ಶಿವಲೋಕದಿಂದ ಒಬ್ಬ ಸಾಧು ಬಂದಾನೋ

ಶಿವಲೋಕದಿಂದ ಒಬ್ಬ ಸಾಧು ಬಂದಾನೋ
ಶಿವನಾಮವನ್ನು ಕೇಳಿ ಅಲ್ಲಿನಿಂತಾನೋ || ಶಿವಲೋಕದಿಂದ ||

ಮೈತುಂಬ ಬೂದಿಯನ್ನು ಧರಿಸಿಕೊಂಡಾನು
ಕೊರಳೊಳು ರುದ್ರಾಕ್ಷಿ ಕಟ್ಟಿಕೊಂಡಾನು ||
ಮೈಯಲ್ಲಿ ಕಪನೀಯ ತೊಟ್ಟುಕೊಂಡಾನು |
ಕೈಯಲ್ಲಿ ತ್ರಿಶೂಲ ಹಿಡಿದುಕೊಂಡಾನು || ಶಿವ ಲೋಕದಿಂದ ||

ಊರಹೊರಗೆ ಒಂದು ಮಠ ಕಟ್ಟಿಸ್ಯನೋ
ಮಠದ ಬಾಗಿಲೊಳಗೆ ತಾನೇ ನಿಂತನೋ ||
ಒಂಭತ್ತು ಬಾಗಿಲ ಮನೆಗೆ ಹಚ್ಯಾನೋ |
ಧರೆಯೋಳು ಮೆರೆಯುವ ಶಿಶುನಾಳದೀಶನು||
ಶಿಷ್ಯ ಶರೀಫನ ಕೂನ ಹಿಡಿದಾನೋ || ಶಿವ ಲೋಕದಿಂದ ||

Devotional Music

Devotional Music

ಭಕ್ತಿಗೀತೆಗಳು

Click on any topic to open

Copyright © 2025 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...