ಭೀಮನು ತನ್ನ 10000 ಆನೆಗಳಿಗೆ ಸಮನಾದ ಶಕ್ತಿ ಹೊಂದಿರುವುದಕ್ಕೆ ಪ್ರಸಿದ್ಧಿಯಾಗಿದ್ದಾನೆ. ಅವನು ಇಂತಹ ಶಕ್ತಿಯನ್ನು ಹೇಗೆ ಪಡೆದ ಎಂಬುದನ್ನು ನೋಡೋಣ.
ಹುಡುಗರಾದ ಪಾಂಡವರು ಮತ್ತು ಕೌರವರು ಗಂಗಾನದಿಯ ದಡಕ್ಕೆ ವಾಯುವಿಹಾರಕ್ಕೆ ಹೋಗಿದ್ದರು. ಅಲ್ಲಿದ್ದ ಒಂದು ತುಂಬಾ ಸುಂದರವಾದ ಉದ್ಯಾನವನದಲ್ಲಿ ಅವರು ಆಟವಾಡುತ್ತಿದ್ದರು.
ದಾಯಾದಿಗಳಾದ ಅವರುಗಳು ತಾವು ಅರಮನೆಯಿಂದ ತಂದಿದ್ದ ಸವಿಯಾದ ತಿಂಡಿಗಳನ್ನು ಒಬ್ಬರಿಗೊಬ್ಬರು ತಿನ್ನಿಸುತ್ತಾ ಇದ್ದರು. ಆ ಸಮಯದಲ್ಲಿ ದುರ್ಯೋಧನನು ಭೀಮನಿಗೆ ಯಾವುದೋ ತಿಂಡಿಯಲ್ಲಿ ಕಾಲಕೂಟವೆಂಬ ಮಾರಕ ವಿಷವನ್ನು ಮಿಶ್ರಮಾಡಿ ಕೊಟ್ಟ.
Click below to watch video - ಅಬ್ಬಬ್ಬಾ ಎಷ್ಟು ಪರಾಕ್ರಮಿ ಗೊತ್ತಾ ಭೀಮ!
ನಂತರ ಅವರೆಲ್ಲರೂ ನೀರಿನಲ್ಲಿ ಆಟವಾಡಿದರು.
ಸಂಜೆಯ ವೇಳೆಗೆ ಎಲ್ಲರಿಗೂ ದಣಿವಾಗಿತ್ತು. ಅವರೆಲ್ಲರೂ ರಾತ್ರಿಯನ್ನು ಅಲ್ಲಿಯೇ ಕಳೆಯಬೇಕೆಂದು ನಿರ್ಧರಿಸಿದರು.
ಅವರೆಲ್ಲರೂ ಮಲಗಲು ಸಿದ್ದರಾದಾಗ, ದುರ್ಯೋಧನನಿಗೆ ಭೀಮನು ವಿಷದ ಪ್ರಭಾವಕ್ಕೆ ಒಳಗಾಗಿರುವುದು ಅರಿವಾಯಿತು.
ಅವನು ಭೀಮನನ್ನು ಬಳ್ಳಿಗಳಿಂದ ಕಟ್ಟಿಹಾಕಿ ಅವನನ್ನು ಗಂಗೆಯಲ್ಲಿ ತಳ್ಳಿದ.
ಗಂಗಾ ನದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮುಳುಗಿದ ಮೇಲೆ ಭೀಮನು ನಾಗಲೋಕವನ್ನು ತಲುಪಿದ. ಹಲವಾರು ನಾಗಗಳು ಅವನೊಬ್ಬ ಶತ್ರುವೆಂದು ಭಾವಿಸಿ ಕಚ್ಚಿದವು. ನಾಗಗಳ ವಿಷವು ದುರ್ಯೋಧನ ಕೊಟ್ಟ ವಿಷಕ್ಕೆ ವಿಷ-ವಿರೋಧಿಯಾಗಿ ಕೆಲಸ ಮಾಡಿತು. ಭೀಮ ಮೇಲೆದ್ದ, ತನ್ನನ್ನು ತಾನು ಒಂದುಗೂಡಿಸಿಕೊಂಡು ನಾಗಗಳನ್ನು ಹಿಡಿದು ಅವರನ್ನು ನೆಲಕ್ಕೆ ಅಪ್ಪಳಿಸಲು ಪ್ರಾರಂಭಿಸಿದ.
ನಾಗಗಳ ದೊರೆಯಾದ ವಾಸುಕಿಯು ಇದರ ಬಗ್ಗೆ ತಿಳಿದ ಮತ್ತು ಕೆಳಗೆ ಬಂದ. ಆರ್ಯಕ ಎಂಬ ಒಬ್ಬ ಹಿರಿಯ ನಾಗನು ಭೀಮನು ತನ್ನ ಮೊಮ್ಮಗನ ಮೊಮ್ಮಗ ಎಂಬುದನ್ನು ಗುರುತಿಸಿದ.
