ಭಾರತ ಕಥಾ ಸಾರ

bharata katha sara book front page

ಈ ಪುಸ್ತಕವನ್ನು ಅನ್ನಿ ಬೆಸೆಂಟ್ ಅವರು 1899 ರಲ್ಲಿ ಬರೆದಿದ್ದಾರೆ. ಇದು ಮಹಾಭಾರತದ ಕೆಲವು ಪಾಠಗಳನ್ನು ಒಳಗೊಂಡಿದೆ. ಮುಖ್ಯ ವಿಷಯಗಳು - ವೀರರ ಯುವಕರು, ಪಾಂಡವರ ಯಶಸ್ಸು ಮತ್ತು ವೈಫಲ್ಯ, 13 ವರ್ಷಗಳ ವನವಾಸ, ಶಾಂತಿ ಅಥವಾ ಯುದ್ಧ? ಯುಧಿಷ್ಟಿರನ ಪಾಪ, ಮಹಾನ್ ಬೋಧನೆಗಳು, ಇತ್ಯಾದಿ.

 

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

 

13.2K

Comments

u4ze6
Brilliant! -Abhilasha

Remarkable! ✨🌟👏 -User_se91ur

Superrrrrr..thanks.. -Sakshi Sthul

Phenomenal! 🙏🙏🙏🙏 -User_se91xo

Good Spiritual Service -Rajaram.D

Read more comments

ಬ್ರಹ್ಮವಾದೀಗಳು ಮತ್ತು ಋಷಿಕಾ ಇಬ್ಬರೂ ಒಂದೇನಾ?

ಯಾರು ವೇದಗಳ ಶಾಶ್ವತ ಜ್ಞಾನದ ಬಗ್ಗೆ ಮಾತನಾಡುತ್ತಾರೋ ಅವರನ್ನು ಬ್ರಹ್ಮವಾದೀಗಳೆಂದು ಕರೆಯಲ್ಪಡುತ್ತಾರೆ. ಬ್ರಹ್ಮವಾದಿನೀಯು ಒಬ್ಬ ಮಹಿಳಾ ಪಂಡಿತೆ ಮತ್ತು ಬ್ರಹ್ಮವಾದೀಯ ಸ್ತ್ರೀಲಿಂಗ. ಯಾವ ಪುರುಷನಿಗೆ ಮಂತ್ರವನ್ನು ಉಪದೇಶಿಸಲಾಗಿರುತ್ತದೋ ಅವರನ್ನು ಋಷಿಯೆಂದು ಕರೆಯುತ್ತಾರೆ. ಎಲ್ಲಾ ಋಷಿಕಾರುಗಳು ಬ್ರಹ್ಮವಾದಿನೀಗಳು ಆದರೆ ಎಲ್ಲಾ ಬ್ರಹ್ಮವಾದಿನೀಗಳು ಋಷಿಕಾರಾಗಿರಬೇಕಿಲ್ಲ.

ಶಿವ ಪುರಾಣದ ಪ್ರಕಾರ ಭಸ್ಮವನ್ನು ಧರಿಸುವುದು ಏಕೆ ಮುಖ್ಯ?

ಭಸ್ಮವನ್ನು ಧರಿಸುವುದರಿಂದ ನಮ್ಮನ್ನು ಭಗವಂತ ಶಿವನೊಂದಿಗೆ ಸಂಪರ್ಕಿಸುತ್ತದೆ, ತೊಂದರೆಗಳಿಂದ ಪರಿಹಾರವನ್ನು ನೀಡುತ್ತದೆ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಹೆಚ್ಚಿಸುತ್ತದೆ

Quiz

ದಶರಥನ ರಾಜಪುರೋಹಿತರು ಯಾರು?

ಪ್ರಪಂಚದಲ್ಲಿನ ಸಮಸ್ತ ಗ್ರಂಥಗಳಲ್ಲಿಯೂ ಅತ್ಯುತ್ತಮವೆನಿಸಿಕೊಂಡಿ ರುವ ಮಹಾಭಾರತವನ್ನು ಈಗ ನಾವು ಓದಲು ಉಪಕ್ರಮಿಸಿರುವೆವು. ಹಾಗೆ ಪ್ರಾರಂಭಿಸುವುದಕ್ಕೆ ಮೊದಲು ನಾವು ಓದುವ ಗ್ರಂಥವಿಂತಹುದೆಂಬದಾಗಿಯೂ ನಮ್ಮ ಮನಸ್ಸನ್ನು ಯಾವ ಸ್ಥಿತಿಯಲ್ಲಿಟ್ಟು ಕೊಂಡು ಓದಬೇಕೆಂಬದಾಗಿಯೂ, ಸ್ವಲ್ಪ ವಿಚಾರಮಾಡುವುದು ಅತ್ಯಾವಶ್ಯಕವು. ಏಕೆಂದರೆ ಗ್ರಂದಾವಗಾಹನಕ್ಕೆ ನಮ್ಮ ಮನಸ್ಸಿನ ಭಾವವು ಮುಖ್ಯ ಕಾರಣವು. ಮನಸ್ಸು ಸರಿಯಾದ ಸ್ಥಿತಿ ಯಲ್ಲಿ ಇದ್ದುದಾದರೆ ನಾವು ಓದುವ ಗ್ರಂಥವನ್ನು ಸುಲಭವಾಗಿ ತಿಳಿದುಕೊಳ್ಳ ಬಹುದು. ಇಲ್ಲದಿದ್ದರೆ ಅದನ್ನು ಕಷ್ಟ ಪಟ್ಟು ತಪ್ಪಾಗಿ ಗ್ರಹಿಸುವೆವು. ಹೇಗೆಂ ದರೆ, ಒಂದು ಪದಾರ್ಥವನ್ನು ನಾವು ನೋಡಲೆಣಿಸಿದಾಗ ಮುಖವನ್ನು ಆಕಡೆ ತಿರುಗಿಸಿ ಕಣ್ಣನ್ನು ತೆರೆದು ನೋಡಿದಲ್ಲದೇ ಬೇರೇ ಕಡೆ ತಿರುಗಿ ಕಣ್ಣನ್ನು ಮುಚ್ಚಿ ಕೊಂಡಿದ್ದರೆ ವಸ್ತು ಸ್ವರೂಪವು ಗೊತ್ತಾಗುವುದೆ ? ಹಾಗೆಯೇ ಒಂದು ಗ್ರಂಥ ವನ್ನು ಓದಬೇಕಾದರೆ ನಮ್ಮ ಮನಸ್ಸನ್ನು ಅದರಲ್ಲಿ ಉನ್ಮುಖವನ್ನಾಗಿ ಮಾಡಿ ಕೊಂಡು ಅವಧಾನದಿಂದ ಓದಬೇಕು. ಓದುವಾಗ್ಗೆ, ಅದರ ಮಯ್ಯಾದೆಯನ್ನೂ ಪರಿಕ್ರಮವನ್ನೂ ಅವಶ್ಯವಾಗಿ ತಿಳಿಯಬೇಕು. ಇದಕ್ಕಾಗಿ, ಇದಕ್ಕಾಗಿ, ಸಂಗೀತಗಾ ರನು ಹಾಡುವುದಕ್ಕೆ ಮುಂಚೆ ವಾದ್ಯಗಳನ್ನು ಶ್ರುತಿಮಾಡಿಕೊಳ್ಳುವಂತೆ, ನಾವು ಈ ದೊಡ್ಡ ಗ್ರಂಥವನ್ನು ವ್ಯಾಸಂಗ ಮಾಡುವುದಕ್ಕೆ ಮುಂಚೆ ಮನಸ್ಸನ್ನು ಹದಪಡಿಸಿಕೊಂಡು ಸರಿಯಾದ ಮನೋಭಾವದಿಂದ ಕಾರಾರಂಭವನ್ನು ಮಾಡ ಬೇಕು. ಅನಂತರ ಇದರಲ್ಲಿನ ಪ್ರತಿಪರ್ವದಲ್ಲಿರುವ ಪ್ರಧಾನಗಳಾದ ಕಥಾ ಸಂದ ರ್ಭಗಳನ್ನು ಕ್ರಮತಪ್ಪದೇ ತಿಳಿಯುತ್ತಾ ಈ ಗ್ರಂಥದಲ್ಲಿರುವ ನೀತಿಗಳಿ೦ತಹ ವೆಂಬುದನ್ನೂ ಆ ಕಥಾನಾಯಕರ ಸ್ವಭಾವ ಎಂತಹದೆಂಬುದನ್ನೂ ಅವರು ಮಾಡಿ ರುವೆ, ಕೆಲಸಗಳ ರೀತಿಗಳನ್ನೂ ಅವರಿಗೆ ದೇವತೆಗಳು ಹೇಗೆ ಸಾಧಕ ಬಾಧಕಗಳನ್ನು ಕಲ್ಪಿಸಿದರೆಂಬುದನ್ನೂ ಇದರಲ್ಲಿ ನಡೆದಿರುವ ಸಂತಿಗಳಿಗೆಲ್ಲಾ ದೇವತೆಗಳು ಹೇಗೆ ಪ್ರೇರಕರಾಗಿರುವರೆಂಬುದನ್ನೂ ಗಮನಿಸಬೇಕಾಗಿದೆ.
ವಿಚಾರ ಮಾಡಿದರೆ ದೇವತೆಗಳು ಲೋಕಪಾಲಕರೆಂಬುದನ್ನು ನಂಬದಿರುವ ಚನಗಳನೇಕರಿರುವರೆಂಬುದು ನಮಗೆ ಗೊತ್ತಾಗುವುದು. ಹಿಂದೂಮತವನ್ನು ನಂಬದಿರತಕ್ಕವರು ನಮ್ಮ ವೇದಶಾಸ್ತ್ರಗಳನ್ನೂ ಪ್ರಮಾಣ ಗ್ರಂಥಗಳನ್ನೂ ಸಹ ತಪ್ಪೆಂದು ಆಕ್ಷೇಪಿಸುವರು, ಆದುದರಿಂದ ನಮ್ಮ ಮತವನ್ನೂ ಅದರ ಪ್ರಮಾಣ ಗ್ರಂಥಗಳನ್ನೂ ಕುರಿತು ತಿಳುವಳಿಕೆಯನ್ನುಂಟು ಮಾಡಿಕೊಂಡು ಮಡರೂ ಅನ್ಯ ದೇಶೀಯರೂ ಆಕ್ಷೇಪಿಸಿದಾಗ ನಮ್ಮ ಮನದಲ್ಲಿ ಸಂದೇಹಪಡದೇ ಇರತಕ್ಕದ್ದು ಆರ್ ಬಾಲಕರಿಗೆ ಕರ್ತವ್ಯವು,
ಕೇವಲ ಲೌಕಿಕ ದೃಷ್ಟಿಯಿಂದ ನೋಡಿದರೂ ಕೂಡ ಮಹಾಭಾರತವು ಅತಿ ಪ್ರಯೋಜನಕಾರಿಯಾದ ಗ್ರಂಥವು. ಸಮಸ್ತ ಜನಾಂಗದವರಿಗೂ ಕಾವ್ಯಗ ಭೂ ದರ್ಶನಗಳೂ ಮತ್ತು ಇತಿಹಾಸರೂಪವಾದ ಗ್ರಂಥಗಳೂ ಉಂಟು, ಮತ್ತು ಈ ಗ್ರಂಥಗಳ ಉತ್ಕೃಷ್ಟತೆ ಕುಶಲತೆಗಳಿಂದ ಆಯಾ ಜನಾಂಗಕ್ಕೆ ಗೌರವವು ಬರುವುದು. ಯಾವದೇಶದಲ್ಲಿ ಪ್ರಸಿದ್ಧವಾದ ಗ್ರಂಥಗಳು ಇರುವುವೋ ಆ ದೇಶ ' ದವರನ್ನು ಇತರರು ದೊಡ್ಡವರೆಂದು ಕೊಂಡಾಡುವರು; ಉದ್ಧಂಥಗಳನ್ನು ಹೊಂದದೇ ಇದ್ದ ಜನರನ್ನು ತುಚೀಕರಿಸುವರು, ನಮ್ಮ ಹಿಂದೂದೇಶದಲ್ಲಿರತಕ್ಕೆ ಷ್ಟು ಮಟ್ಟಿನ ಉದ್ಧಂಥಗಳು ಇನ್ಯಾವದೇಶದಲ್ಲಿ ಜನಾಂಗದಲ್ಲಿಯ ಇಲ್ಲವು.
ಪಾಶ್ಚಾತ್ಯರು ಸಂಸ್ಕೃತಭಾಷೆಯಲ್ಲಿ ನಮ್ಮ ಪೂರ್ವಿಕರು ಬರೆದಿರುವ ಗ್ರಂಥಗಳನ್ನು ಈಗ ಓದಲುಪಕ್ರಮಿಸಿ ನಮ್ಮ ದೇಶವು ಪೂರ್ವದಲ್ಲಿ ಎಷ್ಟರಮಟ್ಟಿನ ಉನ್ನತಸ್ಥಿತಿಯಲ್ಲಿದ್ದಿತೋ ಎಂದು ಆಶ್ಚರ ಪಡುತ್ತಿರುವರು. ಈ ಭೂಮಿಯ ಮೇಲಿ ರುವ ಎಲ್ಲಾ ಕಾವ್ಯಗಳಲ್ಲಿಯ ಮಹಾಭಾರತವು ಅತ್ಯಂತ ಉತ್ತಮವಾದ ಗ್ರಂಥವಾಗಿರುವುದು. ನಮಗೆ ತಿಳಿದಿರುವ ಮತ್ತು ನಮಗೆ ಉಪಯುಕ್ತಗಳಾದ ಇಷ್ಟು ವಿಷಯಗಳನ್ನೊಳಗೊಂಡಿರುವ ಬೇರೊಂದು ಕಾವ್ಯವೇ ಇಲ್ಲವು. ಇದು ಅತಿ ರಮಣೀಯವಾದ ಶೈಲಿಯಲ್ಲಿ ಬರೆಯಲ್ಪಟ್ಟಿರುವದರಿಂದಲೂ ಇದರಲ್ಲಿನ ಕಥೆಗಳು ಮನೋಹರಗಳಾಗಿರುವದರಿಂದಲೂ ಪ್ರತಿಯೊಬ್ಬ ಹಿಂದೂಬಾಲಕನೂ' ಇದನ್ನು ಸ್ವಲ್ಪ ಮಟ್ಟಿಗಾದರೂ ತಿಳಿದಿರಬೇಕು. ನಮ್ಮ ಪೂರ್ವಿಕರು ನಮಗಾಗಿ ಬರೆದಿರುವ ಈ ಮಹಾಗ್ರಂಥದಲ್ಲಿನ ವಿಷಯಗಳನ್ನು ಸ್ವಲ್ಪವಾದರೂ ತಿಳಿದು ಕೊ ಳ್ಳದಿರುವುದು ಒಳ್ಳೆಯದಲ್ಲ.
ಈ ಚರಿತ್ರೆಯ ಮಾಹಾತ್ಮವನ್ನು ನಾವು ಮರುಭಾಗವಾಗಿ ವಿಂಗಡಿಸ ಬಹುದು. ಇದರಲ್ಲಿನ (1) ನೀತಿ (2) ತತ್ವವಿಚಾರ (3) ಚರಿತ್ರೆ,
1. ನೀತಿಯೆಂದರೆ ಸತ್ಸವರ್ತನೆ ಮತ್ತು ಅದರ ನಿಬಂಧನೆಗಳು, ನೀತಿ ಶಾಸ್ತ್ರವು ಧರ್ಮಾಧರ್ಮಗಳ ರೀತಿಯನ್ನು ತಿಳಿಸುವುದು. ಯಾವುದನ್ನು ಮಾಡು ಇದರಿಂದ ನಮಗೆ ಮೇಲುಂಟಾಗುವುದೋ ಅದು ಧರ್ಮವೆಂಬದಾಗಿಯ ಯಾವು ದಾಹರಿಸುವುದರಿಂದ ನಮಗೆ ಅನಿಷ್ಟ ಫಲಗಳುಂಟಾಗುವವೋ ಅದು ಅಧರ್ಮ ವೆಂಬುದಾಗಿ ತಿಳಿದವರು ಹೇಳುವರು. ಗಣಿತಶಾಸ್ತ್ರವನ್ನು ಅಭ್ಯಾಸಮಾ ಡುವಾಗ ಭಾಗಕಾರ ಮೊದಲಾದಪ್ರಕ್ರಿಯೆಗಳನ್ನು ಮಾಡುವುದಕ್ಕೆ ಕೆಲವು ನಿಬಂಧನೆ (Rules) ಗಳನ್ನು ಹೇಳಿಕೊಡುತ್ತಾರೆ. ಆ ಕ್ರಮವನ್ನು ಅನುಸರಿಸಿ ಮಾಡಿದರೆ ಪ್ರಕ್ರಿಯೆಯು ಸರಿಯಾಗಿ ಉತ್ತರವು ಸರಿಬರುವುದು, ಇದೇರೀತಿಯಲ್ಲಿ ನಾವು ಇಹಪರಗಳಲ್ಲಿ ಸುಖಿಗಳಾಗಿರಬೇಕಾಗಿದ್ದರೆ ನಮ್ಮ ನಡತೆಯು ಕೆಲವು ನಿಬಂಧನೆಗಳಿಗೆ ಒಳಪಟ್ಟು ದಾಗಿರಬೇಕು. ಇಂತಹ ನಿಬಂಧನೆಗಳನ್ನು ತಿಳಿಸತಕ್ಕ ಶಾಸ್ತ್ರವೇ ನೀತಿ ಶಾಸ್ತ್ರವು, ನೀತಿಶಾಸ್ತ್ರವು ಪ್ರಾಣಿಯನ್ನು ಹಿಂಸೆಮಾಡಬೇಡ ? ಎಂದು ಆಜ್ಞೆಯನ್ನು ವಿಧಿಸುವುದಿಲ್ಲ. ಆದರೆ ಪ್ರಾಣಿಹಿಂಸೆಯಿ೦ದ ಕಷ್ಟ ಪ್ರಾಪ್ತಿ ಯಾಗುವುದೆಂದು ಬೋಧಿಸುವುದು,
ಮಹಾಭಾರತವು ನಮಗೆ ಸದ್ಯಕ್ಕಿಯನ್ನು ಬೋಧಿಸುವ ಒಂದು ದೊಡ ನೀತಿಶಾಸ್ತ್ರವಾಗಿರುವುದು. ಇದು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಮೊದ ಲಾದ ಸರ್ವವರ್ಣದವರಿಗೂ ಬಾಲಕ ಬಾಲಿಕೆಯರಿಗ, ಸ್ತ್ರೀಪುರುಷರಿಗೂ ತಕ್ಕ ಧರ್ಮಗಳನ್ನು ಸುಲಭವಾಗಿ ಬೋಧಿಸುವುದು. ವ್ಯವಹಾರದಲ್ಲಿಯ ಸಂಸಾರದ ಲ್ಲಿಯ ಗಂಡಹೆಂಡತಿಯರೂ, ತಂದೆತಾಯಿಗಳೂ, ತಂದೆಮಕ್ಕಳ ಪ್ರತಿನಿತ್ಯದ ಲ್ಲಿಯ ಹೇಗೆ ನಡೆದು ಕೊಳ್ಳಬೇಕೆಂಬ ಲೋಕಮರ್ಯಾದೆಗಳನ್ನು ಮನೋಜ್ಞ ವಾದ ಕಥೆಗಳಿ೦ದ ಲಲಿತವಾಗಿ ತಿಳಿಸುವುದು, ಹೇಗೆಂದರೆ : ನಿಜವನ್ನು ಹೇಳು ?

Ramaswamy Sastry and Vighnesh Ghanapaathi

Copyright © 2024 | Vedadhara | All Rights Reserved. | Designed & Developed by Claps and Whistles
| | | | |