ತಂದೆ ಪುರಂದರದಾಸರ ಸ್ಮರಿಸುವೆ ಎನ್ನ ಮಂದಮತಿಗಳೆದು ಹರಿಭಟನೆನಿಸುವ
ಗುರುವ್ಯಾಸರಾಜರ ಚರಣಾಬ್ಬ ಷಟ ಚರಣ ವಿರತಿ ಭಕುತಿ ಜ್ಞಾನಾರ್ಣವನ
ವರ ಉಪನಿಷದ್ವಾರಿಧಿಗೆ ತಿಮಿಂಗಿಲಸಹನ ಧರೆಯ ಕವಿಕುಲ ಶಿಖಾಮಣಿ ಎನಿಪನ
ದಿನದಿನ ದ್ರವ್ಯಾರ್ಥಲಾಭದಲ್ಲಿ ತುಷ್ಟನ ಕನಕಲೋಪ ಸಮಾನ ಈಕ್ಷಿಸುವವನ ಘನಸಿದ್ಧಿಗಳು ತಾವು ಬರಲೊಂಡಬಡದ ಹರಿ ಗುಣಕೀರ್ತನೆಯಲ್ಲಿ ಪರವಶದಲ್ಲಿಹನ
ಭವಜಲ ಗೋಪ್ಪಾದಕ್ಕೆ ಸರಿದಾಟ ಕಾಮಕ್ರೋ ಧವ ಮೆಟ್ಟಿ ಭಕ್ತಿ ಸುಧೆಯುಂಡು ತೇಗಿ ಭುವಿಯೊಳು ನಿಜಕೀರ್ತಿ ಹರಹಿ ಪವನಮತ ದವರೆನಿಪ ದಾಸರಿಗೆ ತವರೂಪ ತೋರಿದವನ
ಕವನೋ ಮಳೆಗೆರೆದು ಹರಿದಾಸ ಪವರ್ಗಗಳಿಗೆ ವಿರಳಾನಂದವಿತ್ತರ್ಥಿಸುವರ ನವಭಕುತಿ ಮನಗಂಡು ಸವಯದಾನಂದಪುರ ಪ ಫವನು ತೋರಿಸಿದಂಥ ಬಹು ಕೃಪಾಕರನ
ಗೀತ ಠಾಯಿ ಸುಳಾದ್ಯುಗಾಭೋಗ ಪದಪದ್ಯ ವ್ರಾತ ಪ್ರಬಂಧ ರಚಿಸಿ ವಿಠಲನ
ಪ್ರೀತಿ ಬಡಿಸಿ ಪ್ರತ್ಯಕ್ಷ ಕಂಡು ನಲಿವ ವೈಷ್ಣವಾಗ್ರ ನಾಥ ಪ್ರಸನ್ನ ವೆಂಕಟಕೃಷ್ಣ ಪ್ರಿಯನ
ಪುರಂದರರಾಯರ ಪುಣ್ಯನಾಮಸ್ಮರಣೆಯನ್ನು ಜಪಿಸಿರೋ ಸುಜನರು
ಅನಂತ ಜನುಮದ ಅಘವನ್ನು ಕಳೆದ ಮ್ಯಾಲೆ ಪುನರಾವರ್ತಿಬಾರದ ಲೋಕವೊಂದಿದರು
ಆಗಮಾರ್ಥಗಳಿನುವಾಗಿ ಸಾರವ ತೆಗೆದು
ರಾಗಪದಕಾವ್ಯದಿಂದ ಶ್ರೀಗುರುಮಧ್ವಮುನಿ ಮತವ ಪೊಂದಿ ಬಲು ಭಾಗವತ ಧರ್ಮವಹಿಸಿ ಸಾಗರಶಯನನ ಗುಣವ ಕೊಂಡಾಡಿ
ಜಗದೊಳು ಯೋಗಪ್ರವಾಹದಿಂದ ಮೆರೆದ
ಸಾಗರವು ದಕ್ಷಿಣೋತ್ತರ ಪೂರ್ವಪಶ್ಚಿಮ
ಯೋಗದಲಿ ಚರಿಸಿ ಒಳಗಾಗದೆ ಕಲಿಯ ಗೆದ್ದ
ನೋಡಿದ ಮಾತ್ರಿವರ ನಯನಗಳ ದೋಷವು
ಓಡುವುವು ಲೇಶವಿರದೆ ಅಡಿದಾಮಾತುರದಿ ಇವರ ವಾರ್ತೆಯ ವದನ ಬೇಡದಿನ್ನೆಂದು ವಿಷಯ ಮಾಡಿದಾಮಾತ್ರಿರವರ ಅರ್ದನಿಯ ಕರಗಳು ಮಾಡವು ಅನ್ಯಕರ್ಮ ಕೂಡಿಮನ ಬೆರೆದು ಜಪಿಸುತ ನಿತ್ಯ ಧ್ಯಾನವನು ಮಾಡಿದವರ ಪುಣ್ಯಕೀಡು ನಾ ಕಾಣೆ!!
ಪು ಎಂದುಚ್ಚರಿಸೆ ಪುಣ್ಯಕರ್ಮಕೆ ಧರ್ಮ ಸಹಾಯವಾಗಿ ಒದಗುವುವು ರಂ ಎಸ್ ಜ್ಞಾನಾಖ್ಯಾವೆಂಬ ರತುನಾರ್ಥಗಳು ಆಯಾಸವಿಲ್ಲದೆ ಒಪ್ಪವು ದ ಎಂದುಚ್ಚರಿಸಿ ಸರ್ವಕಾಮಗಳನ್ನು ದದಾತಿ ಎಂದಾಡುವ ರ ಎನ್ನ ರಾಜ ಗೋಪಾಲವಿಠಲ ತನ್ನ ಸಾಯುಜ್ಯವಿತ್ತು ಸಲಹುವನು ಸರ್ವದಾಗಿ
ವಂದಿಪೆ ಪುರಂದರದಾಸರ ಪಾದ
ದ್ವಂದಕೆ ನಾನು ನಿರಂತರ
ಮಂದರೋದ್ಧರ ಗೋವಿಂದ ಮುಕುಂದನ
ಎಂದಿಗೂ ವಂದಿಸುತಿರ್ಪರ

Ramaswamy Sastry and Vighnesh Ghanapaathi

Copyright © 2024 | Vedadhara | All Rights Reserved. | Designed & Developed by Claps and Whistles
| | | | |