ಪುಷ್ಯ ನಕ್ಷತ್ರ

Ashlesha Nakshatra symbol serpent

ಕರ್ಕಾಟಕ ರಾಶಿಯಲ್ಲಿ ಮೂರು ಡಿಗ್ರಿ ಇಪ್ಪತ್ತು ನಿಮಿಷದಿಂದ ಹದಿನಾರು ಡಿಗ್ರಿಯವರೆಗೆ ಹರಡಿರುವ ನಕ್ಷತ್ರವನ್ನು ಪುಷ್ಯ ನಕ್ಷತ್ರವೆಂದು ಕರೆಯುತ್ತಾರೆ. 

ಇದು ವೈದಿಕ ಖಗೋಳ ಶಾಸ್ತ್ರದಲ್ಲಿ ಎಂಟನೇ ನಕ್ಷತ್ರ. 

ಆಧುನಿಕ ಖಗೋಳ ಶಾಸ್ತ್ರದಲ್ಲಿ ಪುಷ್ಯ ನಕ್ಷತ್ರವು γ, δ, and θ Cancriಗೆ ಸಂಬಂಧಿಸಿದೆ.

 

ಗುಣಲಕ್ಷಣಗಳು

ಪುಷ್ಯ ನಕ್ಷತ್ರದಲ್ಲಿ ಹುಟ್ಟಿದವರ ಗುಣಲಕ್ಷಣಗಳು:

  • ಹಸನ್ಮುಖಿಗಳು
  • ಶೀಘ್ರಕೋಪಿಗಳು
  • ಪರಿಣಾಮಕಾರಿ ಸಂವಹನ ಕೌಶಲ್ಯಗಳು
  • ಚಾಲಾಕಿ ಮತ್ತು ಪರಿಣಾಮಕಾರಿ ವ್ಯಕ್ತಿ
  • ಉತ್ತಮ ಸಾಮಾನ್ಯ ಜ್ಞಾನ
  • ಶ್ರಮಜೀವಿ
  • ವೈಫಲ್ಯಗಳನ್ನು ಎದುರಿಸುವ ಸಾಮರ್ಥ್ಯ
  • ನಿರಾಡಂಬರ ವ್ಯಕ್ತಿ
  • ಕಷ್ಟದ ಬಾಲ್ಯ
  • ಕಡಿಮೆ ಪ್ರತಿರಕ್ಷಕ ಗುಣ
  • ಸಾಹಸಿ
  • ಜನಪ್ರಿಯ
  • ಕಾನೂನು ಪಾಲಿಸುವ ವ್ಯಕ್ತಿ
  • ವ್ಯವಸ್ಥಿತ
  • ನೀತಿವಂತ
  • ಶ್ರೀಮಂತ

 

ಹೊಂದಿಕೆಯಾಗದ ನಕ್ಷತ್ರಗಳು

  • ಮಖ
  • ಉತ್ತರಾ
  • ಚಿತ್ತ
  • ಕುಂಭ ರಾಶಿಯ ಧನಿಷ್ಠ
  • ಶತಭಿಷ
  • ಕುಂಭರಾಶಿಯ ಪೂರ್ವಾಭಾದ್ರ 

 

ಆರೋಗ್ಯ ಸಮಸ್ಯೆಗಳು

  • ಕ್ಷಯ
  • ಕ್ಯಾನ್ಸರ್
  • ಕಾಮಾಲೆ
  • ಪೈಯೋರಿಯಾ
  • ಎಕ್ಸಿಮಾ
  • ಸ್ಕರ್ವಿ(ರಕ್ತಪಿತ್ತ ವ್ಯಾಧಿ)
  • ಅಲ್ಸರ್ (ಜಠರ ಹುಣ್ಣು)
  • ಲಿವರ್ ನಲ್ಲಿ ಕಲ್ಲು (ಯಕೃತ್ತಿನಲ್ಲಿ ಕಲ್ಲು)
  • ಉಸಿರಾಟದ ಕಾಯಿಲೆಗಳು
  • ವಾಕರಿಕೆ (ಪಿತ್ತೋದ್ರೇಕ)

 

ಸೂಕ್ತ ವೃತ್ತಿ

  • ಗಣಿಗಾರಿಕೆ
  • ಪೆಟ್ರೋಲಿಯಂ ಉದ್ಯಮ
  • ಅರಣ್ಯ ಇಲಾಖೆ
  • ತೋಟಗಾರಿಕೆ
  • ನೆಲದಡಿಯ ನಿರ್ಮಾಣ
  • ಸುರಕ್ಷತೆ
  • ಕಾರಾಗೃಹ ಅಧಿಕಾರಿ
  • ನ್ಯಾಯಾದೀಶ
  • ಭೂವಿಜ್ಞಾನ
  • ಜಲವಿಜ್ಞಾನ

 

ಪುಷ್ಯ ನಕ್ಷತ್ರದವರು ವಜ್ರವನ್ನು ಧರಿಸಬಹುದೇ?

ಸೂಕ್ತವಲ್ಲ. 

 

ಅದೃಷ್ಟ ರತ್ನ

ನೀಲಮಣಿ

 

ಸೂಕ್ತ ಬಣ್ಣಗಳು

ಕಪ್ಪು, ಗಾಢ ನೀಲಿ, ಬಿಳಿ 

 

ಪುಷ್ಯ ನಕ್ಷತ್ರದವರಿಗೆ ಹೆಸರುಗಳು

ಅವಕಹಾಡಾದಿ ಪದ್ಧತಿಯಲ್ಲಿ ಪುಷ್ಯ ನಕ್ಷತ್ರದವರ ಹೆಸರಿನ ಪ್ರಾರಂಭಿಕ ಅಕ್ಷರವು:

  • ಮೊದಲ ಪಾದ/ಚರಣ – ಹೂ
  • ಎರಡನೆಯ ಪಾದ/ಚರಣ – ಹೇ
  • ಮೂರನೆಯ ಪಾದ/ಚರಣ – ಹೋ
  • ನಾಲ್ಕನೆಯ ಪಾದ/ಚರಣ – ಡಾ

ಈ ಅಕ್ಷರಗಳನ್ನು ನಾಮಕರಣದ ಸಮಯದಲ್ಲಿ ಸಾಂಪ್ರದಾಯಿಕ ನಕ್ಷತ್ರದ ನಾಮವಾಗಿ ಉಪಯೋಗಿಸಬಹುದು. 

ಕೆಲವು ಸಮುದಾಯಗಳಲ್ಲಿ, ನಾಮಕರಣದ ಸಮಾರಂಭದಲ್ಲಿ ಅಜ್ಜ-ಅಜ್ಜಿಯರ ಹೆಸರನ್ನು ಇಡಲಾಗುತ್ತದೆ. ಆ ಪದ್ಧತಿಯನ್ನು ಅನುಸರಿಸುವುದರಿಂದ ಯಾವ ತೊಂದರೆಯೂ ಇಲ್ಲ. 

ದಾಖಲೆಗಳಿಗಾಗಿ ಮತ್ತು ಎಲ್ಲಾ ಪ್ರಾಯೋಗಿಕ ಉದ್ಧೇಶಗಳಿಗಾಗಿ ಇಡುವ ಅಧಿಕೃತ ಹೆಸರು ಇದರಿಂದ ಬೇರೆಯಾಗಿರಬೇಕು. ಅದನ್ನು ವ್ಯಾವಹಾರಿಕ ಹೆಸರೆಂದು ಹೇಳುತ್ತಾರೆ. 

ಮೇಲಿನ ಪದ್ಧತಿಯಲ್ಲಿ ಇಟ್ಟ ನಕ್ಷತ್ರ ನಾಮವು ಕೇವಲ ನಿಕಟ ಕುಟುಂಬ ಸದಸ್ಯರಿಗೆ ಮಾತ್ರ ಗೊತ್ತಿರಬೇಕೆಂದು ಶಾಸ್ತ್ರವು ಸೂಚಿಸುತ್ತದೆ.

ಪುಷ್ಯ ನಕ್ಷತ್ರದಲ್ಲಿ ಹುಟ್ಟಿದವರ ಅಧಿಕೃತ ಹೆಸರಿನಲ್ಲಿ ಈ ಕೆಳಕಂಡ ಪ್ರಾರಂಭಿಕ ಅಕ್ಷರಗಳನ್ನು ಇಡಬಾರದು – ಟ, ಠ, ಡ, ಢ, ಪ, ಫ, ಬ, ಭ, ಮ, ಸ

 

ವಿವಾಹ

ಪುಷ್ಯ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣುಮಕ್ಕಳಿಗೆ ಕಷ್ಟಕರವಾದ ವೈವಾಹಿಕ ಜೀವನವಿರುತ್ತದೆ. 

ಕೋಪವನ್ನು ನಿಯಂತ್ರಣದಲ್ಲಿಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು.

 

ಪರಿಹಾರಗಳು

ಪುಷ್ಯ ನಕ್ಷತ್ರದಲ್ಲಿ ಹುಟ್ಟಿದವರಿಗೆ ರವಿ, ಮಂಗಳ/ಕುಜ ಮತ್ತು ಕೇತು ದಶೆಗಳು ಸಾಮಾನ್ಯವಾಗಿ ಪ್ರತಿಕೂಲವಾಗಿರುತ್ತದೆ. 

ಅವರು ಈ ಕೆಳಕಂಡ ಪರಿಹಾರಗಳನ್ನು ಮಾಡಬಹುದು.

 

ಮಂತ್ರ

ಓಂ ಬೃಹಸ್ಪತಯೇ ನಮಃ 

 

ಪುಷ್ಯ ನಕ್ಷತ್ರ

  • ಅಧಿಪತಿ - ಬೃಹಸ್ಪತಿ
  • ಗ್ರಹಾಧಿಪತಿ - ಶನಿ
  • ಪ್ರಾಣಿ – ಮೇಕೆ
  • ವೃಕ್ಷ - ಬೋಧಿ
  • ಪಕ್ಷಿ – ಕಾಗೆ
  • ಮೂಲಧಾತು – ಜಲ
  • ಗಣ – ದೇವ
  • ಯೋನಿ - ಆಡು (ಗಂಡು)
  • ನಾಡಿ – ಮಧ್ಯ
  • ಗುರುತು - ಹಸುವಿನ ಕೆಚ್ಚಲು

 

61.5K

Comments

an22y

ವ್ಯಾಸ ಮುನಿಗಳನ್ನು ಏಕೆ ವೇದವ್ಯಾಸರೆಂದು ಕರೆಯಲಾಯಿತು?

ವ್ಯಾಸರು ವೇದದ ಮುಖ್ಯಾಂಶವನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂದು ನಾಲ್ಕು ಭಾಗಗಳಲ್ಲಿ ವಿಭಾಗಿಸಿದ್ದರಿಂದ ಅವರನ್ನು ವೇದವ್ಯಾಸರೆಂದು ಕರೆಯಲಾಯಿತು.

ಹನುಮಾನ್ ಚಾಲೀಸಾದ ಮಹತ್ವವೇನು?

ಹನುಮಾನ್ ಚಾಲೀಸಾವು ಹನುಮಂತನ ಸದ್ಗುಣಗಳು ಮತ್ತು ಕಾರ್ಯಗಳನ್ನು ವೈಭವೀಕರಿಸುವ ಗೋಸ್ವಾಮಿ ತುಳಸೀದಾಸರು ರಚಿಸಿದ ಭಕ್ತಿಗೀತೆಯಾಗಿದೆ. ರಕ್ಷಣೆ, ಧೈರ್ಯ ಮತ್ತು ಆಶೀರ್ವಾದದ ಅಗತ್ಯವಿರುವ ಸಮಯದಲ್ಲಿ ಅಥವಾ ದೈನಂದಿನ ದಿನಚರಿಯ ಭಾಗವಾಗಿ ನೀವು ಅದನ್ನು ಪಠಿಸಬಹುದು

Quiz

ಕುರುಕ್ಷೇತ್ರ ಯುದ್ಧದ ಪ್ರಾರಂಭದಲ್ಲಿ ಶಂಖವನ್ನು ಮೊದಲು ಊದಿದವರು ಯಾರು?

ಅನುವಾದ: ಡಿ.ಎಸ್.ನರೇಂದ್ರ

Copyright © 2024 | Vedadhara | All Rights Reserved. | Designed & Developed by Claps and Whistles
| | | | |