ಮಗನ ಶೈಕ್ಷಣಿಕ ಯಶಸ್ಸಿಗಾಗಿ ಸರಸ್ವತಿ ದೇವಿಗೆ ಪ್ರಾರ್ಥನೆ

ಮಗನ ಶೈಕ್ಷಣಿಕ ಯಶಸ್ಸಿಗಾಗಿ ಸರಸ್ವತಿ ದೇವಿಗೆ ಪ್ರಾರ್ಥನೆ

ಓ ಮಾತೆ ಸರಸ್ವತಿ,
ಜ್ಛಾನ ಮತ್ತು ಅರಿವಿನ ದೇವತೆಯೆ, ನಿನ್ನ ಅಡಿದಾವರೆಗಳಲ್ಲಿ ನನ್ನ ಪ್ರಾರ್ಥನೆ.
ನನ್ನ ಮಗನನ್ನು ಸರಿಯಾದ ದಾರಿಯಲ್ಲಿ ನಡೆಸು.
ದಯವಿಟ್ಟು ಅವನ ಮನಸ್ಸಿನಿಂದ ಗೊಂದಲವನ್ನು ತೆಗೆದುಹಾಕು ಸ್ಪಷ್ಟ ಮನವನ್ನು ಕೊಡು.
ಕೆಟ್ಟ ಸಹವಾಸದಿಂದ ಅವನನ್ನು ದೂರವಿಡು.
ಪ್ರತಿದಿನ ಅವನು ಅಧ್ಯಯನದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡು.
ಅವನಿಗೆ ಕಷ್ಟಪಟ್ಟು ಕೆಲಸ ಮಾಡುವ ಶಕ್ತಿಯನ್ನು ನೀಡು.
ಬುದ್ಧಿವಂತಿಕೆ ಮತ್ತು ತಿಳುವಳಿಕೆ ಗಳನ್ನು ಕೊಟ್ಟು ಅವನನ್ನು ಆಶೀರ್ವದಿಸು.
ಅವನು ಯಾವಾಗಲೂ ಶುದ್ಧ ಜ್ಚಾನಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಲಿ.
ಓ ತಾಯಿ, ಅವನಿಗೆ ಒಳ್ಳೆಯ ಸಾಮರ್ಥ್ಯವನ್ನು ಕೊಡು‌
ನಿನ್ನ ಕೃಪೆಯಿಂದ ಅವನು ಒಳಿತನ್ನು ಮಾಡಬಲ್ಲವನಾಗಲಿ.
ಅವನು ಸೋಮಾರಿತನ ಮತ್ತು ಭಯವನ್ನು ಜಯಿಸಲು ಸಹಾಯ ಮಾಡು.
ಜ್ಚಾನ ದಾಹದ ಬಯಕೆ ಸದಾ ಅವನಿಗಿರಲಿ..
ಅವನು ತನ್ನ ಅಧ್ಯಯನದಲ್ಲಿ ಸಂತೋಷವನ್ನು ಕಂಡುಕೊಳ್ಳಲಿ.
ಎಲ್ಲವನ್ನೂ ಗ್ರಹಿಸಲು ಮತ್ತು ನೆನಪಿಟ್ಟುಕೊಳ್ಳಲು ಅವನಿಗೆ ಸಹಾಯ ಮಾಡು.
ಅವನ ಮನಸ್ಸಿನಿಂದ ಎಲ್ಲಾ ಅನುಮಾನಗಳನ್ನು ತೆಗೆದುಹಾಕು.
ಅವನಿಗೆ ಅಗತ್ಯವಿರುವ ವಿಶ್ವಾಸವನ್ನು ನೀಡು
ಅವನು ಪ್ರತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲಿ.
ಅವನು ತನ್ನ ಎಲ್ಲಾ ವಿಷಯಗಳಲ್ಲಿ ಮೇಲುಗೈ ಸಾಧಿಸಲಿ.
ಅವನ ವಿದ್ಯಾಭ್ಯಾಸದಲ್ಲಿ ಮಿಂಚಲಿ.
