆ. 17ನೆಯ ಸೋಮವಾರ ಸಹ ನೈವೇದ್ಯಕ್ಕಾಗಿ ಮಾಡಿರುವ ಖಾದ್ಯವನ್ನೇ
2. ವ್ರತದ ಆಚರಣೆಯ ದಿನ ಬೆಳಿಗ್ಗೆ ಸ್ನಾನಮಾಡಿ ಉಪವಾಸ ಇದ್ದು
ಸಂಜೆ ಸೂರ ಮುಳುಗುವ ಸಮಯದಲ್ಲಿ ಮತ್ತೆ ಸ್ನಾನ ಮಾಡಿ ಶುಚಿ ಆಗಬೇಕು. ಹುತ್ತದ ಮಣ್ಣಿನಿಂದ ಪರಮೇಶ್ವರನ ಲಿಂಗವನ್ನು ತಯಾರಿಸಬೇಕು. ಮುಂದೆ ತಿಳಿಸುವ ವಿಧಾನದಿಂದ ಪೂಜಾ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡು ನೋಡಶ ಉಪಚಾರಗಳಿಂದ ವ್ರತವನ್ನು ಸಾಂಗವಾಗಿ ಆಚರಿಸಿ ಕೊನೆಯಲ್ಲಿ ಬ್ರಹ್ಮಾರ್ಪಣೆಯೊಂದಿಗೆ ಶಿವಲಿಂಗವನ್ನು ನೀರಿನಲ್ಲಿ ವಿಸರ್ಜಿಸಬೇಕು. ವ್ರತಪೂರ್ಣ ಆಚರಿಸಿ ಅಂದರೆ ವಿಸರ್ಜನೆ ನಂತರ ಬ್ರಾಹ್ಮಣನಿಗೆ ಬಾಗಿನವನ್ನು ದಕ್ಷಿಣೆಯೊಂದಿಗೆ ಕೊಟ್ಟು ಆತನಿಂದ ಆಶೀರ್ವಾದ ಪಡೆಯಬೇಕು. ನಂತರ ಕಥಾಶ್ರವಣ ಮಾಡಬೇಕು. ನೈವೇದ್ಯಕ್ಕಾಗಿ ಹುರಿದ ಗೋದಿ, ತುಪ್ಪ, ಬೆಲ್ಲ ಏಲಕ್ಕಿ ಇವುಗಳಿಂದ ಗುಲಪಾವಟೆ ಉಂಡೆಗಳನ್ನು ಮಡಿಯಲ್ಲಿ ಮಾಡಿಟ್ಟುಕೊಳ್ಳಬೇಕು. ಈ ಖಾದ್ಯವನ್ನು ಮೂರು ಭಾಗಮಾಡಿ ನೈವೇದ್ಯ ಮಾಡಬೇಕು. ಕಥಾ ಶ್ರವಣದ ನಂತರ - ಗೋವಿಗೆ ನೀಡಬೇಕು. ಒಂದು ಭಾಗ ಪ್ರಸಾದವನ್ನು ಮನೆಯವರೆಲ್ಲ ಭುಜಿಸಬೇಕು. ವ್ರತ ಮಾಡುವವರು ಆ ದಿನ ಪ್ರಸಾದದ ಹೊರತು ಬೇರೆ ಏನನ್ನೂ ಸೇವಿಬಾರದು. ಶಿವಲಿಂಗವನ್ನು ನದಿ, ಕೆರೆ
ಅಥವಾ ಬಾವಿಯಲ್ಲಿ ವಿಸರ್ಜಿಸಬೇಕು.

Ramaswamy Sastry and Vighnesh Ghanapaathi

Copyright © 2024 | Vedadhara | All Rights Reserved. | Designed & Developed by Claps and Whistles
| | | | |