ಶ್ರೀಕೃಷ್ಣ ಚರಿತ್ರ ಮಂಜರಿ PDF Book

Srikrishna charitra manjari PDF Book front page

ಶ್ರೀಕೃಷ್ಣ ಚರಿತ್ರ ಮಂಜರಿಯನ್ನು ಶ್ರೀ ರಾಘವೇಂದ್ರ ತೀರ್ಥರು ಸಂಸ್ಕೃತದಲ್ಲಿ ಬರೆದಿದ್ದಾರೆ.
ಇದನ್ನು ರಾಜಾ ಗುರುರಾಜಾಚಾರ್ಯರು ಅನುವಾದಿಸಿದ್ದಾರೆ.
ಇದು ಮಧ್ವಾಚಾರ್ಯರು ನೀಡಿದ ಕೃಷ್ಣನ ಶ್ರೇಷ್ಠತೆಯನ್ನು ಆಧರಿಸಿದೆ.


ಓದಲು ಇಲ್ಲಿ ಕ್ಲಿಕ್ ಮಾಡಿ PDF Book

 

 

 

 

93.5K

Comments

wye6a
ಅತ್ಯುತ್ತಮ ಮಾಹಿತಿಯ ವೆಬ್‌ಸೈಟ್ -ಶಶಿಧರ ಹೆಗ್ಡೆ

ಉಪಯುಕ್ತವಾದ ಧಾರ್ಮಿಕ ಮಾಹಿತಿಯನ್ನು ನೀಡುತ್ತದೆ 🙏 -ಜಯಂತಿ ಹೆಗ್ಡೆ

ಅದ್ಭುತವಾದ ವೆಬ್‌ಸೈಟ್ ❤️ -ಲೋಹಿತ್

ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna

ವೇದಧಾರದಲ್ಲಿ ಸೇರಿರುವುದು ಒಂದು ಆಶೀರ್ವಾದವಾಗಿದೆ. ನನ್ನ ಜೀವನ ಹೆಚ್ಚು ಪಾಸಿಟಿವ್ ಮತ್ತು ತೃಪ್ತಿಯಾಗಿದೆ. 🙏🏻 -Vinayak Aithal

Read more comments

ಹನುಮಂತನು ಯಾವ ಗುಣಗಳನ್ನು ಅಥವಾ ಸದ್ಗುಣಗಳನ್ನು ಸಂಕೇತಿಸುತ್ತಾನೆ?

ಹನುಮಂತನು ಭಕ್ತಿ, ನಿಷ್ಠೆ, ಧೈರ್ಯ, ಶಕ್ತಿ, ನಮ್ರತೆ ಮತ್ತು ನಿಸ್ವಾರ್ಥತೆಯನ್ನು ಸಂಕೇತಿಸುತ್ತದೆ. ಇದು ನಿಮ್ಮ ಸ್ವಂತ ಜೀವನದಲ್ಲಿ ಈ ಸದ್ಗುಣಗಳನ್ನು ಸಾಕಾರಗೊಳಿಸಲು, ವೈಯಕ್ತಿಕ ಬೆಳವಣಿಗೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ ಮತ್ತು ಮಾರ್ಗದರ್ಶನ ನೀಡುತ್ತದೆ

ವ್ಯಾಸ ಮುನಿಗಳನ್ನು ಏಕೆ ವೇದವ್ಯಾಸರೆಂದು ಕರೆಯಲಾಯಿತು?

ವ್ಯಾಸರು ವೇದದ ಮುಖ್ಯಾಂಶವನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂದು ನಾಲ್ಕು ಭಾಗಗಳಲ್ಲಿ ವಿಭಾಗಿಸಿದ್ದರಿಂದ ಅವರನ್ನು ವೇದವ್ಯಾಸರೆಂದು ಕರೆಯಲಾಯಿತು.

Quiz

ವಿಶ್ವಾಮಿತ್ರನು ಯಾವ ದೇಶದ ರಾಜ?

