ಶ್ರೀ ಬೀರೇಶ್ವರ ಚರಿತ್ರ

beereswara pdf first page

ಶ್ರೀ ಬೀರೇಶ್ವರ ಕಥೆ ಮತ್ತು ಹಿರಿಮೆ

PDF ಪುಸ್ತಕವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

 

83.8K

Comments

5n6y5
ವಿಶೇಷವಾದ ವೆಬ್‌ಸೈಟ್ ⭐ -ಚಂದ್ರಶೇಖರ್ ಮುನ್ನು

ಜ್ಞಾನಕ್ಕಾಗಿ ಸೊನ್ನಿನ ಮುಟ್ಟು -ಮಹೇಂದ್ರ ಶೆಟ್ಟಿ

ಅದ್ಭುತ ವೆಬ್‌ಸೈಟ್ 😍 -ಗೋಪಾಲ್

ತುಂಬಾ ಉಪಯುಕ್ತವಾದ ವೆಬ್‌ಸೈಟ್ 🙌 -ಪ್ರಹ್ಲಾದ ಮೂರ್ತಿ

ವೇದಧಾರದಲ್ಲಿ ಸೇರಿರುವುದು ಒಂದು ಆಶೀರ್ವಾದವಾಗಿದೆ. ನನ್ನ ಜೀವನ ಹೆಚ್ಚು ಪಾಸಿಟಿವ್ ಮತ್ತು ತೃಪ್ತಿಯಾಗಿದೆ. 🙏🏻 -Vinayak Aithal

Read more comments

ಶಿವ ಪುರಾಣದ ಪ್ರಕಾರ ಭಸ್ಮವನ್ನು ಅನ್ವಯಿಸಲು ಶಿಫಾರಸು ಮಾಡಲಾದ ಸ್ಥಳಗಳು ಯಾವುವು?

ಶಿವ ಪುರಾಣವು ಹಣೆಯ ಮೇಲೆ, ಎರಡೂ ಕೈಗಳು, ಎದೆ ಮತ್ತು ಹೊಕ್ಕುಳದ ಮೇಲೆ ಭಸ್ಮವನ್ನು ಅನ್ವಯಿಸಲು ಶಿಫಾರಸು ಮಾಡುತ್ತದೆ

ಗೃಹ್ಯಸೂತ್ರಗಳು

ಗೃಹ್ಯಸೂತ್ರಗಳು ವೇದಗಳ ಒಂದು ಭಾಗವಾಗಿದೆ, ಇದರಲ್ಲಿ ಕುಟುಂಬ ಮತ್ತು ಗೃಹಜೀವನದ ಸಂಸ್ಕಾರಗಳು, ಆಚರಣೆಗಳು ಮತ್ತು ನಿಯಮಗಳ ವಿವರವನ್ನು ಒಳಗೊಂಡಿದೆ. ಇದು ವೇದಕಾಲದ ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಪ್ರಮುಖ ಅಂಶಗಳನ್ನು ಪ್ರತಿಬಿಂಬಿಸುತ್ತದೆ. ಗೃಹ್ಯಸೂತ್ರಗಳಲ್ಲಿ ವಿವಿಧ ವಿಧದ ಸಂಸ್ಕಾರಗಳ ವಿವರವನ್ನು ನೀಡಲಾಗಿದೆ, ಉದಾಹರಣೆಗೆ ಹುಟ್ಟು, ನಾಮಕರಣ, ಅನ್ನಪ್ರಾಶನ (ಮೊದಲು ಅನ್ನವನ್ನು ಸೇವಿಸುವುದು), ಉಪನಯನ (ಯಜ್ಞೋಪವೀತ ಸಂಸ್ಕಾರ), ಮದುವೆ ಮತ್ತು ಅಂತ್ಯಕ್ರಿಯೆ (ಅಂತಿಮ ಸಂಸ್ಕಾರ) ಇತ್ಯಾದಿ. ಈ ಸಂಸ್ಕಾರಗಳು ಜೀವನದ ಪ್ರತಿಯೊಂದು ಪ್ರಮುಖ ಹಂತವನ್ನು ಸೂಚಿಸುತ್ತವೆ. ಪ್ರಮುಖ ಗೃಹ್ಯಸೂತ್ರಗಳಲ್ಲಿ ಆಶ್ವಲಾಯನ ಗೃಹ್ಯಸೂತ್ರ, ಪಾರಸ್ಕರ ಗೃಹ್ಯಸೂತ್ರ ಮತ್ತು ಆಪಸ್ತಂಬ ಗೃಹ್ಯಸೂತ್ರ ಸೇರಿವೆ. ಈ ಗ್ರಂಥಗಳು ವಿವಿಧ ಋಷಿಗಳಿಂದ ರಚಿತವಾಗಿದ್ದು, ವಿಭಿನ್ನ ವೇದ ಶಾಖೆಗಳಿಗೆ ಸಂಬಂಧಿಸಿದ್ದಾಗಿದೆ. ಗೃಹ್ಯಸೂತ್ರಗಳ ಧಾರ್ಮಿಕ ಪ್ರಾಮುಖ್ಯತೆ ಬಹಳ ಹೆಚ್ಚಿನದು, ಏಕೆಂದರೆ ಇದು ಕೇವಲ ವೈಯಕ್ತಿಕ ಜೀವನದ ಸಂಸ್ಕಾರಗಳನ್ನು ವಿವರಿಸುವಷ್ಟೇ ಅಲ್ಲದೆ, ಸಮುದಾಯದಲ್ಲಿ ಧಾರ್ಮಿಕ ಮತ್ತು ನೈತಿಕ ಪ್ರಮಾಣಗಳನ್ನು ಸ್ಥಾಪಿಸುತ್ತವೆ.

Quiz

ಹಲಾಯುಧನು ಯಾರು?

ಭಿಲ್ಲಾ ಸುರನ ಜನನ
ವಿಭಾಗ ಗೋತ್ರದಲ್ಲಿ ಮಂದಾರನೆಂಬ ಮಹಾಮಹಿಮನಿಂದ ಕೈಲಾಸ ಶಿಖರದ ಭಿಲ್ಲಾ ಸುರ ದೈತ್ಯನು ಹುಟ್ಟಿದನು, ಇವನು ಬಲ್ಲಿದನಾಗಿ ತ್ರಿಜಗ ವನ್ನು ತಾನೇ ಆಳಬೇಕೆಂಬ ಮಹತ್ವಾಕಾಂಕ್ಷೆಯಿಂದ ಗಿರಿಜಾದೇವಿಯನ್ನು ಕುರಿತು ಅನ್ನ ನೀರುಗಳಿಲ್ಲದೆ ಏಕನಿಷ್ಠೆಯಿಂದ ತಬಸ್ಸು ಮಾಡಿದನು.
ಆಗ ಸರ್ವದೇವಿ ಅವನ ತಪಸ್ಸಿಗೆ ಮೆಚ್ಚಿ ಏನು ವರವ ಬೇಡ: ಬೀಡು ಎಂದು ಅನ್ನಲು ಆಗ ಅಸುರನು ದೇವೀ ನನಗೆ ಸುರರು, ನರ ರಾಕ್ಷಸರು ಇವರಿಂದ ಮರಣವಾಗಬಾರದು, ಎಂದೂ ಪರಮೇಶ್ವರನ ಪ್ರತಿಬಿಂಬಿನಿಂದಲೇ ನನಗೆ ಮರಣವಾಗಬೇಕು ಎಂದೂ ಬೇಡಿಕೊಂಡನು.
ಅದಕ್ಕೆ ಆ ದೇವಿಯು ಹಾಗೇ ಆಗಲೆಂದು ವರವನ್ನು ಕೊಟ್ಟು ಮಾಯವಾದಳು.

