ಶ್ರೀ ಜಗನ್ನಾಥದಾಸಸ್ತುತಿ
- ರಾಗ -- ಧನಾಸರಿ ತಂಗಿ ನೀ ಕೇಳಿದ್ಯಾ ಅಂಗನಾಮಣೀ | ರಂಗವಲಿದ ಭಾಗವತರ ಮಹಿಮೆಗಳ
ಶ್ರವಣಾದಿ ನವವಿಧ | ಸವಿಯ ಭಕುತಿ ಇಂದ | ಪ್ರವೀಣರೆನಿಸಿ ಶ್ರೀ ಮಾ | ಧವನ ಧ್ಯಾನಿಪ ಖ್ಯಾತಿ ಅಮಲ ಸತ್ಕರ್ಮದಿ | ಶಮ ದಮ ಪೂರ್ವಕ | ಅಮಿತ ಮಹಿಮ ನಂಘ್ರ ಕಮಲಾರ್ಚಿಪರ ಖ್ಯಾತಿ
ಶ್ರೀದವಿರಲನ ಪಾದ ಭಜಕರಾದ | ಸಾಧುವರ್ಯರ ಸುಬೋಧ ಬಣ್ಣಿಪರ ಖ್ಯಾತಿ
ರಾಗ -- ಶಂಕರಾಭರಣ ಯಾತಕಿನ್ನನಾಥನೆಂಬುವದು ಕರುಣಾಳು ಜಗಸ್ನಾಥದಾಸರ ಸೇರಿಕೊಂಬುವುದು
ಭೀತಿಕರ ಬಹುಜನ್ಮಕೃತ ಮಹಾ ಪಾತಕಾದಿಗಳನು ಭೇದಿಸಿ ಮಾತುಳಾಂತಕ ನಂಘ್ರಕುಮುದದಿ ನೀತಭಕ್ತಿಯ ನೀಡಿ ಸಲಹುವ
ಘೋರತರ ಸಂಸಾರಪಾರಾವಾರ ದಾಟಿಸುವಾ ಲಕ್ಷ್ಮೀನಾರಸಿಂಹನ ನಿತ್ಯಪೂಜಾ ಭಾರ ವಹಿಸಿರುವಾ ಮೂರುಲೋಕೋದ್ದಾರ ದುರಿಘಾರಿ ಕೃಷ್ಣ ಕಥಾಮೃತಾಭಿಯ ಸಾರ ತೆಗೆದು ಬೀರಿ ಕರುಣವ ತೋರಿ ಸುಜನೋದ್ಧಾರಮಾಡಿದ ವೇದ ಶಾಸ್ತ್ರಪುರಾಣವೆಲ್ಲವ ತೋರಿಲ್ಲಿಟ್ಟಿಹರು ಬಹುವಿಧವಾದ ದುರ್ಮತವಾದಿಗಳ ಮಾರ್ಗದಿ ಕಟ್ಟಿಹರೂ
ಮೋದತೀರ್ಥಮತಾನುಗತ ಸಾದಪೂರ್ಣ ಪರಮಾತ್ಮದರ್ಶನ ಶ್ರೀದನೊಲಿದು ಕೃಪಾಕಟಾಕ್ಷಪ್ರಸಾದ ಒಲಿವ ವಿನೋದಗೊಳಿಸುತ
ವೇದ ಶಾಸ್ತ್ರಪುರಾಣವೆಲ್ಲವ ತೋರಿಲ್ಲಿಟ್ಟಹರು ಬಹುವಿಧವಾರ ದುರ್ಮತವಾದಿಗಳ ಮಾರ್ಗದಿ ಕಟ್ಟಿಹರೂ ಮೋದತೀರ್ಥಮತಾನುಗತ ಸಾದಪೂರ್ಣ ಪರಮಾತ್ಮದರ್ಶನ ಶ್ರೀದನೊಲಿದು ಕೃಪಾಕಟಾಕ್ಷಪ್ರಸಾದ ಒಲಿವ ವಿನೋದಗೊಳಿಸುತ
ಶ್ರೀ ರಮಾಪತಿ ಸರ್ವ ಸುಗುಣಾಧಾರ ದಯದಿಂದ ಮೂರೂರ ಸೇರಿ ಬರುವದು ಸರ್ವಸಂಪತ್ಸಾರವಾನಂದ ಕಾರುಣಿಕತನದಿಂದಲಿಂತುಪಕಾರ ಮಾಡಿದ ದೀನ ಜನರಿಗೆ ಧೀರ ಶ್ರೀದವಿಠಲನ ತೋರಿದನು ನಿಜಭಕ್ತಜನರಿಗೆ
ರಾಗ
ಆನಂದಭೈರವಿ ಸಂಗಸುಖವ ಬಯಸಿ ಬದುಕಿರೊ ರಂಗವಲಿದ ಭಾಗವತರ
ಸಂಗಸುಖವ ಬಯಸಿ ಬದುಕಿ
ಭಂಗಬಡಿವ ಭವವನೂಕಿ ಹಿಂಗದೆ 'ನರಸಿಂಗನನ್ನು ಕಂಗಳಿಂದ ಕಾಣುತಿಹರ
ಪುಟ್ಟದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ ಶಿಷ್ಟಸದಾಚಾರದಲ್ಲಿ ನಿರತರಾಗಿ ನಿತ್ಯ ಮುದ್ದು ಕೃಷ್ಣ ಕೀರ್ತನೆಯ ಪಾಡುತ ಮಧ್ವಮತವ ಪುಷ್ಟಿಗೈಸಿ ಖಳರಕಾಡುತ ಕಾಮಕರ್ಮ ಬಿಟ್ಟು ಭಕ್ತಿಯನ್ನೆ ಮಾಡುತ ಬಂದಲಾಭ ನಷ್ಟ ತುಷ್ಟಿಗಳಿಗೆ ಒಡಂಬಟ್ಟ ಬಗೆಯ ಪೇಳಲೆಷ್ಟು
ಭೂತದಯಾಶೀಲರಾದ ನೀತಗುರುದ್ವಾರ ಜಗ
Astrology
Atharva Sheersha
Bhagavad Gita
Bhagavatam
Bharat Matha
Devi
Devi Mahatmyam
Ganapathy
Glory of Venkatesha
Hanuman
Kathopanishad
Mahabharatam
Mantra Shastra
Mystique
Practical Wisdom
Purana Stories
Radhe Radhe
Ramayana
Rare Topics
Rituals
Rudram Explained
Sages and Saints
Shiva
Spiritual books
Sri Suktam
Story of Sri Yantra
Temples
Vedas
Vishnu Sahasranama
Yoga Vasishta