ತಂಬೂರಿ ಮೀಟಿದವ

ತಂಬೂರಿ ಮೀಟಿದವ ಭವಾಬ್ಧಿ ದಾಟಿದವ |
ತಾಳವ ತಟ್ಟಿದವ ಸುರರೊಳು ಸೇರಿದವ |

ಗೆಜ್ಜೆಯ ಕಟ್ಟಿದವ ಖಳರೆದೆಯ ಮೆಟ್ಟಿದವ |
ಗಾನವ ಪಾಡಿದವ ಹರಿಮೂರುತಿ ನೋಡಿದವ |

ವಿಠ್ಠಲನ ನೋಡಿದವ ಪುರಂದರ ವಿಠ್ಠಲನ |
ನೋಡಿದವ ವೈಕುಂಠಕೆ ಓಡಿದವ |

 

Tamburi Meetidava

 

Copyright © 2023 | Vedadhara | All Rights Reserved. | Designed & Developed by Claps and Whistles
| | | | |