ಆಗಮ ಹಾಗೂ ತಂತ್ರಗಳು ಪ್ರಾಯೋಗಿಕ ಆಚರಣೆಗಳ ಬಗ್ಗೆ ಹೆಚ್ಚು ಮಹತ್ವವನ್ನು ಕೊಡುತ್ತವೆ. ಅಂದರೆ ದಿನ ನಿತ್ಯದ ಜೀವನ ಕ್ರಮ ಹಾಗೂ ಆಧ್ಯಾತ್ಮಿಕ ಆಚರಣೆಗಳ ಬಗ್ಗೆ ತಿಳಿಸಿಕೊಡುತ್ತದೆ. ಆಗಮಗಳು ದೇವತಾ ಪೂಜಾ ವಿಧಿ ವಿಧಾನಗಳು, ದೇವಾಲಯ ನಿರ್ಮಾಣ, ಅರ್ಚನೆ, ಆರಾಧನೆ ಇತ್ಯಾದಿ ವಿಧಾನಗಳನ್ನು ತಿಳಿಸಿ ಕೊಡುತ್ತದೆ. ಇವುಗಳು ದೇವಾಲಯ ವಾಸ್ತುಶಿಲ್ಪ, ಉತ್ಸವಾದಿಗಳ ಬಗ್ಗೆ ತಿಳಿಸಿ ಕೊಡುತ್ತವೆ. ಇಷ್ಟೇ ಅಲ್ಲದೆ, ದೇವತಾ ಪೂಜಾ ಕ್ರಮ, ಮಡಿ ,ಮೈಲಿಗೆ, ಇತ್ಯಾದಿಗಳ ಬಗ್ಗೆಯೂ ತಿಳುವಳಿಕೆಯನ್ನು ಕೊಡುತ್ತದೆ. ತಂತ್ರಗಳು ಆಂತರಿಕ ಸಾಧನೆಗಳ ಬಗ್ಗೆ ತಿಳಿಸಿಕೊಡುತ್ತದೆ. ಧ್ಯಾನ , ಯೋಗ, ಮಂತ್ರ, ಇವುಗಳನ್ನು ಒಳಗೊಂಡಿರುತ್ತದೆ. ತಂತ್ರಗಳು ವೈಯುಕ್ತಿಕ ಆಧ್ಯಾತ್ಮಿಕ ಸಾಧನೆಗೆ ಸಹಾಯ ಮಾಡುತ್ತವೆ. ದೈವ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಬೇಕಾದ ವಿದ್ಯೆಯನ್ನು ಈ ಮೂಲಕ ತಿಳಿಯಬಹುದಾಗಿದೆ. ಆಗಮ ಹಾಗೂ ತಂತ್ರಗಳು ಜ್ಞಾನದಿಂದ ಕರ್ಮ ಪ್ರಯೋಗದ ಬಗ್ಗೆ ಮಾಹಿತಿ ಕೊಡುತ್ತವೆ. ಮಾನವರ ಆಧ್ಯಾತ್ಮಿಕ ಬದುಕಿಗೆ ಸಹಾಯ ಮಾಡುತ್ತವೆ. ಇವುಗಳಲ್ಲಿ ಕೇವಲ ಸಿದ್ಧಾಂತ ಮಾತ್ರವಲ್ಲದೆ ಪ್ರಾಯೋಗಿಕ ವಿಧಿ ವಿಧಾನಗಳನ್ನು ಹೇಳಲಾಗಿದೆ. ಆಗಮ ಹಾಗೂ ತಂತ್ರಗಳ ನೆರವಿನಿಂದ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ಜಟಿಲವಾದ ಸಮಸ್ಯೆಗಳಿಗೆ ಸರಳ ಉಪಾಯಗಳನ್ನು ಹೇಳಲಾಗಿದೆ. ಇದರಿಂದ ದಿನನಿತ್ಯದ ಬದುಕಿನಲ್ಲಿ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಆಗಮ ಹಾಗೂ ತಂತ್ರಗಳು ಆಧ್ಯಾತ್ಮಿಕತೆಯನ್ನು ಅರ್ಥೈಸಿಕೊಳ್ಳಲು ಅಗತ್ಯ.
ಭಗೀರಥನಂತಹ ಮಹಾನ್ ತಪಸ್ವಿ, ತೀವ್ರ ತಪಸ್ಸು ಮತ್ತು ಅಚಲ ದೃಢಸಂಕಲ್ಪದಿಂದ, ಅತ್ಯಂತ ಭಕ್ತಿಯಿಂದ ಗಂಗೆಯನ್ನು ಆಹ್ವಾನಿಸದ ಹೊರತು ಗಂಗೆ ಭೂಮಿಗೆ ಇಳಿಯಲು ಸಾಧ್ಯವಿರಲಿಲ್ಲ. ಅದೇ ರೀತಿ ವಜ್ರಾಯುಧವನ್ನು ಹಿಡಿದ ಇಂದ್ರನು ಆಕಾಶದಲ್ಲಿ ತಡೆಹಿಡಿದ ನೀರನ್ನು ಬಿಡುಗಡೆ ಮಾಡುವವರೆಗೆ ಮಳೆಯು ಭೂಮಿಯನ್ನು ತಲುಪುವುದಿಲ್ಲ. ಪ್ರಾಮಾಣಿಕ ಪ್ರಯತ್ನ ಮತ್ತು ಸಿದ್ಧತೆ ಇಲ್ಲದೆ, ಒಬ್ಬರು ಆತ್ಮವನ್ನು (ಆತ್ಮ) ಪಡೆಯಲು ಸಾಧ್ಯವಿಲ್ಲ ಎಂದು ಇದು ಎತ್ತಿ ತೋರಿಸುತ್ತದೆ. ಆತ್ಮವು ನಿಜವಾಗಿಯೂ ಅದನ್ನು ಹುಡುಕುವ ಮತ್ತು ಅದಕ್ಕಾಗಿ ಶ್ರಮಿಸಲು ಸಿದ್ಧರಾಗಿರುವವರನ್ನು ಮಾತ್ರ ಆರಿಸಿಕೊಳ್ಳುತ್ತದೆ.
ಓಂ ಕ್ಲೀಂ ಕೃಷ್ಣಾಯ ಗೋವಿಂದಾಯ ಗೋಪೀಜನವಲ್ಲಭಾಯ ಪರಾಯ ಪರಮಪುರುಷಾಯ ಪರಮಾತ್ಮನೇ ಪರಕರ್ಮಮಂತ್ರಯಂತ್ರೌಷಧಾಸ್ತ್ರಶಸ್ತ್ರಾಣಿ ಸಂಹರ ಸಂಹರ ಮೃತ್ಯೋರ್ಮೋಚಯ ಮೋಚಯ ಓಂ ನಮೋ ಭಗವತೇ ಮಹಾಸುದರ್ಶನಾಯ ದೀಪ್ತ್ರೇ ಜ್ವಾಲಾಪರೀತಾಯ ಸರ್ವದಿಕ್ಷೋಭಣಕರಾಯ ಹುಁ ಫಟ್ ಬ್ರಹ್ಮಣೇ ಪರಂಜ�....
ಓಂ ಕ್ಲೀಂ ಕೃಷ್ಣಾಯ ಗೋವಿಂದಾಯ ಗೋಪೀಜನವಲ್ಲಭಾಯ ಪರಾಯ ಪರಮಪುರುಷಾಯ ಪರಮಾತ್ಮನೇ ಪರಕರ್ಮಮಂತ್ರಯಂತ್ರೌಷಧಾಸ್ತ್ರಶಸ್ತ್ರಾಣಿ ಸಂಹರ ಸಂಹರ ಮೃತ್ಯೋರ್ಮೋಚಯ ಮೋಚಯ ಓಂ ನಮೋ ಭಗವತೇ ಮಹಾಸುದರ್ಶನಾಯ ದೀಪ್ತ್ರೇ ಜ್ವಾಲಾಪರೀತಾಯ ಸರ್ವದಿಕ್ಷೋಭಣಕರಾಯ ಹುಁ ಫಟ್ ಬ್ರಹ್ಮಣೇ ಪರಂಜ್ಯೋತಿಷೇ ಸ್ವಾಹಾ .