ಸಮರ ಕಲೆಗಳಲ್ಲಿ ಯಶಸ್ಸಿಗೆ ಮಂತ್ರ

16.2K
1.1K

Comments

krurr
ನಿಮ್ಮ ಮಂತ್ರಗಳು ನನಗೆ ಪ್ರೇರಣೆ ನೀಡುತ್ತವೆ, ಧನ್ಯವಾದಗಳು ಗುರುಜಿ. -ಲಕ್ಷ್ಮಿ ಭಟ್

ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

ಅತ್ಯುತ್ತಮ ಮಾಹಿತಿಯ ವೆಬ್‌ಸೈಟ್ -ಶಶಿಧರ ಹೆಗ್ಡೆ

ವೇದಾದಾರ ಮಂತ್ರಗಳು ನನ್ನ ದೈನಂದಿನ ಶಕ್ತಿ ಮೂಲ. ಧನ್ಯವಾದಗಳು. 🌸 -ರಾಘವ ರಾವ್

ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

Read more comments

Knowledge Bank

ಆಗಮಗಳು ಹಾಗೂ ತಂತ್ರಗಳು - ಪ್ರಾಯೋಗಿಕ ಸಿದ್ಧಾಂತ

ಆಗಮ ಹಾಗೂ ತಂತ್ರಗಳು ಪ್ರಾಯೋಗಿಕ ಆಚರಣೆಗಳ ಬಗ್ಗೆ ಹೆಚ್ಚು ಮಹತ್ವವನ್ನು ಕೊಡುತ್ತವೆ. ಅಂದರೆ ದಿನ ನಿತ್ಯದ ಜೀವನ ಕ್ರಮ ಹಾಗೂ ಆಧ್ಯಾತ್ಮಿಕ ಆಚರಣೆಗಳ ಬಗ್ಗೆ ತಿಳಿಸಿಕೊಡುತ್ತದೆ. ಆಗಮಗಳು ದೇವತಾ ಪೂಜಾ ವಿಧಿ ವಿಧಾನಗಳು, ದೇವಾಲಯ ನಿರ್ಮಾಣ, ಅರ್ಚನೆ, ಆರಾಧನೆ ಇತ್ಯಾದಿ ವಿಧಾನಗಳನ್ನು ತಿಳಿಸಿ ಕೊಡುತ್ತದೆ. ಇವುಗಳು ದೇವಾಲಯ ವಾಸ್ತುಶಿಲ್ಪ, ಉತ್ಸವಾದಿಗಳ ಬಗ್ಗೆ ತಿಳಿಸಿ ಕೊಡುತ್ತವೆ. ಇಷ್ಟೇ ಅಲ್ಲದೆ, ದೇವತಾ ಪೂಜಾ ಕ್ರಮ, ಮಡಿ ,ಮೈಲಿಗೆ, ಇತ್ಯಾದಿಗಳ ಬಗ್ಗೆಯೂ ತಿಳುವಳಿಕೆಯನ್ನು ಕೊಡುತ್ತದೆ. ತಂತ್ರಗಳು ಆಂತರಿಕ ಸಾಧನೆಗಳ ಬಗ್ಗೆ ತಿಳಿಸಿಕೊಡುತ್ತದೆ. ಧ್ಯಾನ , ಯೋಗ, ಮಂತ್ರ, ಇವುಗಳನ್ನು ಒಳಗೊಂಡಿರುತ್ತದೆ. ತಂತ್ರಗಳು ವೈಯುಕ್ತಿಕ ಆಧ್ಯಾತ್ಮಿಕ ಸಾಧನೆಗೆ ಸಹಾಯ ಮಾಡುತ್ತವೆ. ದೈವ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಬೇಕಾದ ವಿದ್ಯೆಯನ್ನು ಈ ಮೂಲಕ ತಿಳಿಯಬಹುದಾಗಿದೆ. ಆಗಮ ಹಾಗೂ ತಂತ್ರಗಳು ಜ್ಞಾನದಿಂದ ಕರ್ಮ ಪ್ರಯೋಗದ ಬಗ್ಗೆ ಮಾಹಿತಿ ಕೊಡುತ್ತವೆ. ಮಾನವರ ಆಧ್ಯಾತ್ಮಿಕ ಬದುಕಿಗೆ ಸಹಾಯ ಮಾಡುತ್ತವೆ. ಇವುಗಳಲ್ಲಿ ಕೇವಲ ಸಿದ್ಧಾಂತ ಮಾತ್ರವಲ್ಲದೆ ಪ್ರಾಯೋಗಿಕ ವಿಧಿ ವಿಧಾನಗಳನ್ನು ಹೇಳಲಾಗಿದೆ. ಆಗಮ ಹಾಗೂ ತಂತ್ರಗಳ ನೆರವಿನಿಂದ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ಜಟಿಲವಾದ ಸಮಸ್ಯೆಗಳಿಗೆ ಸರಳ ಉಪಾಯಗಳನ್ನು ಹೇಳಲಾಗಿದೆ. ಇದರಿಂದ ದಿನನಿತ್ಯದ ಬದುಕಿನಲ್ಲಿ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಆಗಮ ಹಾಗೂ ತಂತ್ರಗಳು ಆಧ್ಯಾತ್ಮಿಕತೆಯನ್ನು ಅರ್ಥೈಸಿಕೊಳ್ಳಲು ಅಗತ್ಯ.

ಮಹರ್ಷಿ ಮಾರ್ಕಾಂಡೇಯ - ಭಕ್ತಿಗೆ ಇರುವ ಶಕ್ತಿ ಹಾಗೂ ಚಿರಂಜೀವಿತ್ವ.

ಅನೇಕ ವರ್ಷಗಳ ತಪಸ್ಸಿನ ಫಲವಾಗಿ ಋಷಿ ಮೃಕಂಡು ಹಾಗೂ ಆತನ ಪತ್ನಿ ಮರುದ್ಮತಿ, ಮಾರ್ಕಾಂಡೇಯನೆಂಬ ಮಗನನ್ನು ಪಡೆದರು. ಈ ಮಗನಾದರೋ ಕೇವಲ ಹದಿನಾರು ವರ್ಷಗಳ ಅಲ್ಪಾಯುಷಿಯಾಗಿದ್ದ. ಆತನ ಹದಿನಾರನೆಯ ವರ್ಷದ ಹುಟ್ಟಿದ ದಿನದಂದು, ಸಾವಿನ ದೇವತೆಯಾದ ಯಮ ದೇವನು, ಮಾರ್ಕಾಂಡೇಯನ ಹರಣವನ್ನು ಒಯ್ಯಲು ಬಂದೇ ಬಿಟ್ಟನು. ಮಾರ್ಕಾಂಡೇಯನು ಮಹಾನ್ ಶಿವಭಕ್ತ. ಆತನು ಶಿವಲಿಂಗವನ್ನು ಬಳಸಿ ಹಿಡಿದು ಅತ್ಯಂತ ದೃಢ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾನೆ. ಅವನ ಭಕ್ತಿಗೆ ಮೆಚ್ಚಿದ ಶಿವನು, ಅವನೆದುರು ಪ್ರತ್ಯಕ್ಷನಾಗಿ ಅವನಿಗೆ ಚಿರಂಜೀವಿಯಾಗಿರುವ ವರವನ್ನು ದಯಪಾಲಿಸುತ್ತಾನೆ. ಈ ಕಥೆಯು ಭಕ್ತಿಯ ಪರಾಕಾಷ್ಠೆ ಹಾಗೂ ಅದರ ಮಹಿಮೆಯನ್ನು ಸಾರುತ್ತದೆ ಜೊತೆಗೆ ಮಹಾಮಹಿಮ ಪರಮೇಶ್ವರ ನ ಭಕ್ತವಾತ್ಸಲ್ಯವನ್ನೂ ಸಾದರ ಪಡಿಸುತ್ತದೆ.

Quiz

ಭಾರತವರ್ಷದ ಪುಣ್ಯ ನದಿಗಳ ಸಂಖ್ಯೆ ಎಷ್ಟು?
Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |