
ಕಾರ್ತವೀರ್ಯಾರ್ಜುನನ ತಂದೆ ಕೃತವೀರ್ಯನು ಮಗುವನ್ನು ಹೊಂದಲು ಒಂದು ವರ್ಷ ಸಂಕಷ್ಟಿ ವ್ರತವನ್ನು ಮಾಡಿದನು. ಮಗು ಜನಿಸಿದಾಗ, ಅವನಿಗೆ ಕೈಗಳು ಮತ್ತು ಕಾಲುಗಳು ಇರಲಿಲ್ಲ. ‘ನನಗೇಕೆ ಇಂತಹ ಮಗುವನ್ನು ದೇವರು ಕೊಟ್ಟನು? ಮಕ್ಕಳಿಲ್ಲದೆ ಉಳಿಯುವುದೇ ಉತ್ತಮವಾಗಿತ್ತು. ನನ್ನ ಹಿಂದಿನ ಪಾಪಗಳು ಇನ್ನೂ ಕೊನೆಗೊಂಡಿಲ್ಲವೇನೋ ಗಣಪತಿಯ ಆಶೀರ್ವಾದವಿದ್ದರೂ ಪ್ರಯೋಜನವಾಗಲಿಲ್ಲವಲ್ಲ!"ಎಂದು ಕಾರ್ತವೀರ್ಯನ ತಾಯಿಯು ತುಂಬಾ ದುಃಖಿತಳಾದಳು.
ಕೃತವೀರ್ಯನು ತುಂಬಾ ದುಃಖಿಸಿದನು, "ಓ ದೇವನೇ ನೀನು ಕರುಣಾಮಯಿ ಎಂದು ಜನರು ಹೇಳುತ್ತಾರೆ ಮತ್ತು ಕೇವಲ ಸ್ಮರಣೆ ಮಾತ್ರದಿಂದಲೇ ಅನುಗ್ರಹವನ್ನು ನೀಡುವೆ ಎನ್ನುತ್ತಾರೆ. ನಿನ್ನನ್ನು ಆಶ್ರಯಿಸಿದ ನನಗೆ ಯಾಕೆ ಹೀಗಾಯಿತು? ನನ್ನ ಎಲ್ಲಾ ಪ್ರಾರ್ಥನೆಗಳು, ತಪಸ್ಸುಗಳು ಮತ್ತು ದಾನಗಳು ವ್ಯರ್ಥವಾಗಿವೆ. ನಿಜವಾಗಿ, ಯಾವ ಪ್ರಯತ್ನವೂ ವಿಧಿಯನ್ನು ಜಯಿಸಲು ಸಾಧ್ಯವಿಲ್ಲ.' ಎಂದು ಕಳವಳಗೊಂಡನು.
ಮಂತ್ರಿಗಳು ಮತ್ತು ಸಲಹೆಗಾರರು ಅವರಿಗೆ ಸಾಂತ್ವನ ಹೇಳಿದರು, 'ಎಲ್ಲವೂ ಹಣೆಬರಹದಂತೆ ಆಗುತ್ತದೆ. ಮರವು ಸರಿಯಾದ ಸಮಯದಲ್ಲಿ ಹೂವುಗಳನ್ನು ಮತ್ತು ಹಣ್ಣುಗಳನ್ನು ನೀಡುವಂತೆಯೇ, ನಿಮ್ಮ ಒಳ್ಳೆಯ ಕಾರ್ಯಗಳಿಗೆ ಫಲವೂ ಇರುತ್ತದೆ. ಗಣಪತಿಯು ನಿಮ್ಮನ್ನು ಕೈಬಿಡುವುದಿಲ್ಲ.'
ಕಾರ್ತವೀರ್ಯನಿಗೆ ಹನ್ನೆರಡು ವರ್ಷವಾದಾಗ, ದತ್ತಾತ್ರೇಯನು ಅವನನ್ನು ಭೇಟಿ ಮಾಡಿದನು. ಕೃತವೀರ್ಯನ ದುಃಖವನ್ನು ಕಂಡು ದತ್ತಾತ್ರೇಯನು ಹೇಳಿದನು, ನಾನು ಗಣೇಶನ ಏಕಾಕ್ಷರ ಮಂತ್ರದ ಉಪದೇಶವನ್ನು ಕಾರ್ತವೀರ್ಯನಿಗೆ ಕೊಡುತ್ತೇನೆ. ಅವನು ಈ ಮಂತ್ರದಿಂದ ತಪಸ್ಸನ್ನು ಮಾಡಲಿ. ಎಲ್ಲವೂ ಸರಿಯಾಗಲಿದೆ’ ಎಂದರು.
ಅದರಂತೆ ಕಾರ್ತವೀರ್ಯನನ್ನು ಕಾಡಿಗೆ ಕರೆದೊಯ್ದರು, ಅಲ್ಲಿ ಅವನಿಗೆ ಒಂದು ಸಣ್ಣ ಗುಡಿಸಲು ನಿರ್ಮಿಸಲಾಯಿತು. ಗಾಳಿಯನ್ನು ಮಾತ್ರ ಸೇವಿಸುತ್ತಾ ಅಲ್ಲಿಯೇ ವಾಸಮಾಡಿ ಹನ್ನೆರಡು ವರ್ಷಗಳ ಕಾಲ ತಪಸ್ಸನ್ನು ಮಾಡಿದನು. ಅವನ ಭಕ್ತಿಯಿಂದ ಸಂತೋಷಗೊಂಡ ಗಣೇಶನು ಕಾರ್ತವೀರ್ಯನ ಮುಂದೆ ಕಾಣಿಸಿಕೊಂಡನು.
ಕಾರ್ತವೀರ್ಯನು ಭಗವಂತನಿಂದ ಎರಡು ವರಗಳನ್ನು ಕೇಳಿದನು: ಅವನ ಪಾದಕಮಲಗಳಲ್ಲಿ ಅಚಲವಾದ ಭಕ್ತಿ ಮತ್ತು ಅವನ ಹೆತ್ತವರ ದುಃಖವನ್ನು ನಿವಾರಣೆ ಅವನ ವಿಕಾರವನ್ನು ತೆಗೆದುಹಾಕುವುದು. ಭಗವಂತ ಅವನನ್ನು ಆಶೀರ್ವದಿಸಿದನು ಮತ್ತು ಅವನಿಗೆ ಎರಡು ಕಾಲುಗಳು ಮತ್ತು ಸಾವಿರ ತೋಳುಗಳನ್ನು ಕೊಟ್ಟನು.
ತಿಳಿದು ಬರುಬ ಅಂಶಗಳು:
Astrology
Bhagavad Gita
Bhagavatam
Bharat Matha
Devi
Devi Mahatmyam
Ganapathy
Garuda Puranam
Glory of Venkatesha
Hanuman
Kathopanishad
Mahabharatam
Mantra Shastra
Mystique
Practical Wisdom
Purana Stories
Radhe Radhe
Ramayana
Rare Topics
Rigveda Explained
Rituals
Sages and Saints
Shiva
Spiritual books
Sri Suktam
Story of Sri Yantra
Temples
Vedas
Vishnu Sahasranama
Yoga Vasishta