ಆನೆ ಬಂದಿತಮ್ಮ

ಆನೆ ಬಂದಿತಮ್ಮ 
ಮರಿಯಾನೆ ಬಂದಿತಮ್ಮ||ಆನೆ||
ತೊಲಗಿರೆ ತೊಲಗಿರೆ ಪರಬ್ರಹ್ಮ 
ಬಲು ಸರಪಳಿ ಕಡಕೊಂಡು ಬಂತಮ್ಮ||ತೊಲಗಿರೆ||
                          ||ಆನೆ ಬಂದಿತಮ್ಮ||
ಕಪಟನಾಟಕದ ಮರಿಯಾನೆ 
ನಿಕಟ ಸಭೆಯಲಿ ನಿಂತಾನೆ||ಕಪಟ||
ಶಕಟನ ಭಂಡಿಯ ಮುರಿದಾನೇ..ಏ...||2||
ಕಪಟನಾಟಕದಿಂದ ಸೋದರ ಮಾವನ||2||
ಅಕಟಕಟೆನ್ನದೆ ಕೊಂದಾನೆ||2||
                                ||ಆನೆ ಬಂದಿತಮ್ಮ|| 
ಕೀಳು ಭುವನವನು ಉಂಡಾನೆ 
ಸ್ವಾಮಿ ಬಾಲಕನೆಂಬ ಚೆಲುವಾನೆ||ಕೀಳು||
ಬಲ್ಲಗೋವುಗಳ ಕೂಡ ನಲಿದಾನೆ||2||
ಚೆಲುವ ಕಾಳಿಂಗನ ಹೆಡೆಯಲಾಡುತ||2||
ಸೊಬಗು ಹೆಚ್ಚಿದ ಪಟ್ಟದಾನೆ 
ಮದಸೊಕ್ಕಿ ಬರುತಾನೆ
                           ||ಆನೆ ಬಂದಿತಮ್ಮ||
ಭೀಮಾರ್ಜುನರನು ಗೆಲಿಸ್ಯಾನೆ 
ಪರಮಭಾಗವತರ ಪ್ರಿಯದಾನೆ||ಭೀಮ||
ಮುದದಿಂದ ಮಧುರೆಲಿ ನಿಂತಾನೆ||2||
ಮದಮುಖದಸುರರ ದಿಗಿಲಿಟ್ಟುಕೊಂದ||2||
ಪುರಂದರವಿಠ್ಠಲನೆಂಬಾನೆ||2||
                                 ||ಆನೆ ಬಂದಿತಮ್ಮ||
Devotional Music

Devotional Music

ಭಕ್ತಿಗೀತೆಗಳು

Click on any topic to open

Copyright © 2025 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...

We use cookies