ಪರಮ ಪೂಜ್ಯ ಜಗದ್ಗುರು ಶ್ರೀಮದ್ರಾಘವೇಂದ್ರ ತೀರ್ಥ ಗುರುಸಾರ್ವಭೌಮರವರ ಪೂರ್ವಾಶ್ರಮ ಸತ್ಪುತ್ರರೂ, ಸಕಲ ಶಾಸ್ತ್ರಕೋವಿದರೂ, ವಿದ್ವತ್ಕುಲಲಲಾಮರೂ, ಕವಿಕಂಠೀರವರೂ ಆದ ಶ್ರೀ ಲಕ್ಷ್ಮೀನಾರಾಯಣಾಚಾರ್ಯರು, ತಮ್ಮ ಪಿತೃವರೇಣ್ಯರೂ (ಪೂರ್ವಾಶ್ರಮ) ಮತ್ತು ಶ್ರೀಮನ್ಮಧ್ವಾಚಾರ್ಯರವರ ಮಹಾ ಸಂಸ್ಥಾನಾಧೀಶ್ವರರೂ, ಶ್ರೀ ಪ್ರಹ್ಲಾದ ವ್ಯಾಸರಾಜಾವತಾರಿಗಳೂ, ಭಾಗವತ ಶಿರೋಮಣಿಗಳೂ, ಜಗದ್ಗುರುಗಳೂ ಆದ ಶ್ರೀಮದ್ರಾಘವೇಂದ್ರ ತೀರ್ಥ ಶ್ರೀಮಚ್ಚರಣರವರು ಸಜ್ಜನರ ಉದ್ಧಾರಕ್ಕಾಗಿ ರಚಿಸಿರುವ “ಶ್ರೀಕೃಷ್ಣಚಾರಿತ್ರಮಂಜರಿ' ಎಂಬ ಗ್ರಂಥಕ್ಕೆ ವ್ಯಾಖ್ಯಾನವನ್ನು ರಚಿಸಲು ಪ್ರವೃತ್ತರಾಗಿ, ಶಿಷ್ಟಾಚಾರ ಪರಂಪರಾ ಪ್ರಾಪ್ತ ಕ್ರಮದಂತೆ ರಚಿಸುತ್ತಿರುವ ಗ್ರಂಥವು ನಿರ್ವಿಘ್ನವಾಗಿ ಪರಿಸಮಾಪ್ತಿಯಾಗುವುದಕ್ಕೋಸ್ಕರವಾಗಿ 'ಕೃಷ್ಣ'' ಎಂಬ ಪದ್ಯದಿಂದ ತಮ್ಮ ಇಷ್ಟದೇವತಾನಮಸ್ಕಾರ ರೂಪವಾದ ಮಂಗಳವನ್ನು ಆಚರಿಸುತ್ತಾರೆ.
ವ್ಯಾಖ್ಯಾನ ಮಂಗಳಾಚರಣೆ
ಕೃಷ್ಣಂ ಕೃತ್ಸಜಗಜ್ಜನ್ಮಕರ್ತಾರಂ ವಿಭುಮಚ್ಯುತಮ್ | ರುಕ್ಕಿಣೀಸತ್ಯಭಾಮಾಭ್ಯಾಮಾಶಿಷ್ಟಂ ಪ್ರಣಮಾಮ್ಯಹಮ್ || 1 ||
ತಾತ್ಪರ್ಯ :- ಚೇತನಾ ಚೇತನಾತ್ಮಕವಾದ ಸಮಸ್ತ ಪ್ರಪಂಚದ ಸೃಷ್ಟಿ ಸ್ಥಿತಿ ಸಂಹಾರ, ನಿಯಮನಾದಿಕಾರಣನೂ, ನಾಶರಹಿತನೂ, ವ್ಯಾಪಕನೂ, ಲಕ್ಷ್ಮೀ ಸ್ವರೂಪಿಣಿಯರಾದ ಶ್ರೀರುಕ್ಕಣೀ - ಸತ್ಯಭಾಮಾದೇವಿಯರಿಂದ ಆಲಿಂಗಿತನೂ ಆದ ಶ್ರೀಕೃಷ್ಣನನ್ನು ನಮಸ್ಕರಿಸುತ್ತೇನೆ.
ಉಪಾಸ್ಯ ಯತ್ಪದಂ ಧೀರಾಃ ಲಭಂತೇ ಜ್ಞಾನಸಂಪದಮ್ |