ಭಿಲ್ಲಾ ಸುರ ರಾಕ್ಷಸನ ದಿಗ್ವಿಜಯ
ದೇವಿಯ ವರದಿಂದ ಮದೋನ್ಮತ್ತನಾಗಿ ಅಟ್ಟಹಾಸದಿಂದ ಭಿಲ್ಲಾ ಸುರನು ಅಲೆದಾಡುತ್ತ ತನಗೆ ಸರಿಯಾದ ವೀರರು ಯಾರು ಇರುವರೆಂದು ಹುಡುಕ ಹತ್ತಿದನು, ಆದರೆ ಅವನಿಗೆ ಅಂಥ ವೀರರು ಒಬ್ಬರೂ ಸಿಗದಾದರು, ಆಗ ಸೂರ್ಯ, ಚಂದ್ರ, ವಾಯು, ವರುಣ, ಕುಬೇರ, ಕಾಲ ಯಮ, ದಿಕ್ಷಾಲಕರು ಮೊದಲಾದ ಯಾವತ್ತೂ ಅಧಿಕಾರಿಗಳನ್ನು ಕಿತ್ತೊಗೆದು ದೇವ, ಯಕ್ಷ, ಗಂಧರ್ವ, ನರ, ಕಿನ್ನರ ಮೊದಲಾದವರನ್ನು ತನ್ನ ಬಾಹುಬಲದಿಂದ ಗೆದ್ದು ಅಮರನಾಗಿ ಮೆರೆಯಹತ್ತಿದನು, ಉಳಿದ ರಾಕ್ಷಸರು ಧರ್ಮ ನಿರ್ಮಲ ವಾಗುವಂತೆ ವೇದೋಕ್ತ ವ್ಯವಹಾರಗಳನ್ನು ಕೆಡಿಸುತ್ತ ಸಾಗಿದರು. ಆಕಳು ಗಳು ಬ್ರಾಹ್ಮಣರು ಇರುವಂಥ ಊರುಗಳನ್ನೂ ಪಟ್ಟಣಗಳನ್ನೂ ಹಾಳು ಮಾಡಹತ್ತಿದರು. ಸದಾಚಾರಕ್ಕೆ ಎಲ್ಲಿಯೂ ಆಸ್ಪದವು ದೊರೆಯದಾಯಿತು. ದೇವತೆಗಳು, ಬ್ರಾಹ್ಮಣರು, ಗುರುಗಳು ಇವರನ್ನು ಯಾರೂ ಮನ್ನಿಸದಾದರು ಹು-ಹರರಲ್ಲಿ ಭಕ್ತಿ, ಯಜ್ಞ, ಜಪ, ದಾನ ಇವು ಎಲ್ಲಿಯೂ ಉಳಿಯಲಿಲ್ಲ, ವೇದಗಳು, ಪುರಾಣಗಳು ಕನಸಿನಲ್ಲಿಯೂ ಕಿವಿಗೆ ಬೀಳದಾದವು.
ಜಗತ್ತಿನ ತುಂಬ ಭ್ರಷ್ಟಾಚಾರವಾಗಿ ಧರ್ಮದ ಹೆಸರು ಉಳಿಯದಂತಾಯಿತು. ದುಷ್ಟ ರಾಕ್ಷಸರ ಭಯಂಕರ ಅನೀತಿಯ ಕೃತಿಗಳನ್ನು ವರ್ಣಿಸುವದು ಶಕ್ಯವಿಲ್ಲ ಹಿಂಸೆಯು ಅತ್ಯಂತ ಪ್ರಿಯವಾಗಿದ್ದದರಿಂದ ಪಾವ ಕೃತಿಗಳಿಗೆ ಮಿತಿ ಉಳಿಯ ಲಿಲ್ಲ. ಈ ಪ್ರಕಾರ ಜಿಲ್ಲಾಸುರನು ಸುರಲೋಕದಲ್ಲಿ ದಾಳಿ ಇಡಲು ಅವನ ಶೌರ್ಯಕ್ಕೆ ಯಾರೂ ಎದುರು ನಿಲ್ಲದೆ, ಯಾವತ್ತೂ ದೇವತೆಗಳು ಇಂದ್ರ ಅಗ್ನಿ, ಯಮ, ಹರಿ, ಬ್ರಹ್ಮಾದಿಗಳು ಹೆದರಿ ಶ್ರೀ ಶಂಕರನಿಗೆ ಮೊರೆ ಇಡು
ಬೇಡಿಕೊಂಡರು.
ಶ್ರೀ ಶಂಕರನು ಎಲ್ಲ ಸಂಗತಿ ವಿಚಾರಿಸಿ ಕೋಪಾರೂಢನಾಗಿ ವೀರಭದ್ರನ ಮುಖವ ನೋಡಿದನು, ಶಿವನ ಕೋಪ ತೇಜಾಂಶವು ವೀರೇಶನ ರೂಪಾಗಿ ಈಶನ ಮುಂದೆ ನಿಂತನು. ಈಶನು ಆವೇಶದಿಂದ ವೀರೇಶನಿಗೆ ಭಿಲ್ಲಾಸುರ ರಾಕ್ಷಸನನ್ನು ಕೊಂದು ಬೀರೇಶ್ವರನಾಗೆಂದು ವರವಿತ್ತನು. ಆಗ ವೀರೇಶನು
