ಹಾಸನಾಂಬ ದೇವಾಲಯವು ಕರ್ನಾಟಕದ ಹಾಸನದಲ್ಲಿದೆ.
ಈ ದೇವಿಯ ಹೆಸರಿನಿಂದಲೇ ಹಾಸನ ನಗರವು ತನ್ನ ಹೆಸರನ್ನು ಪಡೆದುಕೊಂಡಿದೆ.
ಹಾಸನಾಂಬ ಎಂದರೆ ಸದಾ ಮುಗಳ್ನಗುವ ತಾಯಿ ಎಂದರ್ಥ.
Click below to watch video on Hasanamba Temple
ಈ ದೇವಾಲಯವು ವರ್ಷದಲ್ಲಿ ಕೇವಲ ಒಂದು ವಾರಕ್ಕೆ ಮಾತ್ರವೇ ತೆರೆದಿರುತ್ತದೆ.
ಇದು ದೀಪಾವಳಿಯ ಸಮಯದೊಂದಿಗೆ ಹೊಂದಿಕೊಳ್ಳುತ್ತದೆ.
ದೇವಾಲಯವನ್ನು ಮುಚ್ಚುವ ಸಮಯದಲ್ಲಿ, ಒಂದು ತುಪ್ಪದ ದೀಪವನ್ನು ಹಚ್ಚಿ ಗರ್ಭಗುಡಿಯಲ್ಲಿ ಇಡಲಾಗುತ್ತದೆ.
ಒಂದು ವರ್ಷದ ನಂತರ ದೇವಾಲಯವನ್ನು ತೆರೆದಾಗ, ದೀಪವು ಇನ್ನೂ ಉರಿಯುತ್ತಿರುವುದನ್ನು ಭಕ್ತರು ನೋಡಿದ್ದಾರೆ.
ಅಂಬೆಗೆ ಅರ್ಪಿಸಿರುವ ಹೂವುಗಳು ಇನ್ನೂ ತಾಜಾವಾಗಿರುತ್ತವೆ.
ಹಾಸನದ ಪ್ರಾಕೃತಿಕ ಸೌಂದರ್ಯವು ಸನ್ಮೋಹನಗೊಳಿಸುತ್ತದೆ.
ಒಮ್ಮೆ ಸಪ್ತ-ಮಾತೃಕೆಯರು (ವಿಶ್ವದ ಏಳು ಜನ ತಾಯಂದಿರು - ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡ) ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡುತ್ತಿದ್ದರು.
ಅವರುಗಳು ಹಾಸನಕ್ಕೆ ಬಂದಾಗ, ಅವರು ಅಲ್ಲಿಯೇ ಶಾಶ್ವತವಾಗಿ ನೆಲೆ ನಿಲ್ಲಲು ಬಯಸಿದರು.
ಅವರಲ್ಲಿ ಚಾಮುಂಡವನ್ನು ಬಿಟ್ಟು ಮಿಕ್ಕ ಆರು ಜನರು ಅಲ್ಲಿಯೇ ನೆಲೆನಿಲ್ಲಲು ನಿರ್ಧರಿಸಿದರು.
ಮೂರು ಜನರು ದೇವಾಲಯದ ಒಳಗಡೆ ಹುತ್ತದ ರೂಪದಲ್ಲಿ ನೆಲೆ ನಿಂತರು.
ಉಳಿದ ಮೂರು ಜನರು ದೇವಾಲಯದ ಹತ್ತಿರವಿರುವ ಕೆರೆಯಾದ ದೇವಗಿರಿ ಹೊಂಡದಲ್ಲಿ ಬಾವಿಗಳಾದರು.
ಚಾಮುಂಡದೇವಿಯು ಹಾಸನದಿಂದ ನಲವತ್ತು ಕಿ.ಮಿ. ದೂರದಲ್ಲಿರುವ ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆ ನಿಂತಳು.
ಅಂಬೆಯ ಒಬ್ಬ ಭಕ್ತೆಯ ಅತ್ತೆ ಆಕೆಯನ್ನು ಸದಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಳು.
ಒಮ್ಮೆ ಆಕೆಯು ದೇವಿಯ ಸಮ್ಮುಖದಲ್ಲಿ ಪ್ರಾರ್ಥಿಸುತ್ತಿರುವಾಗ, ಅತ್ತೆಯು ಅವಳನ್ನು ಹುಡುಕಿಕೊಂಡು ಬಂದು - ನಿನಗೆ ದೇವಾಲಯಕ್ಕೆ ಬರುವುದು ಮುಖ್ಯವೋ ಅಥವಾ ನಿನ್ನ ಕೆಲಸಗಳು ಮುಖ್ಯವೋ ಎಂದು ಕಿರುಚಿದಳು.
