Drishti Durga Homa for Protection from Evil Eye - 5, November

Pray for protection from evil eye by participating in this homa.

Click here to participate

ಸ್ವಾತಿ ನಕ್ಷತ್ರ

ಸ್ವಾತಿ ನಕ್ಷತ್ರ

ತುಲಾ ರಾಶಿಯ 6 ಡಿಗ್ರಿ 40 ನಿಮಿಷದಿಂದ 20 ಡಿಗ್ರಿ ವರೆಗೆ ಹರಡಿರುವ ನಕ್ಷತ್ರವನ್ನು ಸ್ವಾತಿ ಎಂದು ಕರೆಯಲಾಗುತ್ತದೆ. ಇದು ವೈದಿಕ ಖಗೋಳಶಾಸ್ತ್ರದಲ್ಲಿ 15 ನೇ ನಕ್ಷತ್ರವಾಗಿದೆ. ಆಧುನಿಕ ಖಗೋಳಶಾಸ್ತ್ರದಲ್ಲಿ, ಸ್ವಾತಿ Arcturusಗೆ ಅನುರೂಪವಾಗಿದೆ.

ಗುಣಲಕ್ಷಣಗಳು

ಸ್ವಾತಿ ನಕ್ಷತ್ರದಲ್ಲಿ ಜನಿಸಿದವರ ಲಕ್ಷಣಗಳು:

  • ಚಾಣಾಕ್ಷ
  • ಸುಖಕರ ಪ್ರವೃತ್ತಿ
  • ದಾನ ಧರ್ಮ ಪ್ರವೃತ್ತಿ
  • ನೀತಿವಂತ
  • ಕರುಣಿ
  • ಮಹತ್ವಾಕಾಂಕ್ಷಿ
  • ಬುದ್ಧಿವಂತ
  • ಉತ್ತಮ ಸಂವಹನ ಕೌಶಲ್ಯಗಳು
  • ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ
  • ಮದ್ಯಪಾನ, ಧೂಮಪಾನ ಇತ್ಯಾದಿಗಳತ್ತ ಒಲವು
  • ಅಲ್ಪ ಸ್ವಭಾವ
  • ಸ್ವತಂತ್ರ ಚಿಂತನೆ
  • ಮಾನವೀಯ ಗುಣ ಉಳ್ಳವ
  • ವಿನೀತ
  • ಅರ್ಥಗರ್ಭಿತ
  • ಆತ್ಮೀಯ ನಡವಳಿಕೆ
  • ವ್ಯಾಪಾರ ಕೌಶಲ್ಯಗಳು
  • ವ್ಯವಸ್ಥಿತ

ಮಂತ್ರ

ಓಂ ವಾಯವೇ ನಮಃ

ಪ್ರತಿಕೂಲವಾದ ನಕ್ಷತ್ರಗಳು

  • ಅನುರಾಧಾ
  • ಮೂಲ
  • ಉತ್ತರಾಷಾಡ
  • ಕೃತಿಕ ವೃಷಭ ರಾಶಿ
  • ರೋಹಿಣಿ
  • ಮೃಗಶಿರ ವೃಷಭ ರಾಶಿ

ಸ್ವಾತಿ ನಕ್ಷತ್ರದಲ್ಲಿ ಜನಿಸಿದವರು ಈ ದಿನಗಳಲ್ಲಿ ಪ್ರಮುಖ ಘಟನೆಗಳನ್ನು ತಪ್ಪಿಸಬೇಕು ಮತ್ತು ಈ ನಕ್ಷತ್ರಗಳಿಗೆ ಸೇರಿದವರೊಂದಿಗೆ ಪಾಲುದಾರಿಕೆಯನ್ನು ತಪ್ಪಿಸಬೇಕು.

ಆರೋಗ್ಯ ಸಮಸ್ಯೆಗಳು

ಸ್ವಾತಿ ನಕ್ಷತ್ರದಲ್ಲಿ ಜನಿಸಿದವರು ಈ ಕೆಳಗಿನ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ:

  • ಮೂತ್ರದ ಕಾಯಿಲೆಗಳು
  • ಚರ್ಮ ರೋಗಗಳು
  • ತೊನ್ನು ರೋಗ
  • ಕುಷ್ಠರೋಗ
  • ಮಧುಮೇಹ
  • ಮೂತ್ರಪಿಂಡದ ತೊಂದರೆಗಳು

ಸೂಕ್ತವಾದ ವೃತ್ತಿ

ಸ್ವಾತಿ ನಕ್ಷತ್ರದಲ್ಲಿ ಜನಿಸಿದವರಿಗೆ ಸೂಕ್ತವಾದ ಕೆಲವು ವೃತ್ತಿಗಳು:

  • ವಿದ್ಯುತ್ ಉಪಕರಣಗಳು
  • ವಾಹನಗಳು
  • ಸಾರಿಗೆ
  • ಪ್ರಯಾಣ ಮತ್ತು ಪ್ರವಾಸೋದ್ಯಮ
  • ಸಿನಿಮಾ
  • ದೂರದರ್ಶನ
  • ಸಂಗೀತ
  • ಕಲೆಗಳು
  • ಪ್ರದರ್ಶನ
  • ಅಲಂಕಾರ
  • ವಿಜ್ಞಾನಿ
  • ನ್ಯಾಯಾಧೀಶರು
  • ಕವಿ
  • ನಿರೂಪಕ
  • ಬೇಕರಿ
  • ಹಾಲು ಹಾಗೂ ಅದರ ಉತ್ಪನ್ನ ಗಳು
  • ಚರ್ಮದ ಉದ್ಯಮ
  • ಅಡುಗೆ
  • ಪರಿಚಾರಕ
  • ಛಾಯಾಗ್ರಹಣ
  • ವೀಡಿಯೊಗ್ರಫಿ
  • ಉಡುಪುಗಳು
  • ಸುಗಂಧ ದ್ರವ್ಯಗಳು
  • ಪ್ಲಾಸ್ಟಿಕ್ಸ್
  • ಗಾಜು

 

ಸ್ವಾತಿ ನಕ್ಷತ್ರ ವಜ್ರವನ್ನು ಧರಿಸಬಹುದೇ?

ಅನುಕೂಲಕರ.

ಅದೃಷ್ಟದ ಕಲ್ಲು

ಗೋಮೇದಕ

ಅನುಕೂಲಕರ ಬಣ್ಣಗಳು

ಕಪ್ಪು, ಬಿಳಿ, ತಿಳಿ ನೀಲಿ

 

ಮದುವೆ

ಸ್ವಾತಿ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ಆರಾಮದಾಯಕ ಮತ್ತು ಯಶಸ್ವಿ ವೈವಾಹಿಕ ಜೀವನವನ್ನುನಡೆಸುತ್ತಾರೆ. ಅವರು ಉದಾತ್ತತೆ, ಉತ್ತಮ ಗುಣನಡತೆ, ಹಾಗೂ ಸಂಗಾತಿಯೊಂದಿಗೆ ಬದ್ಧತೆ  ಈ ಗುಣಗಳನ್ನು ಹೊಂದಿರುತ್ತಾರೆ. ಪುರುಷರು ಕುಡಿತದಂತಹ ದುಶ್ಚಟಗಳಿಂದ ದೂರವಿರಬೇಕು.

ಪರಿಹಾರಗಳು

ಸ್ವಾತಿ ನಕ್ಷತ್ರದಲ್ಲಿ ಜನಿಸಿದವರಿಗೆ ಸೂರ್ಯ, ಶನಿ ಮತ್ತು ಕೇತುಗಳ ಅವಧಿಗಳು ಸಾಮಾನ್ಯವಾಗಿ ಪ್ರತಿಕೂಲವಾಗಿರುತ್ತವೆ. ಅವರು ಈ ಕೆಳಗಿನ ಪರಿಹಾರಗಳನ್ನು ಮಾಡಬಹುದು -

ಸ್ವಾತಿ ನಕ್ಷತ್ರ

  • ಭಗವಂತ - ವಾಯು
  • ಆಡಳಿತ ಗ್ರಹ - ರಾಹು
  • ಪ್ರಾಣಿ - ಎಮ್ಮೆ
  • ಮರ - ಅರ್ಜುನ ಮರ
  • ಪಕ್ಷಿ - ಕಾಗೆ
  • ಭೂತ - ಅಗ್ನಿ
  • ಗಣ - ದೇವ
  • ಯೋನಿ - ಎಮ್ಮೆ (ಗಂಡು)
  • ನಾಡಿ - ಅಂತ್ಯ
  • ಚಿಹ್ನೆ - ಹವಳ
77.5K
11.6K

Comments

Security Code
18111
finger point down
ತುಂಬಾ ಉಪಯುಕ್ತ -ಪವಿತ್ರಾ ಹೆಗ್ಡೆ

ತುಂಬಾ ಉಪಯುಕ್ತ ವೆಬ್‌ಸೈಟ್ 😊 -ಅಜಯ್ ಗೌಡ

ಜ್ಞಾನಸಂಪತ್ತಿನ ವರ 😊 -ಆರತಿ ಶೆಟ್ಟಿ

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ಮಾಲತಿ

ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna

Read more comments

Knowledge Bank

ಮಹಾಭಾರತ -

ಎಲ್ಲಾ ಜೀವಿಗಳ ಬಗ್ಗೆ ಸಹಾನುಭೂತಿಯು ಧರ್ಮದ ಅಡಿಪಾಯವಾಗಿದೆ.

