ಪ್ರಾರ್ಥಿಸಿದನು. ಜಯಪುರಕ್ಕೂ ಸಿಂಹಪುರಕ್ಕೂ ತಲಾಂತರಗಳಿಂದ ಸ್ನೇಹಸಂಬಂಧವಿದ್ದಿತು. ನರಸಿಂಹ ವರ್ಮನು ಧರ್ಮಪರಾಯಣನಾದ ರಾಜನೆಂದು ಹೆಸರಾದವನು. ಜಯಪುರಕ್ಕೂ ಶೋಣಪುರಕ್ಕೂ ಏರ್ಪಟ್ಟಿರುವ ಸಮಸ್ಯೆಯನ್ನು ಪರಿಷ್ಕರಿಸುವುದು ತನ್ನ ಧರ್ಮವೆಂದು ತಿಳಿದು, ನರಸಿಂಹವರ್ಮನು ತನ್ನ ಸೇನೆಗಳನ್ನು ಜಯಪುರದ ಸೇನೆಗಳೊಂದಿಗೆ ಕೂಡಿಸಿ, ಮಣಿಪುರದ ಶತ್ರುವಿನ ಮೇಲೆ ಯುದ್ಧಕ್ಕೆ ತೊಡಗಿಸಿದನು. ಉಭಯ ಪಕ್ಷಗಳಿಗೂ ಎರಡು ದಿನಗಳವರೆಗೆ ಯುದ್ಧ ನಡೆದ ಮೇಲೆ, ವಿಜಯವು ಮಣಿಪುರದ ರಾಜನಿಗೇ ದಕ್ಕುವ ಪರಿಸ್ಥಿತಿಯುಂಟಾಯಿತು. ಆ ಪರಿಸ್ಥಿತಿಯಲ್ಲಿ ಜಯದೇವನು ರಸಿಂಹರ್ಮರಾಜ ನೊಂದಿಗೆ ಒಂದು ಕಪಟೋಪಾಯವನ್ನು ಸೂಚಿ ಸಿದನು. ನರಸಿಂಹವರ್ಮನು ಹಾಗೆ ಮಾಡುವುದೇ ಸರಿಯಾದುದೆಂದು ಒಪ್ಪಿಕೊಂಡನು. ಅದರಂತೆ ಅವನು ಮರುದಿನ ಬಿಳೀ ಪತಾಕೆಯನ್ನು ಎತ್ತಿಸಿ, ಮಣಿಪುರದ ರಾಜನೊಂದಿಗೆ ಏಕಪಕ್ಷೀಯವಾದ ಸಂಧಿಯೊಂದು ಮಾಡಿಕೊಂಡು, ರಣರಂಗದಿಂದ ತನ್ನ ಸೈನ್ಯವನ್ನೆಲ್ಲಾ ಹಿಂದಿರುಗಿಸಿಕೊಂಡನು. ಮಣಿಪುರದ ರಾಜನಿಗೆ ತಾನೇ ಗೆದ್ದೆನೆಂದು ಅತ್ಯಂತ ಅವನ ಶಿಬಿರದಲ್ಲಿರುವ ಸಂತೋಷವಾಯಿತು.

ಸೈನಿಕರೂ, ಸೇನಾಪತಿಗಳೂ ವಿಜಯೋತ್ಸಾಹದಿಂದ ಕುಡಿದು ಮೈಮರೆತು ತಧೀಂಗಿಣವಾಡಿಕೊಂಡಿದ್ದಾಗ, ಇದ್ದಕ್ಕಿದ್ದ ಹಾಗೆ ಅವರ ಮೇಲೆ ಜಯಪುರ ಸಿಂಹಪುರಿಗಳ ಸೈನಿಕರು ಒಮ್ಮೆಗೇ ಬಿದ್ದರು. ಮಣಿಪುರದ ಸೈನಿಕರ ನ್ನೆಲ್ಲಾ ದಾರುಣವಾಗಿ ವಧಿಸಿ ಮಣಿಪುರದ ರಾಜ ನನ್ನು ಬಂದಿಯಾಗಿ ಹಿಡಿದರು. ಹೀಗೆ ಶೋಣಪುರವು ಶತ್ರು, ಬಾಧೆಯಿಂದ ವಿಮುಕ್ತವಾಯಿತು. ಜಯ ಪುರದ ರಾಜನ ಕೃತಜ್ಞತೆಯನ್ನು ಪಡೆದುಕೊಂಡು ನರಸಿಂಹವರ್ಮನು ತನ್ನ ದೇಶಕ್ಕೆ ಹಿಂದಿರುಗಿದನು. ಕಾರ್ಯದೀಕ್ಷೆಯ ಉತ್ಸಾಹದಲ್ಲಿ ಹಸಿವೆ ನೀರಡಿಕೆ ಗಳನ್ನು ಮರೆತ ರಾಜಾ ತ್ರಿವಿಕ್ರಮನು, ನೆಟ್ಟಗೆ ಮರದ ಬಳಿಗೆ ಹಿಂದಿರುಗಿ ಕೊಂಬೆಯಲ್ಲಿ ನೇತಾಡು ತಿದ್ದ ಬೇತಾಳಾವೇಶಿತವಾದ ಮಾನವ ಶವವನ್ನು ಕೆಳಗಿಳಿಸಿ ತನ್ನ ಹೆಗಲ ಮೇಲೆ ಹಾಕಿಕೊಂಡು, ಮೌನ ಮುದ್ರೆಯಿಂದ ಸ್ಮಶಾನದ ಕಡೆಗೆ ನಡೆಯ ತೊಡಗಿದನು. ಆಗ ಶವದೊಳಗಿನ ಬೇತಾಳವು ಮಾತಾಡಲು ತೊಡಗಿತು: * ರಾಜಾ ! ನೀನು ಮಾಡುವ ಕೆಲಸವು ಧರ್ಮವೋ ಅಧರ್ಮವೋ ಎಂಬುದರ ಜಿಜ್ಞಾಸೆಗಿಂತಲೂ ನಿನ್ನ ಕಾರ್ಯವು ಜಯಪ್ರದವಾಗುವುದೋ ಇಲ್ಲವೋ ಎಂಬುದೇ ಮುಖ್ಯವಾಗಿದೆ. ಸಿಂಹಪುರಿಯರಾಜನಾದ ನರಸಿಂಹ ವರ್ಮನಂತಹ ಧರ್ಮಪರನಾದವನು, ವಿಜಯ ಲಿಯಾಗಬೇಕೆಂದು ಘೋರವಾದ ಅಧರ್ಮದ ಕಾರ್ಯಕ್ಕೆ ಕೈಹಾಕಿ ಬಿಟ್ಟನು. ನಿನಗೆ ದಾರಿಯ ಶ್ರಮ ಗೊತ್ತಾಗದ ಹಾಗೆ ಆ ಕಥೆಯನ್ನು ಕೇಳು " ಎಂದು ಕಥೆಯನ್ನು ಹೇಳಲು ತೊಡಗಿತು: ಹಿಂದೆ ಶೋಣಪುರವೆಂಬ ದೇಶದರಾಜನು ಜಯ ಪುರದರಾಜನಿಗೆ ಸಾಮಂತನಾಗಿದ್ದನು. ಶೋಣ ಅಲ್ಲಿತ್ತು.
ಪುರವು ಚಿಕ್ಕ ರಾಜ್ಯವಾದರೂ ಬೇಕಾದುದೆಲ್ಲ ಜಯಪುರದ ರಾಜನು ಶೋಣಪುರದ ರಕ್ಷಣೆಗೂ ತಲೆ ಹಾಕುತ್ತ, ಆ ರಾಜ್ಯವು ಸಿರಿಸಂಪದ ಗಳಿಂದ ತುಂಬ ಅಭಿವೃದ್ಧಿಗೇರುವಂತೆ ಮಾಡಿದ್ದನು ಹೀಗೆ ಮರೆಯುವ ಶೋಣಪುರದ ಮೇಲೆ ಮ ಪುರದ ರಾಜನಾದ ಮಣಿಮಂತನ ದೃಷ್ಟಿಬಿತ್ತು ಸಮಯ ಹೊಂಚುತ್ತಿದ್ದ ಅವನು, ಅಕಸ್ಮಾತ್ತಾ ಆ ಚಿಕ್ಕ ರಾಜ್ಯದ ಮೇಲೆ ದಾಳಿ ಮಾಡಿದನು. ಈ ಸಂಘಟನೆಯನ್ನು ನೋಡಿ ಜಯದೇವನ ದೊಡ್ಡ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದನು. ಶೋಣಪುರ ವನ್ನು ರಕ್ಷಿಸುವ ಭಾರವು ಅವನ ಮೇಲೆ ಇದ್ದಿತು. ಆದರೆ ಸರ್ವಸಿದ್ದತೆಯಿಂದ ಬಂದ ಮಣಿಮಂತನನ್ನು ಜಯಿಸುವಷ್ಟು ಬಲ ಅವನ ಹತ್ತಿರ ಸಿದ್ಧವಾಗಿರ ಲಿಲ್ಲ.

Ramaswamy Sastry and Vighnesh Ghanapaathi

Copyright © 2024 | Vedadhara | All Rights Reserved. | Designed & Developed by Claps and Whistles
| | | | |