ಇದು ಪುಟ್ಟ ಕೃಷ್ಣ ಒಬ್ಬ ದೊಡ್ಡ ದುಷ್ಟ ರಾಕ್ಷಸ ಅಘಾಸುರನನ್ನು ಹೇಗೆ ಕೊಂದ ಎನ್ನುವ ಕಥೆ.
ಅಘಾಸುರ ಕಂಸನ ಸೇನಾಪತಿಯಾಗಿದ್ದ. ಸಂಸ್ಕೃತದಲ್ಲಿ ಅಘ ಎಂದರೆ ಪಾಪಿ ಎಂದರ್ಥ.
ಕಂಸನು ಭಗವಾನ್ ಕೃಷ್ಣನ ತಾಯಿಯ ಸಹೋದರ. ಅವನು ತುಂಬಾ ಕ್ರೂರಿ ಮತ್ತು ದುಷ್ಟನಾಗಿದ್ದ. ಅವನು ತನ್ನ ಸ್ವಂತ ತಂದೆಯನ್ನು ಕಾರಾಗೃಹಕ್ಕೆ ತಳ್ಳಿ ಮಥುರಾದ ರಾಜನಾಗಿದ್ದ.
ಕೃಷ್ಣನ ಮಾತಾಪಿತರ ವಿವಾಹದ ಸಮಯದಲ್ಲಿ, ಅವರ ಎಂಟನೆ ಮಗ ಕಂಸನನ್ನು ಕೊಲ್ಲುತ್ತಾನೆ ಎಂದು ದಿವ್ಯನುಡಿಯೊಂದು ಕೇಳಿಸಿತು. ಕಂಸನು ಅವರನ್ನು ಕಾರಾಗೃಹದಲ್ಲಿ ಹಾಕಿದ ಮತ್ತು ಪ್ರತಿಯೊಂದು ಮಗುವು ಹುಟ್ಟಿದ ಕೂಡಲೇ ಅದನ್ನು ಸಾಯಿಸುತ್ತಿದ್ದ.
ಕೃಷ್ಣನು ದೇವರು. ಅವನು ಜನ್ಮತಳೆದಾಗ, ತನ್ನ ತಂದೆ ವಾಸುದೇವನಿಗೆ ತನ್ನನ್ನು ಕಾರಾಗೃಹದಿಂದ ಹೊರಗೆ ಕರೆದುಕೊಂಡು ಹೋಗಬೇಕೆಂದು ಪ್ರೇರೇಪಿಸಿದ. ಭಗವಂತನನ್ನು ಗೋಕುಲಕ್ಕೆ ಕರೆದೊಯ್ಯಲಾಯಿತು ಮತ್ತು ವಾಸುದೇವನ ದಾಯಾದಿಯಾದ ನಂದನ ಮನೆಯಲ್ಲಿ ಬಿಡಲಾಯಿತು. ಅದೇ ಸಮಯದಲ್ಲಿ ನಂದ ಮತ್ತು ಯಶೋದಾ ದಂಪತಿಗಳಿಗೆ ಒಂದು ಹೆಣ್ಣುಮಗು ಕೂಡ ಜನ್ಮತಾಳಿತು. ಆ ಹೆಣ್ಣು ಮಗುವನ್ನು ಕಾರಾಗೃಹಕ್ಕೆ ಕರೆತರಲಾಯಿತು.
ಅದು ಹೆಣ್ಣುಮಗುವಾದರೂ ಕಂಸನು ಅವಳನ್ನು ಕೊಲ್ಲಲು ಪ್ರಯತ್ನಿಸಿದ. ಆದರೆ ಅವಳು ದೇವಿಯ ಅವತಾರವಾಗಿದ್ದಳು. ಅವಳು ಕಂಸನ ಕೈಯಿಂದ ಜಾರಿ ತಪ್ಪಿಸಿಕೊಂಡು ಮಾಯವಾದಳು. ಅವಳನ್ನು ದೇವಿ ವಿಂಧ್ಯವಾಸಿನಿ ಎಂದು ಪೂಜಿಸಲಾಗುತ್ತದೆ.
