Madhva Siddhanta - Part 2

madhva siddhanta part 2 pdf sample page

66.0K

Comments

Gnazi
ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna

ಅತ್ಯುತ್ತಮ ಶೈಕ್ಷಣಿಕ ವೆಬ್‌ಸೈಟ್ -ಗೌರಿ ಮೂರ್ತಿ

ವೇದಧಾರ ನನ್ನ ಜೀವನದಲ್ಲಿ ಸಾಕಷ್ಟು ಪಾಸಿಟಿವಿಟಿ ಮತ್ತು ಶಾಂತಿಯನ್ನು ತಂದುಕೊಟ್ಟಿದೆ. ನಿಜವಾಗಿ ಧನ್ಯವಾದಗಳು! 🙏🏻 -Gurudas

ಶ್ರೇಷ್ಠವಾದ ಧಾರ್ಮಿಕ ಸಂಪನ್ಮೂಲ 🌟 -ದೀಪಾ ನಾಯಕ್

ಮಹಾನ್ ಜ್ಞಾನಮೂಲ -ಸುಬ್ರಹ್ಮಣ್ಯ ಶರ್ಮಾ

Read more comments

ವೇದವ್ಯಾಸರ ತಂದೆ ತಾಯಿಯವರು ಯಾರು?

ವೇದವ್ಯಾಸರ ತಂದೆ ಪರಾಶರ ಮುನಿ ಮತ್ತು ತಾಯಿ ಸತ್ಯವತಿಯವರು.

ವೇದಗಳನ್ನು ಯಾರು ಬರೆದವರು?

ವೇದಗಳನ್ನು ಅಪೌರುಷೇಯ ಎಂದು ಕರೆಯುತ್ತಾರೆ ಅಂದರೆ ಅವುಗಳಿಗೆ ಲೇಖಕರು ಇಲ್ಲ ಎಂದು ಅರ್ಥ. ವೇದಗಳು ಋಷಿಗಳ ಮೂಲಕ ಮಂತ್ರಗಳಾಗಿ ಪ್ರಕಟಪಡಿಸಲಾದ ಕಾಲಾತೀತ ಜ್ಞಾನಭಂಡಾರ.

Quiz

ವಿಶ್ವಾಮಿತ್ರನು ಯಾವ ದೇಶದ ರಾಜ?

ಈಗ ಮಾತರೂಪ ದ್ರವ್ಯವನ್ನು ನಿರೂಪಿಸುತ್ತಾರೆ. ಮೀಯಂತ ಇತಿ ಮಾತ್ರಾಃ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಹೀಗೆ ಐದು ವಿಧಗಳಾಗಿರುತ್ತವೆ. ಇಂದ್ರಿಯಗಳಿಂದ ತಿಳಿಯತಕ್ಕವುಗಳೆಂದರ್ಥ. ಗೀತಾಭಾಷ್ಯದಲ್ಲಿ ಹೀಗೆ ಹೇಳಿರುತ್ತಾರೆ. ಇಂದ್ರಿಯಗಳಿಂದ ತಿಳಿಯಲ್ಪಡುವವು. ವಿಷಯವಾದವುಗಳು ಅಂತೆಯೇ ವಿಷಯಗಳು ಎಂದು ಅವುಗಳು ಐದು ಭೂತಗಳಿಗೆ ಉಪಾದಾನ (ವಿಕಾರ ಕಾರಣ)ವಾಗಿ ದ್ರವಣತೆ (ಹರಿಯುವಿಕೆ) ಇರುವುದರಿಂದ ದ್ರವ್ಯವನ್ನು ತ್ತಾರೆ. ಅವುಗಳ ವಿಭಾಗವನ್ನು ಹೇಳುತ್ತಾರೆ. ಅವು ಎರಡು ವಿಧಗಳಾಗಿರುತ್ತವೆ. ತತ್ವರೂಪಗಳು ಹಾಗೂ ತತ್ವ ಭಿನ್ನ ಗಳೆಂದು, ತತ್ವರೂಪಗಳಿಂದ ಮಾತ್ರಾಗಳು ತಾಮಸ ಅಹಂಕಾರದಿಂದ ಹುಟ್ಟಿದವು ಐದು ತನ್ಮಾತ್ರಗಳೆನಿಸುತ್ತವೆ, ತತ್ವಭಿನ್ನ ವಾದ ಮಾತ್ರಾಗಳು ಗುಣಗಳೆನಿಸುತ್ತವೆ, ಅವುಗಳನ್ನು ಗುಣ ನಿರೂಪಣೆಯಲ್ಲಿ ತಿಳಿಯಬಹುದು. ಇದನ್ನು ತೃತೀಯಸ್ಕಂಧ
ಭಾಗವತದಲ್ಲಿ ಹೇಳಿರುತ್ತದೆ. ಭಗವಂತನ ಇಚ್ಛೆಯಿಂದ ಅವನ ಶಕ್ತಿಯಿಂದ ತಾಮಸಾ ಹಂಕಾರ ತತ್ವವನ್ನು ಕಡೆಯಲು, ಅದರಿಂದ ಶಬ್ದವೆಂಬ ಮಾತ್ರಾ ಹುಟ್ಟಿತು. ಅದರಿಂದ ಶಬ್ದಾಶ್ರಯವಾದ ಆಕಾಶವು ಹುಟ್ಟಿತು. ಶಬ್ದಾಶ್ರಯವಾದ ಆಕಾಶವೇ ಪ್ರೋತ್ರೇಂದ್ರಿಯವೆನಿಸುತ್ತದೆ.
ನನು ಪುರಾಣಾದ್ ಪಂಚ ತನ್ಮಾತ್ರಾಣಾಮೇವ ತಾಮಸಾಹಂಕಾರ ಜನ್ಯತ್ವಮುಚ್ಯತೇ | ತತ್ಕ ಥಮೇತದಿತ್ಯತ ಆಹ | ಪಂಚ ತನ್ಮಾತಾ ಇತಿ | ಗುಣಾ ಇತಿ | ಆಕಾಶಾದೀನಾಮಿತಿ ಶೇಷಃ | ತದಭಿಮಾನಿನ ಆಹ | ಉಮೇತಿ |
ಪ.ಸಂ-ಉಮಾ ಸುಪರ್ಣಿವಾರು
ಬೃಹಸ್ಪತ್ಯಾದ್ಯಾಕ್ಷ ತದಭಿಮಾನಿನಃ | ಉಮೈಕವಾಭಿಮಾನಿನೀ | ಸೌಪರ್ಣಿ ವಾರುಣ್ಯ ತುದ್ವಯೋ ದ್ವಯೋರಿತಿವಿವೇಕಃ | ತದುಕ್ತಂ ಕಾರಕಭಾಷ್ಯ | ಸೌಪರ್ಣಿ ವಾರುಣೀ ತಥಾ | ಉಮೇತಿ ಚಾರ್ಥಮಾನಿನ ದ್ವಿದೈಕ ದೇವತಾ ಇತಿ |
ಪುರಾಣಾದಿಗಳಲ್ಲಿ ಪಂಚತನ್ಮಾತ್ರಾಗಳಿಗೆ ಮಾತ್ರವೇ ತಾಮಸಾಹಂಕಾರದಿಂದ ಹುಟ್ಟುವಿಕೆ ಹೇಳಿದೆ. ನೀವು ಮಾತ್ರಾ ಸಾಮಾನ್ಯಕ್ಕೆ ತಾಮಸಾಹಂಕಾರ ಜನ್ಯತೆ ಹೇಗೆ ಹೇಳುವಿರಿ ಎಂದರೆ ನಾವು ತತ್ವಾತ್ಮಕ ಪಂಚತನ್ಮಾತ್ರಾಗಳಿಗೆ ತಾಮಸಾ ಹಂಕಾರ ಜನ್ಯತೆ ಹೇಳಿರುತ್ತದೆ. ತತ್ವಭಿನ್ನವಾದ ಗುಣರೂಪಗಳಾಗಿ ತನ್ಮಾತ್ರಾ ಗಳನ್ನು ಗುಣನಿರೂಪಣದಲ್ಲಿ ಹೇಳುತ್ತೇವೆ. ಆಕಾಶಾದಿಗಳಿಗೂ ಹೇಳುತ್ತೇವೆ ಎಂದು ತಿಳಿಯಬೇಕು. ಮಾತ್ರಾಗಳ ಅಭಿಮಾನಿಗಳನ್ನು ಹೇಳುತ್ತಾರೆ. ಉಮಾ, ಸುಪರ್ಣಿ ವಾರಣೀ, ಬೃಹಸ್ಪತಿ ಇವರುಗಳೇ ಮೊದಲಾದವರು ಮಾತ್ರಾಭಿಮಾನಿ ಗಳು, ಉಮಾ(ಪಾರ್ವತಿ) ಗಂಧಕ್ಕೆ ಅಭಿಮಾನಿಯು, ಸುಪರ್ಣಿ (ಗರುಡಭಾರ್ಯ) ದೇವಿಯು ಶಬ್ದ ಸ್ಪರ್ಶಗಳಿಗೆ, ವಾರುಣೀ (ಶೇಷಪತ್ನಿ) ದೇವಿಯು ರೂಪರಸಗಳಿಗೆ ಹೀಗೆ ಸುಪರ್ಣಿ, ವಾರುಣಿಯರು ಎರಡೆರಡು ಮಾತ್ರಾ (ವಿಷಯ)ಗಳಿಗೆ ಅಭಿಮಾನಿ ಗಳು. ಹೀಗೆ ತಿಳಿಯಬೇಕು. ಕಾರಕಭಾಷ್ಯದಲ್ಲಿ ಸೌಪರ್ಣೀವಾರುಣಿಯರು ಎರಡೆರಡು ವಿಷಯಗಳಿಗೆ, ಪಾರ್ವತಿ ಒಂದು ವಿಷಯಕ್ಕೆ ಮೂರೂ ದೇವತೆಗಳೂ ಐದು ಮಾತ್ರಾ (ವಿಷಯ)ಗಳಿಗೆ ಅಭಿಮಾನಿದೇವತೆಗಳೆಂದು ಹೇಳಿರುತ್ತದೆ. ಮತ್ತೂ ಬೃಹಸ್ಪತಿಯು, ಮುಖ್ಯಪ್ರಾಣನ ಪುತ್ರರುಗಳಾದ ಪ್ರಾಣಾದಿಗಳೂ ಮಾತ್ರಾ ಭಿಮಾನಿಗಳು, ಬೃಹಸ್ಪತಿಯು ಪ್ರಾಣನು ಶಬ್ದಾಭಿಮಾನಿಗಳು, ಅಪಾನನು ಸ್ಪರ್ಶಾ ಭಿಮಾನಿಯು, ವ್ಯಾನನು ರೂಪಾಭಿಮಾನಿಯು, ಉದಾನನು ರಸಾಭಿಮಾನಿಯು, ಸಮಾನನು ಗಂಧಾಭಿಮಾನಿಯು, ತಾರತಮ್ಯದಂತೇ ಸೋತ್ತಮರೊಂದಿಗೆ ಅವರರೂ ಅಭಿಮಾನಿಗಳಾಗಿರುತ್ತಾರೆ.
- ತದ್ಯಾಖ್ಯಾನೇವ್ಯಾಸತೀರ್ಥೀಯೇವಮೇವ ನ್ಯಾಖ್ಯಾನಮತಿ ದ್ರಷ್ಟ ವ್ಯಂ | ಆದಿ ಶಬೈನ ಅಪಾನವ್ಯಾನೋದಾನ ಸಮಾನಾಗೃಹ್ಯಂತೇ | ತೇಚತ್ವಾರೋ ಬೃಹಸ್ಪತಿನಾಸಹ ಶಬ್ದಾದಿ ಪಂಚಾನಾಂ ಕ್ರಮೇಣ ಅಭಿಮಾನಿನ ಇತ್ಯರ್ಥಃ | ತದುಕ್ತಂತಂತ್ರಸಾರೇ | ಶಬ್ದ ನಾನಾ ಬೃಹಸ್ಪತಿಃ ಅನೈಚಸೂನವೊ : ನಾಯೊರಿತಿ | ಇದನುಸಲಕ್ಷಣಂ | ಸರ್ವೆ ಸರ್ವಾ ಭಿನಾನಿನಃ ಇತಿ ಪ್ರಮಾಣಬಲೇನೋತ್ತಮಾದೇವಬ್ರಹ್ಮಾದ್ಯಾ ಅಪಿಶಬ್ದಾ `ಭಿಮಾನಿನ ಅತಿ ದ್ರಷ್ಟ ವ್ಯವಮ್ |
ಇತಿ ಪಂಚತನ್ಮಾತ್ರಾ ಪ್ರಕರಣಂ |
ಕಾಠಕಭಾಷ್ಯ ವ್ಯಾಖ್ಯಾನದಲ್ಲಿ ವ್ಯಾಸತೀರ್ಥರೂ ಹೀಗೆ ಹೇಳಿರುತ್ತಾರೆ. ಆದಿ ಶಬ್ದದಿಂದ ಅಪಾನ, ವ್ಯಾನ, ಉದಾನ, ಸಮಾನರುಗಳನ್ನು ಗ್ರಹಿಸಬೇಕು. ಈ ನಾಲ್ಕುರು ಬೃಹಸ್ಪತಿಯೊಂದಿಗೆ ಐವರು ಐದು ಶಬ್ದಾದಿ ಮಾತ್ರಾ(ವಿಷಯ)ಗಳಿಗೆ ಅಭಿಮಾನಿಗಳು, ತಂತ್ರಸಾರದಲ್ಲಿಯೂ ಶಬ್ದ ನಾಮಕನು ಬೃಹಸ್ಪತಿಯು ಅಪಾನಾದಿ ನಾಲ್ವರೂ ಮುಖ್ಯ ಪ್ರಾಣರ ಪುತ್ರರು, ಹೀಗೆ ಐವರೂ ಶಬ್ದಾದಿಗಳ ಅಭಿಮಾನಿಗಳು ಎಂದು ಹೇಳಿರುತ್ತದೆ. ವಿಶೇಷವಾಗಿ ಎಲ್ಲಾ ದೇವತೆಗಳೂ ಎಲ್ಲಾ ಪದಾರ್ಥಗಳಿಗೂ ಅಭಿಮಾನಿಗಳೇ ಎಂಬ ಪ್ರಮಾಣದಿಂದ ಸೋತ್ತಮ ದೇವತೆಗಳು ಮುಖ್ಯಾಭಿಮಾನಿ ಗಳು ಸ್ಥಾವರದೇವಗಳು ಅವರಿಗಿಂತಲೂ ಅಮುಖ್ಯಾಭಿಮಾನಿಗಳೆಂದು ತಿಳಿಯಬೇಕು.
ಹೀಗೆ ದ್ರವ್ಯದಲ್ಲಿ ಹತ್ತೊಂಬತನೆಯದಾದ ಪಂಚ ತನ್ಮಾಪ್ರಕರಣವು ಕನ್ನಡಾನು ವಾದದೊಂದಿಗೆ ಸಮಾಪ್ತಿಗೊಂಡಿತು.

Ramaswamy Sastry and Vighnesh Ghanapaathi

Copyright © 2024 | Vedadhara | All Rights Reserved. | Designed & Developed by Claps and Whistles
| | | | |