Atharva Veda Vijaya Prapti Homa - 11 November

Pray for Success by Participating in this Homa.

Click here to participate

ಆಗ್ನೇಯ ದಿಕ್ಕು

Fire South East Direction Deity

 

ದಕ್ಷಿಣ ಪೂರ್ವ ದಿಕ್ಕನ್ನು ವಾಸ್ತುಶಾಸ್ತ್ರದಲ್ಲಿ ಆಗ್ನೇಯ ದಿಕ್ಕು ಎಂದು ಕರೆಯುತ್ತಾರೆ. ಆಗ್ನೇಯ ದಿಕ್ಕಿನ ಆಡಳಿತ ದೈವವು ಅಗ್ನಿ. ಅಗ್ನಿ ಭಗವಾನರು ತುಂಬಾ ಮುಂಗೋಪವನ್ನು ಹೊಂದಿರುವರು ಮತ್ತು ತ್ವರಿತ ಕ್ರಿಯಾಶೀಲರು. ಅವರಿಗೆ ಎಲ್ಲವನ್ನೂ ಸುಟ್ಟು ಹಾಕುವ ಮತ್ತು ನಾಶಮಾಡುವ ಶಕ್ತಿಯು ಇದೆ. ಆಗ್ನೇಯ ದಿಕ್ಕಿನ ದೋಷಪೂರಿತ ವಾಸ್ತುವಿನ ಫಲಿತಾಂಶಗಳು ತ್ವರಿತವಾದದು ಮತ್ತು ಹೆಚ್ಚು ವಿನಾಶಕಾರಿಯಾಗಿರುತ್ತದೆ.

 

Click below to listen to Agni Mantra 

 

Agni Mantra 

 

ಆಗ್ನೇಯ ದಿಕ್ಕು ಎಂದರೆ ಯಾವುದು?

ಒಂದು ಕಟ್ಟಡದ ಅಥವಾ ಸ್ಥಳದ ಪೂರ್ವ ಮತ್ತು ದಕ್ಷಿಣ ಪಾಶ್ರ್ವಗಳು ಸಂಧಿಸುವ ಬಿಂದುವನ್ನು ಆಗ್ನೇಯ ದಿಕ್ಕೆಂದು ಕರೆಯುತ್ತೇವೆ.

ಆಗ್ನೇಯ ದಿಕ್ಕಿನಲ್ಲಿ ಏನು ಇರಲು ಅನುಮತಿಸಲಾಗಿದೆ?

  • ವಾಸದ ಕಟ್ಟಡಗಳಲ್ಲಿ: ಅಡುಗೆ ಮನೆ, ಕಛೇರಿ, ಲಿವಿಂಗ್ ರೂಂ, ಪೆÇೀರ್ಟಿಕೋಗಳು ಮತ್ತು ಅತಿಥಿ ಕೊಠಡಿ.
  • ಕಾರ್ಖಾನೆಗಳು ಅಥವಾ ವರ್ಕ್‍ಶಾಪ್‍ಗಳಲ್ಲಿ: ಟ್ರಾನ್ಸ್‍ಫಾರ್ಮರ್‍ಗಳು, ಜನರೇಟರ್‍ಗಳು, ಬಾಯ್ಲರ್‍ಗಳು, ಫರ್ನೆಸ್‍ಗಳು ಮೊದಲಾದವುಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಡಬಹುದು. ಇದರಿಂದ ಉತ್ಪಾದನೆಯು ಸರಾಗವಾಗುವುದು ಮತ್ತು ಹೆಚ್ಚಿನ ಲಾಭವು ದೊರೆಯುವುದು.

ಅಗ್ನೇಯ ದಿಕ್ಕಿನಲ್ಲಿ ಸ್ನಾನದ ಮನೆ

ಸ್ನಾನದ ಮನೆಯನ್ನು ಕೇವಲ ಸ್ನಾನಕ್ಕಾಗಿ ಉಪಯೋಗಿಸುವುದಾದರೆ ಅದನ್ನು ಆಗ್ನೇಯ ದಿಕ್ಕಿನಲ್ಲಿ ಇಡಬಹುದು. ಕಮೋಡ್(ವೆಸ್ಟ್ರನ್ ಕ್ಲಾಸೆಟ್) ಅನ್ನು ಅಲ್ಲಿ ಇಡಬಾರದು.

ಆಗ್ನೇಯ ದಿಕ್ಕಿನಲ್ಲಿ ಏನನ್ನು ಸ್ಥಾಪಿಸಬಾರದು?

  • ಮಲಗುವ ಕೋಣೆ - ನಿದ್ರಿಸಲು ಆಗ್ನೇಯ ದಿಕ್ಕು ಸೂಕ್ತವಲ್ಲ.
  • ತಿಜೋರಿ - ಸಂಪತ್ತಿನ ನಷ್ಟಕ್ಕೆ ಕಾರಣವಾಗುತ್ತದೆ.

ಪೂಜಾ ಮಂದಿರವನ್ನು ಆಗ್ನೇಯ ದಿಕ್ಕಿನಲ್ಲಿ ಸ್ಥಾಪಿಸಬಹುದೇ?

ಇಲ್ಲ. ಒಂದು ವೇಳೆ ನೀವು ಪೂಜಾಮಂದಿರವನ್ನು ಅಲ್ಲಿ ಸ್ಥಾಪಿಸಿದರೆ ದೇವತೆಗಳು ಕುಪಿತರಾಗುತ್ತಾರೆ.

ಆಗ್ನೇಯ ದಿಕ್ಕಿನಲ್ಲಿ ಸ್ಥಾಪಿಸಲಾದ ಮುಖ್ಯದ್ವಾರ/ಗೇಟ್ ನ ಪರಿಣಾಮ

  • ಸರಿಯಾಗಿ ಅಗ್ನೇಯ ದಿಕ್ಕಿನಲ್ಲಿ – ಮಕ್ಕಳಿಗೆ ತೊಂದರೆ
  • ಪೂರ್ವ ಆಗ್ನೇಯ ದಿಕ್ಕಿನಲ್ಲಿ – ಕಳ್ಳತನ ಬಾಧೆ
  • ದಕ್ಷಿಣ ಆಗ್ನೇಯ ದಿಕ್ಕಿನಲ್ಲಿ – ಇಡೀ ಕುಟುಂಬಕ್ಕೆ ತೊಂದರೆ

ಆಗ್ನೇಯ ದಿಕ್ಕಿಗೆ ಕಟ್ಟಡದ ವಿಸ್ತರಣೆ

ಎಂದಿಗೂ ಕಟ್ಟಡವು ಆಗ್ನೇಯ ದಿಕ್ಕಿನಲ್ಲಿ ವಿಸ್ತರಿಸಲು ಬಿಡಬೇಡಿ. ಇದು ಕಟ್ಟಡದಲ್ಲಿ ವಾಸಿಸುವವರಿಗೆ ಆತಂಕ ಮತ್ತು ಖಿನ್ನತೆಯನ್ನು ಉಂಟು ಮಾಡುತ್ತದೆ ಮತ್ತು ನಿರ್ವಹಿಸಲಾಗದ ಸಾಲಕ್ಕೆ ಎಡೆಮಾಡಿಕೊಡುತ್ತದೆ.

ಆಗ್ನೇಯ ದಿಕ್ಕಿನಲ್ಲಿ ಬೆಳೆದಿರುವ ಭೂಮಿಯ ಪರಿಣಾಮಗಳು

  • ಪೂರ್ವದ ಕಡೆಗೆ ಬೆಳೆದಿದ್ದಾಗ – ಜಗಳಗಳು, ವಾದ ಪ್ರತಿವಾದಗಳು
  • ದಕ್ಷಿಣದ ಕಡೆಗೆ ಬೆಳೆದಿದ್ದಾಗ – ಖ್ಯಾತಿಯ ನಷ್ಟ

ಆಗ್ನೇಯ ದಿಕ್ಕಿನ ದೋಷಪೂರಿತ ವಾಸ್ತುವಿನ ಸಾಮಾನ್ಯ ಪರಿಣಾಮಗಳು

  • ಮಹಿಳೆಯರಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು
  • ಮನೆಯ ಮಹಿಳೆಯರಿಂದ ಅನುಚಿತ ವರ್ತನೆ
  • ಮದುವೆಗೆ ವಿಳಂಬ
  • ಕಾನೂನಿನ ತೊಡಕುಗಳು
  • ಆರ್ಥಿಕ ಸಮಸ್ಯೆಗಳು
  • ಕಳ್ಳತನ
  • ಅಗ್ನಿ ದುರಂತಗಳು
  • ಶಾಶ್ವತ ದೈಹಿಕ ಅಂಗವಿಕಲತೆಗೆ ಕಾರಣವಾಗುವ ಅಪಘಾತ

ನಿವೇಶನದ ಆಗ್ನೇಯದಲ್ಲಿ ಕೊನೆಗೊಳ್ಳುವ ರಸ್ತೆಗಳು

  • ಪೂರ್ವ ದಿಕ್ಕಿನಿಂದ ಬರುವ ರಸ್ತೆ - ಶುಭವಲ್ಲ
  • ದಕ್ಷಿಣ ದಿಕ್ಕಿನಿಂದ ಬರುವ ರಸ್ತೆ - ಶುಭ

ಅಗ್ನಿ ಮತ್ತು ನೀರು ಪರಸ್ಪರ ವಿರೋಧಿ ಅಂಶಗಳು. ಭಾವಿಯನ್ನು ತೆಗೆಯುವುದು, ನೀರಿನ ಟ್ಯಾಂಕ್ ಅಥವಾ ಸಂಪ್ ಅನ್ನು ಆಗ್ನೇಯ ದಿಕ್ಕಿನಲ್ಲಿ ಕಟ್ಟುವುದು ಅಗ್ನಿ ದುರಂತಗಳಿಗೆ ಕಾರಣವಾಗಬಹುದು ಅಥವಾ ವಾಸಿಸುವವರಿಗೆ ಸುಟ್ಟ ಗಾಯಗಳಾಗಬಹುದು.