ಇದನ್ನು ಹೇಳುತ್ತಾ ಆಕೆಯು ಸೊಸೆಯ ತಲೆಯ ಮೇಲೆ ಒಂದು ಬಟ್ಟಲಿನಿಂದ ಜೋರಾಗಿ ಕುಟ್ಟಿದಳು.
ಸೊಸೆಯು ಅಂಬೆಯ ರಕ್ಷಣೆಗಾಗಿ ಪ್ರಾರ್ಥಿಸಿದಳು.
ದೇವಿಯು ಆಕೆಯನ್ನು ಶಿಲೆಯನ್ನಾಗಿ ಪರಿವರ್ತಿಸಿ ಅವಳನ್ನು ದೇವಾಲಯದ ಆವರಣದಲ್ಲಿಯೇ ತನ್ನ ರಕ್ಷಣೆಯಲ್ಲಿ ಇಟ್ಟುಕೊಂಡಳು.
ಈ ಕಲ್ಲು ಪ್ರತಿ ವರ್ಷ ಒಂದು ಭತ್ತದಷ್ಟು ಜರುಗುತ್ತಾ ಅಂಬೆಯ ಕಡೆಗೆ ಚಲಿಸುತ್ತದೆ.
ಕಲಿಯುಗದ ಅಂತ್ಯದಲ್ಲಿ, ಅದು ಹಾಸನಾಂಬೆಯ ಪಾದಕಮಲಗಳನ್ನು ಸೇರಿ ಮೋಕ್ಷವನ್ನು ಪಡೆಯುತ್ತದೆ.
ಒಮ್ಮೆ ನಾಲ್ವರು ಕಳ್ಳರು ದೇವಾಲಯದಿಂದ ಆಭರಣಗಳನ್ನು ಕದಿಯಲು ಪ್ರಯತ್ನಿಸಿದರು.
ಹಾಸನಾಂಬೆಯು ಅವರನ್ನು ಕಲ್ಲುಗಳಾಗಿ ಪರಿವರ್ತಿಸಿದಳು. ಈ ಕಲ್ಲುಗಳನ್ನು ಈಗಲೂ ನೋಡಬಹುದು.
ಈ ದೇವಾಲಯದ ಇನ್ನೊಂದು ಸ್ವಾರಸ್ಯಕರ ವಿಷಯವೆಂದರೆ, ಒಂಬತ್ತು ತಲೆಗಳುಳ್ಳ ರಾವಣನ ಚಿತ್ರವು ಇಲ್ಲಿದೆ.
ಅವನು ವೀಣೆಯನ್ನು ನುಡಿಸುತ್ತಿರುವುದನ್ನು ನೋಡಬಹುದು.
ದೇವಾಲಯದ ಸಂಕೀರ್ಣದಲ್ಲಿ ಭಗವಾನ್ ಶಿವ ಸಿದ್ದೇಶ್ವರ ಸ್ವಾಮಿಯಾಗಿ ಉಪಸ್ಥಿತನಿದ್ದಾನೆ.
ಅವನ ಇರುವಿಕೆಯು ಅರ್ಜುನನಿಗೆ ಪಾಶುಪತಾಸ್ತ್ರವನ್ನು ಕೊಡುತ್ತಿರುವ ರೂಪದಲ್ಲಿದೆ.
ಅವನ ಹಣೆಯಿಂದ ಸದಾ ನೀರಿನ ಹನಿಗಳು ಜಿನುಗುತ್ತವೆ.
ಕೃಷ್ಣಪ್ಪ ನಾಯ್ಕನು ಹೊಯ್ಸಳರ ಮನೆತನದ ಒಬ್ಬ ಪಾಳೇಗಾರನಾಗಿದ್ದ.
ಅವನು ಈ ದೇವಾಲಯವನ್ನು 12ನೇ ಶತಮಾನದಲ್ಲಿ ನಿರ್ಮಿಸಿದ.
ಸಿದ್ದೇಶ್ವರ ಸ್ವಾಮಿ ದೇವಾಲಯವನ್ನು ವೆಂಕಟಪ್ಪನಾಯ್ಕನು ನಿರ್ಮಿಸಿದ.
ಅನುವಾದ: ಡಿ.ಎಸ್.ನರೇಂದ್ರ
Please wait while the audio list loads..
Ganapathy
Shiva
Hanuman
Devi
Vishnu Sahasranama
Mahabharatam
Practical Wisdom
Yoga Vasishta
Vedas
Rituals
Rare Topics
Devi Mahatmyam
Glory of Venkatesha
Shani Mahatmya
Story of Sri Yantra
Rudram Explained
Atharva Sheersha
Sri Suktam
Kathopanishad
Ramayana
Mystique
Mantra Shastra
Bharat Matha
Bhagavatam
Astrology
Temples
Spiritual books
Purana Stories
Festivals
Sages and Saints