ತಂ ವಂದೇ ಶ್ರೀಮದಾನಂದತೀರ್ಥಾರ್ಯಗುರುಶೇಖರಮ್ || 2 ||
ತಾತ್ಪರ್ಯ :- ಯಾರ ಪಾದ ಕಮಲಗಳನ್ನು ಉಪಾಸನೆಮಾಡಿ ಜ್ಞಾನಿಗಳು (ಪಂಡಿತರು) ಮೋಕೋಪಯೋಗಿಯಾದ ಸದ್‌ಜ್ಞಾನವನ್ನೂ ಮತ್ತು ಸಂಪತ್ತನ್ನೂ ಹೊಂದುವರೋ, ಅಂತಹ ಶ್ರೀಮದಾನಂದತೀರ್ಥರೆಂಬ ಶ್ರೇಷ್ಠ ಗುರುವರ್ಯರನ್ನು ನಮಸ್ಕರಿಸುತ್ತೇನೆ. | 2 |
ಅಹ್ಮದ್ದೇಶಿಕಪಾದಾ ಯೇ ಸಾಧವಸತತಂ ಮಮ |
ದೃಶಂ ದಿಶಂತು ಸನ್ಮಾರ್ಗಗಾಮಿನೀಂ ಮುಕ್ತಿದಾಯಿನೀಮ್ || 3 ||
ತಾತ್ಪರ್ಯ :- ಸಾಧುಗಳೂ ನಮ್ಮ ಗುರುಗಳೂ, ಜನಕರೂ ಆದ ಪರಮ ಪೂಜ್ಯ ಶ್ರೀ ಗುರುಸಾರ್ವಭೌಮರವರು ನನಗೆ ಯಾವಾಗಲೂ ಮೋಕ್ಷಪ್ರದವಾದ ಸನ್ಮಾರ್ಗವನ್ನು ತೋರುವ ದೃಷ್ಟಿಯನ್ನು ಕೊಡಲಿ.
113 11
ಪದವಾಕ್ಯಪ್ರಮಾಣಜ್ಞಾನ್ ಸರ್ವಶಾಸ್ತ್ರ ವಿಶಾರದಾನ್ | ರಾಘವೇಂದ್ರಗುರೂನ್ ವಂದೇ ವಾದಿಕಂಠೀರವಾನ್ ಸದಾ
| 4 ||
ತಾತ್ಪರ್ಯ :- ವ್ಯಾಕರಣ-ತರ್ಕ-ಪೂರ್ವೋತ್ತರ ಮಿಮಾಂಸಾ ಶಾಸ್ತ್ರಜ್ಞರೂ (ಶಾಸ್ತ್ರಪರಿಣತರೂ) ಸಕಲ ಶಾಸ್ತ್ರವಿಶಾರದರೂ ಪರವಾದಿಗಳೆಂಬ ಗಜಗಳಿಗೆ ಮೃಗೇಂದ್ರರೂ ಆದ ಶ್ರೀರಾಘವೇಂದ್ರ ಗುರುವರ್ಯರನ್ನು ಯಾವಾಗಲೂ ವಂದಿಸುತ್ತೇನೆ. || 4 ||
ಲಕ್ಷ್ಮೀನಾರಾಯಣಾಸ್ಕೋಽಹಂ ಗುರುಪಾದಪ್ರಸಾದತಃ |
ವಿವೃಣೋಮಿ ಯಥಾಬೋಧಂ ಕೃಷ್ಣಚಾರಿತ್ರಮಂಜರೀಮ್ || 5 ||
ತಾತ್ಪರ್ಯ :- ಲಕ್ಷ್ಮೀನಾರಾಯಣಾಚಾರ್ಯನೆಂಬ ಹೆಸರಿನಿಂದ ಖ್ಯಾತನಾದ ನಾನು ಗುರುಪಾದರಾದ ಶ್ರೀಮದ್ರಾಘವೇಂದ್ರತೀರ್ಥ ಶ್ರೀಮಚ್ಚರಣರ ಅನುಗ್ರಹದಿಂದ ಪಠನಶೀಲರ ಬುದ್ಧಿಯನ್ನು ಅನುಸರಿಸಿ, ನನ್ನ ಬುದ್ಧಿಗೆ ಗೋಚರವಾದಷ್ಟು ಶ್ರೀಕೃಷ್ಣಚಾರಿತ್ರಮಂಜರಿ ಗ್ರಂಥವನ್ನು ವಿವರಿಸುತ್ತೇನೆ. 1 5 |
ಕರ್ತೃಕರ್ಮಕ್ರಿಯಾದೀನಾಂ ಯಥಾಯೋಗಂ ಪ್ರಕಾಶಯೇ |
ಅನ್ವಯಂ ಬಾಲಬೋಧಾಯ ಬುದ್ವಂತಾಂ ತಂ ವಿಚಕ್ಷಣಾಃ || 6 ||
ತಾತ್ಪರ್ಯ :- ಕರ್ತೃಪದ, ಕರ್ಮಪದ ಮತ್ತು ಕ್ರಿಯಾಪದ ಇವುಗಳ ವಾಕ್ಯಗಳಲ್ಲಿನ ಅರ್ಥವು ಹೊಂದಿಕೆಯಾಗುವಂತ, ಗ್ರಹಣ - ಧಾರಣಪಟುಗಳಾದ ಅಭ್ಯಾಸಶೀಲರ ತಿಳುವಳಿಕೆಗಾಗಿ ಅನ್ವಯವನ್ನು ಪ್ರಕಟಗೊಳಿಸುತ್ತೇನೆ. ಪ್ರಮಾಣ ಕೋವಿದರು ಇದನ್ನು ಅವಧರಿಸೋಣವಾಗಲಿ. | 6 ||
ಶ್ರೀಕೃಷ್ಣಚಾರಿತ್ರಮಂಜರೀ
ಅವತಾರಿಕೆ: ಸಾಂಸಾರಿಕ ದುಖದಿಂದ ಬಳಲಿ ಬೆಂಡಾಗಿರುವ ಸಜ್ಜನರನ್ನು ಉದ್ಧಾರ ಮಾಡಬೇಕೆಂಬ ಅನುಗ್ರಹ ಬುದ್ಧಿಯಿಂದ ಪರಮ ಕರುಣಾಳುಗಳಾದ ಶ್ರೀರಾಘವೇಂದ್ರ ಮುನಿಗಳು ಸಜ್ಜನರ ಸಕಲದುಃಖನಿವೃತ್ತಿಪೂರ್ವಕ ಪರಮಸುಖಪ್ರಾಪ್ತಿಗಾಗಿ, ಅದಕ್ಕೆ ಉಪಾಯಭೂತವಾದ, ಶ್ರೀಮದ್ಭಾಗವತ ಪ್ರತಿಪಾದ್ಯವಾದ ಶ್ರೀಕೃಷ್ಣ ಕಥೆಯನ್ನು ಸುಲಭವಾಗಿಯೂ, ಬೇಗನೆಯೂ ಮನದಟ್ಟಾಗುವುದಕ್ಕೋಸ್ಕರ 'ವಿಷ್ಣು'' ಎಂಬ ಶ್ಲೋಕದಿಂದ ಸಂಗ್ರಹಿಸುತ್ತಾರೆ. ವಿಷ್ಣುಬ್ರ್ರಹ್ಮಾದಿದೇವೈಃ ಕ್ಷಿತಿಭರಹರಣೇ ಪ್ರಾರ್ಥಿತಃ ಪ್ರಾದುರಾಸೀತ್
ದೇವಾಂ ನಂದನಂದೀ ಶಿಶುವಧವಿಹಿತಾಂ ಪೂತನಾಂ ಯೋ ಜಪಾನ | ಉತ್ಥಾನೌತ್ಸುಕ್ಯಕಾಲೇ ರಥಚರಣಗತಂ ಚಾಸುರಂ ಪಾದಫಾತೈ
ಚಕ್ರಾವರ್ತ೦ ಚ ಮಾತ್ರಾ ಗುರುರಿತಿ ನಿಹಿತೋ ಭೂತಲೇ
-
ಸೋಽವತಾನಾಮ್ || 1 |
ಅನ್ವಯಾರ್ಥ :- ವಿಷ್ಣುಃ - ಸರ್ವತ್ರವ್ಯಾಪ್ತನಾದ ಶ್ರೀಮನ್ನಾರಾಯಣನು, ಬ್ರಹ್ಮಾದಿದೇವೈಃ - ಚತುರ್ಮುಖ ಬ್ರಹ್ಮದೇವರೇ ಮೊದಲಾದ ದೇವತೆಗಳಿಂದ, ಕ್ಷಿತಿಭರಹರಣೇ ಭೂಭಾರ ಹರಣಕ್ಕೋಸ್ಕರವಾಗಿ, ಪ್ರಾರ್ಥಿತಃ ಪ್ರಾರ್ಥಿತನಾಗಿ, ದೇವಕ್ಯಾಂ - ದೇವಕೀದೇವಿಯಲ್ಲಿ ಪ್ರಾದುರಾಸೀತ್ - ವಸುದೇವನ ದೆಶೆಯಿಂದ ಅವತರಿಸಿದನೋ, ಯಾವ ಕೃಷ್ಣನು, ನಂದನಂದೀ - ನಂದಗೋಪನನ್ನು ಸಂತೋಷಗೊಳಿಸಿ, ಶಿಶುವಧವಿಹಿತಾಂ - ಬಾಲಕರ ಸಂಹಾರಕ್ಕಾಗಿ ಕಂಸನಿಂದ ಪ್ರೇರಿತಳಾದ, ಪೂತನಾಂ - ಪೂತನಾ ಎಂಬ ರಾಕ್ಷಸಿಯನ್ನು ಜಪಾನ - ಸಂಹರಿಸಿದನೋ, ಉತ್ಥಾನೌತ್ಸುಕ್ಯಕಾಲೇ - ಉತ್ಥಾನ - ದೇವರ ದರ್ಶನಕ್ಕಾಗಿ ಹೊರಗೆ (ಗುಡಿಗೆ) ಹೋಗುವ ಕಾರ್ಯದ ಔತ್ಸುಕ್ಯ - ಅನುರಾಗ ವಿಶೇಷದ, ಕಾಲೇ - ಸಮಯದಲ್ಲಿ ರಥಚರಣ ಗತಂ - (ರಥಾಂಗ) ಚಕ್ರದೊಳಗೆ ಸೇರಿದ, ಅಸುರಂಚ -
ಶಕಟನೆಂಬ ದೈತ್ಯನನ್ನು ಸಹ, ಪಾದಫಾತ್ಯ! - ಚರಣಾಹತಿಗಳಿಂದ, ಜಫಾನ - ಸಂಹಾರ ಮಾಡಿದನೋ, ಮಾತ್ರಾ - ತಾಯಿಯಾದ ಯಶೋದಾ ದೇವಿಯಿಂದ, ಗುರುರಿತಿ - ಭಾರವೆಂದು, ಭೂತಲೇ - ಭೂಮಿಯಲ್ಲಿ ನಿಹಿತಃ - ಕೂಡಿಸಲ್ಪಟ್ಟವನಾಗಿ, ಚಕ್ರಾವರ್ತಂ ಚ - ತೃಣಾವರ್ತನೆಂಬ ದೈತ್ಯನನ್ನು (ಸುಂಟರಗಾಳಿ ದೈತ್ಯನನ್ನು ಕೂಡ, ಜಫಾನ - ಸಂಹರಿಸಿದನೋ, ಸಃ - ಅಂತಹ ಕೃಷ್ಣನು, ಮಾಂ - ನನ್ನನ್ನು ಅವತಾತ್ - ರಕ್ಷಣಮಾಡಲಿ. ವಿಗ್ರಹವಾಕ್ಯ
ವೇವೇಪ್ರೀತಿ ವಿಷ್ಣುಃ | ಬ್ರಹ್ಮಾ ಆದಿರ್ಯೇಷಾಂತೇ ಬ್ರಹ್ಮಾದಯಃ, ತೇಚತೇ ದೇವಾಶ್ಚಬ್ರಹ್ಮಾದಿದೇವಾಃ ತೈಃ | ಕ್ಷಿತೇ? ಭರಃ ಕ್ಷಿತಭರಃ, ತಸ್ಯ ಹರಣಂ ಕೃತಭರಹರಣಂ, ತಸ್ಮಿನ್ ಕ್ಷಿತಿಭರಹರಣೇ | ದೇವಕಸ್ಯ ಅಪತ್ಯಂ ಸ್ತ್ರೀ ದೇವಕೀ, ತಸ್ಯಾಂ ದೇವಕ್ಯಾಮ್ ! ನಂದಂ ನಂದಯತೀತಿ ನಂದನಂದೀ | ಶಿಶೂನಾಂ ವಧಃ ಶಿಶುವಧಃ, ತಸ್ಮಿನ್ ವಿಹಿತಾ ಶಿಶುವಧವಿಹಿತಾ, ತಾಂ ಶಿಶುವಧವಿಹಿತಾಮ್ | ಉತ್ತಾನಸ್ಯ ಔತೃತ್ವಂ ಉತ್ಥಾನತ್ತುಕೂಂ, ತಸ್ಯಕಾಲಃ ತಸ್ಥಿನ್ ಉತ್ಪಾದೌತುಕ್ಯಕಾಲೇ 1 ರಥಸ್ಯ ಚರಣಂ ರಥಚರಣಂ, ರಥಚರಣಂ ಗತಃ ರಥಚರಣಗತಃ ತಂ ರಥಚರಣಗತಮ್ 1 ನ ಸುರಃ ಅಸುರಃ ತಂ ಅಸುರಮ್ | ಪಾದಸ್ಯ ಫಾತಾಃ ಪಾದಮಾತಾಃ ತೈಃ ಪಾದಫಾತೈಃ | ಚಕ್ರವತೆ ಆವರ್ತತ ಇತಿ ಚಕ್ರಾವರ್ತ, ತಂ ಚಕ್ರಾವರ್ತಮ್ || ವಿಶೇಷ ವಿಚಾರಃ
ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಭಾಗವತ ಪ್ರತಿಪಾದ್ಯವಾದ ಶ್ರೀ ಕೃಷ್ಣನ ವಿಸ್ತಾರವಾದ ಕಥೆಯನ್ನು ಒಂದೊಂದು ಪದ್ಯದಲ್ಲಿ ಎಂತು ಹೃದಯಂಗಮವಾಗಿ ಸಂಗ್ರಹಿಸಿದ್ದಾರೆಂಬುದನ್ನು ಶ್ರೀ ಗುರುರಾಜರ ಪೂರ್ವಾಶ್ರಮಪುತ್ರರಾದ ಶ್ರೀ ಲಕ್ಷ್ಮೀನಾರಾಯಣಾಚಾರ್ಯರು ತಮ್ಮ ವ್ಯಾಖ್ಯಾನದಲ್ಲಿ ಸಂಗ್ರಹಿಸಲ್ಪಟ್ಟ ಕಥೆಯನ್ನು ಸಿದ್ಧಾಂತಕ್ಕೆ ಅವಿರುದ್ದವಾಗಿ “ಅನೇನ' ಎಂದು ಪ್ರಾರಂಭಿಸಿ “ಇತ್ಯಾದಿ ಕಥಾ ಸೂಚಿತಾ' ಎಂದು ತಾತ್ಪರ್ಯವನ್ನು ಬರೆದು ಆಪಂಡಿತ ಪಾಮರರಲ್ಲಿ ಅನುಗ್ರಹ ಮಾಡಿದ್ದಾರೆ. ಅದರ ಅಧ್ಯಯನದಿಂದ ಸಮಸ್ತ ಕೃಷ್ಣ ಕಥೆಯೂ ಓದುಗರ ಸ್ಮೃತಿ ಪಟಲದಲ್ಲಿ ಕಂಗೊಳಿಸಿ ಪರಮಾನಂದವಾಗುತ್ತದೆ.
ಇಲ್ಲಿ ಮೊದಲಿನ ಶ್ಲೋಕಕ್ಕೆ ಮಾದರಿಗಾಗಿ ಸಾಮಾನ್ಯ ತಾತ್ಪರ್ಯವನ್ನೂ ಆನಂತರ ಶ್ರೀ ಲಕ್ಷ್ಮೀನಾರಾಯಣಾಚಾರ್ಯರ ವ್ಯಾಖ್ಯಾನದಂತೆ ವಿಸ್ತಾರ ಕಥಾಭಾಗವನ್ನು “ಕಥಾಭಿಪ್ರಾಯ' ಎಂಬುದಾಗಿ ಅಧ್ಯಯನಶೀಲರ ಸೌಕಯ್ಯಕ್ಕಾಗಿ ಕೊಟ್ಟಿದ್ದೇವೆ. ಮುಂದಿನ ಶ್ಲೋಕಗಳಿಗೆ ವಿಸ್ತಾರವಾದ ಕಥೆಯನ್ನು ಸೂಚಿಸುವ ಒಂದೇ ತಾತ್ಪರ್ಯವನ್ನು ಶ್ರೀಲಕ್ಷ್ಮೀನಾರಾಯಣಾಚಾರ್ಯರ ವ್ಯಾಖ್ಯಾನವನ್ನು ಅನುಸರಿಸಿ ಕೊಡಲಾಗುವುದು.
ತಾತ್ಪರ್ಯ :- ಪೂರ್ವದಲ್ಲಿ ಸರ್ವವ್ಯಾಪ್ತನಾದ ಶ್ರೀಮನ್ನಾರಾಯಣನು ಬ್ರಹ್ಮಾದಿ ದೇವತೆಗಳಿಂದ ಭೂಭಾರ ಹರಣಕ್ಕಾಗಿ ಪ್ರಾರ್ಥಿತನಾಗಿ ದೇವಕಿಯಲ್ಲಿ ವಸುದೇವನ ದೆಶೆಯಿಂದ ಅವತರಿಸಿ, ನಂದಗೋಪನನ್ನು ಸಂತೋಷಗೊಳಿಸಿ, ಶಿಶುಗಳ ವಧಾರ್ಥವಾಗಿ ಕಂಸನಿಂದ ಪ್ರೇರಿತಳಾದ ಪೂತನೆಯೆಂಬ ರಾಕ್ಷಸಿಯನ್ನು ಸಂಹರಿಸಿ, ಗುಡಿಗೆ ದೇವರ ದರ್ಶನಕ್ಕಾಗಿ ಹೋಗಿಬರುವ ಉತ್ಸವ ಕಾಲದಲ್ಲಿ ರಥದ ಅಂಗವಾದ ಚಕ್ರದಲ್ಲಿದ್ದ ಶಕಟನೆಂಬ ದೈತ್ಯನನ್ನು ಪಾದಾಘಾತಗಳಿಂದ ಸಂಹರಿಸಿ, ತಾಯಿಯಾದ ಯಶೋದಾದೇವಿಗೆ ತನ್ನ ಭಾರವನ್ನು ತೋರಿಸಿ ಅವಳು ಶ್ರೀಕೃಷ್ಣನು ಭಾರವಾಗಿದ್ದಾನೆಂಬ ಆಶ್ಚರ್ಯದಿಂದ ಕೆಳಗೆ ಕೂಡಿಸಲು ಸುಂಟರಗಾಳಿಯ ರೂಪದಿಂದ ಬಂದ (ತೃಣಾವರ್ತನೆಂಬ) ದೈತ್ಯನು ತನ್ನನ್ನು ಎತ್ತಿಕೊಂಡು ಆಕಾಶಕ್ಕೆ ಹಾರಲು ಅಲ್ಲಿ ಅವನ ಕುತ್ತಿಗೆಯನ್ನು ಮುರಿದು ಸಂಹರಿಸಿದನು. ಇಂಥ ಶ್ರೀ ಕೃಷ್ಣನು ನನ್ನನ್ನು ರಕ್ಷಿಸಲಿ,

Ramaswamy Sastry and Vighnesh Ghanapaathi

Copyright © 2024 | Vedadhara | All Rights Reserved. | Designed & Developed by Claps and Whistles
| | | | |