Special Homa on Gita Jayanti - 11, December

Pray to Lord Krishna for wisdom, guidance, devotion, peace, and protection by participating in this Homa.

Click here to participate

ನಿಮ್ಮ ಕನಸಿನ ಪತ್ನಿಯನ್ನು ಪಡೆಯುವ ಮಂತ್ರ

71.8K
10.8K

Comments

Security Code
29596
finger point down
ವೇದಾದಾರ ಜೀವನಕ್ಕೆ ಹುಮ್ಮಸ್ಸು ಹಾಗು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.ಬದುಕಿಗೆ ಸಮಾಧಾನ ತರುತ್ತೆ.ಅಭಿನಂದನೆಗಳು. -ಸತ್ಯನಾರಾಯಣ ಸಾಗರ.

ಆತ್ಮ ಸಾಕ್ಷಾತ್ಕಾರಕ್ಕೆ ದಾರಿ ವೇದಾದಾರ ನಿಮ್ಮ ವೇದಿಕೆ.ಧನ್ಯವಾದಗಳು.ನನಗೆ ಬಹಳ ಸಂತೋಷ ಆಗುತ್ತಿದೆ. -ವರಲಕ್ಷ್ಮೀ B.L.

🙏 ಈ ಮಂತ್ರವು ನನ್ನ ಆತ್ಮಕ್ಕೆ ಶಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ. -ಪ್ರಿಯಾ ಆರ್

ವೇದಾದಾರ ಮಂತ್ರಗಳು ನನಗೆ ಶಾಂತಿ ಮತ್ತು ಬಲವನ್ನು ನೀಡುತ್ತವೆ, ಧನ್ಯವಾದಗಳು. 🌸 🌸 -ಹರೀಶ್ ಎಂ

ಈ ಮಂತ್ರವು ನನ್ನ ಆತ್ಮಕ್ಕೆ ಉಲ್ಲಾಸವನ್ನು ನೀಡುತ್ತದೆ, ಧನ್ಯವಾದಗಳು ಗುರುಜಿ. -ರಾಧಾ ಕೆ

Read more comments

ಓಂ ಕ್ಲೀಂ ಕ್ಲೀಂ ಶ್ರೀಂ ಶ್ರೀಂ ಹ್ರೀಂ ಹ್ರೀಂ ತ್ರಿಪುರಾಲಲಿತೇ ಮದೀಪ್ಸಿತಾಂ ಯೋಷಿತಂ ದೇಹಿ ವಾಂಛಿತಂ ಕುರು ಸ್ವಾಹಾ

Knowledge Bank

ಮಹರ್ಷಿ ಮಾರ್ಕಾಂಡೇಯ - ಭಕ್ತಿಗೆ ಇರುವ ಶಕ್ತಿ ಹಾಗೂ ಚಿರಂಜೀವಿತ್ವ.

ಅನೇಕ ವರ್ಷಗಳ ತಪಸ್ಸಿನ ಫಲವಾಗಿ ಋಷಿ ಮೃಕಂಡು ಹಾಗೂ ಆತನ ಪತ್ನಿ ಮರುದ್ಮತಿ, ಮಾರ್ಕಾಂಡೇಯನೆಂಬ ಮಗನನ್ನು ಪಡೆದರು. ಈ ಮಗನಾದರೋ ಕೇವಲ ಹದಿನಾರು ವರ್ಷಗಳ ಅಲ್ಪಾಯುಷಿಯಾಗಿದ್ದ. ಆತನ ಹದಿನಾರನೆಯ ವರ್ಷದ ಹುಟ್ಟಿದ ದಿನದಂದು, ಸಾವಿನ ದೇವತೆಯಾದ ಯಮ ದೇವನು, ಮಾರ್ಕಾಂಡೇಯನ ಹರಣವನ್ನು ಒಯ್ಯಲು ಬಂದೇ ಬಿಟ್ಟನು. ಮಾರ್ಕಾಂಡೇಯನು ಮಹಾನ್ ಶಿವಭಕ್ತ. ಆತನು ಶಿವಲಿಂಗವನ್ನು ಬಳಸಿ ಹಿಡಿದು ಅತ್ಯಂತ ದೃಢ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾನೆ. ಅವನ ಭಕ್ತಿಗೆ ಮೆಚ್ಚಿದ ಶಿವನು, ಅವನೆದುರು ಪ್ರತ್ಯಕ್ಷನಾಗಿ ಅವನಿಗೆ ಚಿರಂಜೀವಿಯಾಗಿರುವ ವರವನ್ನು ದಯಪಾಲಿಸುತ್ತಾನೆ. ಈ ಕಥೆಯು ಭಕ್ತಿಯ ಪರಾಕಾಷ್ಠೆ ಹಾಗೂ ಅದರ ಮಹಿಮೆಯನ್ನು ಸಾರುತ್ತದೆ ಜೊತೆಗೆ ಮಹಾಮಹಿಮ ಪರಮೇಶ್ವರ ನ ಭಕ್ತವಾತ್ಸಲ್ಯವನ್ನೂ ಸಾದರ ಪಡಿಸುತ್ತದೆ.