97.4K
14.6K

Comments

Security Code
33274
finger point down
ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna

ಧಾರ್ಮಿಕ ಚಿಂತನಕ್ಕೆ ಪರಿಪೂರ್ಣವೆನಿಸಿರುವುದು 😇 -ರವಿ ಶಂಕರ್

Jeevanavannu badalayisuva adhyatmikavagi kondoyyuva vedike -Narayani

ತುಂಬಾ ಒಳ್ಳೆಯ ವೆಬ್‌ಸೈಟ್ 👍 -ಕಾವ್ಯಾ ಶರ್ಮಾ

ಜ್ಞಾನಸಂಪತ್ತಿನ ವರ 😊 -ಆರತಿ ಶೆಟ್ಟಿ

Read more comments

Knowledge Bank

ಸುದರ್ಶನ ಚಕ್ರದ ರಹಸ್ಯ

ಮಹಾವಿಷ್ಣುವಿನ ಕೈಯಲ್ಲಿರು ಸುದರ್ಶನ ಚಕ್ರವು ೧೦೦೦ಗಳಷ್ಟು ಅರೆಗಳನ್ನು ಹೊಂದಿದ್ದು ಅತ್ಯಂತ ಪ್ರಬಲ ಆಯುಧ ವೆಂದು ಪರಿಗಣಿಸಲ್ಪಟ್ಟಿದೆ ಈ ಆಯುಧವು ಮನೋವೇಗದಲ್ಲಿ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು ತನ್ನ ದಾರಿಯಲ್ಲಿ ಬರುವ ಎಲ್ಲವನ್ನೂ ನಾಶ ಮಾಡಬಲ್ಲದು ಇದು ತನ್ನದೇ ವೈಯುಕ್ತಿಕ ಪ್ರಜ್ಞೆ ಯನ್ನು ಹೊಂದಿದ್ದು ವಿಷ್ಣುವಿನ ಆಜ್ಞೆ ಯನ್ನು ಮಾತ್ರ ಪರಿಪಾಲಿಸುತ್ತದೆ.

ಇತಿಹಾಸ ಮತ್ತು ಪುರಾಣಗಳ ಮಹತ್ವ

ಇತಿಹಾಸ ಹಾಗೂ ಪುರಾಣಗಳೆರಡೂ ಚರಿತ್ರೆ ಯ ಆತ್ಮ ಹಾಗೂ ದೇಹವಿದ್ದಂತೆ. ಇತಿಹಾಸ (ರಾಮಾಯಣ ಮಹಾಭಾರತ ಗಳು)ವು ಚರಿತ್ರೆಯ ಆತ್ಮವನ್ನು ಪ್ರತಿನಿಧಿಸಿದರೆ, ಪುರಾಣವು, ಅದರ ದೇಹವಿದ್ದಂತೆ. ಪುರಾಣವಿಲ್ಲದೆ ಇತಿಹಾಸದ ಸಾರವು ಸ್ಪಷ್ಟವಾಗಿ ವ್ಯಕ್ತವಾಗಲಾರದು. ಪುರಾಣವು ಚರಿತ್ರೆ ಯ ಸಮಗ್ರ ತತ್ವ ವಾಗಿದ್ದು, ಬ್ರಹ್ಮಾಂಡದ ಅತ್ಯಮೂಲ್ಯ ವಿಷಯಗಳಾದ ಸೃಷ್ಟಿ, ದೇವತೆಗಳು ಹಾಗೂ ಪುರಾಣ ಪ್ರಸಿದ್ಧ ರಾಜರುಗಳ ವಂಶಾವಳಿಗಳು, ನೀತಿ ಕತೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಸೃಷ್ಟಿ ಯ ಜಟಿಲವಾದ ಸಂಗತಿಗಳು ಹಾಗೂ ಮನುಕುಲದ ಉತ್ಪತ್ತಿಯ ವಿಷಯದಲ್ಲಿ ಆಧುನಿಕ ವಿಜ್ಞಾನದ ಸಿದ್ಧಾಂತದೊಂದಿಗಿನ ಸಾಮ್ಯತೆ ಹಾಗೂ ವೈರುಧ್ಯಗಳನ್ನು ಸೂಕ್ಷ್ಮ ವಾಗಿ ಪರಿಶೀಲಿಸಿ, ಪ್ರತಿಪಾದಿಸುತ್ತದೆ

Quiz

ಜಟಾಯುವಿನ ತಂದೆ ಯಾರು?

ಅನುವಾದ: ಡಿ.ಎಸ್.ನರೇಂದ್ರ

ಕನ್ನಡ

ಕನ್ನಡ

ಸಾಮಾನ್ಯ ವಿಷಯಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon