ಹೊರನಾಡು

 

ಹೊರನಾಡು ಯಾವುದಕ್ಕೆ ಪ್ರಸಿದ್ಧಿಯಾಗಿದೆ?

ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಪ್ರಸಿದ್ಧಿಯಾಗಿದೆ.

ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯವು ಎಲ್ಲಿದೆ?

ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯವು ಪಶ್ಚಿಮಘಟ್ಟದ ಹೊರನಾಡು ಹಳ್ಳಿಯಲ್ಲಿದೆ. 

ಇದು ಕರ್ನಾಟಕದ ಚಿಕ್ಕಮಗಳೂರಿನಿಂದ 100 ಕಿ.ಮಿ. ದೂರದಲ್ಲಿದೆ.

ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಪೂರ್ತಿ ಹೆಸರೇನು?

ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ. 

ಇದನ್ನು ಶ್ರೀ ಕ್ಷೇತ್ರ ಹೊರನಾಡು ಎಂದೂ ಕರೆಯುತ್ತಾರೆ.

ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯವು ಯಾವ ನದಿಯ ದಡದಲ್ಲಿದೆ?

ಇದು ಭದ್ರಾನದಿಯ ದಡದಲ್ಲಿದೆ.

ಅನ್ನಪೂರ್ಣೇಶ್ವರಿ ಯಾರು?

ಅನ್ನಪೂರ್ಣೇಶ್ವರಿಯು ಇಡೀ ವಿಶ್ವಕ್ಕೆ ಅನ್ನವನ್ನು ಒದಗಿಸುವ ದೇವಿ ಪಾರ್ವತಿಯೆಂದು ಕಾಣಲಾಗುತ್ತದೆ.

ಅನ್ನಪೂರ್ಣೇಶ್ವರಿಯ ದಂತಕಥೆಯೇನು?

ಭಗವಾನ್ ಶಿವ ಬ್ರಹ್ಮನ ಐದನೇ ತಲೆಯನ್ನು ಕತ್ತರಿಸಿದ. 

ಬ್ರಹ್ಮನ ತಲೆಬುರುಡೆಯು ಶಿವನ ಅಂಗೈಯಲ್ಲಿ ಅಂಟಿಕೊಂಡಿತು. 

ಬ್ರಹ್ಮಹತ್ಯೆಯ ಪ್ರಾಯಶ್ಚಿತ್ತವಾಗಿ ಶಿವನು ಆ ಕಪಾಲವನ್ನು ಹಿಡಿದುಕೊಂಡು ಬಿಕ್ಷೆಯನ್ನು ಕೇಳಬೇಕಾಗಿ ಬಂತು. 

ಬಿಕ್ಷೆಯು ಆ ಕಪಾಲದಲ್ಲಿ ತುಂಬಿದರೆ ಮಾತ್ರ ಅವನ ದೋಷದಿಂದ ವಿಮುಕ್ತನಾಗುತ್ತಾನೆ. 

ನೂರಾರು ವರ್ಷಗಳು ಬಿಕ್ಷೆಯನ್ನು ಬೇಡುತ್ತಾ ಅಲೆದಾಡಿದ ನಂತರ, ಶಿವ ತನ್ನ ಹೆಂಡತಿಯಾದ ದೇವಿ ಪಾರ್ವತಿಯು ಇಡೀ ವಿಶ್ವಕ್ಕೆ ಆಹಾರವನ್ನು ಒದಗಿಸುವವಳು ಎಂಬುದನ್ನು ಅರಿತುಕೊಳ್ಳುತ್ತಾನೆ. 

ಅವನು ಅವಳನ್ನು ಬಿಕ್ಷೆಗಾಗಿ ಕೇಳಬೇಕಿತ್ತು. 

ಅವನು ದೇವಿಯನ್ನು ತಲುಪುತ್ತಾನೆ ಮತ್ತು ದೇವಿಯು ಅವನಿಗೆ ಕಪಾಲಪೂರ್ಣ ಆಹಾರವನ್ನು ನೀಡುತ್ತಾಳೆ ಮತ್ತು ಶಿವನು ದೋಷದಿಂದ ವಿಮುಕ್ತನಾಗುತ್ತಾನೆ. 

ದೇವಿ ಪಾರ್ವತಿಯು ಅನ್ನಪೂರ್ಣೇಶ್ವರಿಯೆಂದು ಪ್ರಸಿದ್ಧಿಯಾಗುತ್ತಾಳೆ.

ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರತಿಷ್ಠಾಪನೆಯನ್ನು ಯಾರು ನೆರವೇರಿಸಿದರು?

ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರತಿಷ್ಠಾಪನೆಯನ್ನು ಅಗಸ್ತ್ಯ ಮಹರ್ಷಿಯವರು ನೆರವೇರಿಸಿದರು.

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಪುನಃಪ್ರತಿಷ್ಠಾಪನೆಯು ಯಾವಾಗ ನಡೆಸಲಾಯಿತು?

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಪುನಃಪ್ರತಿಷ್ಠಾಪನೆ (ಮಹಾಕುಂಭಾಭಿಷೇಕ)ಯನ್ನು 1973 ರ ಅಕ್ಷಯತೃತೀಯದ ಶುಭದಿನದಂದು ಶೃಂಗೇರಿ ಶಾರದಾಪೀಠದ ಪರಮಪೂಜ್ಯ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಯವರಿಂದ ನಡೆಸಲಾಯಿತು.

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಪ್ರಮುಖ ಹಬ್ಬಗಳು ಯಾವುವು?

ಅಕ್ಷಯ ತೃತೀಯ, ರಥೋತ್ಸವ ಮತ್ತು ನವರಾತ್ರಿ.

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತೃಗಳು ಯಾರು?

ಅನುವಂಶಿಕ ಧರ್ಮಕರ್ತ ಕುಟುಂಬದವರು ದೇವಾಲಯದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ. ಅಭಿವೃದ್ಧಿ ಮತ್ತು ನಿರ್ವಹಣೆಗಾಗಿಯ ಅವರ ಸಮರ್ಪಣಾ ಭಾವ ಮತ್ತು ನಿಸ್ವಾರ್ಥಸೇವೆಯನ್ನು ವ್ಯಾಪಕವಾಗಿ ಗುರುತಿಸಲಾಗಿದೆ.

ದೇವಾಲಯದ ವೇಳೆ:

ದರ್ಶನದ ವೇಳೆ - ಬೆಳಿಗ್ಗೆ 6.00 ರಿಂದ ರಾತ್ರಿ 9.00 ರವರೆಗೆ. 

ಮಹಾಮಂಗಳಾರತಿ ವೇಳೆಗಳು: 

ಬೆಳಿಗ್ಗೆ: 9.00 ಗಂಟೆ 

ಮಧ್ಯಾಹ್ನ: 1.30 ಗಂಟೆ

ರಾತ್ರಿ: 9.00 ಗಂಟೆ

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯವನ್ನು ತಲುಪುವುದು ಹೇಗೆ?

ರಸ್ತೆಯ ಮೂಲಕ: 

  1. ಬೆಂಗಳೂರಿನಿಂದ ಹೊರನಾಡು: ಕುಣಿಗಲ್ - ಹಾಸನ - ಬೇಲೂರು – ಮುಡಿಗೆರೆ – ಕೊಟ್ಟಿಗೆಹಾರ – ಕಲಸ - ಹೊರನಾಡು – 326 ಕಿ.ಮಿ. 
  2. ಮಂಗಳೂರಿನಿಂದ ಹೊರನಾಡು: ಮೂಡಬಿದ್ರೆ – ಕಾರ್ಕಳ - ಬಜಗೋಲಿ - ಕುದುರೆಮುಖ – ಕಲಸ - ಹೊರನಾಡು – 136 ಕಿ.ಮಿ. ಸಮೀಪದ ರೈಲು ನಿಲ್ದಾಣಗಳು:

ಶಿವಮೊಗ್ಗ – 136 ಕಿ.ಮಿ., ಮಂಗಳೂರು – 136 ಕಿ.ಮಿ.  

ಸಮೀಪದ ವಿಮಾನ ನಿಲ್ದಾಣಗಳು: 

ಮಂಗಳೂರು ವಿಮಾನ ನಿಲ್ದಾಣ – 136 ಕಿ.ಮಿ. 

ಬೆಂಗಳೂರು ವಿಮಾನ ನಿಲ್ದಾಣ – 330 ಕಿ.ಮಿ.

ಹೊರನಾಡಿನಿಂದ ಶೃಂಗೇರಿಗೆ ದೂರ

70 ಕಿ.ಮಿ.: ಹೊರನಾಡು – ಕಲಸ - ಬಾಳೆಹೊಳೆ – ಜಯಪುರ

ಬೆಂಗಳೂರಿನಿಂದ ಹೊರನಾಡು ಮಾರ್ಗ

  1. ಕುಣಿಗಲ್ - ಹಾಸನ - ಬೇಲೂರು – ಮೂಡಿಗೆರೆ – ಕೊಟ್ಟಿಗೆಹಾರ – ಕಲಸ - ಹೊರನಾಡು – 326 ಕಿ.ಮಿ. 
  2. ಕುಣಿಗಲ್ - ಹಾಸನ - ಬೇಲೂರು – ಚಿಕ್ಕಮಗಳೂರು - ಬಾಳೆಹೊನ್ನೂರು – ಕಲಸ - ಹೊರನಾಡು – 346 ಕಿ.ಮಿ.

ಉಡುಪಿಯಿಂದ ಹೊರನಾಡು ಮಾರ್ಗ

ಕಾರ್ಕಳ - ಬಜಗೋಲಿ - ಕುದುರೆಮುಖ – ಕಲಸ - ಹೊರನಾಡು – 118 ಕಿ.ಮಿ.

ಹೊರನಾಡು ಹತ್ತಿರದ ಪ್ರವಾಸಿತಾಣಗಳು

ಅಂಬತೀರ್ಥ, ಕಲಶೇಶ್ವರಸ್ವಾಮಿ ದೇವಾಲಯ, ಕ್ಯಾತನಮಕ್ಕಿ ಗಿರಿಧಾಮ.

 

 

Google Map Image

 

 

Kannada Topics

Kannada Topics

ಸಾಮಾನ್ಯ ವಿಷಯಗಳು

Copyright © 2024 | Vedadhara | All Rights Reserved. | Designed & Developed by Claps and Whistles
| | | | |