ಹನುಮಂತನು ತನ್ನ ಶಕ್ತಿಯನ್ನು ಯಾಕೆ ಮರೆತನು

ಹನುಮಂತನು ತನ್ನ ಶಕ್ತಿಯನ್ನು ಯಾಕೆ ಮರೆತನು

ಯುವ ಹನುಮಂತ ದೇವನು ತುಂಬಾ ಬಲಶಾಲಿ ಮತ್ತು ತಮಾಷೆಯಾಗಿದ್ದನು. ಅವನು ಆನೆಗಳನ್ನು ತನ್ನ ತಲೆಯ ಮೇಲೆ ಎತ್ತಬಲ್ಲವನಾಗಿದ್ದನು. ಆನೆಗಳು ಹೆದರಿದರೂ, ಹನುಮಂತನು ಆಟವಾಡುತ್ತಿದ್ದನು. ಅವನು ಅವುಗಳನ್ನು ನೋಯಿಸುತ್ತಿರಲಿಲ್ಲ.

ಆನೆಗಳು ಅವನಿಗೆ ತುಂಬಾ ಹಗುರವಾಗಿದ್ದವು, ಆದ್ದರಿಂದ ಅವನು ದೊಡ್ಡ ಮರಗಳನ್ನು ಎತ್ತಲು ಪ್ರಾರಂಭಿಸಿದನು. ಅವನು ಮರದ ಕೊಂಬೆಗಳ ಮೇಲೆ ಹಾರುತ್ತಿದ್ದನು. ಅವು ಮುರಿದು ಬೀಳುತ್ತಿದ್ದವು.

ಸಿಂಹವು ಬೇರೊಂದು ಪ್ರಾಣಿಯನ್ನು ಅಟ್ಟಿಸಿಕೊಂಡು ಬರುತ್ತಿರುವುದನ್ನು ಕಂಡ ಹನುಮಂತನು ಸಿಂಹವನ್ನು ಬಾಲದಿಂದ ಹಿಡಿದು ಎತ್ತುತ್ತಿದ್ದನು. ಕಾಡಿನಲ್ಲಿರುವ ಎಲ್ಲಾ ಪ್ರಾಣಿಗಳು ಹನುಮಂತನಿಗೆ ಹೆದರುತ್ತಿದ್ದವು. ಅವನು  ಹತ್ತಿರ ಇದ್ದಾಗ ಅವುಗಳು ಶಾಂತಿಯುತವಾಗಿ ಇರುತ್ತಿದ್ದವು. ಅವನು ಇತರ ಪ್ರಾಣಿಗಳಿಗೆ ಹಾನಿ ಮಾಡಲು ಬಿಡುವುದಿಲ್ಲ ಎಂದು ಪ್ರಾಣಿಗಳಿಗೆ  ತಿಳಿದಿತ್ತು.

ಹನುಮಂತನೂ ಒಂದು ಪರ್ವತದಿಂದ ಇನ್ನೊಂದು ಪರ್ವತಕ್ಕೆ ಜಿಗಿಯುತ್ತಿದ್ದ. ಅವನು ಇಳಿದಾಗ, ಅವನ ಕಾಲುಗಳ ಕೆಳಗೆ ಕಲ್ಲುಗಳು ಪುಡಿಯಾಗುತ್ತಿದ್ದವು.

ಹನುಮಂತನು ಋಷಿಗಳು ಮತ್ತು ಮುನಿಗಳನ್ನು ಪ್ರೀತಿಸುತ್ತಿದ್ದನು ಮತ್ತು ಗೌರವಿಸುತ್ತಿದ್ದನು. ಕೆಲವೊಮ್ಮೆ,ಕೆಲವೊಮ್ಮೆ ಅವರಿಗೆ ನೋವಾಗಬಹುದೆಂದೂ ತಿಳಿಯದೆ ಅವರ ಮಡಿಲಲ್ಲಿ ಹಾರುತ್ತಿದ್ದನು. ಅವರ  ಕಮಂಡಲಗಳನ್ನು ಹಿಡಿದುಕೊಂಡು ಓಡುತ್ತಿದ್ದನು, ಅವು ಮುರಿಯಬಹುದೆಂಬ ಅರಿವೂ ಅವನಿಗೆ ಇರಲಿಲ್ಲ.

ಅವನು ಋಷಿಗಳ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸುತ್ತಿದ್ದ. ಅವರು ಯಜ್ಞ ಮಾಡುತ್ತಿರುವುದನ್ನು ಕಂಡು ಸಹಾಯ ಮಾಡಲು ಪ್ರಯತ್ನಿಸಿದ ಆದರೆ ಅವನು ಯಜ್ಞದ ಪಾತ್ರೆಗಳನ್ನು ಸುತ್ತಲೂ ಎಸೆಯುತ್ತಿದ್ದನು. ಋಷಿಗಳು ಓಡಿ ಬಂದಾಗ ಅವನು ಮರವನ್ನು ಹತ್ತುತ್ತಿದ್ದನು.

ಋಷಿಗಳು ಹನುಮಂತನ ಪೋಷಕರಾದ ಅಂಜನಾದೇವಿ ಮತ್ತು ಕೇಸರಿಗೆ ದೂರು ನೀಡಿದರು, ಆದರೆ ಏನೂ ಸಹಾಯವಾಗಲಿಲ್ಲ. ಆದ್ದರಿಂದ, ಅವರು ಅವನಿಗೆ ಒಂದು ಸಣ್ಣ ಶಾಪವನ್ನು ನೀಡಿದರು. ಅವರು ಹೇಳಿದರು, 'ನೀನು ದೀರ್ಘಕಾಲ ನಿನ್ನ  ಶಕ್ತಿಯನ್ನು ಮರೆತುಬಿಡುವೆ.'

ಇದಾದ ನಂತರ, ಹನುಮಂತನು ಶಾಂತನಾದನು ಮತ್ತು ಇತರರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಿದನು. ಬಹಳ ಸಮಯದ ನಂತರ, ಜಾಂಬವಂತನು ಅವನಿಗೆ ಅವನ ಶಕ್ತಿಯನ್ನು ನೆನಪಿಸಿದನು ಇದರಿಂದ ತಾನು ಎಷ್ಟು ಬಲಶಾಲಿ ಎಂಬುದನ್ನು ಅವನು ನೆನಪಿಸಿಕೊಂಡನು.

ಆಂಜನೇಯಾಯ ನಮಃ

 

ಕನ್ನಡ

ಕನ್ನಡ

ವಿಭಿನ್ನ ವಿಷಯಗಳು

Click on any topic to open

Copyright © 2025 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...

We use cookies