ಒಬ್ಬ ಮನುಷ್ಯನು ಮೂರು ಋಣಗಳೊಂದಿಗೆ ಹುಟ್ಟಿ ಬಂದಿರುತ್ತಾನೆ : ಋಷಿ ಋಣ ( ಋಷಿ ಮುನಿಗಳ ಮೇಲಿನ ಋಣ ), ಪಿತೃ ಋಣ ( ಪೂರ್ವಜರ ಮೇಲಿನ ಋಣ), ಹಾಗೂ ದೇವ ಋಣ (ದೇವತೆಗಳ ಮೇಲಿನ ಋಣ ). ಈ ಎಲ್ಲಾ ಋಣಗಳಿಂದ ಮುಕ್ತರಾಗಲು ನಮ್ಮ ಧರ್ಮ ಗ್ರಂಥ ಗಳಲ್ಲಿ ಕೆಲವು ದೈನಂದಿನ ಕರ್ತವ್ಯ ಗಳನ್ನು ಹೇಳಲಾಗಿದೆ . ಅವೆಂದರೆ ದೇಹ ಶುದ್ದಿ, ಸಂಧ್ಯಾವಂದನೆ( ತ್ರಿ ಕಾಲ ವಂದನೆ ), ತರ್ಪಣ ( ಹಿರಿಯರಿಗೆ ಅರ್ಪಣೆ ), ನಿತ್ಯ ದೇವತಾ ಆರಾಧನೆ, ಹಾಗೂ ಇನ್ನಿತರ ನಿತ್ಯ ಆಚರಣೆಗಳ ಜೊತೆಗೆ ನಮ್ಮ ಧಾರ್ಮಿಕ ಗ್ರಂಥ ಗಳ ಅಧ್ಯಯನ, ದೈಹಿಕ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಇವೇ ಮೊದಲಾದವುಗಳು. ಸಂಧ್ಯಾವಂದನೆ ಯ ಮೂಲಕ ದೈನಂದಿನ ಪ್ರಾರ್ಥನೆಗಳನ್ನು ಮಾಡಿ ತರ್ಪಣದ ಮೂಲಕ ಪೂರ್ವಜರನ್ನು ಸ್ಮರಿಸಿ ದೇವರ ಪೂಜೆಯನ್ನು ನಿತ್ಯ ನೈಮಿತ್ತಿಕ ವಾಗಿ ಮಾಡುತ್ತಾ, ಜೊತೆಗೆ ಶಾಸ್ತ್ರ ಗಳ ಅಧ್ಯಯನದಿಂದ ಜ್ಞಾನಾರ್ಜನೆಯನ್ನು ಮಾಡುತ್ತಾ ಇರುವುದು. ಈ ಎಲ್ಲಾ ವಿಧವಾದ ಆಚರಣೆ ಗಳಿಂದ ಆಧ್ಯಾತ್ಮಿಕ ಕರ್ತವ್ಯ ಗಳನ್ನು ನಿರ್ವಹಿಸುವುದು ಸಾಧ್ಯವಾಗುತ್ತದೆ
ವೈಶ್ರವಣ ಅರ್ಥಾತ್ ಕುಬೇರನು ಕಠಿಣ ತಪಸ್ಸನ್ನು ಆಚರಿಸಿ ಲೋಕಪಾಲಕರಲ್ಲಿ ಒಬ್ಬನಾಗಿ ಸ್ಥಾನವನ್ನು ಪಡೆದುಕೊಂಡನು ಹಾಗೂ ಪುಷ್ಪಕ ವಿಮಾನವನ್ನೂ ಬಳುವಳಿಯಾಗಿ ಪಡೆದನು. ತನ್ನ ತಂದೆ ವಿಶ್ರಾವಸುವಿನ ಆದೇಶದಂತೆ ಲಂಕಾನಗರದಲ್ಲಿ ವಾಸಮಾಡತೊಡಗಿದನು. ಕುಬೇರನ ವೈಭವೋಪೇತ ಜೀವನವನ್ನು ಕಂಡು ಕರುಬಿದ ವಿಶ್ರಾವಸುವಿನ ಎರಡನೇ ಹೆಂಡತಿ ಕೈಕಸೆಯು ತನ್ನ ಮಗ ರಾವಣನಿಗೆ ಇದೇ ರೀತಿಯ ಶ್ರೇಷ್ಟತೆಯನ್ನು ಸಾಧಿಸಲು ಪ್ರೇರೇಪಿಸಿದಳು. ತಾಯಿಯ ಮಾತಿನಂತೆ ರಾವಣನು ತನ್ನ ತಮ್ಮಂದಿರಾದ ವಿಭೀಷಣ ಕುಂಭಕರ್ಣರೊಂದಿಗೆ ಗೋಕರ್ಣಕ್ಕೆ ತೆರಳಿ ಘೋರ ತಪಸ್ಸನ್ನು ಆಚರಸಿದನು. ಈ ರೀತಿಯಲ್ಲಿ ದಶ ಸಹಸ್ರ ವರ್ಷಗಳ ಕಾಲ ತೀವ್ರವಾದ ತಪಸ್ಸನ್ನು ಆಚರಿಸಿದನು. ಪ್ರತಿ ಸಾವಿರ ವರ್ಷಗಳ ಕೊನೆಯಲ್ಲಿ ತನ್ನ ಒಂದೊಂದು ಶಿರವನ್ನು ಅಗ್ನಿಯಲ್ಲಿ ಆಹುತಿಯಾಗಿ ಕೊಡುತ್ತಿದ್ದನು. ಇದೇ ರೀತಿಯಲ್ಲಿ ಒಂಬತ್ತು ಸಾವಿರ ವರ್ಷಗಳಲ್ಲಿ ಒಂಬತ್ತು ತಲೆಗಳನ್ನು ಯಜ್ಞದಲ್ಲಿ ಅರ್ಪಿಸಿದನು. ಹತ್ತನೇ ತಲೆಯನ್ನು ಕಡಿದು ಅರ್ಪಿಸುವ ಸಮಯದಲ್ಲಿ ಬ್ರಹ್ಮನು ಪ್ರತ್ಯಕ್ಷನಾದನು. ರಾವಣನ ಭಕ್ತಿಗೆ ಮೆಚ್ಚಿದ ಬ್ರಹ್ಮನು ಅವನಿಗೆ ಅದೃಶ್ಯನಾಗುವ ವರವನ್ನು ಕೊಟ್ಟನು. ಇದರಿಂದ ಆತನು ದೇವತೆ ದಾನವರು ಹಾಗೂ ಇನ್ನಿತರ ಆಕಾಶಕಾಯಗಳಿಗೆ ಕಾಣದಂತೆ ಇರಬಲ್ಲವನಾಗಿದ್ದ. ಇಷ್ಟೇ ಅಲ್ಲದೇ ಬ್ರಹ್ಮನು ಅವನ ಎಲ್ಲಾ ತಲೆಗಳನ್ನು ಪುನಃ ಸ್ಥಾಪಿಸಿದನು. ಹೀಗೆ ರಾವಣ ತನ್ನ ಹತ್ತು ತಲೆಗಳನ್ನು ಮರಳಿ ಪಡೆದನು.
ಆರೋಗ್ಯದಾಯ ವಿದ್ಮಹೇ ಅಮೃತಕಲಶಹಸ್ತಾಯ ಧೀಮಹಿ . ತನ್ನೋ ಧನ್ವಂತರಿಃ ಪ್ರಚೋದಯಾತ್ .. ....
ಆರೋಗ್ಯದಾಯ ವಿದ್ಮಹೇ ಅಮೃತಕಲಶಹಸ್ತಾಯ ಧೀಮಹಿ .
ತನ್ನೋ ಧನ್ವಂತರಿಃ ಪ್ರಚೋದಯಾತ್ ..
ಅಧ್ಯಯನದಲ್ಲಿ ಯಶಸ್ಸಿಗೆ ಹಯಗ್ರೀವ ಮಂತ್ರ
ಉದ್ಗಿರತ್ಪ್ರಣವೋದ್ಗೀಥ ಸರ್ವವಾಗೀಶ್ವರೇಶ್ವರ . ಸರ್ವವೇದಮಯಾಽಚ....
Click here to know more..ಅನುರಾಧಾ ನಕ್ಷತ್ರ
ಅನುರಾಧಾ ನಕ್ಷತ್ರ - ಗುಣಲಕ್ಷಣಗಳು, ಹೊಂದಿಕೆಯಾಗದ ನಕ್ಷತ್ರಗಳು, ....
Click here to know more..ಶಿವ ಮಂಗಲ ಸ್ತುತಿ
ಭುವನೇ ಸದೋದಿತಂ ಹರಂ ಗಿರಿಶಂ ನಿತಾಂತಮಂಗಲಂ. ಶಿವದಂ ಭುಜಂಗಮಾಲಿನ....
Click here to know more..Ganapathy
Shiva
Hanuman
Devi
Vishnu Sahasranama
Mahabharatam
Practical Wisdom
Yoga Vasishta
Vedas
Rituals
Rare Topics
Devi Mahatmyam
Glory of Venkatesha
Shani Mahatmya
Story of Sri Yantra
Rudram Explained
Atharva Sheersha
Sri Suktam
Kathopanishad
Ramayana
Mystique
Mantra Shastra
Bharat Matha
Bhagavatam
Astrology
Temples
Spiritual books
Purana Stories
Festivals
Sages and Saints
Bhagavad Gita
Radhe Radhe