Special - Kubera Homa - 20th, September

Seeking financial freedom? Participate in the Kubera Homa for blessings of wealth and success.

Click here to participate

ಪೂರ್ವ ಫಲ್ಗುಣಿ

ಪೂರ್ವ ಫಲ್ಗುಣಿ - ಗುಣಲಕ್ಷಣಗಳು, ಹೊಂದಿಕೆಯಾಗದ ನಕ್ಷತ್ರಗಳು, ಆರೋಗ್ಯ ಸಮಸ್ಯೆಗಳು, ಸೂಕ್ತ ವೃತ್ತಿ, ಅದೃಷ್ಟ ರತ್ನ, ಸೂಕ್ತವಾದ ಬಣ್ಣಗಳು, ಹೆಸರುಗಳು, ವಿವಾಹ, ಪರಿಹಾರಗಳು, ಮಂತ್ರ..

ಪೂರ್ವ ಫಲ್ಗುಣಿ

ಸಿಂಹ ರಾಶಿಯ ೧೩ ಡಿಗ್ರಿ ೨೦ ನಿಮಿಷದಿಂದ ೨೬ ಡಿಗ್ರಿ  ೪೦ ನಿಮಿಷಗಳ ಅಂತರದವರಗೆ ಹರಡಿರುವ ನಕ್ಷತ್ರ ವು ಪೂರ್ವ ಫಲ್ಗುಣಿ ನಕ್ಷತ್ರವಾಗಿದೆ.ಇದು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೊಂದನೆಯ ನಕ್ಷತ್ರವಾಗಿದೆ. ಇದು  δ Zosma  ಹಾಗೂ θ Chertan Leonis ನಕ್ಷತ್ರ.

ಗುಣಲಕ್ಷಣಗಳು                              

  • ರೂಪವಂತರು,  ಹಾಗೂ ಲಕ್ಷಣವಂತರು ಆಗಿರುತ್ತಾರೆ
  • ಕಲಾ ನೈಪುಣ್ಯತೆ
  • ದಕ್ಷತೆ
  • ಸವಿಮಾತನಾಡುವುದು
  • ನಾಯಕತ್ವದ ಗುಣ
  •  ಋಜುಮಾರ್ಗದಲ್ಲಿ ನಡೆಯುವವರು
  • ಆತ್ಮ ಸಮ್ಮಾನತೆ
  • ಸರಳತೆ
  • ಕಲೆ ಹಾಗೂ ಸಂಗೀತ ದಲ್ಲಿ ಆಸಕ್ತಿ
  • ಇನ್ನೊಬ್ಬರ ಅಡಿಯಾಳಾಗಿರಲು  ಇಷ್ಟಪಡದೇ ಇರುವುದು
  • ಕಾರುಣ್ಯ
  • ಸಹೃದಯತೆ
  • ಪ್ರಾಮಾಣಿಕತೆ
  • ಜಾಗರೂಕತೆ
  • ಜೀವನ ಪ್ರೇಮ
  •  ಆಕರ್ಷಕ ವ್ಯಕ್ತಿತ್ವ,
  •  ಸೂಕ್ಷ್ಮಜ್ಞತೆ
  • ಹೆಂಗಸರಲ್ಲಿ ಪ್ರದರ್ಶನ ಸ್ವಭಾವ, ಹಾಗೂ ಧೈರ್ಯದಿಂದ ಮುನ್ನುಗುವ ಸ್ವಭಾವ

ಇತ್ಯಾದಿ ಸ್ವಭಾವ ಲಕ್ಷಣಗಳನ್ನು ಹೊಂದಿರುತ್ತಾರೆ

ಮಂತ್ರ

ಓಂ ಅರ್ಯಮ್ಣೇ ನಮಃ

ಪ್ರತಿಕೂಲ ನಕ್ಷತ್ರಗಳು

  • ಹಸ್ತ
  • ಸ್ವಾತಿ
  • ಅನುರಾಧ
  • ಪೂರ್ವಾಭಾದ್ರ,  ಮೀನ ರಾಶಿ
  • ಉತ್ತರಾಭಾದ್ರ.
  • ರೇವತಿ, ಮೀನ ರಾಶಿ

ಪೂರ್ವ ಫಲ್ಗುಣಿ  ನಕ್ಷತ್ರದಲ್ಲಿ ಹುಟ್ಟಿದವರು ಇಂತಹ ನಕ್ಷತ್ರ  ಗಳಲ್ಲಿ ಯಾವುದೇ ಪ್ರಮುಖ ಕೆಲಸವನ್ನು ಆರಂಭಿಸಬಾರದು ,ಹಾಗೂ ಇಂಥಾ ನಕ್ಷತ್ರ ದವರೊಂದಿಗೆ ಯಾವುದೇ ವ್ಯವಹಾರ , ಪಾಲುದಾರಿಕೆ   ಇಟ್ಟುಕೊಳ್ಳಬಾರದು. 