ಆರ್ಯಕನ ಮಗಳ ಮಗ, ಶೂರಸೇನ. ಅವನು ಕುಂತಿಯ ತಂದೆ.
ವಾಸುಕಿಯು ಭೀಮನಿಗೆ ಬಹಳಷ್ಟು ಸ್ವರ್ಣ ಮತ್ತು ಅಮೂಲ್ಯ ರತ್ನಗಳನ್ನು ನೀಡಿದ. ಭೀಮನನ್ನು ನಾಗಲೋಕದಲ್ಲಿರುವ ಕುಂಡಗಳಲ್ಲಿನ ಔಷಧದ ಗುಟುಕನ್ನು ಕುಡಿಯಲು ಬಿಟ್ಟರೆ ಪ್ರತಿಯೊಂದು ಕುಂಡವೂ ಅದನ್ನು ಕುಡಿದವರಿಗೆ ಒಂದು ಸಾವಿರ ಆನೆಗಳ ಬಲವನ್ನು ಕೊಡುತ್ತದೆಂದು ಆರ್ಯಕನು ಸೂಚಿಸಿದ.
ಭೀಮನು ಎಲ್ಲಾ ಕುಂಡಗಳಿಂದ ಔಷಧದ ಗುಟುಕನ್ನು ಕುಡಿದ ಮತ್ತು ಅದನ್ನು ಜೀರ್ಣಿಸಿಕೊಳ್ಳಲು ಏಳು ದಿನಗಳ ಕಾಲ ಮಲಗಿ ಬಿಟ್ಟ.
ಅವನು ಎಂಟನೆಯ ದಿನ ಮೇಲೆ ಎದ್ದ.
ಭೀಮನಿಗೆ ಅವನು 10000 ಆನೆಗಳ ಬಲವನ್ನು ಹೊಂದಿರುವುದಾಗಿಯೂ ಮತ್ತು ಯಾರಿಗೂ ಅವನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ನಾಗಗಳು ಹೇಳಿದರು.
यत् ते पीतो महाबाहो रसोऽयं वीर्यसम्भृतः।
तस्मान्नागायुतबलो रणेऽधृष्यो भविष्यसि॥
ನಾಗಗಳು ಅವನನ್ನು ಮರಳಿ ಕರೆದುಕೊಂಡು ಬಂದು ಅದೇ ಉದ್ಯಾನವನದಲ್ಲಿ ಬಿಟ್ಟರು. ಅರಮನೆಗೆ ಹಿಂತಿರುಗಿದ ಮೇಲೆ, ಭೀಮ ಏನಾಯಿತೆಂದು ಎಲ್ಲರಿಗೂ ಹೇಳಿದ.
ದುರ್ಯೋಧನನು ಭೀಮನಿಗೆ ಮತ್ತೊಮ್ಮೆ ಕಾಲಕೂಟವನ್ನು ಆಹಾರದಲ್ಲಿ ಮಿಶ್ರ ಮಾಡಿ ವಿಷವನ್ನು ಹಾಕಲು ಪ್ರಯತ್ನಿಸಿದ. ಈ ಬಾರಿ, ದೃತರಾಷ್ಟ್ರನ ಮಗನಾದ ಯುಯುಟ್ಸು ಅವನಿಗೆ ಎಚ್ಚರಿಕೆ ಕೊಟ್ಟ. ಆದರೂ ಸಹ ಭೀಮ ಆ ವಿಷ ಸೇರಿಸಿದ ಆಹಾರವನ್ನು ಸೇವಿಸಿದ ಮತ್ತು ಅದನ್ನು ಜೀರ್ಣಿಸಿಕೊಂಡ.
ಅವನಿಗೆ ಏನೂ ಆಗಲಿಲ್ಲ.
(ಮಹಾಭಾರತ. ಆದಿಪರ್ವ 127 ಮತ್ತು 128)
ದುರ್ದಮನು ವಿಶ್ವಾವಸು ಎಂಬ ಒಬ್ಬ ಗಂಧರ್ವನ ಮಗ.ಒಂದು ಸಲ ಆತ ತನ್ನ ಸಾವಿರಾರು ಜನ ಪತ್ನಿಯರೊಂದಿಗೆ ಕೈಲಾಸದ ಬಳಿಯ ಸರೋವರದಲ್ಲಿ ಆನಂದದಿಂದ ವಿಹರಿಸುತ್ತಿದ್ದ . ಸಮೀಪದಲ್ಲಿಯೇ ತಪಸ್ಸನ್ನು ಆಚರಿಸುತ್ತಿದ್ದ ವಸಿಷ್ಟ ಮುನಿಯ ತಪಸ್ಸಿಗೆ ಇದರಿಂದ ಅಡಚಣೆ ಉಂಟಾಗಿ, ಅವರು ಅವನನ್ನು ರಾಕ್ಷಸನಾಗೆಂದು ಶಪಿಸಿದರು. ಆಗ ದುರ್ದಮನ ಪತ್ನಿಯರೆಲ್ಲರು ಅವನನ್ನು ಕ್ಷಮಿಸಬೇಕೆಂದು ವಸಿಷ್ಟರನ್ನು ಬೇಡಿಕೊಂಡರು ಮಹಾವಿಷ್ಣುವಿನ ಅನುಗ್ರಹದಿಂದ ದುರ್ದಮನು ಹದಿನೇಳು ವರ್ಷಗಳ ನಂತರ ಮತ್ತೊಮ್ಮೆ ಗಂಧರ್ವನಾಗುತ್ತಾನೆಂದು ವಸಿಷ್ಟರು ಹೇಳಿದರು. ಕಾಲಾಂತರದಲ್ಲಿ ದುರ್ದಮನು ಗಾಲವ ಮುನಿಯನ್ನು ನುಂಗಲು ಪ್ರಯತ್ನಿಸುತ್ತಿದ್ದಾಗ ಮಹಾವಿಷ್ಣು ವಿನಿಂದ ಶಿರಚ್ಛೇದನಕ್ಕೆ ಒಳಗಾದನು ಹಾಗೂ ಮೂಲ ಸ್ವರೂಪವನ್ನು ಮರಳಿ ಪಡೆದನು. ಈ ಕಥೆಯ ನೀತಿ ಏನೆಂದರೆ, ಮಾಡುವ ಎಲ್ಲಾ ಕರ್ಮಗಳಿಗೆ ಪ್ರತಿಫಲ ಇದ್ದೇ ಇರುತ್ತದೆ ಆದರೆ ಅನುಕಂಪ ಹಾಗೂ ದೈವ ಕೃಪೆಯಿಂದ ದೇವತಾನುಗ್ರಹ ಸಾ
ವೇದಗಳನ್ನು ಅಪೌರುಷೇಯ ಎಂದು ಕರೆಯಲಾಗುತ್ತದೆ, ಅಂದರೆ ಅವುಗಳಿಗೆ ಲೇಖಕರಿಲ್ಲ. ವೇದಗಳು ಮಂತ್ರಗಳ ರೂಪದಲ್ಲಿ ಋಷಿಗಳ ಮೂಲಕ ಪ್ರಕಟವಾದ ಕಾಲಾತೀತ ಜ್ಞಾನದ ಭಂಡಾರಗಳಾಗಿವೆ.
ಕಾರ್ಕಳ ಶ್ರೀ ವೆಂಕಟರಮಣ ಭಜನಾ ಮಂಡಳಿ
ಅಧ್ಯಯನದಲ್ಲಿ ಯಶಸ್ಸಿಗೆ ಅಥರ್ವ ವೇದ ಮಂತ್ರ
ಯೇ ತ್ರಿಷಪ್ತಾಃ ಪರಿಯಂತಿ ವಿಶ್ವಾ ರೂಪಾಣಿ ಬಿಭ್ರತಃ । ವಾಚಸ್ಪತಿ....
Click here to know more..ಸಿದ್ಧಿ ಲಕ್ಷ್ಮೀ ಸ್ತೋತ್ರ
ಯಾಃ ಶ್ರೀಃ ಪದ್ಮವನೇ ಕದಂಬಶಿಖರೇ ಭೂಪಾಲಯೇ ಕುಂಜರೇ ಶ್ವೇತೇ ಚಾಶ್....
Click here to know more..ಅನುವಾದ: ಡಿ.ಎಸ್.ನರೇಂದ್ರ
Astrology
Atharva Sheersha
Bhagavad Gita
Bhagavatam
Bharat Matha
Devi
Devi Mahatmyam
Festivals
Ganapathy
Glory of Venkatesha
Hanuman
Kathopanishad
Mahabharatam
Mantra Shastra
Mystique
Practical Wisdom
Purana Stories
Radhe Radhe
Ramayana
Rare Topics
Rituals
Rudram Explained
Sages and Saints
Shani Mahatmya
Shiva
Spiritual books
Sri Suktam
Story of Sri Yantra
Temples
Vedas
Vishnu Sahasranama
Yoga Vasishta
आध्यात्मिक ग्रन्थ
कठोपनिषद
गणेश अथर्व शीर्ष
गौ माता की महिमा
जय श्रीराम
जय हिंद
ज्योतिष
देवी भागवत
पुराण कथा
बच्चों के लिए
भगवद्गीता
भजन एवं आरती
भागवत
मंदिर
महाभारत
योग
राधे राधे
विभिन्न विषय
व्रत एवं त्योहार
शनि माहात्म्य
शिव पुराण
श्राद्ध और परलोक
श्रीयंत्र की कहानी
संत वाणी
सदाचार
सुभाषित
हनुमान