ಅವನಿಗೆ ಯಶಸ್ಸು ಮತ್ತು ಸಾಧನೆಗೆ ಮಾರ್ಗದರ್ಶನ ನೀಡು.
ತಾಯಿ, ಅವನು ತನ್ನ ಗುರಿಗಳ ಮೇಲೆ ತನ್ನ ಮನಸ್ಸನ್ನು ಕೇಂದ್ರೀಕರಿಸುವಂತೆ ಮಾಡು..
ಅವನ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಲು ಅವನಿಗೆ ಸಹಾಯ ಮಾಡು.
ಅವನು ತನ್ನ ಅಧ್ಯಯನದಲ್ಲಿ ನಿರತನಾಗಿರಲಿ.
ಅವನು ಮಹತ್ವಾಕಾಂಕ್ಷೆಯಿಂದ ಕೂಡಿರುವಂತೆ ಪ್ರೇರೇಪಿಸು.
ಓ ಸರಸ್ವತೀ ದೇವಿಯೇ ನೀನೇ ಆತನಿಗೆ ದಾರಿದೀಪಳಾಗು.
ಎಲ್ಲಾ ಗೊಂದಲಗಳನ್ನು ಹತ್ತಿಕ್ಕಲು ಅವನಿಗೆ ಸಹಾಯ ಮಾಡು.
ಅವನ ಬುದ್ಧಿಯನ್ನು ತೀಕ್ಷ್ಣವಾಗಿ ಮತ್ತು ಸ್ಪಷ್ಟವಾಗಿ ಇರಿಸು.
ಅವನು ಶಿಸ್ತು ಮತ್ತು ದೃಢನಿಶ್ಚಯದಿಂದ ಕೂಡಿರಲಿ.
ಅವನು ಯಾವತ್ತೂ ದಾರಿ ತಪ್ಪದಿರಲಿ.
ಒಳ್ಳೆಯ, ಬೆಂಬಲ ನೀಡುವ ಹೃದಯವಂತ ಸ್ನೇಹಿತರನ್ನು ಹೊಂದಲು ಅವನಿಗೆ ಸಹಾಯ ಮಾಡು.
ಅವನು ಸಕಾರಾತ್ಮಕತೆಯಿಂದ ಸುತ್ತುವರಿದಿರಲಿ..
ಓ ಸರಸ್ವತಿ ದೇವಿಯೇ, ನಾನು ನಿನ್ನನ್ನು ಪೂಜಿಸುತ್ತೇನೆ.
ನನ್ನ ಮಗನಿಗೆ ಯಶಸ್ಸು ಮತ್ತು ಅಭಿವೃದ್ಧಿಯನ್ನು ಕೊಡು.
ಅವನು ನಮಗೆ ಹೆಮ್ಮೆ ಮತ್ತು ಸಂತೋಷವನ್ನು ನೀಡಲಿ.
ನಿನ್ನ ಕೃಪೆಯಿಂದ ಅವನು ಸದಾ ಪ್ರವರ್ಧಮಾನಕ್ಕೆ ಬರಲಿ.
ನಾನು ನಿನಗೆ ಶರಣಾಗುತ್ತೇನೆ.
ನನ್ನ ಮಗನ ಉಜ್ವಲ ಭವಿಷ್ಯಕ್ಕೆ ಮಾರ್ಗದರ್ಶನ ನೀಡು.
ಅವನು ಸದಾ ನಿನ್ನ ರಕ್ಷಣೆಯಲ್ಲಿರಲಿ.
ಧನ್ಯವಾದಗಳು, ಓ ತಾಯಿ ಸರಸ್ವತಿಯೆ.

Meditations

Meditations

ಪ್ರಾರ್ಥನೆಗಳು

Click on any topic to open

Copyright © 2025 | Vedadhara test | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...

We use cookies