ತನ್ನ ಸತಿಯಾದ ಭದ್ರಕಾಳಿಗೆ ನೀನು ಕವಳೇಶ್ವರಿ ಎಂಬ ನಾಮವನ್ನು ಧರಿಸಿ ಕೊಂಡು ನನ್ನ ಸಂಗಡ ಬರಬೇಕೆಂದು ಆಜ್ಞೆ ಮಾಡಿದನು. ಆಗ ಭದ್ರಕಾಳಿಯು ವತಿಯಾಜ್ಞೆಯಂತೆ ಕವಳೇಶ್ವರಿ ಎಂಬ ನಾಮವನ್ನು ಧರಿಸಿದಳು. ಆಗ ವೀರೇಶ ಕವಳೇಶ್ವರಿಯವರು ಕೋಪಾರೂಢರಾಗಿ ಇಲ್ಲಾಸುರ ರಾಕ್ಷಸನನ್ನು ಸಂಹಾರ ಮಾಡಲಿಕ್ಕೆ ಹೊರಟರು.
ಜಿಲ್ಲಾ ಸುರನ ಮರಣ, ಭಲೋಕದಲ್ಲಿ ಭಿಲ್ಲಾಸುರನನ್ನು ಹುಡಕುತ್ತ ಅವನಿಗೆ ಸಿಕ್ಕೆ ಬಂದು ಎಲೈ ದೈತ್ಯನೇ ನಿನ್ನ ಗರ್ವವನ್ನು ಮುರಿದು ನಾಶ ಮಾಡಲಿಕ್ಕೆ ಈಶನ ಮಗನಾದ ವೀರೇಶನೇ ಬಂದಿರುವೆನು. ಯುದ್ಧಕ್ಕೆ ಬಂದು ನಿಲ್ಲು ಎಂದು ಘರ್ಜಿಸಿದನು. ಆಗ ಯಾಸುರನು ವೀರೇಶನನ್ನು ಧಿಕ್ಕಾರ ಮಾಡಿ ಎಲ್ಲೋ ಮರ್ಖನಾದ ನಿನ್ನನ್ನು ನನ್ನ ಬಾಹು ಬಲದಿಂದ ಹೊಡೆದು ಫಲಾಯನ ಮಾಡಿಸುವೆನು. ನಿನ್ನ ಬಿಂಕದ ಮಾತನ್ನು ಬಿಟ್ಟು ಬಿಡು ಎಂದು ಹೀಯಾ ಳಿಸಿದನು. ಆಗ ವೀರೇಶನು ಎಲೈ ಪಿಶಾಚಿಯೇ ಕೇಳು ನಾನು ಪರಮೇಶ್ವರನ ಮಗನಾದ ವೀರಭದ್ರನಿರುವೆನು ಈ ವೀರನ ಮುಂದೆ ನಿನ್ನ ಡಂಭಾಚಾರವನ್ನು ಕೊಚ್ಚ ಬೇಡೆಲೋ ನೀಚ ದಾನವಾ ಅನ್ನಲು ಅದನ್ನು ಕೇಳಿ ಜಿಲ್ಲಾ ಸುರನು ಎಲೋ ಮಂದಮತಿಯಾದ ವೀರನೇ ನಿನಗೆ ಬಹಳ ಸರ್ವ ಬಂದಂತೆ ತೋರು ಇದೆ ಅದರೆ ಈ ಸಮರದಲ್ಲಿ ನಿನ್ನ ಶೂರತನ ನೋಡಿ ಬಿಡತ್ತೇನೆ. ರಣಕ್ಕೆ ಬರುವಂಥವನಾಗು ಅನ್ನಲು ಅದಕ್ಕೆ ವೀರೇಶನು ಎಲೈ ಪಿಶಾಚಿ ರಕ್ಕಸನೆ ನೀನು ದೇವಿಯ ವರವನ್ನು ಪಡೆದು ಅಮರನಾಗಿರುವೆನೆಂದು ಮೆರೆಯುತ್ತಾ ಸೆಕದ ನಿನ್ನ ಗರ್ವಭಂಗ ಮಾಡದೇ ಬಿಡುವವನಲ್ಲ ಮೂಢನೇ ಬರುವಂಥ ವನಾಗು ಈ ನಿನ್ನ ಅಗಣಿತವಾದ ಸೊಕ್ಕನ್ನು ನಾಶ ಮಾಡಲಿಕ್ಕೆ ನೀಡಿದ್ದಲ್ಲಿಗೇ ಬಂದಿರುವೆನು ಅನ್ನಲು ಆಗ ದೈತ್ಯನು ವೀರೇಶನ ನುಡಿ ಕೇಳಿ ಎಲೋ ಹೆಬ್ಬುಲಿಯಂತೆ ಆರ್ಭಡಿಸುವ ನಿನ್ನ ಕೊಬ್ಬನ್ನು ಮುರಿದು ನನ್ನ ಭೂತಗಣಕ್ಕೆ ಹಬ್ಬ ಮಾಡಿಸದೇ ದೈತ್ಯ ಕುಲಮಣಿಯಾದ ಭಿಸುರನು ಬಿಡುವವನಲ್ಲ.


Ramaswamy Sastry and Vighnesh Ghanapaathi

Copyright © 2024 | Vedadhara | All Rights Reserved. | Designed & Developed by Claps and Whistles
| | | | |