ಯುಗ

Yuga time

ಯುಗದ ಅರ್ಥ ಮತ್ತು ಪ್ರಾಮುಖ್ಯತೆಯನ್ನು ತಿಳಿಯಲು ನಾವು ಸಮಯವನ್ನು ಪುರಾಣಗಳಲ್ಲಿ ಮತ್ತು ಇತಿಹಾಸಗಳಲ್ಲಿ ಹೇಗೆ ಪರಿಗಣಿಸಲಾಗಿದೆ ಎಂದು ತಿಳಿಯಬೇಕು.  

ಕಲ್ಪ ಎಂದರೇನು?

ಬ್ರಹ್ಮಾಂಡವನ್ನು ಸೃಷ್ಟಿಸಿದ ಮೇಲೆ ಅದು 4.32 ಬಿಲಿಯನ್ ವರ್ಷಗಳು ಉಳಿಯುತ್ತದೆ. ಈ ಕಾಲಾವಧಿಯನ್ನು ಕಲ್ಪ ಎಂದು ಕರೆಯಲಾಗುತ್ತದೆ. ಇದಾದ ನಂತರ ನೈಮಿತ್ತಿಕ ಪ್ರಳಯವು ಸಂಭವಿಸುತ್ತದೆ.

ಮನ್ವಂತರ ಎಂದರೇನು?

ಒಂದು ಕಲ್ಪದಲ್ಲಿ 14 ಮನ್ವಂತರಗಳಿವೆ.

ಚತುರ್ಯುಗ ಅಥವಾ ಮಹಾಯುಗ ಎಂದರೇನು?

ಒಂದು ಮನ್ವಂತರದಲ್ಲಿ 71 ಚತುರ್ಯುಗಗಳು ಅಥವಾ ಮಹಾಯುಗಗಳು ಇವೆ. ಕೃತಯುಗ – ತ್ರೇತಾಯುಗ – ದ್ವಾಪರಯುಗ – ಕಲಿಯುಗ ಎಂಬ ಈ ನಾಲ್ಕು ಯುಗಗಳನ್ನು ಚತುರ್ಯುಗ ಎಂದು ಕರೆಯಲಾಗುತ್ತದೆ ಮತ್ತು ಇವು ಪುನರಾವರ್ತಿಸುತ್ತವೆ. ಕೃತಯುಗವನ್ನು ಸತ್ಯಯುಗವೆಂದೂ ಕರೆಯುತ್ತಾರೆ.

 

 

ಯುಗಗಳಲ್ಲಿ ಎಷ್ಟು ವರ್ಷಗಳಿವೆ?

ಕೃತಯುಗ – 17,28,000 ವರ್ಷಗಳು
ತ್ರೇತಾಯುಗ – 12,96,000 ವರ್ಷಗಳು
ದ್ವಾಪರಯುಗ – 8,64,000 ವರ್ಷಗಳು
ಕಲಿಯುಗ – 4,32,000 ವರ್ಷಗಳು

ಈಗ ಯಾವ ಯುಗವು ನಡೆಯುತ್ತಿದೆ?

ಪ್ರಸ್ತುತ ಕಲ್ಪದ ಹೆಸರು ಶ್ವೇತವರಾಹ. ಇದರಲ್ಲಿ, ಏಳನೆಯ ಮನ್ವಂತರವು ನಡೆಯುತ್ತಿದೆ. ಇದರ ಹೆಸರು ವೈವಸ್ವತ ಮನ್ವಂತರ. ಇದರಲ್ಲಿ 28ನೇ ಚತುರ್ಯುಗವು ನಡೆಯುತ್ತಿದೆ. ಅದರಲ್ಲಿ, ಈಗ ಕ್ರಿಸ್ತ ಪೂರ್ವ 3102ರಲ್ಲಿ ಪ್ರಾರಂಭವಾದ ಕಲಿಯುಗವು ನಡೆಯುತ್ತಿದೆ. ಇದು ಕ್ರಿಸ್ತ ಶಕ 4,28,899 ರಲ್ಲಿ ಕೊನೆಯಾಗಲಿದೆ. 

ಕ್ರಿ.ಶ. 2021 ರಲ್ಲಿ ಈ ವಿಶ್ವವು ಸೃಷ್ಟಿಯಾಗಿ 1,96,08,53,123 ವರ್ಷಗಳಾಗಿವೆ.

 

 

ಅನುವಾದ: ಡಿ.ಎಸ್.ನರೇಂದ್ರ

ಕನ್ನಡ

ಕನ್ನಡ

ವಿಭಿನ್ನ ವಿಷಯಗಳು

Click on any topic to open

Copyright © 2025 | Vedadhara test | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...

We use cookies