ರಾಮ ಮಂತ್ರವ ಜಪಿಸೋ ಹೇ ಮನುಜ|| ಪ ||
ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ|| ಅ.ಪ ||
ಕುಲಹೀನನಾದರು ಕೂಗಿ ಜಪಿಸುವ ಮಂತ್ರ
ಸಲೆ ಬೀದಿ ಬೀದಿಯೊಳು ನುಡಿವ ಮಂತ್ರ
ಹಲವು ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ|| ೧ ||
ಸ್ನಾನ ಮೌನಂಗಳಿಗೆ ಸಾಧನದ ಮಂತ್ರ
ಜ್ಞಾನಿಗಳು ಮನದಿ ಧ್ಯಾನಿಪ ಮಂತ್ರ
ಹೀನ ಗುಣಂಗಳ ಹಿಂಗಿಸುವ ಮಂತ್ರ
ಏನೆಂಬೆ ವಿಭೀಷಣಗೆ ಪಟ್ಟಗಟ್ಟಿದ ಮಂತ್ರ || ೨ ||
ಸಕಲ ವೇದಂಗಳಿಗೆ ಸಾರವೆನಿಪ ಮಂತ್ರ
ಮುಕುತಿ ಮಾರ್ಗಕೆ ಇದೆ ಮೂಲ ಮಂತ್ರ
ಭಕುತಿ ರಸಕೆ ಬಟ್ಟೆ ಒಮ್ಮೆ ತೋರುವ ಮಂತ್ರ
ಸುಖ ನಿಧಿ ಪುರಂದರ ವಿಠಲನ ಮಂತ್ರ|| ೩ ||
ಋಷಿ ಎಂದರೆ, ಯಾರು ಕೆಲವು ಶಾಶ್ವತ ಜ್ಞಾನವನ್ನು ತಮ್ಮ ತಪಸ್ಸಿನ ಮೂಲಕ ಪಡೆದುಕೊಳ್ಳುತ್ತಾರೋ ಅವರ ಮೂಲಕ, ಈ ಜ್ಞಾನವು ಮಂತ್ರದ ರೂಪದಲ್ಲಿ ಪ್ರಕಟವಾಗುತ್ತದೆ. ಮುನಿಯು ಜ್ಞಾನವುಳ್ಳ, ಬುದ್ಧಿವಂತ ಮತ್ತು ಆಳವಾದ ಚಿಂತನೆಯ ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿ. ಮುನಿಗಳಿಗೆ ಅವರು ಹೇಳುವುದರ ಮೇಲೆ ಹಿಡಿತವಿರುತ್ತದೆ.
ನಾರದ ಮುನಿಗಳು ತ್ರಿಲೋಕ ಸಂಚಾರಿ ಗಳು ಮನ್ ವೇಗದಲ್ಲಿ ಮೂರೂಲೋಕಗಳನ್ನು ಸಂಚರಿಸಬಲ್ಲಂತವರು ಅವರು ನಮ್ಮ ಪುರಾಣಗಳಲ್ಲಿ ಕಲಹಪ್ರಿಯರೆಂದೇ ಪ್ರಖ್ಯಾತ ರಾದವರು ಆದರೂ ಪ್ರಪಂಚದ ವಕ್ರತೆಗಳೆಲ್ಲವೂ ಕಳೆದು ದೈವ ಸಂಕಲ್ಪವು ನೆರವೇರುವಲ್ಲಿ ಹಾಗೂ ಸಂಘರ್ಷಗಳನ್ನು ಕಳೆದು ಅನುಕೂಲಕರ ಪರಿಸ್ಥಿತಿಯನ್ನು ಉಂಟುಮಾಡುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ನಾರದರ ಕಥೆಗಳು ಅವರ ಚಾಣಾಕ್ಷ ಬುದ್ಧಿಯಿಂದ ಹಾಗೂ ಮಹತ್ತರವಾದುದನ್ನುಸಾಧಿಸುವ ದೃಷ್ಟಿಯಿಂದ ಎಲ್ಲರ ಗಮನ ಸೆಳೆಯುತ್ತದೆ.
ನಿಮ್ಮನ್ನು ಸಿಹಿ ಮತ್ತು ಸಂತೋಷಪಡಿಸಲು ಮಂತ್ರ
ಇಯಂ ವೀರುನ್ ಮಧುಜಾತಾ ಮಧುನಾ ತ್ವಾ ಖನಾಮಸಿ . ಮಧೋರಧಿ ಪ್ರಜಾತಾಸಿ ....
Click here to know more..ಸಂತೋಷ ಮತ್ತು ಆರೋಗ್ಯಕರ ಜೀವನಕ್ಕಾಗಿ ಗುರು ಮಂತ್ರ
ಓಂ ಅಂಗಿರಸಾಯ ವಿದ್ಮಹೇ ದಂಡಾಯುಧಾಯ ಧೀಮಹಿ. ತನ್ನೋ ಜೀವಃ ಪ್ರಚೋದಯ....
Click here to know more..ಶಿವ ಅಪರಾಧ ಕ್ಷಮಾಪಣ ಸ್ತೋತ್ರ
ಆದೌ ಕರ್ಮಪ್ರಸಂಗಾತ್ ಕಲಯತಿ ಕಲುಷಂ ಮಾತೃಕುಕ್ಷೌ ಸ್ಥಿತಂ ಮಾಂ ವಿ....
Click here to know more..Astrology
Atharva Sheersha
Bhagavad Gita
Bhagavatam
Bharat Matha
Devi
Devi Mahatmyam
Festivals
Ganapathy
Glory of Venkatesha
Hanuman
Kathopanishad
Mahabharatam
Mantra Shastra
Mystique
Practical Wisdom
Purana Stories
Radhe Radhe
Ramayana
Rare Topics
Rituals
Rudram Explained
Sages and Saints
Shiva
Spiritual books
Sri Suktam
Story of Sri Yantra
Temples
Vedas
Vishnu Sahasranama
Yoga Vasishta