ಆರೋಗ್ಯ ಸಮಸ್ಯೆಗಳು

 ಈ ನಕ್ಷತ್ರ ದಲ್ಲಿ ಹುಟ್ಟಿದವರು ಈ ಕೆಳಗಿನ ಸಮಸ್ಯೆಗಳಿಂದ ಬಳಲುತ್ತಾರೆ -

  • ಬಂಜೆತನ
  • ಗರ್ಭಕೋಶದ ಸಮಸ್ಯೆಗಳು
  • ಹೃದಯ ಸಂಬಂಧಿ ರೋಗಗಳು
  • ಬೆನ್ನುಮೂಳೆಯ ಸಮಸ್ಯೆಗಳು
  • ರಕ್ತ ದೋಷಗಳು
  • ಅಧಿಕ ರಕ್ತದ ಒತ್ತಡ
  • ಕಾಲು ನೋವು
  • ನರ ಸಂಬಂಧಿ ರೋಗಗಳು
  • ಪಾದಗಳಲ್ಲಿ ಊತ

ಇತ್ಯಾದಿಗಳು.

ಸೂಕ್ತವಾದ ಕೆಲಸಗಳು

  • ಸರಕಾರಿ ಕೆಲಸಗಳು
  • ಪ್ರವಾಸ
  • ಸಾಗಾಣಿಕೆ
  • ರೇಡಿಯೋ ಪ್ರಚಾರಕ
  • ವಿನೋದ ಚಟುವಟಿಕೆಗಳು
  • ಸಂಗೀತ
  • ಚಲನಚಿತ್ರ
  • ಜೇನು ಸಾಕಣೆ
  • ಹೋಟೆಲ್ ಉದ್ಯಮ
  • ಕಥಾ ನಿರೂಪಣೆ
  • ಉಪ್ಪಿನ ಕಾರ್ಖಾನೆ
  • ವಾಹನ
  • ಸಂಗ್ರಹಾಲಯ
  • ಪುರಾತನ ವಸ್ತುಗಳು
  • ಕ್ರೀಡೆ 
  • ಪಶುಪಾಲನೆ
  • ಪಶುವೈದ್ಯ
  • ಲೈಂಗಿಕ ತಜ್ಞರು
  • ಸ್ತ್ರೀ ರೋಗ ತಜ್ಞರು
  •  ಶಸ್ತ್ರಚಿಕಿತ್ಸಕ
  • ಚರ್ಮ ಹಾಗೂ ಮೂಳೆಯ ಕಾರ್ಖಾನೆ
  • ಶಿಕ್ಷಕರು 
  • ಬೋಧಕರು
  • ಕನ್ನಡಿ ತಯಾರಿಕೆ
  •  ಕನ್ನಡಕದ ಅಂಗಡಿಗಳು
  • ಸೆರೆಮನೆ ಅಧಿಕಾರಿ

ಇತ್ಯಾದಿಗಳು.

ಪೂರ್ವ ಫಲ್ಗುಣಿ ನಕ್ಷತ್ರದವರು ವಜ್ರ ಧರಿಸಬಹುದೇ?

ಧರಿಸಬಹುದು

ಅದೃಷ್ಟದ ರತ್ನಗಳು

ವಜ್ರ

ಅದೃಷ್ಟದ ಬಣ್ಣ

ಬಿಳಿ,ತಿಳಿನೀಲಿ, ಹಾಗೂ ಕೆಂಪು. 

ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಹುಟ್ಟಿದವರ  ಮೊದಲನೆಯ ಅಕ್ಷರವು 

ಅವಕಹಡ ಕೋಷ್ಡಕದ ಪ್ರಕಾರ -

ಮೊದಲ ಚರಣ -  ಮೋ

ಎರಡನೇ ಚರಣ - ಟಾ

ಮೂರನೇ ಚರಣ - ಟೀ

ನಾಲ್ಕನೇ ಚರಣ - ಟೂ   

ಸಾಂಪ್ರದಾಯಿಕವಾಗಿ ಹೆಸರನ್ನಿಡುವ  ಸಂದರ್ಭದಲ್ಲಿ  ಈ ಅಕ್ಷರಗಳನ್ನು ಬಳಸಬಹುದಾಗಿದೆ. ಇನ್ನು ಕೆಲವು ವರ್ಗಗಳ ಜನರಲ್ಲಿ  ಅಜ್ಜ ಅಜ್ಜಿಯರು ಗಳ ಹೆಸರು ಇಡುವ ಸಂಪ್ರದಾಯವಿದೆ. ಇದು ತಪ್ಪೇನಲ್ಲ. ಶಾಸ್ತ್ರದ ಪ್ರಕಾರ ಸರಕಾರಿ ದಾಖಲೆಗಾಗಿ ಇಡುವ ಹೆಸರುಗಳು  ಅಥವಾ ವ್ಯಾವಹಾರಿಕ ಹೆಸರುಗಳು ಈ ಹೆಸರುಗಳಿಂದ  ಭಿನ್ನವಾಗಿರ ಬೇಕಾಗುತ್ತದೆ.ಶಾಸ್ತ್ರದ ಪ್ರಕಾರ ಇಡುವ ಹೆಸರುಗಳು ಕೇವಲ ಮನೆಮಂದಿಗೆ ಮಾತ್ರ ಗೊತ್ತಿರಬೇಕು.

ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಹುಟ್ಟಿದವರ  ಸರಕಾರಿ ಹೆಸರುಗಳಲ್ಲಿ ತ, ಥ, ದ, ಧ, ನ, ಯ, ರ, ಲ, ವ, ಏ, ಐ, ಹ ಅಕ್ಷರಗಳನ್ನು ತ್ಯಜಿಸಬೇಕು.

 

ಮದುವೆ   

ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಹುಟ್ಟಿದವರು ಕರುಣಾ ಗುಣದವರು, ಸೇವಾ ಮನೋಭಾವ ದವರು, ಸಹಾನುಭೂತಿ ಸ್ವಭಾವದವರು, ಆಗಿರುತ್ತಾರೆ.  ಹೆಂಗಸರು ಆಳುವ ಸ್ವಭಾವವನ್ನು ಬೆಳೆಸಿಕೊಳ್ಳದೇ ಇರುವುದು ಒಳಿತು.

ಪರಿಹಾರಗಳು 

ಚಂದ್ರ, ಶನಿ,ರಾಹು ಈ ಗ್ರಹಗತಿಗಳು ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅನನುಕೂಲವಾಗಿರುತ್ತವೆ. ಅಂತಹವರು ಈ ಕೆಳಗಿನ ಪರಿಹಾರವನ್ನು ಮಾಡಬಹುದಾಗಿದೆ -

 

  • ಸೂರ್ಯ ಮಂತ್ರವನ್ನು ದಿನವೂ ಕೇಳುವುದು
  • ಶುಕ್ರಮಂತ್ರವನ್ನು ಕೇಳುವುದು
  • ಲಕ್ಷ್ಮೀ ಮಂತ್ರವನ್ನು ದಿನವೂ ಕೇಳುವುದು

ಪೂರ್ವ ಫಲ್ಗುಣಿ ನಕ್ಷತ್ರ 

  • ಒಡೆಯ - ಆರ್ಯಮ
  • ಅಧಿಪತಿ - ಶುಕ್ರ 
  • ಪ್ರಾಣಿ - ಇಲಿ
  • ವೃಕ್ಷ - ಪಲಾಶ
  • ಪಕ್ಷಿ - ಕೆಂಬೂತ
  • ಪಂಚಭೂತ - ಜಲ
  • ಗಣ - ಮನುಷ್ಯ
  • ಯೋನಿ - ಹೆಣ್ಣು ಇಲಿ
  • ನಾಡಿ - ಮಧ್ಯ
  • ಸಂಕೇತ - ಜೋಕಾಲಿ
49.1K
7.9K

