ಹಬ್ಬದ ಆಚರಣೆ ಸಾರ್ಥಕವಾಗುವುದು ಸರಿಯಾದ ನಡವಳಿಕೆಯಿಂದ

ಹಬ್ಬದ ಆಚರಣೆ ಸಾರ್ಥಕವಾಗುವುದು ಸರಿಯಾದ ನಡವಳಿಕೆಯಿಂದ

ಹಬ್ಬ, ಹರಿದಿನ, ವ್ರತ – ಇವು ದೇವರನ್ನು ಹೊರಗೆ ಹುಡುಕುವ ದಿನಗಳಲ್ಲ; ನಮ್ಮೊಳಗೆ ಅವನನ್ನು ಅರಿಯುವ ಶ್ರದ್ಧಾ ಕ್ಷಣಗಳು. ಇವತ್ತು ಯಾಕೆ ಹಬ್ಬವೆಂಬ ಪ್ರಶ್ನೆ ಕೇಳುವುದಕ್ಕಿಂತ, ಇವತ್ತು ನನ್ನ ನಡವಳಿಕೆ ಹೇಗಿದೆ ಅನ್ನುವುದು ಮುಖ್ಯ. 

ಅನುಸರಿಸಬೇಕಾದ ನಿಯಮಗಳು:

  1. ಶುದ್ಧತೆಗೆ ಬಾಳಲ್ಲಿ ಮೊದಲ ಆದ್ಯತೆ

ಸ್ನಾನ, ಸ್ವಚ್ಛ ಬಟ್ಟೆ, ಶುಭ್ರ ಮನಸ್ಸು. ಮನೆಯಲ್ಲಿ ದೀಪ ಹಚ್ಚಿ ದೇವರನ್ನು ಆಹ್ವಾನಿಸಿ. ದೇವರ ಬಳಿಗೆ ಹೋಗಬೇಕಾದಾಗ ಮೈಮನಸ್ಸು ಶುದ್ಧವಾಗಿರಬೇಕು.

  1. ಸಾತ್ವಿಕ ಆಹಾರ – ನೈವೇದ್ಯದಂತೆ ನಡವಳಿಕೆ

ಬಾಳೆ ಎಲೆ, ಬೆಲ್ಲ-ಅಕ್ಕಿ, ಹಣ್ಣು ಇತ್ಯಾದಿ ಸಾತ್ವಿಕ ಆಹಾರವನ್ನು ನೈವೇದ್ಯ ಮಾಡಬೇಕು. ಹಾಗೂ ಇದೇ ಆಹಾರವನ್ನು ಸ್ವೀಕರಿಸಬೇಕು.

  1. ಧ್ಯಾನ, ಜಪ, ಪಠಣ – ಬಾಹ್ಯ ಧ್ವನಿಯಿಂದ ಆಂತರಿಕ ಶಾಂತಿಗೆ ತಕ್ಕುದಾದ ದೇವರ

ನಾಮಸ್ಮರಣೆ, ಗಾಯತ್ರಿ ಜಪ, ದೇವಿಯ ಸ್ತೋತ್ರ ಇತ್ಯಾದಿಗಳು ನಮ್ಮೊಳಗನ್ನು ಜಾಗೃತಗೊಳಿಸುವ ಮಾರ್ಗಗಳು.

  1. ದಾನಧರ್ಮ – ಭಕ್ತಿಯ ನಿಜವಾದ ಪ್ರತೀಕ

 ಆಹಾರ, ವಸ್ತ್ರ, ಹಣ್ಣು – ಸಣ್ಣ ಕೊಡುಗೆ ಕೂಡ ಭಗವಂತನ ಮೆಚ್ಚುಗೆಗೆ ಪಾತ್ರ.

  1. ಉಪವಾಸ – ಇಂದ್ರಿಯಗಳ ಏಕಾಗ್ರತೆ

ಉಪವಾಸವಿದ್ದು ದೇವರನ್ನು ಪೂಜಿಸುವುದು ಅತ್ಯಂತ ಶ್ರೇಯಸ್ಕರ. ಫಲಾಹಾರ, ಒಂದೇ ಸಲ ಆಹಾರ ಸೇವನೆ – ಶರೀರಕ್ಕೆ  ಚೈತನ್ಯದಾಯಕ.

ತಪ್ಪಿಸಬೇಕಾದ ನಡವಳಿಕೆಗಳು

  1. ಕೋಪ, ನಿಂದೆ, ಅಹಂಕಾರ

ಹಬ್ಬದ ದಿನವೂ ನಿಂದೆ ಮಾಡಿದರೆ ಪೂಜೆಗೂ ಪಾಪಕ್ಕೂ ಎಷ್ಟು ಅಂತರ?

2 ಅಶುದ್ದನಾಗಿರುವಾಗ ದೇವರ ಪೂಜೆ ವರ್ಜ್ಯ.

  1. ದೇವರು ಮೌನ ಪ್ರಿಯ ಸದ್ದಿನೊಂದಿಗೆ ಮಾಡಿದ ಸ್ಮರಣೆಯು ನಿರರ್ಥಕ.
  1. ಆಲಸ್ಯ: 'ನಾಳೆ ಉಪವಾಸ ಮಾಡ್ತೀನಿ', 'ಇವತ್ತು ಬರೋಬ್ಬರಿ ತಿಂದ್ಕೊಳ್ಳೋಣ' – ಹೀಗೆ ಮಾಡುವುದರಿಂದ ಹಬ್ಬದ ಭಾವನೆ ಮಂಕಾಗುತ್ತದೆ.

ಹಬ್ಬಕ್ಕೊಂದು ಕೋರಿಕೆ: ದೇವರು ಬರುವ ಮುನ್ನ, ನಿನ್ನೊಳಗೆ ನೀನೇ ಮುಕ್ತವಾಗಿರು!

ಹಬ್ಬದ ಉತ್ಸವವು ದೇವರನ್ನು ನೋಡವುದಕ್ಕೆ ಅಲ್ಲ; ದೇವನಿಗೆ ನೀನು ತೋರಿಸುವ  ನಡವಳಿಕೆಗೆ. ಆಚರಣೆಗೆ ಅರ್ಥ ಬರಬೇಕಾದ್ರೆ, ಆಚರಣೆಯಲ್ಲಿ ಪವಿತ್ರತೆಯನ್ನೂ ನಂಬಿಕೆಯನ್ನು ಇಡಬೇಕು.

ಕನ್ನಡ

ಕನ್ನಡ

ವಿಭಿನ್ನ ವಿಷಯಗಳು

Click on any topic to open

Copyright © 2025 | Vedadhara test | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...

We use cookies