I ಶ್ರೀ ವೇದವ್ಯಾಸಃ ಪ್ರಸೀದತು |
ಬ್ರಹ್ಮ ಪುರಾಣ ಪ್ರಾರಂಭ ಮೊದಲನೆಯ ಅಧ್ಯಾಯ
ಯಸ್ಮಾತ್ಸರ್ವನಿಂದ ಪ್ರಪಂಚ ರಸಂ ವಾಯಾ ಜಗಜ್ಜಾಯತೇ । ಯಸ್ಮಿಂತಿ ಯಾತಿ ಚಾಂತಸವಯೇ ಕಲ್ಪಾನಕ ಪುನಃ | ಯಂಧ್ಯಾತ್ವಾ ಮನಯಃ ಪ್ರಪಂಚ ರಹಿತಂ ವಿದುತಿ ಮೋಕ್ಷಂ ಧ್ರುವಂ ತಂ ವಂದೇ ಪುರುಷೋತ್ತಮಾಖ್ಯಮಮಲಂ ನಿತ್ಯಂ ವಿಭುಂ ನಿಶ್ಚಲವಮ್ | ಯಾವನಿಂದ ಈ ಸಕಲ ಜಗತ್ತು ಸೃಷ್ಟವಾಗುವದೋ, ದೃಷ್ಟಿಗೋಚವಾಗುದ ಸ್ಥಾವರ ಜಂಗಮಾತ್ಮಕವಾದ, ಮಾಯೆಯೆಂಬ ಭಗವಂತನ ಶಕ್ತಿ ವಿಶೇಷದಿಂದ ಉಂಟಾದ ಜಗತ್ತೆಲ್ಲವೂ ಯಾವ ಪರಮಾತ್ಮನನ್ನೇ ಆಶ್ರಯಿಸಿ ಇರುವದೋ, ಯುಗಾಂತ ಕಾಲದಲ್ಲಿಯೂ, ಪ್ರತಿಯೊಂದು ಕಲ್ಪಗಳಲ್ಲಿಯೂ ಯಾವ ಭಗವಂತನಲ್ಲಿ ಜಗತ್ತೆಲ್ಲ ಸೂಕ್ಷ್ಮರೂಪದಿಂದ ಇರುವದೋ, ಪ್ರಪಂಚದಿಂದ ಭೇದವುಳ್ಳ ಯಾರನ್ನು ಧ್ಯಾನಿಸಿ ಋಷಿಗಳು ನಿಶ್ಚಿತವಾದ ಮೋಕ್ಷ ಪದವನ್ನು ಹೊಂದುವರೆ, ಅಂಥ ಪುರುಷೋತ್ಸವು ಎಂಬ ಹೆಸರಿನ, ನಿಷ್ಕಲಂಕನಾದ ಅವಾದ್ಯನಂತನಾದ, ವಿಕಾರ ರಹಿಕವಾದ, ಸರ್ವತ್ರ ವ್ಯಾಪಿಸಿರುವ ಸ್ವಾಮಿಯನ್ನು ನಮಿಸುವೆ.
ವಿದ್ವಾಂಸರು ಸವಾಧಿಯನ್ನು ಹೊಂದಿ ಯಾರನ್ನು ಅಖಂಡವಾಗಿ ಸ್ಮರಿಸು ವರೋ, ಅಂಥ ಪರಿಶುದ್ಧನಾದ, ಆಕಾಶದಂತೆ ಅವರಿಚ್ಛಿನ್ನವಾದ, ಸದಾ ಆನಂದ ಸ್ವರೂಪಿಯಾದ, ಸದಾ ಪ್ರಸನ್ನನಾದ ದೋಷಕೇಶ ರಹಿಸಿದ, ಸಕಲಸ್ವಾಮಿಯಾದ ಸತ್ವ, ರಜನ್, ತವಸ್ ಎಂಬ ಪ್ರಾಕೃತಿಕ ಗುಣಹಿರನಾರರಿಂದ ನಿರ್ಗುಣವಾದ ವ್ಯಕ್ತ ಹಾಗೂ ಅವ್ಯಕ್ತ ಉಭಯ ಸ್ವರೂಪಳ್ಳ, ಪ್ರಾಪಂಚಿಕ ಸಂಬಂಧದಿಂದ ಉಂಟಾಗುವ ದೋಹಪಿತನದ, ಧ್ಯಾನದಿಂದ ಮಾತ್ರ ಒಳೆ ಯೋಗ್ಯನಾದ ಯುಗಾಂತ್ಯದಲ್ಲಿ ಪ್ರಪಂಚನಾತ ಕಾರಣವಾದ, ವಷ್ಟು ಮೊದಲಾದವುಗಳಿಲ್ಲದ, ಮೋಕ್ಷದಾಯಕನಾದ ಶ್ರೀಹರಿಯನ್ನು ನಂದಿಸುವೆ.
ಹೀಗೆ ನಾರಾಯಣನನ್ನು ಸುರಿಸಿ ಗ್ರಂಥವನ್ನು ಆರಂಭಿಸುತ್ತಿದ್ದಾರೆ. ನೈವಿ ಪಾ ರಣ್ಯ ಎಂಬುದು ಒಂದು ಪುಣ್ಯಕ್ಷೇ, ಈ ತಪೋವನದಲ್ಲಿ ಅನೇಕ ಪನಿಪನೀಷಿ ಗಳು ತರತರಣದ ತ ಧನಿಗಳಲ್ಲಿ ನಿರಟರು ಆ ಕಾಡಿನ ಅಲ್ಲಿರಂದ ಬಗೆ- ಬಗೆಯ ವೃಕ್ಷಗಳಿಂದ ಬಂದರ, ಆ ವನಂತಿರಗಳಲ್ಲಿ ಸರಲ, ಕರ್ಣಕಾರ, ಹಲಸು, ಧವ, ಖದಿರ, ಮಾವು, ನೇರಳೆ, ಬೇಲ, ಅಲ, ದೇವದಾರು, ಅಶ್ವಪ್ಪ ಪಾರಿ ಜಾತ, ಚಂದನ, ಅಗರು, ಪಾದಲ, ಏಕುಲ, ಬಾಳೆ, ಪುನ್ನಾಗ, ನಾಗಕೇಸರ, ಶಾಲಿ, ಕಾಲ, ತವಾಲ, ತಂಗು, ಅಡಿಕೆ, ಅರ್ಜುನ, ಸಂಪಿಗೆ ಮುಂತಾದ ಅಸಂಖ್ಯ ವೃಕ್ಷ ಶ್ರೇಷ್ಠಗಳು ಫಲಪುಷ್ಪ ಭರಿತವಾಗಿ ಆ ಕಾಡಿಗೆ ಶೋಭೆಯನ್ನು ತಂದಿವೆ. ಇಷ್ಟೊಂದು ಬಗೆಯ ವೃಕ್ಷಗಳಿಂದ ಆಲಂಕೃತವಾದ ಈ ಅರಣ್ಯದಲ್ಲಿ ಸಹಜವಾಗಿಯೇ ಸಕಲ ವಿಧ ಪಕ್ಷಿಗಳೂ, ನಾನಾ ಬಗೆಯ ಮೃಗಗಳೂ, ಪಶುಗಳೂ, ಸ್ವಚ್ಛಂದವಾಗಿ ವಿಹಾರ ರತವಾಗಿವೆ. ಅಲ್ಲಲ್ಲಿ ಕಾಣುವ ದೊಡ್ಡ ಹಾಗೂ ಚಿಕ್ಕ ಸರೋವರಗಳು, ಕೆರೆಗಳು, ಬಾವಿಗಳು, ಪ್ರಕೃತಿ ನಿರ್ಮಿತ ಈಸುಗೋಳಗಳು ಆ ಪ್ರಾಂತದ ರವಾಣೀಯತೆಯನ್ನು ಇನ್ನೂ ಹೆಚ್ಚಿಸಿದೆ. ಸಾತ್ವಿಕರಾದ ದ್ವಿಜರು, ಕ್ಷತ್ರಿಯರು, ವೈಶ್ಯರು, ಶೂದ್ರರು, ಮತ್ತಿತರ ಜನರು ಈ ಪರಿಸರದ ಪಾವಿತ್ಯದಿಂದಾಗಿ ಅಲ್ಲಿಯೇ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ, ಯತಿ ಎಂಬ ನಾಲ್ಕು ಆಶ್ರವರಿದ ಸಾಧಕರೂ ಅಲ್ಲಿ ಇರುವರು. ಸಮೃದ್ಧವಾಗಿ ಹಾಲು ಹಿಂಡುವ ಗೋವು ಗಳು, ಎಮ್ಮೆಗಳೂ ಅಲ್ಲಿ ಸುಖವಾಗಿ ವಾಸವಾಡಿವೆ. ವನದಲ್ಲಿ ಆಹಾರೋಪಯೋಗಿ ಸಸ್ಯ ಸಂಪತ್ತೂ ಸಾಕಷ್ಟಿದೆ. ಭತ್ತ, ಗೋದಿ, ಕಡಲೆ, ಉದ್ದು, ಹೆಸರು, ಎಳ್ಳು, ಕಬ್ಬು ಇವೇ ಮುಂತಾದ ಸಸಿಗಳೂ ಕರ್ಪೂರವೇ ಮೊದಲಾದ ಸುಗಂಧ ಭರಿತ ವೃಕ್ಷ ಗಳಿಂದ ಸಂಪದ್ಭರಿತವಾಗಿದೆ ಆ ವನಪ್ರದೇಶ, ಇಂಥ ಸುಸಂಪನ್ನ ದವಣೀಯ ವನ ಪ್ರದೇಶದಲ್ಲಿ ಮಹಾಮಹರ್ಷಿಗಳೂ, ಮುನಿಪುಂಗವರೂ ಸೇರಿ ಬೃಹದ್ಯಾಗವನ್ನು ಮಾಡಲು ಸವಾಲೋಚನೆಗೈದರು. ಯಾಗಕ್ಕೆ ಪೂರಕವಾದ ಅಗ್ನಿ, ಪ್ರತಿಷ್ಠಾಪನಾದಿ ಗಳನ್ನು ಸಾಂಗವಾಗಿ ನೆರವೇರಿಸಿದರು. ಹನ್ನೆರಡು ವರ್ಷಗಳ ಕಾಲ ನಡೆಯಲಿದ್ದ ಆ ಯಾಗವನ್ನು ವಿಕ್ಷೀಸಲು ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಅನೇಕ ಜನರು ಆಗಮಿಸಿದರು. ಯಜ್ಞವನ್ನು ನೋಡಲು ಬಂದವರಿಗೆಲ್ಲ ಉಚಿತವಾದ ಆಸನಾದಿ ಗಳನ್ನು ಒದಗಿಸಿ ಮುನಿಜರು ಸತ್ಕರಿಸಿದರು.
ಇದೇ ಸಂದರ್ಭದಲ್ಲಿ ಮಹಾಪ್ರಾಜ್ಞರಾದ ಲೋಮಹರ್ಷಣರೆಂಬ ಸೂತಾ ಚಾರ್ಯರೂ ಆ ಸ್ಥಳಕ್ಕೆ ಆಗವಿಸಿದರು. ಲೋಮಹರ್ಷಣರನ್ನು ಕಂಡಾಕ್ಷಣ ಯಣಗ ವನ್ನು ಮಾಡುತ್ತಿದ್ದ ಮುನಿಗಳಿಗೆ ಮಹದಾನಂದವಂಟಾಯಿತು. ಧಾವಿಸಿ ಬಂದು ಅವರಿಗೆ ಸ್ವಾಗತ ಬಯಸಿ ಕುಶಲಪ್ರಶ್ನೆ ಮಾಡಿ ಎಲ್ಲ ಮುನಿಗಳೂ ಕೌರವಾದರಗಳನ್ನು ವ್ಯಕ್ತಪಡಿಸಿದರು. ಲೋಮಹರ್ಷಣರು ತಮ್ಮ ಕುಶಲ ವಾರ್ತೆಯನ್ನು ತಿಳಿಸಿ ಎಲ್ಲ ಮುನಿಗಳನ್ನು ಸಂತೋಷಗೊಳಿಸಿದರು. ಅನೇಕ ಮುನಿಗಳನ್ನು ಪ್ರತ್ಯೇಕವಾಗಿ ಮಾತ ನಾಡಿಸಿ ಸುಖ-ದುಃಖ ವಿಚಾರಿಸಿ ಅವರವರ ಸಾಧನೆ ಸಾಗಿದ ಬಗೆಯನ್ನು ಅವರವ ರೊಡನೆ ವಾತ್ಸಲ್ಯದಿಂದ ಪರ್ಯಾಲೋಚನೆಗೈದರು, ಆಗ ಆ ಮುನಿಗಳು ಶಾಸ್ತ್ರೀಯ ವಿಷಯಗಳಲ್ಲಿ ತದಂತರಾಗಿದ್ದ ಅನೇಕ ಸಂಶಯಗಳನ್ನು ವ್ಯಾಸಶಿಷ್ಯರೂ ಬುದ್ಧಿಶಾಲಿಗಳೂ ಆಗಿದ್ದ ಲೋಮಹರ್ಷಣರಲ್ಲಿ ಹೀಗೆ ವ್ಯಕ್ತಪಡಿಸಿ, ಪರಿಹರಿಸಲ ಕೋರಿಕೊಂಡರು.
ಮಹರ್ಷಿಗಳು:-ಯಥಾ ಪೂರ್ವ ಎಂದು ಸರ್ವವನ್ನ ಸಚರಾಚರಂ ಸಸುರಾಸುರಗಂಧರ್ವಂ ಸಯಕ್ಷರಗರಾಕ್ಷಸಂ | ಶೋತುಮಿಚ್ಛಾವಹೇ ಸೂತ ಬ್ರೂಹಿ ಸರ್ವಂ ಯಥಾ ಜಗತ್ | ಬಭೂವ ಭಯಶ್ಚ ಯಥಾ ಮಹಾಭಾಗ ಭವಿಷ್ಯತಿ ಯತವ ಜಗಕ್ಕೂ ತ ಯತವ ಚರಾಚರಂ |
ಲೀನವಾಸೀ ತಥಾ ಯತ್ರ ಲಯ ವಷ್ಮತಿ ಯತ್ರ ಚ ಕಿ
ಪ್ರಾಜ್ಞರ, ದೇವ ದಾನವರಿಂದಲೂ, ಯಕ್ಷರಾಕ್ಷಸರಿಂದಲೂ, ಗಂಧರ್ವರಿಂದಲೂ ಕೂಡಿದ ಸ್ಥಾವರಜಂಗಮಾತ್ಮಕವಾದ ಈ ಪ್ರಪಂಚವು ಹಿಂದಿನ ಕಲ್ಪದಲ್ಲಿ ಹೇಗೆ ಇದ್ದಿತು? ಈ ಕಲ್ಪದಲ್ಲಿ ಇದು ಆವಿರ್ಭೂತವಾದ ಬಗೆ ಏನು? ಈ ಪ್ರಪಂಚದ ಇನ್ನು ಮುಂದಿನ ಸ್ಥಿತಿಗತಿಗಳೇನು ? ಇದರ ಸೃಷ್ಟಿ ಮಾಡಿದವ ಯಾರು ? ಯಾರಲ್ಲಿ ಇದು ಲೀನವಾಗುವುದು ? ಈ ವಿಷಯಗಳನ್ನು ತಮ್ಮ ಮುಖದಿಂದ ಕೇಳಿ ತಿಳಿಯುವ ಅಭಿ ಲಾಷೆ ನಮ್ಮಲ್ಲಿ ಉಂಟಾಗಿದೆ. ವಿಸ್ತಾರವಾಗಿ ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕೆಂದು ಕೇಳಿಕೊಳ್ಳುತ್ತೇವೆ.
ಲೋಮಹರ್ಷಣರು:-ಅವಿಕಾರಾಯ ಶುದ್ಧಾಯ ನಿತ್ಯಾಯ ಪರವರಾತ್ಮನೇ | ಸದ್ಯಕೆ ರೂಪಾಯ ವಿಷ್ಣವೇ ಸರ್ವಜಿಷ್ಟವೇ | ನಮೋ ಹಿರಣ್ಯಗರ್ಭಾಯ ಹರಯೇ ಶಂಕರಾಯಚ | ವಾಸುದೇವಾಯ ತಾರಾಯ ಸ್ವರ್ಗಸ್ಥಿತ್ಯಂತಕರ್ವಣೇ। ಏಕಾನೇಕ ಸ್ವರೂಪಾಯ ಸ್ಕೂಲಸೂಕ್ಷ್ಮಾತ್ಮನೇ ನಮಃ | ಅವ್ಯಕ್ತವ್ಯಕ್ತ ಭೂತಾಯ ವಿಷ್ಣವೇ ಮುಕ್ತಿಹೇತವೇ || ಸ್ವರ್ಗ ಸ್ಥಿತಿ ವಿನಾಶಾಯ ಜಗತೋ ಯೋs ಜರಾವಾರಃ | ವಲಭೂತೋ ನವ ವಿಷ್ಣವೇ ಪರಮಾತ್ಮನೇ | ಆಧಾರಭೂತಂ ವಿಶ್ವ ಸ್ಕಾಪ್ರಣೇಯಾಂ ಸಂ ಅನೇಯಸಾಂ | ಪ್ರಣಮ್ಯ ಸರ್ವಭೂತಸ್ಥವಚರಿತಂ ಪುರುಷೋತ್ಸವಂ | ಜ್ಞಾನಸ್ವರೂಪವಂತ್ಕಂ ತಂ ನಿರ್ಮಲಂ ಪರಮಾರ್ಥತಃ | ತಮವಾರ್ಥಸ್ವರೂಪೇಣ ಭ್ರಾಂತಿದರ್ಶನತಃ ಸ್ಥಿತಂ | ವಿಷ್ಣುಂ ಗ್ರಸಿದಂ ವಿಶ್ವ ಸಸ್ಮಿತ್ ಸರ್ಗೆ ತಥಾ ಪ್ರಭಂ ಸರ್ವಜ್ಞಂ
ಆದ್ಯಂ ಸುಸೂಕ್ಷಂ ವಿಶ್ವೇಶಂ ಬ್ರಹ್ಮಾದೀನ್ವಣಿ ಪಠ್ಯ ಚ | ಇತಿಹಾಸ ಪುರಾಣಜ್ಞಂ ವೇದ ವೇದಾಂಗಪಾರಗಂ | ಸರ್ವಶಾಸ್ತ್ರಾಜ್ಞ ತತ್ವಜ್ಞಂ ಪರಾಶರಸುತಂ ಪ್ರಭಂ | ಗುರುಂ ಪ್ರಣಮ್ಮ ವಕ್ಷವಿ ಪುರಾಣಂ ವೇದಸಂವಿತಂ |

Ramaswamy Sastry and Vighnesh Ghanapaathi

Copyright © 2024 | Vedadhara | All Rights Reserved. | Designed & Developed by Claps and Whistles
| | | | |