ಶರಣು ಸಿದ್ಧಿವಿನಾಯಕ

ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ
ಶರಣು ಪಾರ್ವತಿತನಯಮೂರುತಿ ಶರಣು ಮೂಷಿಕವಾಹನ || ಪಲ್ಲವಿ ||

ನಿಟಿಲನೇತ್ರನೇ ವರದ ಪುತ್ರನೇ ನಾಗಭೂಷಣ ಪ್ರೀಯನೇ
ಕಾಟಿಕತಾಂಗನೇ ಕೋಮಲಾಂಗನೇ ಕರ್ಣಕುಂಡಲಧಾರನೇ ||1||

ಬುಟ್ಟಮುಟ್ಟಿನ ಹಾರಪದಕನೆ ಬಾಹುಹಸ್ತ ಚತುಷ್ಟನೆ
ಇಟ್ಟತೊಡುಗೆಯು ಹೇಮಕಂಕನ ಪಾಶ ಅಂಕುಶಧಾರನೆ ||2||

ಕುಕ್ಷಿಮಹಾಲಂಬೋಧನೆ ನೀ ಇಕ್ಷುಚಾಪನ ಗೆಲಿದನೆ
ಪಕ್ಷಿವಾಹನ ಪುರದರ ವಿಟ್ಟಲನ ನಿಜದಾಸನೆ ||3||

Devotional Music

Devotional Music

ಭಕ್ತಿಗೀತೆಗಳು

Click on any topic to open

0

Copyright © 2026 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize

We use cookies