Special - Hanuman Homa - 16, October

Praying to Lord Hanuman grants strength, courage, protection, and spiritual guidance for a fulfilled life.

Click here to participate

ಅನುರಾಧಾ ನಕ್ಷತ್ರ

ಅನುರಾಧಾ ನಕ್ಷತ್ರ

ವೃಶ್ಚಿಕ ರಾಶಿಯ 3 ಡಿಗ್ರಿ 20 ನಿಮಿಷದಿಂದ 16 ಡಿಗ್ರಿ 40 ನಿಮಿಷಗಳವರೆಗೆ ಹರಡುವ ನಕ್ಷತ್ರವನ್ನು ಅನುರಾಧ ಎಂದು ಕರೆಯಲಾಗುತ್ತದೆ. ಇದು ವೈದಿಕ ಖಗೋಳಶಾಸ್ತ್ರದಲ್ಲಿ 17 ನೇ ನಕ್ಷತ್ರವಾಗಿದೆ. ಆಧುನಿಕ ಖಗೋಳಶಾಸ್ತ್ರದಲ್ಲಿ, ಅನುರಾಧಾβ Acrab, δ Dschubba ಮತ್ತು π Fang Scorpionisಗೆ ಅನುರೂಪವಾಗಿದೆ.

ಗುಣಲಕ್ಷಣಗಳು

ಅನುರಾಧಾ ನಕ್ಷತ್ರದಲ್ಲಿ ಜನಿಸಿದವರ ಲಕ್ಷಣಗಳು:

  • ಬುದ್ಧಿವಂತ
  • ಕಠಿಣ ಪರಿಶ್ರಮಿ
  • ಕೌಶಲ್ಯಪೂರ್ಣ
  •  ಅಸ್ಥಿರ ಭಾವನಾತ್ಮಕತೆ
  • ಉದ್ವೇಗಪೂರ್ಣ
  • ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು
  • ಸಣ್ಣ ವಿಷಯಗಳಿಗೂ ಚಿಂತಿಸುವಿಕೆ
  • ವಿದೇಶದಲ್ಲಿ ಪ್ರಗತಿ
  • ಸ್ವಂತ ನಿಲುವು ಮತ್ತು ಅಭಿಪ್ರಾಯಕ್ಕೆ  ಮಹತ್ವ
  • ಸಹಾನುಭೂತಿ
  • ಸವಾಲುಗಳನ್ನು ಎದುರಿಸುವ ಸಾಮರ್ಥ್ಯ
  • ಪ್ರತೀಕಾರದ ಸ್ವಭಾವ
  • ಬಹಳ ವೇಗವಾಗಿ ಉತ್ಸುಕರಾಗುವುದು ಮತ್ತು ಪ್ರಚೋದನೆಗೊಳಗಾಗುವುದು
  • ಧಾರ್ಮಿಕ ಸ್ವಭಾವ
  • ಕಲೆಯಲ್ಲಿ ಆಸಕ್ತಿ
  • ಸ್ವತಂತ್ರ ಮನಸ್ಸಿನವರು
  • ಹಠಮಾರಿ
  • ಶಕ್ತಿಯುತ
  • ಪ್ರಭಾವಶಾಲಿ
  • ಆತ್ಮ ವಿಶ್ವಾಸ
  • ಶಕ್ತಿಯುತ
  • ಸ್ವಾರ್ಥಿ
  • ಆಹಾರಪ್ರಿಯ

ಮಂತ್ರ

ॐ ಮಿತ್ರಾಯ ನಮಃ

ಪ್ರತಿಕೂಲವಾದ ನಕ್ಷತ್ರಗಳು

  • ಮೂಲಾ
  • ಉತ್ತರಾಷಾಡ
  • ಧನಿಷ್ಠ
  • ಮೃಗಶಿರ ಮಿಥುನ ರಾಶಿ
  • ಆರ್ದ್ರಾ
  • ಪುನರ್ವಸು ಮಿಥುನ ರಾಶಿ

ಅನುರಾಧಾ ನಕ್ಷತ್ರದಲ್ಲಿ ಜನಿಸಿದವರು ಈ ದಿನಗಳಲ್ಲಿ ಪ್ರಮುಖ ಘಟನೆಗಳನ್ನು ತಪ್ಪಿಸಬೇಕು ಮತ್ತು ಈ ನಕ್ಷತ್ರಗಳಿಗೆ ಸೇರಿದವರೊಂದಿಗೆ ಪಾಲುದಾರಿಕೆಯನ್ನು ತಪ್ಪಿಸಬೇಕು.

ಆರೋಗ್ಯ ಸಮಸ್ಯೆಗಳು

ಅನುರಾಧಾ ನಕ್ಷತ್ರದಲ್ಲಿ ಜನಿಸಿದವರು ಈ ಕೆಳಗಿನ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ:

  • ರಕ್ತಾಲ್ಪತೆ
  • ಮುಟ್ಟಿನ ಸಮಸ್ಯೆಗಳು
  • ನೋವುಗಳು
  • ಶೀತ ಮತ್ತು ಕೆಮ್ಮು
  • ಮಲಬದ್ಧತೆ
  • ಮೂಲವ್ಯಾಧಿ
  • ಸೊಂಟದ ಮೂಳೆ ಮುರಿತ
  • ಗಂಟಲು ಮತ್ತು ಕುತ್ತಿಗೆ ನೋವು
  • ನೆಗಡಿ

ಸೂಕ್ತವಾದ ವೃತ್ತಿ

ಅನುರಾಧಾ ನಕ್ಷತ್ರದಲ್ಲಿ ಜನಿಸಿದವರಿಗೆ ಸೂಕ್ತವಾದ ಕೆಲವು ವೃತ್ತಿಗಳು:

  • ಗಣಿಗಾರಿಕೆ
  • ಪೆಟ್ರೋಲಿಯಂ
  • ಔಷಧಿಗಳು                      
  • ವೈದ್ಯಕೀಯ
  • ಅಪರಾಧಶಾಸ್ತ್ರಜ್ಞ
  • ಸಂಗೀತ ವಾದ್ಯಗಳು
  • ಚರ್ಮ ಮತ್ತು ಮೂಳೆಗಳು
  • ಉಣ್ಣೆ ಉದ್ಯಮ
  • ದಂತವೈದ್ಯ
  • ಒಳಚರಂಡಿಗೆ ಸಂಬಂಧಿಸಿದ ಕಾಮಗಾರಿ
  • ಖಾದ್ಯ ತೈಲಗಳು
  • ಭದ್ರತೆ
  • ನ್ಯಾಯಾಧೀಶರು
  • ಜೈಲು ಅಧಿಕಾರಿ
  • ನಟ
  • ಮಾಂತ್ರಿಕ

 

ಅನುರಾಧಾ ನಕ್ಷತ್ರ ವಜ್ರವನ್ನು ಧರಿಸಬಹುದೇ?

ಸಾಧ್ಯವಿಲ್ಲ

ಅದೃಷ್ಟದ ಕಲ್ಲು

 ನೀಲಮಣಿ.

ಅನುಕೂಲಕರ ಬಣ್ಣಗಳು

ಕಪ್ಪು, ಕಡು ನೀಲಿ, ಕೆಂಪು.

 

ಮದುವೆ

ಅನುರಾಧಾ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ಸರಳ ಜೀವನ ನಡೆಸಲು ಇಷ್ಟಪಡುತ್ತಾರೆ. ಅವರು ಪರಿಶುದ್ಧರು ಮತ್ತು ಗಂಡಂದಿರ ಬಗ್ಗೆ ಪ್ರೀತಿಯಿಂದ ಕೂಡಿರುತ್ತಾರೆ. ಪುರುಷರು ತಮ್ಮ ಸ್ವಾರ್ಥ ಮತ್ತು ಹಠಮಾರಿ ಸ್ವಭಾವವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.

ಪರಿಹಾರಗಳು

ಅನುರಾಧಾ ನಕ್ಷತ್ರದಲ್ಲಿ ಜನಿಸಿದವರಿಗೆ ಸೂರ್ಯ, ಮಂಗಳ/ಕುಜ ಮತ್ತು ಕೇತುಗಳ ಅವಧಿಗಳು ಸಾಮಾನ್ಯವಾಗಿ ಪ್ರತಿಕೂಲವಾಗಿರುತ್ತವೆ. ಅವರು ಈ ಕೆಳಗಿನ ಪರಿಹಾರಗಳನ್ನು ಮಾಡಬಹುದು.

ಅನುರಾಧಾ ನಕ್ಷತ್ರ

  • ಭಗವಂತ - ಮಿತ್ರ (ಆದಿತ್ಯನ ಒಂದು ರೂಪ)
  • ಆಳುವ ಗ್ರಹ - ಶನಿ
  • ಪ್ರಾಣಿ - ಜಿಂಕೆ
  • ಮರ - ಬಕುಲ, ರೆಂಜೆ
  • ಪಕ್ಷಿ - ಕಾಗೆ
  • ಭೂತ-ಅಗ್ನಿ
  • ಗಣ - ದೇವ
  • ಯೋನಿ - ಜಿಂಕೆ (ಹೆಣ್ಣು)
  • ನಾಡಿ - ಮಧ್ಯ
  • ಚಿಹ್ನೆ - ಕಮಲ
26.6K
4.0K

Comments

Security Code
24611
finger point down
ಸನಾತನ ಧರ್ಮದ ಮಹತ್ವವನ್ನು ತಿಳಿಸುತ್ತದೆ 🌼 -ನಂದಿನಿ ಜೋಶಿ

ಧರ್ಮದ ಕುರಿತು ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್ 🌺 -ಪೃಥ್ವಿ ಶೆಟ್ಟಿ

ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

ನಾವು ದೊಡ್ಡ ಪ್ರಮಾಣದ ಜ್ಞಾನವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಕಲಿಯಬಹುದು -Vijayakumari

ಇದನ್ನು ಒದಲು ತುಂಬಾ ಸಂತೋಷವಾಗುತ್ತದೆ ಮತ್ತು ಧಾರ್ಮಿಕ ಉಪಯುಕ್ತ ಮಾಹಿತಿ ಇದೆ. ನಿಮ್ಮ ಕಾರ್ಯಕ್ಕೆ ಹೃದಯಪೂರ್ವಕ ವಂದನೆಗಳು -ಶಿವರಾಮ್

Read more comments

Knowledge Bank

ಆಗಮಗಳು ಹಾಗೂ ತಂತ್ರಗಳು - ಪ್ರಾಯೋಗಿಕ ಸಿದ್ಧಾಂತ

ಆಗಮ ಹಾಗೂ ತಂತ್ರಗಳು ಪ್ರಾಯೋಗಿಕ ಆಚರಣೆಗಳ ಬಗ್ಗೆ ಹೆಚ್ಚು ಮಹತ್ವವನ್ನು ಕೊಡುತ್ತವೆ. ಅಂದರೆ ದಿನ ನಿತ್ಯದ ಜೀವನ ಕ್ರಮ ಹಾಗೂ ಆಧ್ಯಾತ್ಮಿಕ ಆಚರಣೆಗಳ ಬಗ್ಗೆ ತಿಳಿಸಿಕೊಡುತ್ತದೆ. ಆಗಮಗಳು ದೇವತಾ ಪೂಜಾ ವಿಧಿ ವಿಧಾನಗಳು, ದೇವಾಲಯ ನಿರ್ಮಾಣ, ಅರ್ಚನೆ, ಆರಾಧನೆ ಇತ್ಯಾದಿ ವಿಧಾನಗಳನ್ನು ತಿಳಿಸಿ ಕೊಡುತ್ತದೆ. ಇವುಗಳು ದೇವಾಲಯ ವಾಸ್ತುಶಿಲ್ಪ, ಉತ್ಸವಾದಿಗಳ ಬಗ್ಗೆ ತಿಳಿಸಿ ಕೊಡುತ್ತವೆ. ಇಷ್ಟೇ ಅಲ್ಲದೆ, ದೇವತಾ ಪೂಜಾ ಕ್ರಮ, ಮಡಿ ,ಮೈಲಿಗೆ, ಇತ್ಯಾದಿಗಳ ಬಗ್ಗೆಯೂ ತಿಳುವಳಿಕೆಯನ್ನು ಕೊಡುತ್ತದೆ. ತಂತ್ರಗಳು ಆಂತರಿಕ ಸಾಧನೆಗಳ ಬಗ್ಗೆ ತಿಳಿಸಿಕೊಡುತ್ತದೆ. ಧ್ಯಾನ , ಯೋಗ, ಮಂತ್ರ, ಇವುಗಳನ್ನು ಒಳಗೊಂಡಿರುತ್ತದೆ. ತಂತ್ರಗಳು ವೈಯುಕ್ತಿಕ ಆಧ್ಯಾತ್ಮಿಕ ಸಾಧನೆಗೆ ಸಹಾಯ ಮಾಡುತ್ತವೆ. ದೈವ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಬೇಕಾದ ವಿದ್ಯೆಯನ್ನು ಈ ಮೂಲಕ ತಿಳಿಯಬಹುದಾಗಿದೆ. ಆಗಮ ಹಾಗೂ ತಂತ್ರಗಳು ಜ್ಞಾನದಿಂದ ಕರ್ಮ ಪ್ರಯೋಗದ ಬಗ್ಗೆ ಮಾಹಿತಿ ಕೊಡುತ್ತವೆ. ಮಾನವರ ಆಧ್ಯಾತ್ಮಿಕ ಬದುಕಿಗೆ ಸಹಾಯ ಮಾಡುತ್ತವೆ. ಇವುಗಳಲ್ಲಿ ಕೇವಲ ಸಿದ್ಧಾಂತ ಮಾತ್ರವಲ್ಲದೆ ಪ್ರಾಯೋಗಿಕ ವಿಧಿ ವಿಧಾನಗಳನ್ನು ಹೇಳಲಾಗಿದೆ. ಆಗಮ ಹಾಗೂ ತಂತ್ರಗಳ ನೆರವಿನಿಂದ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ಜಟಿಲವಾದ ಸಮಸ್ಯೆಗಳಿಗೆ ಸರಳ ಉಪಾಯಗಳನ್ನು ಹೇಳಲಾಗಿದೆ. ಇದರಿಂದ ದಿನನಿತ್ಯದ ಬದುಕಿನಲ್ಲಿ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಆಗಮ ಹಾಗೂ ತಂತ್ರಗಳು ಆಧ್ಯಾತ್ಮಿಕತೆಯನ್ನು ಅರ್ಥೈಸಿಕೊಳ್ಳಲು ಅಗತ್ಯ.

ಬ್ರಹ್ಮವಾದೀಗಳು ಮತ್ತು ಋಷಿಕಾ ಇಬ್ಬರೂ ಒಂದೇನಾ?

ಯಾರು ವೇದಗಳ ಶಾಶ್ವತ ಜ್ಞಾನದ ಬಗ್ಗೆ ಮಾತನಾಡುತ್ತಾರೋ ಅವರನ್ನು ಬ್ರಹ್ಮವಾದೀಗಳೆಂದು ಕರೆಯಲ್ಪಡುತ್ತಾರೆ. ಬ್ರಹ್ಮವಾದಿನೀಯು ಒಬ್ಬ ಮಹಿಳಾ ಪಂಡಿತೆ ಮತ್ತು ಬ್ರಹ್ಮವಾದೀಯ ಸ್ತ್ರೀಲಿಂಗ. ಯಾವ ಪುರುಷನಿಗೆ ಮಂತ್ರವನ್ನು ಉಪದೇಶಿಸಲಾಗಿರುತ್ತದೋ ಅವರನ್ನು ಋಷಿಯೆಂದು ಕರೆಯುತ್ತಾರೆ. ಎಲ್ಲಾ ಋಷಿಕಾರುಗಳು ಬ್ರಹ್ಮವಾದಿನೀಗಳು ಆದರೆ ಎಲ್ಲಾ ಬ್ರಹ್ಮವಾದಿನೀಗಳು ಋಷಿಕಾರಾಗಿರಬೇಕಿಲ್ಲ.

Quiz

ಅಶ್ವಮೇಧಿಕ ಪರ್ವ ಯಾವ ಪುಸ್ತಕದ ಭಾಗವಾಗಿದೆ?
ಕನ್ನಡ

ಕನ್ನಡ

ಜ್ಯೋತಿಷ್ಯ

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon