ಪಾಂಚಜನ್ಯ

Panchajanya

 

ಕೃಷ್ಣನ ಶಂಖದ ಹೆಸರೇನು? 

ಪಾಂಚಜನ್ಯ

ಪಾಂಚಜನ್ಯವು ಕೃಷ್ಣನಿಗೆ ಹೇಗೆ ದೊರಕಿತು? 

ಪಂಚಜನನೆಂಬ ಒಬ್ಬ ರಾಕ್ಷಸನು ಕೃಷ್ಣನ ಗುರುಗಳ ಮಗನನ್ನು ತಿಂದುಬಿಟ್ಟ. ಕೃಷ್ಣ ಅವನನ್ನು ಕೊಂದು ಅವನ ಹೊಟ್ಟೆಯನ್ನು ಬಗೆದ. ಹುಡುಗ ಅಲ್ಲಿರಲಿಲ್ಲ. ಕೃಷ್ಣ ಆ ಹುಡುಗನನ್ನು ಯಮಲೋಕದಿಂದ ಮರಳಿ ಕರೆತಂದ. ಪಂಚಜನನ ಮೂಳೆಗಳು ಪಾಂಚಜನ್ಯವೆಂಬ ಶಂಖವಾಗಿ ಬದಲಾಯಿತು ಮತ್ತು ಅದನ್ನು ಕೃಷ್ಣ ತಾನೇ ತೆಗೆದುಕೊಂಡ. ಪಂಚಜನಸ್ಯ ಅಂಗಪ್ರಭವಂ ಪಾಂಚಜನ್ಯಂ (ಭಾಗವತ.10.54) 

ಪಾಂಚಜನ್ಯವು ಏಕೆ ವಿಶೇಷವಾದುದು?

ಕೃಷ್ಣನ ಶಂಖವಾದ ಪಾಂಚಜನ್ಯವನ್ನು ಶಂಖಗಳ ರಾಜನಾದ ಶಂಖರಾಜನೆಂದು ಕರೆಯಲ್ಪಡುತ್ತದೆ. ಇದು ಶಂಖಗಳಲ್ಲೇ ಮಹತ್ವವಾದುದು. ಅದು ಹಸುವಿನ ಹಾಲಿನಷ್ಟೇ ಬಿಳಿಯಾಗಿದೆ ಮತ್ತು ಪೂರ್ಣಚಂದ್ರನಂತೆ ಹೊಳಪನ್ನು ಹೊಂದಿದೆ. ಪಾಂಚಜನ್ಯವನ್ನು ಸ್ವರ್ಣದ ಬಲೆಯಲ್ಲಿ ಹೊದಿಸಲಾಗಿದೆ ಮತ್ತು ಅಮೂಲ್ಯ ರತ್ನಗಳಿಂದ ಅಲಂಕರಿಸಲಾಗಿದೆ. 

ಪಾಂಚಜನ್ಯವನ್ನು ಊದಿದಾಗ ಏನಾಗುತ್ತದೆ? 

ಪಾಂಚಜನ್ಯದ ಶಬ್ಧವು ತುಂಬಾ ಉಚ್ಚಸ್ವರದಲ್ಲಿದೆ ಮತ್ತು ಭಯಾನಕವಾಗಿದೆ. ಅದರ ಸ್ವರವು ಸಪ್ತಸ್ವರಗಳಲ್ಲಿ ಒಂದಾದ ಋಷಭದಲ್ಲಿದೆ. ಕೃಷ್ಣನು ಪಾಂಚಜನ್ಯವನ್ನು ಊದಿದಾಗ, ಅದರ ಶಬ್ಧವು ಸ್ವರ್ಗ ಮತ್ತು ಪಾತಾಳಗಳನ್ನೂ ಸೇರಿ ಎಲ್ಲಾ ಲೋಕಗಳನ್ನು ಆವರಿಸಿತು. ಅದರ ಗರ್ಜನೆಯಂತ ಪಾಂಚಜನ್ಯದ ಶಬ್ಧವು ಪರ್ವತಗಳಲ್ಲಿ ಪ್ರತಿಧ್ವನಿಸಿತು ಮತ್ತು ಕಾನನಗಳು ಮತ್ತು ನದಿಗಳ ಎಲ್ಲ ದಿಕ್ಕುಗಳಲ್ಲಿ ಮಾರ್ದನಿಸಿತು. ಕೃಷ್ಣನು ಪಾಂಚಜನ್ಯವನ್ನು ಊದಿದಾಗ, ಅವನ ಪಕ್ಕದಲ್ಲಿದ್ದವರಲ್ಲಿ ಶಕ್ತಿಯು ತುಂಬಿತು. ಶತ್ರುಗಳು ನಿರುತ್ಸಾಹಗೊಂಡು ಸೋಲಿನ ಭಯದಲ್ಲಿ ಕುಸಿದು ಬಿದ್ದರು. ಯುದ್ದಭೂಮಿಯಲ್ಲಿದ್ದ ಕುದುರೆಗಳು ಮತ್ತು ಆನೆಗಳು ಭಯದಿಂದ ಲದ್ದಿಯನ್ನು ಹಾಕಿ ಮೂತ್ರವನ್ನು ವಿಸರ್ಜಿಸಿದವು. 

ಎಷ್ಟು ಬಾರಿ ಕೃಷ್ಣನು ಪಾಂಚಜನ್ಯವನ್ನು ಊದಿದನು?

 1. ಪಾಂಡವರು ಮತ್ತು ಕೌರವರು ಕುರುಕ್ಷೇತ್ರಕ್ಕೆ ಆಗಮಿಸಿದಾಗ. 
 2. ಅವರುಗಳ ಸೈನ್ಯಗಳು ಪರಸ್ಪರ ಎದುರುಬದರಾಗಿ ವ್ಯೂಹ ರಚಿಸಿ ನಿಂತಾಗ. 
 3. ಯುದ್ಧವು ಪ್ರತಿದಿನ ಆರಂಭವಾಗುವಾಗ. 
 4. ಅರ್ಜುನನು ಭೀಷ್ಮರ ವಿರುದ್ಧ ಯುದ್ಧ ಮಾಡಲು ಶಪಥ ಮಾಡಿದಾಗ. 
 5. ಭೀಷ್ಮರು ಇತರ ಪಾಂಡವರೊಂದಿಗೆ ಯುದ್ಧ ಮಾಡುತ್ತಿದ್ದಾಗ ಅರ್ಜುನ ಭೀಷ್ಮರ ಕಡೆಗೆ ನುಗ್ಗಿದಾಗ. 
 6. ಅರ್ಜುನನು ಜಯದ್ರಥನನ್ನು ಕೊಲ್ಲಲು ಶಪಥ ಮಾಡಿದಾಗ. 
 7. ಅರ್ಜುನನು ಜಯದ್ರಥನೊಂದಿಗೆ ಯುದ್ಧ ಮಾಡುವಾಗ ಹಲವಾರು ಬಾರಿ. 
 8. ಅರ್ಜುನನು ಯುದ್ಧವನ್ನು ಬಿಟ್ಟು ಹೋಗದ ಸಮ್ಷಪ್ತಾಕರನ್ನು ಕೊಂದಾಗ. 
 9. ಕರ್ಣನ ಹತ್ಯೆಯಾದಾಗ. 
 10. ದುರ್ಯೋಧನನು ಸತ್ತಾಗ. 
 11. ಶಾಲ್ವನೊಂದಿಗೆ ಕೃಷ್ಣನೇ ಸ್ವತಃ ಮೂರು ಬಾರಿ ಕಾದಾಡಿದಾಗ. 
 12. ಜರಾಸಂಧನು ಮುಥುರೆಯನ್ನು ದಿಗ್ಬಂಧಿಸಿದಾಗ. 

ಕೃಷ್ಣ ಪಾಂಚಜನ್ಯವನ್ನು ಸಂಕೇತವಾಗಿಯೂ ಬಳಸಿದ್ದಾನೆಯೇ?

ಹೌದು. ಜಯದ್ರಥನೊಂದಿಗಿನ ಅರ್ಜುನನ ಯುದ್ಧಕ್ಕೆ ಮೊದಲು, ಕೃಷ್ಣ ಅವನ ಸಾರಥಿಗೆ ಒಂದು ವೇಳೆ ಪಾಂಚಜನ್ಯವನ್ನು ಯುದ್ಧದ ಸಮಯದಲ್ಲಿ ತಾನು ಊದಿದರೆ ಅದರ ಅರ್ಥ ಅರ್ಜುನನು ತೊಂದರೆಯಲ್ಲಿ ಇದ್ದಾನೆಂದು ತಿಳಿಯಬೇಕೆಂದು ಹೇಳಿದ. ಆಗ ಅವನು ಯುದ್ಧಭೂಮಿಗೆ ಸ್ವಯಂ ಕೃಷ್ಣನ ರಥವನ್ನು ತರಬೇಕೆಂದೂ ಮತ್ತು ತಾನು ಯುದ್ಧವನ್ನು ಮುಂದುವರಿಸುವುದಾಗಿ ಹೇಳಿದ್ದ. 

ಪಾಂಚಜನ್ಯವನ್ನು ಊದುವುದನ್ನು ಇತರರು ಹೇಗೆ ವ್ಯಾಖ್ಯಾನಿಸಿದ್ದಾರೆ?

ಪಾಂಚಜನ್ಯವನ್ನು ಊದುವುದನ್ನು ಒಮ್ಮೆ ದ್ರೋಣರು ಅರ್ಜುನನು ಭೀಷ್ಮರ ಮೇಲೆ ಇನ್ನೇನು ದಾಳಿ ಮಾಡುತ್ತಾನೆ ಎನ್ನುವಾಗಿನ ಸಂಕೇತ ಎಂದು ವ್ಯಾಖ್ಯಾನಿಸಿದ್ದಾರೆ. ಯುಧಿಷ್ಠರನು ಪಾಂಚಜನ್ಯದ ಶಬ್ಧವು ಅರ್ಜುನನು ತೊಂದರೆಯಲ್ಲಿದ್ದಾನೆ ಎಂಬುದನ್ನು ಸೂಚಿಸುತ್ತದೆ ಎಂದು ಒಮ್ಮೆ ವ್ಯಾಖ್ಯಾನಿಸಿದ್ದಾನೆ. ಇನ್ನೊಂದು ಸಂದರ್ಭದಲ್ಲಿ, ಅರ್ಜುನನು ಮೃತನಾಗಿದ್ದಾನೆ ಮತ್ತು ಯುದ್ಧವನ್ನು ಕೃಷ್ಣನು ಮುಂದುವರೆಸಿದ್ದಾನೆ ಎಂದು ಯೋಚಿಸಿದ್ದ.

 

Kannada Topics

Kannada Topics

ಸಾಮಾನ್ಯ ವಿಷಯಗಳು

Copyright © 2023 | Vedadhara | All Rights Reserved. | Designed & Developed by Claps and Whistles
| | | | |