ಕೃತಜ್ಞತಾ ಸಮರ್ಪಣೆ
ನಮ್ಮ ದ್ವಿತೀಯಪುತ್ರ ಚಿ.ವಿಶ್ವೇಶನ ವಿವಾಹದ ಶುಭಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಖುದ್ದಾಗಿ ಬಂದು ಆಶೀರ್ವದಿಸಿದ ಎಲ್ಲರಿಗೂ ನಮ್ಮ ಕುಟುಂಬದ ವತಿಯಿಂದ ಅನೇಕ ಧನ್ಯವಾದಗಳು. ಕೆಲವರು ಬಂದಿಲ್ಲ. ಆದರೂ ಮನಸಾರೆ ಹರಸಿದ್ದಾರೆ. ಎಷ್ಟೋ ಜನರನ್ನು ಕರೆಯಲು ಸಾಧ್ಯವಾಗಲಿಲ್ಲ. ಅವರೆಲ್ಲರ ಕ್ಷಮೆ ಕೋರುತ್ತೇನೆ.
ಈ ಸಂದರ್ಭದಲ್ಲಿ ಒಂದು ಪುಟ್ಟ ಜ್ಞಾನಕಾರ್ಯವು ನಡೆಯಲೇಬೇಕೆಂಬ ನನ್ನ ಹಾಗೂ ನನ್ನ ಮಗ ಚಿ||ಶ್ರೀನಿವಾಸನ ವಿಶೇಷ ಹಂಬಲದ ಫಲ ಈ ಹೊತ್ತಿಗೆ - ವಿವಾಹ - ಒಂದು ಕೈಪಿಡಿ. ಅಲ್ಲದೇ ಚಿ|| ಶ್ರೀನಿವಾಸನ ಅಪೇಕ್ಷೆಯಂತೆ ನಾಲ್ಕು ಮಾತುಗಳು ನಮ್ಮ ವಂಶದ ಹಿರಿಯರ ಸ್ಮರಣೆಯೊಂದಿಗೆ.
ನಮ್ಮದು ಗುತ್ತಲದೇಸಾಯಿಯವರ ವಂಶ. (ಶ್ರೀರಾಘವೇಂದ್ರದೇಸಾಯಿ ನನ್ನ ಪ್ರಪಿತಾಮಹ - ಮುತ್ತಜ), ಅವರ ಮಗ ಸುಬ್ಬರಾವ್ ಅವರ ಹೆಂಡತಿ ಸೀತಮ್ಮ, ಇವರ ಮಗ ನಮ್ಮ ತಂದೆ ಗುಂಡೂರಾಯರು ನನ್ನ ತಾಯಿ ಲೀಲಾಬಾಯಿ. ನಮ್ಮ ತಾಯಿಕಡೆ ಪ್ರಸಿದ್ದ ವೇದಗರ್ಭ ಮನೆತನ. ನಂತರ ಸರಪಳಿ ಎಂಬ ಹೆಸರು ಬಂತಂತೆ. ನಮ್ಮ ಮುತ್ತಾತ ಸರಪಳಿ ಕೃಷ್ಣಾಚಾರ್ಯರು “ನ್ಯಾಯವೇದಾಂತಸೂರ್ಯ'' ಬಿರುದಾಂಕಿತರು. ಅವರ ಮಗ ಸರಪಳಿ ಶ್ರೀನಿವಾಸಾಚಾರ್ಯರು; ಅವರ ಮಗಳೇ ನನ್ನ ತಾಯಿ ಲೀಲಾಬಾಯಿ.
ನನ್ನ ಧರ್ಮಪತ್ನಿ ಚಿಹ||ಕುಂ||ಸೌ|| ಸುಧಾ(ಸೀತಾ) ಚಿಕ್ಕೇರಹಳ್ಳಿಯಲ್ಲಿದ್ದ ಪ್ರಸಿದ್ದ ಮೋಹನದಾಸರ ಮನೆತನದ ಗುಂಡದಾಸರ ಮೊಮ್ಮಗಳು. ಗುಂಡದಾಸರು ನಮ್ಮ ಮುತ್ತಜ್ಜ ಸರಪಳಿಕೃಷ್ಟಾಚಾರ್ಯರಲ್ಲಿ ಶಾಸ್ತ್ರಾಧ್ಯಯನ ಮಾಡಿದ ಶಿಷ್ಯರು. ನಮ್ಮ ಅತ್ತೆ ಮಾವನವರು ಭಾಗೀರಥೀಬಾಯಿ- ರಾಮರಾಯರು ಎಂದರೆ ಗುಂಡದಾಸರ ಮಗಳ ಮಗಳು ನನ್ನ ಪತ್ನಿ. ನಮ್ಮ ಮಾವನವರು ವೃತ್ತಿಯಲ್ಲಿ ಶಾನುಭೋಗರು. ಪ್ರವೃತ್ತಿಯಲ್ಲಿ ಸಾತ್ವಿಕಮನೋಭಾವದ ತುಂಬಾ ಆಸ್ತಿಕರು.
ಈ ವಂಶವಾಹಿನಿಯ ಕಾರಣದಿಂದಲೇ ಇರಬೇಕು, ನಮಗೂ ಕಿಂಚಿತ್ ಧಾರ್ಮಿಕ ಪ್ರವೃತ್ತಿ ಬಂದಿದೆ. ಈ ಪ್ರವೃತ್ತಿಯ ಅಂಕುರಕ್ಕೆ ನೀರು ಎರೆದವರು ಅನೇಕ ಸಾತ್ವಿಕ ವಿದ್ವಾಂಸರು, ಹಾಗೂ ಅನೇಕ ಮಠಾಧೀಶರು. ಇಷ್ಟೆಲ್ಲಾ ಹೇಳುವ ಉದ್ದೇಶ ನಮ್ಮ ಹೆಚ್ಚುಗಾರಿಕೆಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಧಾರ್ಮಿಕಪ್ರವೃತ್ತಿಯ ಪ್ರವಾಹ ಮುಂದುವರೆಯಲೆಂದು. ಇದೇ 'ಛಾಂದೋಗ್ಯ' 'ಬೃಹದಾರಣ್ಯಕ' ಮೊದಲಾದವುಗಳಲ್ಲಿ ಬಂದ 'ವಂಶಬ್ರಾಹ್ಮಣ'ಗಳಲ್ಲಿ ಅಡಗಿರುವ ತತ್ವ.
ಭಗವಂತನ ಅನಂತನಾಮಗಳಲ್ಲಿ 'ವಂಶವರ್ಧನ'ವೂ ಒಂದು. (ಪ್ರಾದ್ವಂಶೋ ವಂಶವರ್ಧನಃ - ವಿ.ಸಹಸ್ರನಾಮ) ಅವನು ಶಾಶ್ವತಧರ್ಮಗೋಪ್ರಾ. ಆದ್ದರಿಂದ ಆ ನಾಮಮಹಿಮೆಗಳ ಅನುಸಂಧಾನ ಮಾಡುತ್ತಾ ಅಂತಹ ಲಕ್ಷ್ಮೀನಾರಾಯಣನು ನಮ್ಮ ವಂಶವೃದ್ಧಿ ಗೋತ್ರಾಭಿವೃದ್ಧಿಯನ್ನು ಮಾಡಲಿ. ನಮಗೆ ಹಾಗೂ ನಮ್ಮ ಮಕ್ಕಳಿಗೆ ಎಂತಹ ಪ್ರಸಂಗದಲ್ಲೂ ಧರ್ಮದ ಬದುಕನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
ಈ ವಿವಾಹಕ್ಕೆ ಅನುಗ್ರಹಮಂತ್ರಾಕ್ಷತೆ ದಯಪಾಲಿಸಿದ ಪರಮಪೂಜ್ಯರಾದ ಶ್ರೀಶ್ರೀಸತ್ಯಾತ್ಮತೀರ್ಥರು
ಶ್ರೀಶ್ರೀವಿಶ್ವೇಶತೀರ್ಥರು ಉತ್ತರಾದಿ ಮಠ.
ಪೇಜಾವರ ಮಠ. ಶ್ರೀಶ್ರೀವಿಶ್ವವಲ್ಲಭತೀರ್ಥರು
ಶ್ರೀಶ್ರೀವಿದ್ವೇಶತೀರ್ಥರು ಸೋದೆ ಮಠ.
ಭಂಡಾರಕೇರಿ ಮಠ. ಶ್ರೀಶ್ರೀಸುಯತೀಂದ್ರತೀರ್ಥರು
ಶ್ರೀಶ್ರೀವಿಜ್ಞಾನನಿಧಿತೀರ್ಥರು ಶ್ರೀರಾಘವೇಂದ್ರಸ್ವಾಮಿಮಠ. ಶ್ರೀಪಾದರಾಜಮಠ.
ಶ್ರೀಪಾದಂಗಳವರ ಪಾದಕಮಲಗಳಲ್ಲಿ ನನ್ನ ಅನಂತಾನಂತ ಸಾಷ್ಟಾಂಗನಮಸ್ಕಾರಗಳು.
ಈ ಕಿರುಹೊತ್ತಿಗೆಗೆ ಊಹಿಸಲೂ ಸಾಧ್ಯವಾಗದ ಅತ್ಯಂತ ಕಡಿಮೆ ಅವಧಿಯೊಳಗೆ ಅನುಗ್ರಹಸಂದೇಶವಿತ್ತು ಆಶೀರ್ವದಿಸಿದ, ಚಿಕ್ಕಂದಿನಿಂದ ನನ್ನ ಲೌಕಿಕ, ಆಧ್ಯಾತ್ಮಿಕ ಶ್ರೇಯಸ್ಸಿಗೆ ಕಾರಣರಾಗಿರುವ ಪರಮಪೂಜ್ಯ ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರು, ಪೇಜಾವರ ಮಠ ಹಾಗೂ ಶಾಸ್ತ್ರದ ನವನವೀನಚಿಂತನೆಗಳನ್ನು ಕಂಡಾಗಲೆಲ್ಲಾ ಅನುಗ್ರಹಿಸುತ್ತಿರುವ, ನಮ್ಮ ಕುಟುಂಬದ ಬಗ್ಗೆ ವಿಶೇಷ ಅನುಗ್ರಹ ಮಾಡುತ್ತಿರುವ ಪರಮಪೂಜ್ಯ ಶ್ರೀಶ್ರೀವಿದ್ವೇಶತೀರ್ಥ ಶ್ರೀಪಾದಂಗಳವರು, ಭಂಡಾರಕೇರಿ ಮಠ ಇವರಿಗೆ ಸಾಷ್ಟಾಂಗಪ್ರಣಾಮಗಳು.
ಈ ಹೊತ್ತಿಗೆಗೆ ಆಶೀರ್ವಚನವಿತ್ತಿರುವ ನಮ್ಮ ದೇಶದಲ್ಲಿ ಎಲ್ಲೆಡೆ ಶಾಸ್ತ್ರವೇತ್ರಗಳಲ್ಲಿ ಮಾನ್ಯ ವಿದ್ವಾಂಸರಾದ ಪೂಜ್ಯ ಗುರುಗಳಾದ ವಿದ್ವಾನ್ ಡಿ. ಪ್ರಹ್ಲಾದಾಚಾರ್ಯರು ನಿವೃತ್ತ ಉಪಕುಲಪತಿಗಳು, ರಾಷ್ಟ್ರೀಯ ಸಂಸ್ಕೃತವಿದ್ಯಾಪೀಠ, ತಿರುಪತಿ ಇವರಿಗೆ ನನ್ನ ಕೃತಜ್ಞತಾಪೂರ್ವಕ ಅನೇಕ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತೇನೆ.
ವಿದೇಶದಲ್ಲಿರುವ ನಮ್ಮ ಮಗ ಚಿ||ವಿಶ್ವೇಶನಿಗೆ ದೂರವಾಣಿಯ ಮೂಲಕ ಪಾಠ ಹೇಳಿ ಅನುಗ್ರಹಿಸಿರುವ, ಆಧ್ಯಾತ್ಮ ಏಳಿಗೆಗೆ ಮಾರ್ಗದರ್ಶನ ನೀಡುತ್ತಿರುವ ಹಾಗೂವಾತ್ಸಲ್ಯದಿಂದ ಕಾಣುತ್ತಿರುವ ಹಾಗೂ ಈ ಹೊತ್ತಿಗೆಗೆ ಆಶೀರ್ವಚನವಿತ್ತಿರುವ ಪೂಜ್ಯ ವಿದ್ವಾನ್ ಎ.ಹರಿದಾಸಭಟ್ಟರು, ಪ್ರಾಂಶುಪಾಲರು ಪೂರ್ಣಪ್ರಜ್ಞ ವಿದ್ಯಾಪೀಠ ಇವರಿಗೆ ನಮ್ಮ ಕೃತಜ್ಞತಾಪೂರ್ವಕ ಅನೇಕ ಸಾಷ್ಟಾಂಗ ಪ್ರಣಾಮಗಳು.
ಈ ಕೃತಿಯ ಪ್ರಕಾಶನಕ್ಕೆ ಪ್ರೇರಣೆ ಪೂಜ್ಯ ಡಾ|| ಹೆಚ್. ಸತ್ಯನಾರಾಯಣಾಚಾರ್ಯರ *ಉಪನಯನ' ಎಂಬ ಕೃತಿ. ಅದೇ ಮಾದರಿಯಲ್ಲಿ ವಿವಾಹದ ಬಗ್ಗೆ ಒಂದು ಕಿರುಕೃತಿಯಾಗಲೆಂಬ ನಮ್ಮ ಪ್ರಾರ್ಥನೆಗೆ ಓಗೊಟ್ಟು ಈ ಕೃತಿಯ ರಚನೆ ಮಾಡಿಕೊಟ್ಟವರು ಪೂಜ್ಯ ಸತ್ಯನಾರಾಯಣಾಚಾರ್ಯರು. ಅತ್ಯಲ್ಪ ಅವಧಿಯ ಮೂರೇ ದಿನಗಳಲ್ಲಿ ಈ ಕೃತಿಯ ರಚನೆ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಛಲಬಿಡದ ತ್ರಿವಿಕ್ರಮನಂತೆ ಶ್ರಮವಹಿಸಿದ್ದು ಚಿ|| ಶ್ರೀನಿವಾಸ, ನಮ್ಮಮಗ. ಈಗಾಗಲೇ ನಮ್ಮ ಮನೆಯಲ್ಲಿ ಭಾಗವತಪಾಠ, ನಮ್ಮ ಮಕ್ಕಳಾದ ಚಿ|| ಶ್ರೀನಿವಾಸ, ಚಿ||ವಿಶ್ವೇಶನಿಗೆ ವೈಯುಕ್ತಿಕಪಾಠಗಳನ್ನು ತಮ್ಮ ಅವಿರತ ಕಾರ್ಯಕ್ರಮಗಳ ಮಧ್ಯೆ ಬಿಡುವುಮಾಡಿಕೊಂಡು ಹೇಳುತ್ತಿರುವ, ಇದರ ರಚಯಿತೃ ಶ್ರೀಸತ್ಯನಾರಾಯಣಾಚಾರ್ಯರ ಉಪಕಾರ ಶಬ್ದಾವೇದ್ಯ . ಅಲ್ಲದೆ ಈ ವಿವಾಹಕ್ಕೆ ಸಂಬಂಧಿಸಿದಂತೆ ಎಲ್ಲ ಹಂತಗಳಲ್ಲಿ ತಮ್ಮ ಅಮೂಲ್ಯ ಸಮಯ ನೀಡಿದ್ದು ಅವಿಸ್ಮರಣೀಯ. ಅವರಿಗೆ 'ಭೂಯಿಷ್ಠಾಂ ತೇ ನಮ ಉಕ್ಕಿಂ ವಿಧೇಮ' ಎಂದುಮಾತ್ರ ಹೇಳಬಲ್ಲೆ. - ವಿವಾಹದ ನಿಮಿತ್ತ ನಮ್ಮ ಕೋರಿಕೆಯ ಮೇರೆಗೆ ಸರ್ವಮೂಲಪಾರಾಯಣ, ಮಧ್ವವಿಜಯ, ರುಕ್ಕಿಣೀಶವಿಜಯ, ಹರಿಕಥಾಮೃತಸಾರ ಪಾರಾಯಣ ಮಾಡಿದ ವಿದ್ವಾಂಸರಿಗೆ ಹಾಗೂ ಸನಿತ್ರರಿಗೆ ನಮ್ಮ ಅನೇಕ ಸಾಷ್ಟಾಂಗ ನಮಸ್ಕಾರಗಳು.
ಅಂತೂ ವಿವಾಹವೆಂಬ ವೈದಿಕ ಕರ್ಮಸಂದರ್ಭದಲ್ಲಿ ಸಚ್ಚಾಸ್ವಪಾರಾಯಣ ಹಾಗೂ ಗ್ರಂಥಪ್ರಕಾಶನವೆಂಬ ಕಿರುಜ್ಞಾನಕಾರ್ಯವನ್ನು ಶ್ರೀಗುರುಗಳ ಅಂತರ್ಯಾಮಿಯಾದ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮಿನಾರಾಯಣರಿಗೆ ಅರ್ಪಿಸಿ, ಅವರು ನಮ್ಮ ನವ ವಧೂವರರಾದ ಚಿ||ಕು||ಸೌ|| ರಮ್ಯಾ ಹಾಗೂ ಚಿ||ವಿಶ್ವೇಶರಿಗೆ ಜ್ಞಾನಭಕ್ತಿವೈರಾಗ್ಯಗಳನ್ನು ಕೊಟ್ಟು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
ಈ ಗ್ರಂಥಪ್ರಕಾಶನಕ್ಕೆ ಅಕ್ಷರಜೋಡಣೆಯನ್ನು ಅತ್ಯಲ್ಪ ಅವಧಿಯಲ್ಲಿ ಮಾಡಿಕೊಟ್ಟಿರುವ ಶ್ರೀಸುಬ್ಬಣ್ಣ ಇವರಿಗೆ, ಸುಂದರ ಮುಖಪುಟನಿರ್ಮಾತೃಗಳಾದ ಹರಿಭಕ್ತಕಲಾವಿದರಾದ ಶ್ರೀ ಕೆ.ಎಮ್.ಶೇಷಗಿರಿಯವರಿಗೆ ಹಾಗೂ ತುರ್ತಾಗಿ ಮುದ್ರಣ

Ramaswamy Sastry and Vighnesh Ghanapaathi

Copyright © 2024 | Vedadhara | All Rights Reserved. | Designed & Developed by Claps and Whistles
| | | | |