ಕಂಸನು ಹಲವಾರು ರಾಕ್ಷಸರನ್ನು ಕೃಷ್ಣನನ್ನು ಕೊಲ್ಲಲು ಗೋಕುಲಕ್ಕೆ ಕಳುಹಿಸಿದ. ಅಘಾಸುರ ಕೂಡ ಅವರಲ್ಲಿ ಒಬ್ಬನಾಗಿದ್ದ.
ಅಘಾಸುರನಿಗೆ ಮಂತ್ರಶಕ್ತಿಯು ಗೊತ್ತಿತ್ತು. ಅವನು ಆಕಾಶ ಮಾರ್ಗವಾಗಿ ಹಾರುತ್ತಾ ಬಂದ ಮತ್ತು ಕಾಲಿಂದಿ ನದಿಯ ದಡದಲ್ಲಿ ಕೃಷ್ಣ ತನ್ನ ಸ್ನೇಹಿತರೊಂದಿಗೆ ಆಡುತ್ತಾ ಇರುವುದನ್ನು ನೋಡಿದ. ಅವನು ಒಂದು ದೊಡ್ಡ ಸರ್ಪವಾದ ಮತ್ತು ಭೂಮಿಯ ಮೇಲೆ ತನ್ನ ಬಾಯನ್ನು ಅಗಲವಾಗಿ ತೆರೆದುಕೊಂಡು ಮಲಗಿದ. ಹುಡುಗರು ಅದೊಂದು ಗುಹೆಯೆಂದು ಭಾವಿಸಿ ಆಕಸ್ಮಿಕವಾಗಿ ಒಳಗೆ ಹೋದರು. ಕೃಷ್ಣ ಮತ್ತು ಬೇರೆ ಎಲ್ಲಾ ಹುಡುಗರು ಒಳಗಿರುವಾಗ, ಅಘಾಸುರನು ತನ್ನ ಬಾಯಿಯನ್ನು ಮುಚ್ಚಿ ಅವರನ್ನು ಹಿಂಡಲು ಪ್ರಾರಂಭಿಸಿದ. ಕೆಲವು ಹುಡುಗರು ಸತ್ತು ಹೋದರು.
ಭಗವಾನ್ ಕೃಷ್ಣ ತನಗೆತಾನೇ ಬೆಳೆಯಲು ಪ್ರಾರಂಭಿಸಿದ. ಅವನು ಎಷ್ಟು ಬೃಹತ್ತಾಗಿ ಬೆಳೆದನೆಂದರೆ ಅಘಾಸುರನ ದೇಹವು ಸಿಡಿದು ತೆರೆದುಕೊಂಡಿತು. ಅಘಾಸುರನು ಸತ್ತುಹೋದ. ಕೃಷ್ಣ ತನ್ನ ದೈವಿಶಕ್ತಿಯಿಂದ ಆ ಸತ್ತುಹೋಗಿದ್ದ ಹುಡುಗರನ್ನು ಬದುಕಿಸಿದ. ಇತರರು ಸುರಕ್ಷಿತವಾಗಿ ಹೊರಬಂದರು.
ಕಂಸನ ಕೆಟ್ಟ ಯೋಜನೆಯು ಹಾಳಾಯಿತು.
ಅನುವಾದ: ಡಿ.ಎಸ್.ನರೇಂದ್ರ
Astrology
Atharva Sheersha
Bhagavad Gita
Bhagavatam
Bharat Matha
Devi
Devi Mahatmyam
Ganapathy
Glory of Venkatesha
Hanuman
Kathopanishad
Mahabharatam
Mantra Shastra
Mystique
Practical Wisdom
Purana Stories
Radhe Radhe
Ramayana
Rare Topics
Rituals
Rudram Explained
Sages and Saints
Shiva
Spiritual books
Sri Suktam
Story of Sri Yantra
Temples
Vedas
Vishnu Sahasranama
Yoga Vasishta