ಪ್ರಾಣಾಯಾಮಮಾಡಬೇಕು.
ಆಚಮನದ ನಂತರ ಪ್ರಾಣಾಯಾಮವನ್ನು ಪ್ರಾಣಾಯಾಮವೆಂದರೆ ಪ್ರಾಣವಾಯುವಿನ ನಿರೋಧ ಅಥವಾ ಪ್ರಾಣ ವಾಯುವನ್ನು ದೇಹದಲ್ಲಿ ತಡೆದು ನಿಲ್ಲಿಸುವುದು ಎಂದು ಅರ್ಥವಾಗುತ್ತದೆ.
ಲೋಕದಲ್ಲಿ ದೇಹ ಮತ್ತು ಪ್ರಾಣವಾಯುಗಳ ಸಂಬಂಧವೇ ಜೀವನ, ಶರೀರದಲ್ಲಿ ಪ್ರಾಣವಾಯುವು ಇರುವವರೆಗೆ ಮಾತ್ರ ಮನುಷ್ಯ ಜೀವನ. ಈ ಪ್ರಾಣವಾಯು ಶರೀರದಿಂದ ನಿರ್ಗಮಿಸಿದರೆ ಮರಣ ಸಿದ್ಧ. ಆದ್ದರಿಂದ ದೇಹದಲ್ಲಿ ಪ್ರಾಣವಾಯುವನ್ನು ತಡೆದು ನಿಲ್ಲಿಸಿದಷ್ಟು ಕಾಲವು ಮನುಷ್ಯನು ಬದುಕಿರಲು ಸಾಧ್ಯ. ಇದಕ್ಕೆ ಉಪಾಯವೆಂದರೆ ಪ್ರಾಣಾಯಾಮ, (ಶ್ವಾಸ ಜಪಗಳ ಎಣಿಕೆಯ ಮೇಲೆ ಮಾನವನ ಆಯುಷ್ಯ ಸಿದ್ಧವಾಗಿರುತ್ತದೆ. ಈ ಶ್ವಾಸವನ್ನು (ಪ್ರಾಣ ವಾಯುವನ್ನು) ತಡೆದು ಮಾಡಿದಾಗ ಆಯುಷ್ಯ ಹೆಚ್ಚುವುದು ಸ್ವಾಭಾವಿಕವೇ.)
ಪ್ರಾಣಾಯಾಮವಿಲ್ಲದೇ ಮಂತ್ರ ಜಪ ಮತ್ತು ಪೂಜಾ ಕಾರಕ್ಕೆ ಅರ್ಹತ ಇಲ್ಲವೆಂದು ತಿಳಿಯುವುದು ಅವಶ್ಯಕವಾಗಿದೆ.
ಗುರುಮುಖದಿಂದ ಉಪದಿಷ್ಟವಾದ ರೀತಿಯಲ್ಲಿ ಪ್ರಾಣಾಯಾಮ ಮಾಡಿದರೆ ಸಕಲ ವ್ಯಾಧಿಗಳ ನಿವಾರಣೆ ಆಗುತ್ತದೆ. ಕ್ರಮ ತಪ್ಪಿದ ಪ್ರಾಣಾಯಾಮದಿಂದ ಅನೇಕ ರೋಗಗಳು ಉದ್ಭವಿಸುತ್ತವೆ.
ಪ್ರಾಣಾಯಾಮದ ಮಹತ್ವವನ್ನು ಮನುಸ್ಮೃತಿಯಲ್ಲಿ ವಿವರಿಸಿದ್ದುಂಟು. ಬೆಂಕಿಯಿಂದ ಧಾತುವಿನ ಸರ್ವಮಲವು ಸುಟ್ಟು ಹೋಗುವಂತೆ ಪ್ರಾಣಾಯಾಮದಿಂದ
೧) ಪ್ರಾಣಾಃ ಆಯಂತೇನೇನ ಇತಿ ಪ್ರಾಣಾಯಾಮ | (ಆ + ಯಮ (ಉಪರಮ) ಕರಘಂಪ)
ಪ್ರಾಣವಾಯೋ (ನ್ಯಾಯಕೋಶ)
೨) ಪ್ರಾಣಾಯಾಮ ವಿನಾ ಮಂತ್ರ ಪೂಜನೇ ನಹಿಯೋಗ್ಯತಾ
ಗತಿ ವಿಚ್ಛೇದಕಾರಕ ವ್ಯಾಪಾರ ವಿಶೇಷಃ ಪ್ರಾಣಾಯಾಮಃ |
೩) ಪ್ರಾಣಾಯಾಮೇನ ಯುನ ಸರ್ವರೋಗಕ್ಷಯೋ ಭವೇತ್ | ಅಯುಕ್ತಾಭ್ಯಾಸಯುಕ್ತನ ಸರ್ವರೋಗ ಸಮುರ್ವ |
ಶಾರೀರಿಕ ಮತ್ತು ಮಾನಸಿಕ ದೋಷಗಳೆಲ್ಲ ಹೋಗಿ ತನುಮನಗಳೆರಡೂ ಪವಿತ್ರವೂ, ಪ್ರಸನ್ನ ವೂ, ನಿರ್ವಿಕಾರವೂ ಆಗುತ್ತವೆ.
ಪ್ರಾಣಾಯಾಮದಿಂದ ಆಗುವ ಲಾಭಗಳು ಆರು ವಿಧವಾಗಿವೆಯೆಂದು ಪಾಶ್ಚಾತ್ಯ ವಿಜ್ಞಾನಿಯೊಬ್ಬ ಹೀಗೆ ಹೇಳಿದ್ದಾನೆ.
The advantages of Pränāyāma are six fold namely physical, emotional, intellectual, intutional, creative and volitional.
ಪ್ರಾಣಾಯಾಮ ಕಾಲದಲ್ಲಿ ಗೃಹಸ್ಥ, ವಾನಪ್ರಸ್ಥಾಶ್ರಮಿಗಳು ಐದು ಬೆರಳುಗಳಿಂದ ಓಂ ಮುದ್ರೆಯಿಂದ ಮೂಗನ್ನು ಹಿಡಿಯಬೇಕು, ಯತಿ, ಬ್ರಹ್ಮಚಾರಿಗಳು ಓಂ ಮುದ್ರಾದಿಂದ ಅನಾಮಿಕ ಅಂಗುಷ್ಟ ಬೆರಳುಗಳಿಂದ ಮೂಗನ್ನು ಹಿಡಿಯಬೇಕು.
ಪ್ರಾಣಾಯಾಮ ಇಲ್ಲದೇ ಯಾರು ಸಂಧ್ಯಾವಂದನೆಯನ್ನು ಮಾಡುವರೋ ಅವರು ಎಲ್ಲ ಧರ್ಮತ್ಯಾಗಿಗಳು, ಮಹಾಪಾತಕಿಗಳು ಎಂದೆನಿಸಿಕೊಳ್ಳುತ್ತಾರೆ.*
ಪ್ರಾಣಾಯಾಮದಲ್ಲಿ ರೇಚಕ, ಪೂರಕ, ಕುಂಭಕ ಎಂದು ಮೂರು ಪ್ರಕಾರಗಳುಂಟು ಕನಿಷ್ಠಿಕಾ ಮತ್ತು ಅನಾಮಿಕಾ ಬೆರಳುಗಳಿಂದ ೧೬ ಅಕಿಗಳನ್ನು ಎಣಿಸಲು ಬೇಕಾಗುವ ಸಮಯದವರೆಗೆ ಮೂಗಿನ ಎಡಹೊರಳೆಯನ್ನು ಮುಚ್ಚಿ ಮೂಗಿನ ಬಲಹೊರಳೆಯಿಂದ ದೇಹದಲ್ಲಿದ್ದ ಅಶುದ್ದ ವಾಯುವನ್ನು ಹೊರಗೆ ಹಾಕುವುದಕ್ಕೆ ರೇಚಕ ' ವೆಂದು ಹೆಸರು. ಅಂಗುಷ್ಟದಿಂದ ಮೂಗಿನ ಬಲ ಹೊರಳೆಯನ್ನು ಬಿಗಿಹಿಡಿದು ಮೂಗಿನ ಎಡಹೊರಳೆಯಿಂದ ಶುದ್ದವಾದ ವಾಯುವನ್ನು ೩೨ ಅಂಕಿಗಳನ್ನು ಎಣಿಸಲು ಬೇಕಾಗುವ ಸಮಯದವರೆಗೆ ದೇಹದಲ್ಲಿ ಸ್ವೀಕರಿಸುವ ಕ್ರಿಯೆಗೆ ಪೂರಕ' ಎಂದು ಹೆಸರು.
ಐದೂ ಬೆರಳುಗಳಿಂದ ಎರಡೂ ಮೂಗಿನ ಹೊರಳೆಗಳನ್ನು ಬಿಗಿ ಹಿಡಿದು ೬೪ಅಂಕಿಗಳನ್ನು ಎಣಿಸಲು ಬೇಕಾಗುವ ಸಮಯದವರೆಗೆ ಸುಷುಮ್ನಾ ನಾಡಿಯಲ್ಲಿ
೪) ದಂತೇ ಧ್ಯಾಯಮಾನಾನಾಂ ಧಾತೂನಾಂ ಚ ಯಥಾ ಮಲಾ |
ಶಥೇಂದ್ರಿಯಾಕಾರಿ ದಕ್ಕಂತೇ ದೋಷಾಃ ಪ್ರಾಣಸ್ಯ ವಿಗ್ರಹಾತ್ | (ಮನುಸ್ಮೃತಿ) (೬-೭೧) 5) ಅಂಗುಷ್ಠ ಅನಾಮಿಕಾಭ್ಯಾಂತು ಪ್ರಾಣಾಯಾಮಂ ಯತಿಶ್ಚರೇತ್ ||
(ವಿಶ್ವಾಮಿತ್ರ ಸ್ಮೃತಿ) (೩-೧೬) ೬) ಪ್ರಾಣಾಯಾಮಂ ವಿನಾ ಯಸ್ತು ಸಂಧ್ಯಾವಂದನಮಾಚರೇತ್ |
ಸರ್ವಧರ್ಮ ಪರಿತ್ಯಾಗಿ ಸ ಮಹಾಪಾತಕೀ ಭವೇತ್ |
(ವಿಶ್ವಾಮಿತ್ರ, ಸ್ಮೃತಿ) (೩-೪೦) ೭) ರೇಚಕ ಪೂರಕಶೈವ ಕುಂಭಕಶ್ಚ ತ್ರಿಧಾ ಸ್ಮೃತಃ ||
ತಂತ್ರಸಾರ ಸಂಗ್ರಹ (೪-೫೯) (ಮೂಗಿನ ಬಲ ಹೊರಳೆಯನ್ನು ಮುಟ್ಟಿ ಎಡ ಹೊರಳೆಯಿಂದ ವಾಯುವನ್ನು ಹೊರಗೆ ಹಾಕಬೇಕು ಹೀಗೂ ಸುಪ್ತವಾಯ ಉಂಟು. ಅವರವರ ಗುರುಹಿರಿಯರು ತಿಳಿಸಿದಂತೆ ಮಾಡಲಡ್ಡಿಯಿಲ್ಲ.)
ಪ್ರಾಣವಾಯುವನ್ನು ನಿರೋಧಿಸುವ (ಧಾರಣ ಮಾಡುವ) ಕ್ರಿಯೆಗೆ ಕುಂಭಕ ವೆಂದು ಹೆಸರು.
ಪ್ರಾಣ ನಿರೋಧ ಸಮಯದಲ್ಲಿ ೩೬, ೨೪ ಅಥವಾ ೧೨ ಪ್ರಣವಗಳಿಂದ ಅಥವಾ ೧೦ ಪ್ರಣವ ವ್ಯಾಹೃತಿ, ಗಾಯತ್ರಿಶಿರಸ್ಸು ಇವುಗಳಿಂದ ಕೂಡಿದ ಗಾಯತ್ರಿಯಿಂದ (ಅಂದರೆ ಓಂ ಭೂಃ, ಓಂ ಭುವಃ, ಓಂ ಸ್ವಃ, ಓಂ ಮಹಃ, ಓಂ ಜನು, ಓ ತಪಃ, ಓಂ ಸತ್ಯಂ, ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ಓಂ ಆಪೋ ಜ್ಯೋತೀರಸೋಮೃತಂ ಬ್ರಹ್ಮ ಭೂರ್ಭುವಃ ಸ್ಮರೋಮ್ ಎಂಬ ೭ ವ್ಯಾಹೃತಿ, ೧ ಪ್ರಣವ, ಗಾಯತ್ರಿ ಶಿರಸ್ಸುಗಳಿಂದ ಕೂಡಿದ ಗಾಯತ್ರಿಯಿಂದ), ಮಲತ್ರಯರಹಿತ ಪ್ರಾಣಾಯಾಮವನ್ನು ಮಾಡಬೇಕು.
ಈ ಪ್ರಾಣಾಯಾಮವು ಸಗರ್ಭ ಪ್ರಾಣಾಯಾಮ ಮತ್ತು ಅಗರ್ಭ ಪ್ರಾಣಾಯಾಮವೆಂದು ಎರಡು ವಿಧವಾಗಿದೆ.
ಪ್ರತ್ಯೇಕವಾಗಿ ಓಂಕಾರಗಳಿಂದ ಸಹಿತವಾದ ವ್ಯಾಹೃತಿ ಮಂತ್ರಗಳ ಜೊತೆಗೆ ಶಿರೋಯುಕ್ತವಾದ ಗಾಯತ್ರಿ ಮಂತ್ರವನ್ನು ಮನಸ್ಸಿನಲ್ಲಿ ಉಚ್ಚಾರ ಮಾಡಿ ಅದರ ಅರ್ಥವನ್ನು ಅನುಸಂಧಾನಮಾಡುತ್ತಾ ಐದು ಬೆರಳುಗಳಿಂದ ಎರಡೂ ಮೂಗಿನ ಹೊರಳೆಗಳನ್ನು ಮುಚ್ಚಿ ಪ್ರಾಣಬಂಧನ (ಪ್ರಾಣವಾಯು ನಿರೋಧಿಸುವುದಕ್ಕೆ ಮಾಡುವುದಕ್ಕೆ ಸಗರ್ಭ' ಪ್ರಾಣಾಯಾಮವೆಂದು ಹೆಸರು. ಮಂತ್ರಾರ್ಥದ ಸ್ಮರಣೆ ಇಲ್ಲದೇ ಮಾಡಲ್ಪಡುವ ಪ್ರಾಣಬಂಧನ ಕ್ರಿಯೆಗೆ ಅಗರ್ಭ 'ಪ್ರಾಣಾಯಾಮ' ವೆಂದು ಹೆಸರು.
ಪ್ರಾಣಾಯಾಮದ ಸರಿಯಾದ ಅನುಷ್ಠಾನದಿಂದ ಮಹಾಪಾತಕಗಳ ನಾಶ, ಮಹಾರೋಗಗಳ ನಿವಾರಣೆ, ದಾರಿ ದುಃಖಾದಿಗಳ ನಾಶವೂ ಕೂಡ ಆಗುತ್ತದೆಂದು ವಿಶ್ವಾಮಿತ್ರ ಸ್ಕೃತಿಯಲ್ಲಿ ಹೇಳಲ್ಪಟ್ಟಿದೆ.
ಸಂಧ್ಯಾವಂದನೆಯ ಪ್ರಾರಂಭದಲ್ಲಿ ಮತ್ತು ಅರ್ಪ್ಪು ಕೊಡುವ ಕಾಲದಲ್ಲಿ, ಒಂದೊಂದು ಸಲ ಪ್ರಾಣಾಯಾಮ ಮಾಡಬೇಕು. ಗಾಯತ್ರೀಜಪದ ಆದಿಯಲ್ಲಿ ಸಮಾಪ್ತಿ ಕಾಲದಲ್ಲಿ ಮೂರು ಮೂರು ಸಲ ಪ್ರಾಣಾಯಾಮ ಮಾಡಬೇಕು
೮) ಮಲತ್ರಯಗಳು ೧. ಪ್ರಾಣಾನಾಮ್ ಅವಶತ್ವಮ್ , ೨, ಇಂದ್ರಿಯಾಣಾಮ್
ಏಷಯಾಭಿಮುಖತ್ವಂ, ೩. ಮನಸೋ ನವಸ್ಲಿತಿತ್ವಮ್, ೯) ತಾರೈಸಿದ್ದಾದಶ ಆವೃರ್ತ್ಕ ದ್ವಾದಶಕೇನ ವಾ |
ತತ್ವನ್ಮಂತ್ರೇಣ ವಾ ಕಾರ್ಯೋ ಗಾಯತ್ಯಾ ದಶತಾರಕ್ಕೆ! |||
ತಂತ್ರಸಾರ ಸಂಗ್ರಹ (೨-೫) | ೨) ಮಹಾಪಾತಕನಾಶಾಯ ಮಹಾರೋಗ ಆಯಾಯ ಚ |
ದುಃಖ ದಾರಿದ್ರನಾಶಾಯ ಪ್ರಾಣಾಯಾಮ ಫಲಂ ವಿದು! || (೩-೪೦೭) ೧೧) ಸಂಧ್ಯಾದಾಮರ್ಥ್ಯದಾನೇ ಚ ಪ್ರಾಣಾಯಾಮೈಕಮಾಚರೇತ್ |
ಆದಾವತ ಚ ಗಾಯತ್ಯಾ ಪ್ರಾಣಾಯಾಮಾಸ್ಮಯಸ್ಮಯ |


Ramaswamy Sastry and Vighnesh Ghanapaathi

Copyright © 2024 | Vedadhara | All Rights Reserved. | Designed & Developed by Claps and Whistles
| | | | |