ರಾವಣನು ತನ್ನ ಹತ್ತು ತಲೆಗಳನ್ನು ಬಲಿನೀಡಿದ ಕಥೆ

ವೈಶ್ರವಣ ಅರ್ಥಾತ್ ಕುಬೇರನು ಕಠಿಣ ತಪಸ್ಸನ್ನು ಆಚರಿಸಿ ಲೋಕಪಾಲಕರಲ್ಲಿ ಒಬ್ಬನಾಗಿ ಸ್ಥಾನವನ್ನು ಪಡೆದುಕೊಂಡನು ಹಾಗೂ ಪುಷ್ಪಕ ವಿಮಾನವನ್ನೂ ಬಳುವಳಿಯಾಗಿ ಪಡೆದನು. ತನ್ನ ತಂದೆ ವಿಶ್ರಾವಸುವಿನ ಆದೇಶದಂತೆ ಲಂಕಾನಗರದಲ್ಲಿ ವಾಸಮಾಡತೊಡಗಿದನು. ಕುಬೇರನ ವೈಭವೋಪೇತ ಜೀವನವನ್ನು ಕಂಡು ಕರುಬಿದ ವಿಶ್ರಾವಸುವಿನ ಎರಡನೇ ಹೆಂಡತಿ ಕೈಕಸೆಯು ತನ್ನ ಮಗ ರಾವಣನಿಗೆ ಇದೇ ರೀತಿಯ ಶ್ರೇಷ್ಟತೆಯನ್ನು ಸಾಧಿಸಲು ಪ್ರೇರೇಪಿಸಿದಳು. ತಾಯಿಯ ಮಾತಿನಂತೆ ರಾವಣನು ತನ್ನ ತಮ್ಮಂದಿರಾದ ವಿಭೀಷಣ ಕುಂಭಕರ್ಣರೊಂದಿಗೆ ಗೋಕರ್ಣಕ್ಕೆ ತೆರಳಿ ಘೋರ ತಪಸ್ಸನ್ನು ಆಚರಸಿದನು. ಈ ರೀತಿಯಲ್ಲಿ ದಶ ಸಹಸ್ರ ವರ್ಷಗಳ ಕಾಲ ತೀವ್ರವಾದ ತಪಸ್ಸನ್ನು ಆಚರಿಸಿದನು. ಪ್ರತಿ ಸಾವಿರ ವರ್ಷಗಳ ಕೊನೆಯಲ್ಲಿ ತನ್ನ ಒಂದೊಂದು ಶಿರವನ್ನು ಅಗ್ನಿಯಲ್ಲಿ ಆಹುತಿಯಾಗಿ ಕೊಡುತ್ತಿದ್ದನು. ಇದೇ ರೀತಿಯಲ್ಲಿ ಒಂಬತ್ತು ಸಾವಿರ ವರ್ಷಗಳಲ್ಲಿ ಒಂಬತ್ತು ತಲೆಗಳನ್ನು ಯಜ್ಞದಲ್ಲಿ ಅರ್ಪಿಸಿದನು. ಹತ್ತನೇ ತಲೆಯನ್ನು ಕಡಿದು ಅರ್ಪಿಸುವ ಸಮಯದಲ್ಲಿ ಬ್ರಹ್ಮನು ಪ್ರತ್ಯಕ್ಷನಾದನು. ರಾವಣನ ಭಕ್ತಿಗೆ ಮೆಚ್ಚಿದ ಬ್ರಹ್ಮನು ಅವನಿಗೆ ಅದೃಶ್ಯನಾಗುವ ವರವನ್ನು ಕೊಟ್ಟ‌ನು. ಇದರಿಂದ ಆತನು ದೇವತೆ ದಾನವರು ಹಾಗೂ ಇನ್ನಿತರ ಆಕಾಶಕಾಯಗಳಿಗೆ ಕಾಣದಂತೆ ಇರಬಲ್ಲವನಾಗಿದ್ದ. ಇಷ್ಟೇ ಅಲ್ಲದೇ ಬ್ರಹ್ಮನು ಅವನ ಎಲ್ಲಾ ತಲೆಗಳನ್ನು ಪುನಃ ಸ್ಥಾಪಿಸಿದನು. ಹೀಗೆ ರಾವಣ ತನ್ನ ಹತ್ತು ತಲೆಗಳನ್ನು ಮರಳಿ ಪಡೆದನು.

Quiz

ಶ್ರೀರಾಮನ ನಕ್ಷತ್ರ ಯಾವುದು?
Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...