ರಾವಣನು ತನ್ನ ಹತ್ತು ತಲೆಗಳನ್ನು ಬಲಿನೀಡಿದ ಕಥೆ

ವೈಶ್ರವಣ ಅರ್ಥಾತ್ ಕುಬೇರನು ಕಠಿಣ ತಪಸ್ಸನ್ನು ಆಚರಿಸಿ ಲೋಕಪಾಲಕರಲ್ಲಿ ಒಬ್ಬನಾಗಿ ಸ್ಥಾನವನ್ನು ಪಡೆದುಕೊಂಡನು ಹಾಗೂ ಪುಷ್ಪಕ ವಿಮಾನವನ್ನೂ ಬಳುವಳಿಯಾಗಿ ಪಡೆದನು. ತನ್ನ ತಂದೆ ವಿಶ್ರಾವಸುವಿನ ಆದೇಶದಂತೆ ಲಂಕಾನಗರದಲ್ಲಿ ವಾಸಮಾಡತೊಡಗಿದನು. ಕುಬೇರನ ವೈಭವೋಪೇತ ಜೀವನವನ್ನು ಕಂಡು ಕರುಬಿದ ವಿಶ್ರಾವಸುವಿನ ಎರಡನೇ ಹೆಂಡತಿ ಕೈಕಸೆಯು ತನ್ನ ಮಗ ರಾವಣನಿಗೆ ಇದೇ ರೀತಿಯ ಶ್ರೇಷ್ಟತೆಯನ್ನು ಸಾಧಿಸಲು ಪ್ರೇರೇಪಿಸಿದಳು. ತಾಯಿಯ ಮಾತಿನಂತೆ ರಾವಣನು ತನ್ನ ತಮ್ಮಂದಿರಾದ ವಿಭೀಷಣ ಕುಂಭಕರ್ಣರೊಂದಿಗೆ ಗೋಕರ್ಣಕ್ಕೆ ತೆರಳಿ ಘೋರ ತಪಸ್ಸನ್ನು ಆಚರಸಿದನು. ಈ ರೀತಿಯಲ್ಲಿ ದಶ ಸಹಸ್ರ ವರ್ಷಗಳ ಕಾಲ ತೀವ್ರವಾದ ತಪಸ್ಸನ್ನು ಆಚರಿಸಿದನು. ಪ್ರತಿ ಸಾವಿರ ವರ್ಷಗಳ ಕೊನೆಯಲ್ಲಿ ತನ್ನ ಒಂದೊಂದು ಶಿರವನ್ನು ಅಗ್ನಿಯಲ್ಲಿ ಆಹುತಿಯಾಗಿ ಕೊಡುತ್ತಿದ್ದನು. ಇದೇ ರೀತಿಯಲ್ಲಿ ಒಂಬತ್ತು ಸಾವಿರ ವರ್ಷಗಳಲ್ಲಿ ಒಂಬತ್ತು ತಲೆಗಳನ್ನು ಯಜ್ಞದಲ್ಲಿ ಅರ್ಪಿಸಿದನು. ಹತ್ತನೇ ತಲೆಯನ್ನು ಕಡಿದು ಅರ್ಪಿಸುವ ಸಮಯದಲ್ಲಿ ಬ್ರಹ್ಮನು ಪ್ರತ್ಯಕ್ಷನಾದನು. ರಾವಣನ ಭಕ್ತಿಗೆ ಮೆಚ್ಚಿದ ಬ್ರಹ್ಮನು ಅವನಿಗೆ ಅದೃಶ್ಯನಾಗುವ ವರವನ್ನು ಕೊಟ್ಟ‌ನು. ಇದರಿಂದ ಆತನು ದೇವತೆ ದಾನವರು ಹಾಗೂ ಇನ್ನಿತರ ಆಕಾಶಕಾಯಗಳಿಗೆ ಕಾಣದಂತೆ ಇರಬಲ್ಲವನಾಗಿದ್ದ. ಇಷ್ಟೇ ಅಲ್ಲದೇ ಬ್ರಹ್ಮನು ಅವನ ಎಲ್ಲಾ ತಲೆಗಳನ್ನು ಪುನಃ ಸ್ಥಾಪಿಸಿದನು. ಹೀಗೆ ರಾವಣ ತನ್ನ ಹತ್ತು ತಲೆಗಳನ್ನು ಮರಳಿ ಪಡೆದನು.

Quiz

ಶ್ರೀಕೃಷ್ಣ ಮತ್ತು ರುಕ್ಮಿಣಿಯ ಮಗಳು ಯಾರು?
ಕನ್ನಡ

ಕನ್ನಡ

ಜ್ಯೋತಿಷ್ಯ

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon