ಗೋವು - ಪರಿಚಯ
ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಅತಿಮಹತ್ವದ ಸ್ಥಾನವಿದೆ. ಗೋವು ಸರ್ವದೇವತೆಗಳ ಆವಾಸ ಸ್ಥಾನವಾಗಿದೆ. ಹಾಗಾಗಿ ಗೋವಿಗಿಂತ ಪೂಜ್ಯತಮ ಪ್ರಾಣಿ ಇನ್ನೊಂದಿಲ್ಲ. ಉಪಯುಕ್ತತೆಯಲ್ಲಿಯೂ ಇದರ ಸಮಾನವಾದ ಪ್ರಾಣಿ - ಬೇರೊಂದಿಲ್ಲ. ಗೋವಿನ ಹಾಲು, ಮೊಸರು, ತುಪ್ಪ ಅಷ್ಟೇ ಏಕೆ ಅದರ ಮಲ ಮೂತ್ರಗಳೂ ಪರಮ ಪಾವನವಾಗಿವೆ. ಇವುಗಳಿಲ್ಲದೇ ದೇವ, ಪಿತೃ ಕಾರ್ಯಗಳು ನಡೆಯುವುದೇ ಇಲ್ಲ.
- ದೇವರ ಮನೆಯನ್ನು ಗೋಮಯ (ಗೋವಿನ ಶಗಣಿ) ದಿಂದ ಹಾರಿಸುವುದಿದೆ. ನೆಲವನ್ನು ಕೂಡ ಗೋಮಯದಿಂದ ಸಾರಿಸಿದರೆ ಮಾತ್ರ ಶುದ್ಧಿಯು ಏರ್ಪಡುತ್ತದೆ. ಅಂದರೆ ಭೂಮಿಯು ಈ ಗೋವಿನ ಶಗಣಿಯಿ೦ದ ಪವಿತ್ರವೆನಿಸುತ್ತದೆಯಾದ್ದರಿಂದ ಗೋವಿನ ಮಹಿಮೆ ಅಪಾರ.
ಗೋವಿನ ಹಾಲು, ಮೊಸರು, ತುಪ್ಪ, ಶಗಣಿ, ಮೂತ್ರ ಇವುಗಳ ಸಮೂಹಕ್ಕೆ ಪಂಚಗವ್ಯ ವೆಂದು ಹೆಸರು. ಇದನ್ನು ಮಂತ್ರಸಹಿತವಾಗಿ ಯೋಗ್ಯ ಪ್ರಮಾಣದಲ್ಲಿ ಸೇರಿಸಿ ಸೇವಿಸಿದಾಗ ಅದು ಮಾನವನಿಗೆ ದೇಹ ಶುದ್ದಿಯನ್ನು ತಂದುಕೊಟ್ಟು ಎಲ್ಲ ಪಾಪಗಳನ್ನು ನಾಶಪಡಿಸುತ್ತದೆ.
ಗೋಮೂತ್ರವು ಜಠರಾಗ್ನಿಯನ್ನು ಉದ್ದೀಪನಗೊಳಿಸಿ ಅಗ್ನಿಮಾಂದ್ಯ ದೋಷವನ್ನು ಕಳೆಯುತ್ತದೆ. ಗೋಮಯವು ಕ್ರಿಮಿನಾಶಕವೆನಿಸಿದೆ. ಗೋಘ್ನತ (ತುಪ್ಪ) ವು ಬುದ್ದಿ ಶಕ್ತಿಗೂ, ಜ್ಞಾನ ಶಕ್ತಿಗೂ ಉಪಯುಕ್ರವೆನಿಸಿ ಆಯುರ್ವಧ್ರಕವಾಗಿದೆ. ಗೋಕ್ಷೀರ (ಹಾಲು) ವನ್ನು ಶಿಶುಗಳಿಗೆ ಹಾಕುತ್ತಾರೆ. ಅದು ಸುಲಭವಾಗಿ ಜೀರ್ಣವಾಗುತ್ತದೆ. ಗೋಮಯದಿಂದ ಬಯೋಗ್ಯಾಸ್ ಉತ್ಪತ್ತಿ ಮಾಡಿ ದೀಪ, ಅಡಿಗೆಗಳನ್ನು ಮಾಡಬಹುದಾಗಿದೆ.
ಗೋವುಗಳು ಎಬ್ಬಿಸುವ ಧೂಳಿಯ ಕಾಲವು ಗೋಧೂಳಿ ಲಗ್ನ ಎನಿಸಿ ಅದು ಪ್ರಶಸ್ತಕಾಲವಾಗಿದೆ. ಗೋಧೂಳಿಯಲ್ಲಿ ಹಾಯು ಬರುವಿಕೆಯು ವಾಯವ್ಯಸ್ನಾನ ವೆನಿಸಿ ಪವಿತ್ರ ಸ್ಥಾನವಾಗಿದೆ. ಗೋಮೂತ್ರ ಸ್ನಾನವು ಗಂಗಾ ಸದೃಶ ಸ್ನಾನವಾಗಿದೆ. ಇದರಿಂದ ಹತ್ತು ಜನ್ಮಗಳ ಪಾಪವು ನಾಶವಾಗುತ್ತದೆ. ಕಪಿಲಾ ಗೋವಿನ ಪ್ರದಕ್ಷಿಣೆಯು ಭೂಪ್ರದಕ್ಷಿಣೆಯ ಪುಣ್ಯ ದೊರಕಿಸಿಕೊಡುತ್ತದೆ. ಗೋವಿನ ಜೊತೆ ವಾಸ ಭಗವಂತನಿಗೆ ಅತಿ ಪ್ರೀತಿಕರವೆನಿಸಿದೆ. ಗೋವಿನ ಮೈಮೇಲೆ ಕೈಯಾಡಿಸಿ, ಅದರ ಮೈ ತುರಿಸಿದರೆ ತೀರ್ಥಯಾತ್ರೆ ಮಾಡಿದ ಫಲ ಬರುತ್ತದೆ.
ತಾಯಿಯನ್ನು ಕೂಗಿ ಕರೆಯುವ ಸಂಸ್ಕೃತ ಶಬ್ದವು ಅಂಬಾ ಎಂದಾಗಿದೆ. ಇಂದು ತಾಯಿಯನ್ನು ಕೂಗಿ ಕರೆಯಲು ಈ ಶಬ್ದ ವನ್ನು ಉಪಯೋಗಿಸಿ ಭಾರತೀಯ ಸಂಸ್ಕೃತಿಯನ್ನು ಸಾರುವ ಏಕೈಕ ಪ್ರಾಣಿಯೆಂದರೆ ಗೋವು ಮಾತ್ರ ಎಂದು ಹೇಳಿದರೆ ತಪ್ಪಾಗದು. ಗೋವು ಅಂಬಾ ಎಂದು ಉಚ್ಚರಿಸಿದಾಗ ಅದು ಎಷ್ಟು ದೂರ ಕೇಳಿಸುವುದೋ ಆ ದೂರಕ್ಕೆ ಗವ್ಯೂತಿ ಎಂದು ಕರೆಯುತ್ತಾರೆ.
ಕೊ ರಸೋ ಗೋರಸಂ ವಿನಾ ? (ಗೋರಸವಿಲ್ಲದ ಭೋಜನಕ್ಕೆ ರಸವೆಂತಹುದು ?) ಎಂಬ ಸಂಸ್ಕೃತಗಾದೆ ಗೋದ್ರವ್ಯಗಳ ಮಹತ್ವಕ್ಕೆ ಸಾಕ್ಷಿಯಾಗಿ ನಿಂತಿದೆ. ಗೋವು ಸಜ್ಜನ ವೃಂದಕ್ಕೆ ಹಾಲುಕುಡಿಸಿ ಪೋಷಿಸುವ ಪರೋಪಕಾರಿಯಾದ ಪ್ರಾಣಿಯಾದುದರಿಂದ ಗೋವಿಗೆ ಧೇನು ಎಂಬ ಹೆಸರು ಬಂದಿದೆ. (ಥೇಟ್ ಪಾನೇ, ಧಾಳಿ - ಧಾರಣ ಪೋಷಣಃ ಉತ್ಪತ್ತಿಯಿಂದ ಇದು ತಿಳಿದು ಬರುತ್ತದೆ).
ಗೋವನ್ನು ಸ್ತುತಿಸುವ ಮಂತ್ರಗಳು ಋಗೈದದಲ್ಲಿವೆ. ಗೋಮಾತೆ ಏಕಾದಶರುದ್ರರ ತಾಯಿ, ಅಷ್ಟವಸುಗಳ ಮಗಳು, ದ್ವಾದಶಾದಿತ್ಯರ ಒಡಹುಟ್ಟಿದವಳು ಎಂಬುದಾಗಿ ತಿಳಿದುಬರುತ್ತದೆ. ಗೋವು ಅಮೃತದ ಸೋತಸ್ಸು, ಅದಿತಿ ಸ್ವರೂಪಿಣಿಯಾದ ಇವಳಲ್ಲಿ ಪಾಪದ ಸಂಬಂಧ ಸ್ವಲ್ಪವೂ ಇಲ್ಲ. ಅವಳನ್ನು ಹಿಂಸಿಸಕೂಡದು.!
ನೂತನ ಗೃಹ ಪ್ರವೇಶ ಮಾಡುವಾಗ ಮೊದಲು ಗೋಪ್ರವೇಶವನ್ನು ಮಾಡಿಸುವುದು ವಿಹಿತವಾಗಿದೆ. ಇದರಿಂದ ಸಂಪತ್ತು ಲಭಿಸುವುದೆಂದು ಹೇಳುವುದಿದೆ.
ನಿತ್ಯದಲ್ಲಿ ಪ್ರತಿಯೊಬ್ಬರೂ ನೈವೇದ್ಯ, ವೈಶ್ವದೇವ ಮಾಡಿ ತುಳಸೀ ಭಾಗೀರಥಿ, ಪೂಜೆ ಮಾಡಿ ನೈವೇದ್ಯಕೊಟ್ಟು ನಂತರ ಗೋಗ್ರಾಸ ಕೊಡಬೇಕು.
ಸುರಭೀ ವೈಷ್ಣವೀ ಮಾತಾ ನಿತ್ಯಂ ವಿಷ್ಣು ಪದಾಶ್ರಿತಾ | ಗೋಗ್ರಾಸಸ್ತು ಮಯಾದತ್ತ: ಸುರಭಿಃ ಪ್ರತಿಗೃಹ್ಯತಾಂ ||
ಗವಾಂತರ್ಯಾಮಿ ಶ್ರೀಗೋಪಾಲಕೃಷ್ಣ: ಪ್ರೀಯತಾಂ || ಎಂದು ಹೇಳಬೇಕು.
ಅನೇಕ ಪಾಪಗಳ ಪರಿಹಾರಕ್ಕಾಗಿ ಗೋದಾನ ಮಾಡುವುದು ವಿಹಿತವಾಗಿದೆ. ಗೋದಾನ ಮಾಡಿದವರು ಯಮಲೋಕದ ವೈತರಣೀ ನದಿಯನು ಸುಲಭವಾಗಿ ದಾಟುವರೆಂದು ಗರುಡ ಪುರಾಣದಲ್ಲಿ ತಿಳಿಸಲಾಗಿದೆ.
ಪೂರ್ವಕಾಲದಲ್ಲಿ ಗೋವುಗಳೇ ಧನಸ೦ಪತ್ತು ಎನಿಸಿದ್ದವು. ಗೋಧನವೆಂದೇ ಅವುಗಳನ್ನು ಕರೆಯುತ್ತಿದ್ದರು. ಬ್ರಾಹ್ಮಣರಿಗೆ ಧನವನ್ನು ದಾನ ಮಾಡುವಾಗ ಗೋವುಗಳನ್ನೇ ಕೊಡುತ್ತಿದ್ದರಂತೆ.
ಗೋವುಗಳ ಸ್ಥಾನದಲ್ಲಿ ವಾಸಿಸುವುದು ಮಹಾ ಪುಣ್ಯಕರ, ಅಂತೆಯೇ ನನ್ನ ಮುಂದೆ ಗೋವುಗಳಿರಲಿ, ನನ್ನ ಹಿಂಬದಿಯಲ್ಲಿ ಗೋವುಗಳಿರಲಿ, ನನ್ನ ಮನದಲ್ಲಿ ಗೋವು ನೆಲೆಸಿರಲಿ, ಅವುಗಳ ನಡುವೆ ವಾಸಿಸುವ ಭಾಗ್ಯ ನನಗಿರಲಿ, ಎಲ್ಲ ಜೀವರಾಶಿಗಳ ಸಂಪತ್ತು ಗೋವೆನಿಸಿದೆ. ದೇವತಾ ಕಾರ್ಯದ ಸಂಪತ್ತು ಸಹ ಇದೇ ಆಗಿದೆ. ಅಂತಹ ದೇವಿಯು ಧೇನುರೂಪದಿಂದ ನನ್ನನ್ನು ರಕ್ಷಿಸಲಿ. ನನ್ನ ಪಾಪಗಳನ್ನು ಕಳೆಯಲಿ ಎಂಬುದಾಗಿ ನಿತ್ಯದಲ್ಲಿ ಪ್ರಾರ್ಥಿಸಬೇಕು.
* ಒಟ್ಟಿನಲ್ಲಿ ನಿತ್ಯದಲ್ಲಿ ಮಾಡುವ ಗೋಪೂಜೆ, ಗೋಸೇವೆಗಳು ಸಮಸ್ತ ಫಲದಾಯಕವೂ, ಜ್ಞಾನ ಭಕ್ತಾದಿಗಳ ವರ್ಧಕವಾಗಿವೆ. ಕಾರಣ ಪ್ರತಿಯೊಬ್ಬರೂ ತಪ್ಪದೇ ಪೂಜಾದಿಗಳನ್ನು ಆಚರಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕು.
Ganapathy
Shiva
Hanuman
Devi
Vishnu Sahasranama
Mahabharatam
Practical Wisdom
Yoga Vasishta
Vedas
Rituals
Rare Topics
Devi Mahatmyam
Glory of Venkatesha
Shani Mahatmya
Story of Sri Yantra
Rudram Explained
Atharva Sheersha
Sri Suktam
Kathopanishad
Ramayana
Mystique
Mantra Shastra
Bharat Matha
Bhagavatam
Astrology
Temples
Spiritual books
Purana Stories
Festivals
Sages and Saints
Bhagavad Gita
Radhe Radhe