ಈ ಮೂಲಗ್ರಂಥ ಕರ್ತಗಳಾದ ಶ್ರೀ ಜಗನ್ನಾಥದಾಸರಾಯರು ತಾವು ಮಾಡಿದ ಗ್ರಂಥದ ಹೆಸರನ್ನು ಹೇಳಿ, ಆ ಗ್ರಂಥದಲ್ಲಿ ಆದರ ಮಾಡಬೇಕೆಂದು ಭಕ್ತರ ಪ್ರಾರ್ಥನಾ ಮಾಡುತ್ತಾರೆ, ಮತ್ತು ಈ ಗ್ರಂಥಕ್ಕೆ ಅಧಿಕಾರಿಗಳನ್ನು ಹೇಳದ್ದಾರೆ.
ಟೀಕಾ :
ಹರಿ-ಪಾಪಪರಿಹಾರಕನಾದ ಸರ್ವೋತ್ತಮನಾದ ಶ್ರೀ ಪರಮಾತ್ಮನ, ಕಥಾಸೃಷ್ಟಾದಿ ವ್ಯಾಪಾರರೂಪವಾದ ಕಥಾವ್ಯಂಬ, ಅಮೃತ-ಅಮೃತದಲ್ಲಿ ತೆಗೆಯಲ್ಪಟ್ಟ, ಸಾರ-ಅಧ್ಯಾತ್ಮರೂಪವಾದ ಅನುಸಂಧಾನಾಖ್ಯಸಾರವೆಂಬ ಎಂದರೆ ಶ್ರೀದೇವರ ಪ್ರಸ್ತಾಪ, ಶ್ರವಣ ಅಮೃತಕ್ಕೆ (ಮೋಕ್ಷಕ್ಕೆ) ಮುಖ್ಯ ಸಾಧನ. ಶ್ರೀ ಹರಿಕಥೆಯೇ ದೇವಗುಣಾನು ವರ್ಣನ ಅಮೃತಕ್ಕಿಂತ ರಸಜ್ಞರಿಗೆ ರುಚಿಕರ. * ವಧಿ ಮಧುರ, ಮಧು ಮಧುರಂ, ದ್ರಾಕ್ಷಾ ಮಧುರಾ, ಸುಧಾಪಿ ಮಧುರೈವ | ಮಧುರಾದಪಿ ತನ್ಮಧುರಂ ಮಧುರಾನಾಥಸ್ಯ ನಾಮ ಯದ್ದೀತಂ ||' ಎಂಬುವುದೇ ಮೊದಲಾದ ಅರ್ಥಗಳು ತಿಳಿಯುತ್ತವೆ. ದೇವರ ಸ್ವರೂಪ ಪ್ರತಿಪಾದಕವಾದ ವೇದಾದಿ ಹರಿಕಥೆಯೇ ಮೋಕ್ಷದಲ್ಲಿಯ ಸಾರ, ಸಾಮಗಾನ ದಿಂದ ಆನಂದೋದ್ರೇಕವಾಗುವದ್ದರಿಂದ ಮುಖ್ಯವೆಂದು 'ಏತತ್ಸಾಮಗಾಯನ್ನಾ' ಎಂಬ ಶ್ರುತ್ಯಾದಿಗಳಿಂದ ಜ್ಞಾತವಾಗುತ್ತದೆ. ಇಂತಹ ಗ್ರಂಥವನ್ನು, ಗುರುಗಳ ಕರುಣದಿಂದ
ಸಚ್ಚಾಸ್ಪೋಪದೇಶಕ ಗುರುಗಳ ತಥಾ ಜಗದ್ಗುರುಗಳಾದ ಶ್ರೀ ಮಧ್ವಾಚಾರ್ಯರ ಇನ್ನೂ ತಶರೇ ಮೊದಲಾದ ಗುರುಗಳ ಅಧೀನವಾದ್ದರಿಂದ ತಮ್ಮ ಹೇಳುವಿಕೆ ಕರ್ತತ್ವ ಬಹುಪರಾಧೀನವೆಂದು ಅರ್ಥ. ಇವರುಗಳ ಅನುಗ್ರಹ ಬಲದಿಂದ, ಆಸನಿತು-ಬುದ್ದಿಗೆ ತೋರಿದಷ್ಟು ಎಂದರೆ
& ಆಚಕ್ಷ ಆತ್ಮಾವಗಮೋತ್ರ ಯಾವಾನ್ ! ನಭಃ ಪತಂತ್ಯಾತ್ಮಸಮಂ ಪತಿಣಃ |
ತಥಾ ಸಮಂ ವಿಷ್ಣು ಗತಂ ವಿಪಶ್ಚಿತಃ || ೫ ಎಂತ ಯಥಾಶಕ್ತಿ ಪಕ್ಷಿಗಳು ಅ೦ತರಿಕ್ಷದಲ್ಲಿ ಹಾರುವುವೋ ಹಾಗೆ ತಮ್ಮ ತಮ್ಮ ಜ್ಞಾನತಾರತಮ್ಯಾನುಸಾರ ದೇವರ ಗುಣ ವರ್ಣಿಸುವರು ಜನರು ಎಂಬ ಭಾಗವತಾರ್ಥ ಇರುವದರಿಂದ, ಯಥಾವತಿ, ಪೇಳುವನಾಗುತ್ತೇನೆ. ಪರಮ ಭಗವದ್ಭಕ್ತರು ' ನಾನ್ಯಥಾ ಹ್ಯಾನಯೋರರ್ಥೋ ರಾಜಸೇವಕಯೋರಿವ' ಎ೦ಬ೦ತೆ ಪರಸ್ಪರ ಫಲಾಪೇಕ್ಷೆಯುಳ್ಳ' ದೊರೆ ಮತ್ತು ಆಳಿನ ಹಾಂಗೂ ಕಾರ್ಯಸಾಧನಾಪೇಕ್ಷೆ ಇಲ್ಲದೇ, ಮೋಡವಿದ್ದುದಕ್ಕೆ ಮಯೂರ ಕುಣಿವಂತೆ ಸ್ವಾಭಾವಿಕ ನಿಷ್ಕಾಮುಕರಾದ ಭಕ್ತರೇ ಈ ಗ್ರಂಥಾಭ್ಯಾಸಕ್ಕೆ ಅಧಿಕಾರಿಗಳು. ಇಂಥಾ ಭಕ್ತರು, ಇದನ-ಈ ಹರಿಕಥಾಮೃತಸಾರಾಖ್ಯ ಗ್ರಂಥವನ್ನ, ಪರಮಾದರದಿ-ವಿಶ್ವಾಸಾತಿಶಯ, ಮುಖೋಲ್ಲಾಸಾದಿಗಳಿಂದ, ಕೇಳು ಇದು-ಕೇಳೋಣರಾಗಬೇಕು ಎಂತು ತಾತ್ಪರ್ಯ:
ಹೀಗೆ ಪರಮತ ನಿರಾಕರಣ, ಸ್ವಮತ ಸ್ಥಾಪನ ಸಂಕ್ಷೇಪದಿಂದ ಪ್ರತಿಜ್ಞಾ ವಾಕ್ಯವೆಂತ, ಸಂಧಿ ಸೂಚನೆಯೆಂದು ಸಹಕರಿಸುವ ಅರ್ಧ ಪದ್ಯದಲ್ಲಿ ಹೇಳಿ ' ಸಂಕ್ಷೇಪ ವಿಸ್ತಾರಾಭ್ಯಾಂ ಚ ಕಥಯಂತಿ ಮನೀಷಿಣಃ ' ಎಂಬ ನ್ಯಾಯಾನುಸಾರ ನಾಂದೀ ಸಂಧಿಯೆಂಬ ನಿರ್ವಿಘ್ನ ಪ್ರಚಯಾದ್ಯನೇಕ ಫಲಪ್ರದವಾದ ಮಂಗಳಾಚರಣ ಸಂಧಿಯಲ್ಲಿ ಶ್ರೀ ಪರಮಾತ್ಮನಾರಭ್ಯ ಸಕಲ ದೇವತೆಗಳು, ವಿಷ್ಣು ಭಕ್ತರು ಇವರುಗಳನ್ನು ಸ್ತೋತ್ರಮಾಡಿ ಗ್ರಂಥ ಉಪಕ್ರಮ ವನ್ನು ಮಾಡತಾರೆ.
ಶ್ರೀ ರಮುಣಿ ಕರಕಮಲಪೂಜಿತ | ಚಾರುಚರಣ ಸರೋಜ ಬ್ರಹ್ಮ ಸ] ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖ ವಿನುತ | ನೀರಜ ಭವಾಂಡೋದಯಸ್ಥಿತಿ| ಕಾರಣನ ಕೈವಲ್ಯದಾಯಕ | ನಾರಸಿಂಹನೆ ನಮಿಪೆ ಕರುಣಿಪುದೆನಗೆ ಮಂಗಳವ || ೧ || ಇಷ್ಟದೇವತೆಯೂ, ಗ್ರಂಢಪ್ರತಿಪಾದ್ಯ ದೇವತೆಯೂ ಆದ ಗುಣಪೂರ್ಣನಾದ, ಶ್ರೀ ನರಸಿಂಹದೇವರನ್ನು ವಂದನ ಮಾಡಿ ಪ್ರಾರ್ಥನೆ ಮಾಡತಾರೆ.
ಶ್ರೀಕಾಂತಿಸಂಪನ್ನಳಾದ, ಐಶ್ವರ್ಯಪೂರ್ಣಳಾದ, ರಮಣಿ-ಶ್ರೀ ನಾರಾಯಣ ದೇವರಿಗೆ ರಮಣಿಯಾಗಿವುಳ್ಳ, ಲಕ್ಷ್ಮೀದೇವಿಯರ, ಕರಕಮಲ-ಕರಗಳೆಂಬ ಕಮಲದ್ವಯ ಗಳಿಂದ ಪೂಜಿತ ಪೂಜಿತನಾದನ, ಅಂದರೇ ರಮಾದೇವಿಯರು ತಮ್ಮ ಕರಗಳನ್ನು ಸದಾ ಪರಮಾತ್ಮನ ಪಾದಸೇವೆಯಲ್ಲೇ ಉಪಯೋಗಿಸತಾರೆಂದು ತಾತ್ಪರ್ಯ. ಶ್ರೀ ಪರಮಾತ್ಮ ನಾದರೋ ಸರ್ವಸೇವಾ ರಾದ್ವಾರಾ ಸ್ವೀಕರಿಸತಕ್ಕವ, ಮತ್ತು ಪ್ರಳಯಕಾಲದಲ್ಲಿಯೂ, ಶುದ್ಧ ಲಕ್ಷ ತ್ಮಕ ಶ್ರೀ ಭಾಗದಲ್ಲಿಯೂ ರಮಾದೇವಿಯರಿಂದಲೇ ಸೇವಿತನಾದವ. ಅನ್ಯರಿಂದ ಸೇವಿತನಲ್ಲ. ಇ೦ಥಾ ಪೂಜಿತವಾದ, ಚಾರು ಮನೋಹರವಾದ, ಚರಣಸರೋಜ ಚರಣಕಮಲಗಳುಳ್ಳವ (ಕಮಲವತು ಪಾದಗಳೆಂದು ತಾತ್ಪರ್ಯ) ಬ್ರಹ್ಮ ಚತುರ್ಮುಖ ಬ್ರಹ್ಮದೇವರು, ಸಮೀರ- ಪ್ರಧಾನವಾಯುದೇವರು, ವಾಣಿ ಸರಸ್ವತೀ ದೇವಿಯರು, ತಥಾ ಭಾರತೀದೇವಿಯರು, ಫಣೀಂದ್ರ ಸರ್ವಶ್ರೇಷ್ಠನಾದ ಶೇಷದೇವರು, ವೀಂದ್ರ-ಪಕ್ಷಿಶ್ರೇಷ್ಠನಾದ ಗರುಡದೇವರು, ಭವೇಂದ್ರ ಏಕಾದಶರುದ್ರರೊಳಗೆ ಶ್ರೇಷ್ಠನಾದ, ಪಾರ್ವತೀಪತಿಯಾದ ರುದ್ರದೇವರು, ಮುಖ-ಇವರೇ ಮೊದಲಾದ ಸಮೂಹಗಳಿಂದ, ವಿನುತ ಸ್ತುತನಾದವ. ಪೂರ್ವೋಕ್ತಪ್ರಕಾರ ಪಾದಸೇವಾ ಇವರಿಗಿಲ್ಲ. ಆ ಸ್ಥಾನದಲ್ಲಿ ಇವರಿಗೆ ಪ್ರವೇಶವಿಲ್ಲ. ಇಂಥಾ ಪಾದಸೇವಾವುಳ್ಳವನೆಂದು ಸ್ತುತಿಮಾತ್ರವೇ. ಮತ್ತು ಅಂಡದ ಹೊರಗೆ ಬ್ರಹ್ಮಾದಿ ದೇವತೆಗಳ ಸೃಷ್ಟಿಸಿದ ಅನಂತರ ತಮ್ಮಗಳಿಗೆ ಆವಾಸಸ್ಥಾನ ಗಳು ಬೇಕೆಂದು ಸ್ತುತಿಸೋವರಾದರು. ಆದ್ದರಿಂದ ತದ್ವಿವಕ್ಷಯಾ ಬ್ರಹ್ಮಾದಿಗಳಿಂದ ವಿನುತ, ಪಾದಸೇವಾ ಸ್ತುತ್ಯ ಎಂಬ ಎರಡು ವಿಶೇಷಣಗಳು. ಪ್ರಳಯಕಾಲದಲ್ಲಿ ರಮಾದೇವಿಯರಿಂದ ಪಾದಸೇವಿತನಾಗಿ, ಬ್ರಹ್ಮಾದಿಗಳಿಂದ ವಿನುತನಾದವನಾಗಿ, ಈ ಬ್ರಹ್ಮಾದಿಗಳಿಗೆ ಆವಾಸಕ್ಕೆ ಯೋಗ್ಯವಾದ, ನೀರಜ ಉದಕದಲ್ಲಿ ಉತ್ಪನ್ನವಾದ ಕಮಲ, ಭವಾಂಡ-ಇದರಲ್ಲಿ ಉತ್ಪನ್ನ ನಾದವ ಬ್ರಹ್ಮ, ಇವನ ದೇಹ, ಇದಕ್ಕೆ ಬ್ರಹ್ಮಾಂಡ ಎಂದು ಸಾಂಕೇತ. ಇಂಥ ಬ್ರಹ್ಮಾಂಡ ವನ್ನು, ಉದಯ ಸೃಷ್ಟಿಮಾಡೋದಕ್ಕೇನು ಮತ್ತು ಸ್ಥಿತಿ ಪಾಲನಮಾಡೋದಕ್ಕೇನು, ಕಾರಣನೆ-ಮುಖ್ಯ ಕಾರಣನಾದವನೇ, ಕೈವಲ್ಯದಾಯಕ-ಕೈವಲ್ಯ ಎಂಬುದು ಪ್ರಳಯ ಕಾಲದಲ್ಲಿ ಆಗತಕ್ಕದ್ದಾದ್ದರಿಂದ, ಕೈವಲ್ಯ ಶಬ್ದದಿಂದ ಪ್ರಳಯವನ್ನೂ ಹೇಳಿದಂತಾಯಿತು. ಸೃಷ್ಟಿ, ಸ್ಥಿತಿ, ಲಯ, ನಿಯಮನ, ಜ್ಞಾನ, ಅಜ್ಞಾನ, ಬಂಧ, ಮೋಕ್ಷಪ್ರದಾತೃವಾದ, ನಾರಸಿಂಹನೇ ಹೇ ನಾರಸಿಂಹರೂಪಿಯಾದ ಶ್ರೀ ಪರಮಾತ್ಮನೇ, ನಮಿಪೆ-ಸಾಷ್ಟಾಂಗ ವಂದನ ಮಾಡುವೆ. ಎಮಗೆ ನಿಮ್ಮ ಪಾದ ನಂಬಿದ ನಮಗೆ, ಮಂಗಳವ - ಅಹಂ ಮಮತಾದಿ ಅಮಂಗಳವ ಬಿಡಿಸಿ, ದಿವ್ಯಜ್ಞಾನವನ್ನೂ, ಐಶ್ವರ್ಯವನ್ನೂ, ಶುಭವನ್ನೂ, ಕರುಣಿಪುದು-ಕರುಣದಿಂದ ಕೊಡೋವನಾಗು ಎಂತ ಅರ್ಥ, ಪ್ರತ್ಯಕ್ಷವಾಗಿರುವ ಪ್ರಪಂಚಕ್ಕೆ ಸೃಷ್ಟಿಲಯಾದಿಗಳು ಮನುಷ್ಯಯತ್ನ ಮಾತ್ರ ಸಾಧ್ಯವಲ್ಲದ್ದಾಗಿರುವದ್ದರಿಂದ ವಿವೇಕಿಗಳಿಗೆ ಈ ಜಗತ್ಕಾರಣವಸ್ತು ಒಂದು ಇದೆ ಎಂದು ತಿಳಿದುಬರುತ್ತದೆ. ಆ ವಸ್ತುವೇ ಪರಬ್ರಹ್ಮಪದವಾಚ್ಯನಾದ ತಾರತಮೋಪೇತ ಸರ್ವರಿಂದಲೂ ಅತ್ಯುತ್ತಮ ನಾದ, ಶ್ರೀ ನಾರಸಿಂಹಾಭಿನ್ನ ಶ್ರೀ ನಾರಾಯಣದೇವರು. ಇವನನ್ನು ನಿರ್ದೋಷನು, ಜ್ಞಾನಾನಂದಾದ್ಯನಂತಗುಣಪರಿಪೂರ್ಣನು ಎಂದು ಭಜಿಸಬೇಕೆಂತ ತಾತ್ಪರ್ಯ.

Ramaswamy Sastry and Vighnesh Ghanapaathi

Copyright © 2024 | Vedadhara | All Rights Reserved. | Designed & Developed by Claps and Whistles
| | | | |