Comments

enymb
ಶ್ರೇಷ್ಠ ವೆಬ್‌ಸೈಟ್ 👌 -ಕೇಶವ ಕುಮಾರ್

ವೇದಧಾರ ನನ್ನ ಜೀವನದಲ್ಲಿ ಸಾಕಷ್ಟು ಪಾಸಿಟಿವಿಟಿ ಮತ್ತು ಶಾಂತಿಯನ್ನು ತಂದುಕೊಟ್ಟಿದೆ. ನಿಜವಾಗಿ ಧನ್ಯವಾದಗಳು! 🙏🏻 -Gurudas

ಧಾರ್ಮಿಕ ಚಿಂತನಕ್ಕೆ ಪರಿಪೂರ್ಣವೆನಿಸಿರುವುದು 😇 -ರವಿ ಶಂಕರ್

ಧರ್ಮದ ಬಗ್ಗೆ ಸುಂದರ ಮಾಹಿತಿಯನ್ನು ನೀಡುತ್ತದೆ 🌸 -ಕೀರ್ತನಾ ಶೆಟ್ಟಿ

ಸನಾತನ ಧರ್ಮದ ಬಗ್ಗೆ ಜ್ಞಾನಕ್ಕೆ ಖಜಾನೆ -ಅಶೋಕ್

Read more comments

Knowledge Bank

ಋಷಿ ಮತ್ತು ಮುನಿಗಳ ನಡುವೆ ವ್ಯತ್ಯಾಸವೇನು?

ಯಾರಿಗೆ ಯಾವುದಾದರೊಂದು ಶಾಶ್ವತ ಜ್ಞಾನವನ್ನು ಪ್ರಕಟಪಡಿಸಲಾಗಿರುತ್ತದೋ ಅವರನ್ನು ಋಷಿಯೆಂದು ಕರೆಯಲಾಗುತ್ತದೆ. ಅವರ ಮೂಲಕ, ಈ ಜ್ಞಾನವು ಮಂತ್ರವಾಗಿ ಪ್ರಕಟವಾಗುತ್ತದೆ. ಯಾರು ಜ್ಞಾನಿಗಳಾಗಿ, ಪಂಡಿತರಾಗಿ, ಬುದ್ಧಿವಂತರಾಗಿ ಮತ್ತು ಆಳವಾದ ಅವಲೋಕನವನ್ನು ಮಾಡುವ ಶಕ್ತಿಯನ್ನು ಹೊಂದಿರುತ್ತಾರೋ ಅವರನ್ನು ಮುನಿಗಳೆಂದು ಕರೆಯಲಾಗುತ್ತದೆ. ಮುನಿಗಳು ತಮ್ಮ ಹೇಳಿಕೆ ಬಗ್ಗೆ ಕೂಡ ನಿಯಂತ್ರಣವನ್ನು ಹೊಂದಿರುತ್ತಾರೆ.

ಸುದರ್ಶನ ಚಕ್ರದ ರಹಸ್ಯ

ಮಹಾವಿಷ್ಣುವಿನ ಕೈಯಲ್ಲಿರು ಸುದರ್ಶನ ಚಕ್ರವು ೧೦೦೦ಗಳಷ್ಟು ಅರೆಗಳನ್ನು ಹೊಂದಿದ್ದು ಅತ್ಯಂತ ಪ್ರಬಲ ಆಯುಧ ವೆಂದು ಪರಿಗಣಿಸಲ್ಪಟ್ಟಿದೆ ಈ ಆಯುಧವು ಮನೋವೇಗದಲ್ಲಿ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು ತನ್ನ ದಾರಿಯಲ್ಲಿ ಬರುವ ಎಲ್ಲವನ್ನೂ ನಾಶ ಮಾಡಬಲ್ಲದು ಇದು ತನ್ನದೇ ವೈಯುಕ್ತಿಕ ಪ್ರಜ್ಞೆ ಯನ್ನು ಹೊಂದಿದ್ದು ವಿಷ್ಣುವಿನ ಆಜ್ಞೆ ಯನ್ನು ಮಾತ್ರ ಪರಿಪಾಲಿಸುತ್ತದೆ.

Quiz

ಶನಿದೇವನ ತಂದೆ ಯಾರು?
ಕನ್ನಡ

ಕನ್ನಡ

ಜ್ಯೋತಿಷ್ಯ

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon