Special - Aghora Rudra Homa for protection - 14, September

Cleanse negativity, gain strength. Participate in the Aghora Rudra Homa and invite divine blessings into your life.

Click here to participate

ನೀ ಮಾಯೆಯೊಳಗೊ

30.6K
3.8K

Comments

6d7wa
ಹರೇ ಕೃಷ್ಣ ಪ್ರಭು ತುಂಬಾ ಮನಸಿಗೆ ತುಂಬಾ ಖುಷಿ ಆಯ್ತು -User_siknmu

ಮತ್ತೆ, ಮತ್ತೆ ಈ ಹಾಡು ಕೇಳಬೇಕು ಅನಿಸುತ್ತೆ. ನಿಜವೇ ಇದು ಎಲ್ಲಾ ನು ಮಾಯವೆ. ಎಂತಾ ಅದ್ಭುತ,ಸಾಲುಗಳು -Prabu R

ಅತ್ಯುತ್ತಮ ಮಾಹಿತಿಯ ವೆಬ್‌ಸೈಟ್ -ಶಶಿಧರ ಹೆಗ್ಡೆ

ತುಂಬಾ ಉಪಯುಕ್ತ -ಪವಿತ್ರಾ ಹೆಗ್ಡೆ

ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

Read more comments

ನೀ ಮಾಯೆಯೊಳಗೊ
ನಿನ್ನೊಳು ಮಾಯೆಯೊ

ನೀ ದೇಹದೊಳಗೊ
ನಿನ್ನೊಳು ದೇಹವೊ

ಬಯಲು ಆಲಯದೊಳಗೊ
ಆಲಯವು ಬಯಲೊಳಗೊ
ಬಯಲು ಆಲಯವೆರಡು
ನಯನದೊಳಗೊ
ನಯನ ಬುದ್ಧಿಯೊಳಗೊ
ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು
ನಿನ್ನೊಳಗೊ ಹರಿಯೆ

ಸವಿಯು ಸಕ್ಕರೆಯೊಳಗೊ
ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಗಳೆರಡು
ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ
ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು
ನಿನ್ನೊಳಗೊ ಹರಿಯೆ

ಕುಸುಮದೊಳು ಗಂಧವೊ
ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು
ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ
ನಿನ್ನೊಳಗೊ

Knowledge Bank

ಹನುಮಂತನು ಯಾವ ಗುಣಗಳನ್ನು ಅಥವಾ ಸದ್ಗುಣಗಳನ್ನು ಸಂಕೇತಿಸುತ್ತಾನೆ?

ಹನುಮಂತನು ಭಕ್ತಿ, ನಿಷ್ಠೆ, ಧೈರ್ಯ, ಶಕ್ತಿ, ನಮ್ರತೆ ಮತ್ತು ನಿಸ್ವಾರ್ಥತೆಯನ್ನು ಸಂಕೇತಿಸುತ್ತದೆ. ಇದು ನಿಮ್ಮ ಸ್ವಂತ ಜೀವನದಲ್ಲಿ ಈ ಸದ್ಗುಣಗಳನ್ನು ಸಾಕಾರಗೊಳಿಸಲು, ವೈಯಕ್ತಿಕ ಬೆಳವಣಿಗೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ ಮತ್ತು ಮಾರ್ಗದರ್ಶನ ನೀಡುತ್ತದೆ

ಅಷ್ಟಾವಕ್ರ. ೮ ವಿಧದ ವಿಕಾರಗಳನ್ನು ಹೊಂದಿರುವ ಮುನಿ

ಅಷ್ಟಾವಕ್ರರು ೮ ಬಗೆಯ ವಿಕಾರದೊಂದಿಗೆ ವಿರೂಪರಾಗಿ ಜನಿಸಿದರೂ ಅದೈತ ಸಿದ್ಧಾಂತದ ಬಗ್ಗೆ ಅವರ ಭೋದನೆಗಳು ತುಂಬಾ ಪ್ರಸಿದ್ಧವಾಗಿದೆ ವೈದಿಕ ಸಿದ್ಧಾಂತದ ಬಗ್ಗೆ ಆಳವಾದ ತಿಳುವಳಿಕೆ ಯುಳ್ಳ ಮಹಾನ್ ಸಾಧಕರು ಹಾಗೂ ಆದ್ಯಾತ್ಮಿಕ ಗುರು. ಇವರ ಅಷ್ಟಾವಕ್ರ ಗೀತವೆಂಬ ಮಹಾಗ್ರಂಥ ದಲ್ಲಿ ಇವರ ಪ್ರತಿಪಾದನೆಯನ್ನು ಕಾಣಬಹುದಾಗಿದೆ.

Quiz

ಶಿವ ತಾಂಡವ ಸ್ತೋತ್ರವನ್ನು ಬರೆದವರು ಯಾರು?
Devotional Music

Devotional Music

ಭಕ್ತಿಗೀತೆಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon